ವಾಟ್ಸ್‌ಆಪ್‌ನಲ್ಲಿ ಬರಲಿದೆ ಇನ್‌ಸ್ಟಾಗ್ರಾಂನ ಜನಪ್ರಿಯ ಫೀಚರ್..!

By Gizbot Bureau
|

ವಿಶ್ವದ ಜನಪ್ರಿಯ ಇನ್‌ಸ್ಟಾಂಟ್‌ ಮೆಸೇಜಿಂಗ್‌ ಆಪ್‌ ಆಗಿರುವ ವಾಟ್ಸ್‌ಆಪ್‌ ತನ್ನ ಬಳಕೆದಾರರಿಗಾಗಿ ಮತ್ತೊಂದು ಹೊಸ ಫೀಚರ್‌ ನೀಡಲು ಮುಂದಾಗಿದೆ. ಹೌದು, ಶೀಘ್ರದಲ್ಲಿಯೇ ವಾಟ್ಸ್‌ಆಪ್‌ ಬೂಮ್‌ರಾಂಗ್‌ ತರಹದ ಫೀಚರ್‌ನ್ನು ಬಳಕೆದಾರರಿಗೆ ನೀಡಲು ಮುಂದಾಗುತ್ತಿದೆ. ಈ ಕುರಿತು ವಾಟ್ಸ್‌ಆಪ್‌ನ ಬದಲಾವಣೆಗಳು ಮತ್ತು ಹೊಸ ಫೀಚರ್‌ಗಳ ಬಗ್ಗೆ ಮಾಹಿತಿ ನೀಡುವ WaBetaInfo ವೆಬ್‌ಸೈಟ್‌ ವರದಿ ಮಾಡಿದ್ದು, ಶೀಘ್ರದಲ್ಲಿಯೇ ಬಳಕೆದಾರರ ಕೈ ಸೇರಲಿದೆ.

ಇನ್‌ಸ್ಟಾಗ್ರಾಂನ ಜನಪ್ರಿಯ ಫೀಚರ್

ಇನ್‌ಸ್ಟಾಗ್ರಾಂನ ಜನಪ್ರಿಯ ಫೀಚರ್

ಇನ್‌ಸ್ಟಾಗ್ರಾಂನ ಜನಪ್ರಿಯ ಫೀಚರ್‌ಗಳಲ್ಲಿ ಬೂಮ್‌ರಾಂಗ್‌ ಕೂಡ ಒಂದಾಗಿದ್ದು, ನವಯುಗ ಬಳಕೆದಾರರ ಮನಗೆದ್ದಿದೆ. ಇನ್‌ಸ್ಟಾಗ್ರಾಂ ಕೂಡ ಫೇಸ್‌ಬುಕ್‌ ಒಡೆತನದಲ್ಲಿರುವುದರಿಂದ ವಾಟ್ಸ್‌ಆಪ್‌ಗೂ ಕೂಡ ಈ ಫೀಚರ್‌ ಬರಲಿದೆ ಎಂಬ ಮಾಹಿತಿ ಸಿಕ್ಕಿದೆ. ಇನ್ನು, ಈ ಫೀಚರ್‌ ಅಭಿವೃದ್ಧಿ ಹಂತದಲ್ಲಿದ್ದು, ಬಳಕೆದಾರರಿಗೆ ಇನ್ನು ಲಭ್ಯವಿಲ್ಲ ಎಂದು WaBetaInfo ವೆಬ್‌ಸೈಟ್‌ ವರದಿ ಮಾಡಿದೆ. ಫೀಚರ್‌ನ್ನು ಅಧಿಕೃತವಾಗಿ ಬಿಡುಗಡೆಗೊಳಿಸುವ ಮೊದಲು ಸಂಪೂರ್ಣ ದೋಷಮುಕ್ತ ಎಂದು ಕಂಪನಿ ಖಾತ್ರಿಪಡಿಸಿಕೊಳ್ಳುತ್ತಿದೆ.

ಏನೀದು ಬೂಮ್‌ರಾಂಗ್‌..?

ಏನೀದು ಬೂಮ್‌ರಾಂಗ್‌..?

ಬೂಮ್‌ರಾಂಗ್‌ ಫೀಚರ್ ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಸಣ್ಣ ವಿಡಿಯೋವನ್ನು ರಚಿಸಲು ಅನುಮತಿಸುತ್ತದೆ. ಸುಮಾರು ಒಂದು ಸೆಕೆಂಡ್ ಅಥವಾ ಅದಕ್ಕಿಂತ ಹೆಚ್ಚು ಸಮಯದ ವಿಡಿಯೋ ಲೂಪ್‌ನಲ್ಲಿ ಪ್ಲೇ ಆಗುತ್ತಿರುತ್ತದೆ. ಇನ್ನು, ಸದ್ಯದ ವರದಿಯಂತೆ ಹೊಸ ಫೀಚರ್‌ 7 ಸೆಕೆಂಡ್‌ಗಿಂತ ಕಡಿಮೆ ಸಮಯದ ವಿಡಿಯೋಗಳಿಗೆ ಲಭ್ಯವಿದೆ ಎಂಬುದನ್ನು ಖಚಿತಪಡಿಸಿದೆ.

ಮತ್ತೊಂದು ಆಯ್ಕೆ

ಮತ್ತೊಂದು ಆಯ್ಕೆ

ವಾಟ್ಸ್‌ಆಪ್‌ನ ಬಳಕೆದಾರರು ಈ ಬೂಮರಾಂಗ್ ವಿಡಿಯೋಗಳನ್ನು ತಮ್ಮ ಸ್ನೇಹಿತರೊಂದಿಗೆ ಮತ್ತು ಸ್ಟೇಟಸ್‌ನಲ್ಲಿ ಶೇರ್‌ ಮಾಡಬಹುದಾಗಿದೆ. ವಾಟ್ಸ್‌ಆಪ್‌ ಈಗಾಗಲೇ ಬಳಕೆದಾರರಿಗೆ ತಮ್ಮ ವಿಡಿಯೋಗಳನ್ನು ಜಿಫ್‌ ಆಗಿ ಪರಿವರ್ತಿಸಲು ಅವಕಾಶ ನೀಡಿದೆ. ಈ ಹೊಸ ಫೀಚರ್‌ ಮೊದಲು ಆಪಲ್‌ ಬಳಕೆದಾರರಿಗೆ ಸಿಗಲಿದ್ದು, ನಂತರ ಆಂಡ್ರಾಯ್ಡ್‌ ಬಳಕೆದಾರರಿಗೆ ದೊರೆಯುವ ನಿರೀಕ್ಷೆಯಿದೆ.

ಹೊಸತನದ ವಾಟ್ಸ್‌ಆಪ್‌

ಹೊಸತನದ ವಾಟ್ಸ್‌ಆಪ್‌

ಭವಿಷ್ಯದಲ್ಲಿ ಹೊಸ ಫೀಚರ್‌ಗಳನ್ನು ಪಡೆಯಲು ವಾಟ್ಸ್‌ಆಪ್‌ನ್ನು ಸಿದ್ಧಗೊಳಿಸಲಾಗಿದೆ. ಇನ್ನು, ಕಂಪನಿಯು ವಾಟ್ಸ್‌ಆಪ್‌ಗಾಗಿ ಯೂನಿವರ್ಸಲ್ ವಿಂಡೋಸ್ ಪ್ಲಾಟ್‌ಫಾರ್ಮ್ ಆಪ್‌ನ್ನು ಸೃಷ್ಟಿಸಲು ಕಾರ್ಯನಿರ್ವಹಿಸುತ್ತಿದೆ ಎಂಬ ವರದಿ ಕಳೆದ ತಿಗಳು ಬಂದಿತ್ತು. ಹೊಸ ಫೀಚರ್‌ ಬಳಕೆದಾರರಿಗೆ ಒಂದಕ್ಕಿಂತ ಹೆಚ್ಚು ಸಾಧನಗಳಲ್ಲಿ ಒಂದು ಅಕೌಂಟ್‌ ಬಳಸಲು ಅವಕಾಶ ನೀಡುತ್ತದೆ. ಈ ವೈಶಿಷ್ಟ್ಯ ಆಪಲ್‌ ಮತ್ತು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ದೊರೆಯುತ್ತದೆ.

ಇತ್ತೀಚಿನ ಅಪ್‌ಡೇಟ್‌

ಇತ್ತೀಚಿನ ಅಪ್‌ಡೇಟ್‌

ವಾಟ್ಸ್‌ಆಪ್ ಇತ್ತೀಚೆಗೆ ಐಒಎಸ್ 2.19.80.16 ಬೆಟಾ ಅಪ್‌ಡೇಟ್‌ನ್ನು ಪರಿಚಯಿಸಿದ್ದು, ಹೊಸ ಅಪ್‌ಡೇಟ್‌ನಲ್ಲಿ 3D ಟಚ್ ಬಳಸಿ ನಿಮ್ಮ ಕಾಂಟ್ಯಾಕ್ಟ್‌ಗಳ ಪ್ರೊಫೈಲ್ ಚಿತ್ರವನ್ನು ಕಾಪಿ ಮಾಡಲು, ಸೇವ್‌ ಮಾಡಲು ಮತ್ತು ಕಳುಹಿಸುವ ಆಯ್ಕೆಯನ್ನು ತೆಗೆದುಹಾಕಿದೆ. ಮೆಸೇಜ್‌ಗಳನ್ನು ಡೌನಲೋಡ್‌ ಮಾಡುವಾಗ ಸಮಸ್ಯೆಗಳುಂಟಾದಲ್ಲಿ ಚಾಟ್‌ಗಳಲ್ಲಿನ ಪಿನ್ ಅಲೆರ್ಟ್‌ನ್ನು ಬಳಸಿಕೊಂಡು ಬಳಕೆದಾರರಿಗೆ ತಿಳಿಸುವ ಫೀಚರ್‌ ಹೊಸ ಅಪ್‌ಡೇಟ್‌ನಲ್ಲಿದೆ. ಇನ್ನು, ಕೊನೆಯದಾಗಿ, ತ್ವರಿತ ಮೀಡಿಯಾ ಎಡಿಟ್‌ ಫೀಚರ್‌ ಕೂಡ ಹೊಸ ಅಪ್‌ಡೇಟ್‌ನಲ್ಲಿದ್ದು, ಬಳಕೆದಾರರಿಗೆ ಚಾಟ್‌ಗಳಲ್ಲಿ ಕಳುಹಿಸಿದ ಮತ್ತು ಸ್ವೀಕರಿಸಿದ ಮೀಡಿಯಾ ಎಡಿಟ್‌ ಮಾಡಲು ಅವಕಾಶ ನೀಡುತ್ತದೆ.

Best Mobiles in India

Read more about:
English summary
WhatsApp's Upcoming Feature Might Be Inspired By Instagram

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X