ಮತ್ತೆ ಬಂದಿದೆ 'ಅಡೀಡಾಸ್ ಫ್ರೀ ಶೂ' ವಾಟ್ಸ್‌ಆಪ್‌ ಸ್ಕ್ಯಾಮ್‌..! ಕ್ಲಿಕ್‌ ಮಾಡಿ ಮೋಸ ಹೋಗದಿರಿ..!

By Gizbot Bureau
|

ಕಳೆದ ವರ್ಷ ವಾಟ್ಸ್‌ಆಪ್‌ನಲ್ಲಿ ಕಾಡ್ಗಿಚ್ಚಿನಂತೆ ಹರಡಿದ್ದ 'ಅಡೀಡಾಸ್ ಉಚಿತ ಶೂ' ಹಗರಣ ಸಂದೇಶಗಳು ನೆನಪಿದೆಯೇ..? ಹೌದು, ಈಗ ಅದೇ ಹಗರಣ ಮತ್ತೆ ಭಾರತಕ್ಕೆ ಬಂದಿದೆ. ವಾಟ್ಸ್‌ಆಪ್‌ ಮೂಲಕ ಸ್ವೀಕರಿಸಿದ ಯಾವುದೇ 'ಉಚಿತ ಅಡೀಡಾಸ್ ಶೂಗಳು' ಸಂದೇಶಗಳನ್ನು ನಂಬಬೇಡಿ ಮತ್ತು ದುರುದ್ದೇಶಪೂರಿತ URL ನ್ನು ಕ್ಲಿಕ್ ಮಾಡಲೇಬೇಡಿ. ಏಕೆಂದರೆ, ಅಡೀಡಾಸ್‌ ಅಧಿಕೃತವಾಗಿ ಅಂತಹ ಯಾವುದೇ ಕೊಡುಗೆಗಳನ್ನು ನೀಡಿಲ್ಲ ಎಂಬುದು ನೆನಪಿರಲಿ.

ಮೆಸೇಜ್‌ ಬಂದ್ರೆ ಶೇರ್‌ ಬೇಡ

ಮೆಸೇಜ್‌ ಬಂದ್ರೆ ಶೇರ್‌ ಬೇಡ

'ಅಡೀಡಾಸ್ ತನ್ನ 70ನೇ ವಾರ್ಷಿಕೋತ್ಸವ ಆಚರಿಸುತ್ತಿದ್ದು, ಇದಕ್ಕಾಗಿ 700 ಉಚಿತ ಜೋಡಿ ಶೂ ಮತ್ತು 7000 ಟೀ ಶರ್ಟ್‌ಗಳನ್ನು ನೀಡುತ್ತಿದೆ. ನಿಮ್ಮ ಉಚಿತ ಶೂಗಳನ್ನು ಇಲ್ಲಿ ಪಡೆಯಿರಿ' ಎಂಬ ಲಿಂಕ್‌ ಇರುವ ಸಂದೇಶ ನಿಮಗೆ ಬಂದರೆ ನೀವು ಅದನ್ನು ಶೇರ್‌ ಮಾಡದೇ ಅಲ್ಲಿಯೇ ಡಿಲೀಟ್‌ ಮಾಡಿ.

ಕಳೆದ ವರ್ಷ 93ನೇ ವಾರ್ಷಿಕೋತ್ಸವ

ಕಳೆದ ವರ್ಷ 93ನೇ ವಾರ್ಷಿಕೋತ್ಸವ

ಇದೇ ರೀತಿಯ ಹಗರಣ ಕಳೆದ ವರ್ಷ ಒಂದು ಸಂದೇಶದೊಂದಿಗೆ ವಾಟ್ಸ್‌ಆಪ್‌ನಲ್ಲಿ ಭಾರೀ ಹರಿದಾಡಿತ್ತು. 'ಅಡೀಡಾಸ್ ತನ್ನ 93ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, 3,000 ಉಚಿತ ಜೋಡಿ ಶೂಗಳನ್ನು ನೀಡುತ್ತಿದೆ. ನಿಮ್ಮ ಉಚಿತ ಶೂಗಳನ್ನು ಇಲ್ಲಿ ಪಡೆಯಿರಿ: ...' ಎಂಬ ಸಂದೇಶ ಇತ್ತು. ಇದೇ ಸಂದೇಶ ಈಗ 70ನೇ ವಾರ್ಷಿಕೋತ್ಸವ ಎಂಬ ಬದಲಾವಣೆಯೊಂದಿಗೆ ವಾಟ್ಸ್‌ಆಪ್‌ನಲ್ಲಿ ಹರಿದಾಡುತ್ತಿದೆ.

ನಕಲಿ ವೆಬ್‌ಸೈಟ್‌ಗಳು

ನಕಲಿ ವೆಬ್‌ಸೈಟ್‌ಗಳು

ಈ ರೀತಿಯ ಸಂದೇಶಗಳಲ್ಲಿರುವ URL ಟ್ಯಾಪ್ ಮಾಡುವುದರಿಂದ ಬಳಕೆದಾರರು "anniversaries.win" ಎಂಬ ನಕಲಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡುತ್ತಾರೆ. ಈ ವೆಬ್‌ಸೈಟ್‌ಗಳು ವೈಯಕ್ತಿಕ ಬಳಕೆದಾರರ ಮಾಹಿತಿಯನ್ನು ಕೇಳುತ್ತದೆ ಮತ್ತು ಆ ಸಂದೇಶವನ್ನು ವಾಟ್ಸ್‌ಆಪ್‌ನಲ್ಲಿ ಮತ್ತಷ್ಟು 15 ಬಳಕೆದಾರರಿಗೆ ಕಳುಹಿಸಲು ವಿನಂತಿಸುತ್ತದೆ. ತಮಾಷೆಯೆಂದರೆ, ವೆಬ್‌ಸೈಟ್ ಅಸಲಿ ಎಂದು ತೋರಿಸಲು ಶೂ ಗಾತ್ರವನ್ನು ಸಹ ಕೇಳುತ್ತದೆ.

ಅಡೀಡಾಸ್‌ ಮಾತ್ರವಲ್ಲ

ಅಡೀಡಾಸ್‌ ಮಾತ್ರವಲ್ಲ

ಇಂತಹ ಸುಳ್ಳು ಸಂದೇಶಗಳಿಗೆ ಗುರಿಯಾಗಿರುವ ಏಕೈಕ ಕಂಪನಿ ಅಡೀಡಾಸ್ ಅಲ್ಲ. ಈ ಮೊದಲು, ಜಾರಾ ಕಂಪನಿಯೆಂದು ಎಂದು ಹೇಳಿಕೊಳ್ಳುವ ಇದೇ ರೀತಿಯ ಸಂದೇಶ ವೈರಲ್ ಆಗಿತ್ತು. ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಇಂಡಿಯಾ ಮಾರಾಟದ ಲಾಭ ಪಡೆಯಲು ಕಳೆದ ವರ್ಷ ಹಬ್ಬದ ಅವಧಿಯಲ್ಲಿ ಇದೇ ರೀತಿಯ ಸಂದೇಶಗಳನ್ನು ಹಂಚಿಕೊಳ್ಳಲಾಗಿತ್ತು.

ನಕಲಿ ಅಮೆಜಾನ್‌ ಸೇಲ್‌

ನಕಲಿ ಅಮೆಜಾನ್‌ ಸೇಲ್‌

ಕೆಲವು ದುಷ್ಕರ್ಮಿಗಳು ತಮ್ಮ ವೈಯಕ್ತಿಕ ಮಾಹಿತಿಯನ್ನು ಪಡೆದು ಜನರನ್ನು ಮೋಸಗೊಳಿಸಲು ನಕಲಿ 'ಅಮೆಜಾನ್ ಸೇಲ್‌' ಆರಂಭಿಸಿದ್ದರು. ಇದು ಬಳಕೆದಾರರನ್ನು ಶಾಪಿಂಗ್‌ ನೌ ಎಂಬ ಫಿಶಿಂಗ್ ವೆಬ್‌ಸೈಟ್‌ಗೆ ಮರುನಿರ್ದೇಶಿಸುತ್ತಿತ್ತು. 'ಶಾಪಿಂಗ್ ನೌ' ಲಿಂಕ್ ಹಲವಾರು ಉತ್ಪನ್ನಗಳ ಮೇಲೆ ಶೇ.99ರಷ್ಟು ರಿಯಾಯಿತಿ ನೀಡುವುದಾಗಿ ತಿಳಿಸಿತ್ತು. ಜನರು ತಮ್ಮ ವೈಯಕ್ತಿಕ ಡೇಟಾ ಮತ್ತು ಲಾಗಿನ್ ರುಜುವಾತುಗಳನ್ನು ಸ್ವಇಚ್ಛೆಯಿಂದ ಹಂಚಿಕೊಳ್ಳಲು ವಿನಂತಿಸುವ ಯಾವುದೇ ಸಂದೇಶಗಳೊಂದಿಗೆ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡದಿರುವುದು ಉತ್ತಮ.

Best Mobiles in India

English summary
WhatsApp Scam Is Back: Be Careful And Save Your Money

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X