ಬ್ಲೂಟಿಕ್ ಹೈಡ್ ಮಾಡುವುದು ಹೇಗೆ..? ವಾಟ್ಸ್‌ಆಪ್ ಬಳಕೆದಾರರಿಗೆ ತಿಳಿಯದ ಸೂಪರ್ ಸಿಕ್ರೆಟ್‌ಗಳು.!
ವಾಟ್ಸ್ಆಪ್ ಇಂದು ವಿಶ್ವದಲ್ಲಿಯೇ ಅತೀ ಹೆಚ್ಚು ಮಂದಿ ಬಳಕೆ ಮಾಡಿಕೊಳ್ಳುತ್ತಿರುವ ಚಾಟಿಂಗ್ ಆಪ್ ಗಳಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಇಂದು ವಾಟ್ಸ್ಆಪ್ ಚಾಟ್‌ಗಿಂತಲೂ ಹೆಚ್ಚಾಗಿ ವಿವಿಧ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ವಿಡಿಯೋ ಕಾಲಿಂಗ್, ಹಣ ವರ್ಗಾವಣೆ, ತಮ್ಮ ವ್ಯವಹಾರದ ಅಭಿವೃದ್ಧಿಗೆ ಸೇರಿದಂತೆ ಹಲವು ಕಾರ್ಯಗಳಿಗೆ ಬಳಸಲಾಗುತ್ತಿದೆ.

ಈ ಹಿನ್ನಲೆಯಲ್ಲಿ ವಾಟ್ಸ್ಆಪ್ ಬಳಕೆದಾರರಿಗೆ ತಿಳಿಯದ ಕೆಲವು ಸಿಕ್ರೆಟ್ ವಿಷಯಗಳನ್ನು ತಿಳಿಸಿಕೊಡುವ ಪ್ರಯತ್ನವು ಇದಾಗಿದೆ. ಇವುಗಳು ನೀವು ನಿತ್ಯ ಬಳಕೆಮಾಡಿಕೊಳ್ಳುತ್ತಿರುವ ಆಯ್ಕೆಗಳಾಗಿದ್ದರು ಸಹ ಅವುಗಳ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿಯೂ ಇರಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ವಾಟ್ಸ್ಆಪ್ ಸಿಕ್ರೆಟ್ ಕುರಿತ ಮಾಹಿತಿಯೂ ಈ ಮುಂದಿನಂತಿದೆ.

ಬ್ಲೂಟಿಕ್ ಹೈಡ್ ಮಾಡಬಹುದು:
ಇದಲ್ಲದೇ ನಿಮಗೆ ಮೇಸೆಜ್ ಮಾಡಿದವರು ನಿಮ್ಮ ಮೇಸೆಜ್ ಅನ್ನು ಓದಿದ್ದಾರೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಇರುವಂತಹ ಬ್ಲೂ ಟಿಕ್ ಅನ್ನು ನೀವು ಹೈಡ್ ಮಾಡಬಹುದಾಗಿದೆ. ಇದನ್ನು ಮಾಡಲು ಸೆಟ್ಟಿಂಗ್>ಆಕೌಂಟ್ಸ್>ಪ್ರೈವಸಿ>ರಿಡ್ ರೆಸಿಪ್ಟ್ ಆಯ್ಕೆಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದನ್ನು ಮಾಡಿದರೆ ನೀವು ಮೇಸೆಜ್ ಓದಿದ್ದಿರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ.

ಅನ್ ಸೆಂಡ್ ಅಥವಾ ಡಿಲೀಟ್ ಮೆಸೇಜ್:
ಇದಲ್ಲದೇ ವಾಟ್ಸ್ಆಪ್ ಬಳಕೆದಾರರಿಗೆ ಹೊಸದಾಗಿ ನೀಡಿರುವ ಆಯ್ಕೆಯೂ ಇದಾಗಿದೆ. ಇದರಲ್ಲಿ ಬಳಕೆದಾರರು ಕಳುಹಿಸಿರುವ ಮೇಸೆಜ್ ಅನ್ನು ಡಿಲೀಟ್ ಮಾಡಬಹುದಾಗಿದೆ. ಅದುವೆ ಮೇಸೆಜ್ ಕಳುಹಿಸಿದ ಒಂದು ಗಂಟೆಯ ಒಳಗೆ ಡಿಲೀಟ್ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.


ಲೈವ್ ಲೋಕೆಷನ್:
ನೀವು ದೂರದಲ್ಲಿರುವ ಸಂದರ್ಭದಲ್ಲಿ ನಿಮ್ಮ ಸ್ನೇಹಿತರು ನಿಮ್ಮನ್ನು ಸಂಪರ್ಕಿಸುವ ಸಲುವಾಗಿ ವಾಟ್ಸ್‌ಆಪ್ ಮಾಡಿಕೊಟ್ಟಿರುವ ಹೊಸ ಆಯ್ಕೆಯಲ್ಲಿ ಲೈವ್ ಲೋಕೆಷನ್ ಒಂದಾಗಿದೆ. ಇದರಲ್ಲಿ ನೀವು ಇರುವ ಜಾಗವನ್ನು ನಿಖರವಾಗಿ ಗುರುತು ಮಾಡಬಹುದಾಗಿದೆ. ಅಲ್ಲದೇ ಎಷ್ಟು ಸಮಯ ಲೋಕೇಷನ್ ಶೇರ್ ಆಗಬೇಕು ಎಂಬುದನ್ನು ನಿರ್ಧರಿಸಬಹುದಾಗಿದೆ.

ಯೂಟ್ಯೂಬ್ ವಿಡಿಯೋಗಳನ್ನು ವಾಟ್ಸ್‌ಆಪ್‌ನಲ್ಲೇ ನೋಡಬಹುದು:
ದಿನದಿಂದ ದಿನಕ್ಕೆ ವಾಟ್ಸ್‌ಆಪ್ ಬದಲಾಗುತ್ತಿದೆ. ಇದೇ ಮಾದರಿಯಲ್ಲಿ ನಿಮ್ಮ ಸ್ನೇಹಿತರು ಯಾವುದೇ ವಿಡಿಯೋವನ್ನು ನಿಮಗೆ ಕಳುಹಿಸಿದರೆ ಅದನ್ನು ಯೂಟ್ಯೂಬ್‌ಗೆ ಹೋಗಿ ನೋಡುವ ಅಗತ್ಯವೇ ಇಲ್ಲ. ಬದಲಾಗಿ ನಿಮ್ಮ ವಾಟ್ಸ್‌ಆಪ್ ಚಾಟ್‌ನಲ್ಲಿಯೇ ನೀವು ವಿಡಿಯೋವನ್ನು ನೋಡಬಹುದಾಗಿದೆ.

ಹಣವನ್ನು ಕಳುಹಿಸಬಹುದಾಗಿದೆ.
ಇದಲ್ಲದೇ ವಾಟ್ಸ್‌ಆಪ್ ತನ್ನ ಬಳಕೆದಾರರಿಗೆ ಹೊಸದಾಗಿ ನೀಡಿರುವ ಆಯ್ಕೆಯೂ ಇದಾಗಿದ್ದು, ಬಳಕೆದಾರರಿಗೆ ಹಣವನ್ನು ಕಳುಹಿಸುವ ಮತ್ತು ಸ್ವೀಕರಿಸುವ ಅವಕಾಶವನ್ನು ಮಾಡಿಕೊಟ್ಟಿದೆ. ಈ ಮೂಲಕ ಬೇರೆ ಬೇರೆ ಪೇಮೆಂಟ್ ಆಪ್ ಗಳನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಬ್ರೇಕ್ ಹಾಕಿದೆ.

ನಿಮ್ಮ ಡೇಟಾ ಕಬಳಿಸುವ ವಾಟ್ಸ್‌ಆಪ್..!
ದೇಶದಲ್ಲಿ ಒಂದು ಅತ್ಯಂತ ಕಡಿಮೆ ಬೆಲೆಗೆ 4G ಡೇಟಾ ಬಳಕೆಗೆ ದೊರೆಯುತ್ತಿದೆ. ಈ ಹಿನ್ನಲೆಯಲ್ಲಿ ವಾಟ್ಸ್ಆಪ್ ಮತ್ತು ಫೇಸ್‌ಬುಕ್ ಬಳಕೆಯೂ ಅಧಿಕವಾಗುತ್ತಿದೆ. ಅದರಲ್ಲಿಯೂ ವಾಟ್ಸ್ಆಪ್ ನಲ್ಲಿ ಫೋಟೋ ಮತ್ತು ವೀಡಿಯೊಗಳು ಅಧಿಕ ಸಂಖ್ಯೆಯಲ್ಲಿ ವಿನಿಮಯವಾಗುತ್ತಿವೆ. ಈ ಹಿನ್ನಲೆಯಲ್ಲಿ ದಿನಕ್ಕೆ ಒಂದು GB ಡೇಟಾ ಬಳಕೆದಾರರಿಗೆ ಸಾಲುತ್ತಿಲ್ಲ. ಹಾಗಾಗಿ ನಿಮ್ಮ ಡೇಟಾವನ್ನು ಖಾಲಿ ಮಾಡುತ್ತಿರುವ ವಾಟ್ಸ್‌ಆಪ್‌ನಿಂದ ಡೇಟಾವನ್ನು ರಕ್ಷಿಸುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ಉಳಿಸಿಕೊಳ್ಳುವುದು ಹೇಗೆ..?
ಸಾಮಾನ್ಯವಾಗಿ ಸ್ಮಾರ್ಟ್‌ಫೋನ್ ಹೊಂದಿರುವರೆಲ್ಲರೂ ವಾಟ್ಸ್‌ಆಪ್ ಬಳಕೆ ಮಾಡುವುದನ್ನು ನಾವು ಕಾಣಬಹುದು. ವಾಟ್ಸ್‌ಆಪ್ ಬಳಕೆದಾರರು ನೂರಾರು ಗ್ರೂಪ್‌ಗಳಲ್ಲಿ ಸದಸ್ಯರಾಗಿರುತ್ತಾರೆ. ಹೀಗಾಗಿ ದಿನವೊಂದಕ್ಕೆ ನೂರಾರು ಫೋಟೋಗಳು ಮತ್ತು ವೀಡಿಯೊಗಳು ವಾಟ್ಸ್‌ಆಪ್‌ಗೆ ಬಂದು ಸೇರಿರುತ್ತದೆ. ಇವುಗಳೇ ನಿಮ್ಮ ಫೋನಿನ ಡೇಟಾವನ್ನು ಕಬಳಿಸುತ್ತವೆ. ಈ ಹಿನ್ನಲೆಯಲ್ಲಿ ಡೇಟಾ ನಿಯಂತ್ರಣ ಮಾಡಲು ಸುಲಭ ವಿಧಾನಗಳು ಮುಂದಿವೆ.

ಕಾಲ್ ಸೆಟ್ಟಿಂಗ್:
ಇದಲ್ಲದೇ ವಾಟ್ಸ್ಆಪ್ ಸೆಟ್ಟಿಂಗ್ಸ್ ನಲ್ಲಿ ಡೇಟಾ ಅಂಡ್ ಸ್ಟೋರೇಜ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ಸಂದರ್ಭದಲ್ಲಿ ಕೊನೆಯಲ್ಲಿ ಕಾಣಸಿಗುವ ಕಾಲ್ ಸೆಟ್ಟಿಂಗ್ ಆಯ್ಕೆಯನ್ನು ಕ್ಲಿಕ್ ಮಾಡಿ. ಈ ಸಂದರ್ಭದಲ್ಲಿ ನೀವು ವಾಟ್ಸ್‌ಆಪ್ ಕಾಲ್ ಮಾಡಿದರು ಕಡಿಮೆ ಡೇಟಾ ಬಳಕೆಯಾಗಲಿದೆ.

ಆಟೋ ಡೌನ್‌ಲೋಡ್ ಬೇಡ:
ವಾಟ್ಸ್ಆಪ್‌ನಲ್ಲಿ ಬಂದ ವೀಡಿಯೊ ಮತ್ತು ಫೋಟೊಗಳು ಆಟೋ ಡೌನ್‌ಲೋಡ್ ಆಗುವ ಹಿನ್ನಲೆಯಲ್ಲಿ ನಿಮ್ಮ ಮೊಬೈಲ್ ಡೇಟಾ ವೇಗವಾಗಿ ಖರ್ಚಾಗುತ್ತದೆ. ಈ ಹಿನ್ನಲೆಯಲ್ಲಿ ಆಟೋ ಡೌನ್‌ಲೋಡ್ ಆಯ್ಕೆಯನ್ನು ಸ್ಥಗಿತಗೊಳಿಸಿ. ಇದನ್ನು ಮಾಡುವುದು ಹೇಗೆ ಎಂಬುದನ್ನು ಮುಂದಿನಂತೆ ತಿಳಿದುಕೊಳ್ಳಿ.

ಹಂತ 01:
ವಾಟ್ಸ್ಆಪ್ ಸೆಟ್ಟಿಂಗ್ಸ್ ನಲ್ಲಿ ಡೇಟಾ ಅಂಡ್ ಸ್ಟೋರೇಜ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 02:
ಮೀಡಿಯಾ ಆಟೊ ಡೌನ್‌ಲೋಡ್ ಮೇಲೆ ಕ್ಲಿಕ್ ಮಾಡಿದಲ್ಲಿ ಒಟ್ಟು ಮೂರು ಆಯ್ಕೆಗಳನ್ನು ಕಾಣಬಹುದಾಗಿದೆ.

ಹಂತ 03:
When using mobile data ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ. ಫೋಟೊ, ಆಡಿಯೊ, ವೀಡಿಯೊ, ಡಾಕ್ಯುಮೆಂಟ್ ಎಂಬ ನಾಲ್ಕು ಆಯ್ಕೆಗಳು ಕಾಣಿಸಿಕೊಳ್ಳಲಿದ್ದು, ಅವುಗಳ ಮುಂದಿರುವ ಚೆಕ್ ಬಾಕ್ಸ್ ಅನ್ನು ಅನ್ ಚೆಕ್ ಮಾಡಿ, ನಂತರ ಓಕೆ ಪ್ರೆಸ್ ಮಾಡಿ. (ಚಾಟ್‌ನಲ್ಲಿ ನಿಮಗೆ ಬೇಕಾದ ಫೋಟೊ, ಆಡಿಯೊ, ವೀಡಿಯೊ, ಡಾಕ್ಯುಮೆಂಟ್ ಡೌನ್‌ಲೋಡ್ ಮಾಡಿಕೊಳ್ಳಬಹುದು)

ಹಂತ 04:
When connected on Wi-Fi ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ. ಫೋಟೊ, ಆಡಿಯೊ, ವೀಡಿಯೊ, ಡಾಕ್ಯುಮೆಂಟ್ ಎಂಬ ನಾಲ್ಕು ಆಯ್ಕೆಗಳು ಕಾಣಿಸಿಕೊಳ್ಳಲಿದ್ದು, ಅವುಗಳ ಮುಂದಿರುವ ಚೆಕ್ ಬಾಕ್ಸ್ ಅನ್ನು ಇನ್ ಚೆಕ್ ಮಾಡಿ, ನಂತರ ಓಕೆ ಪ್ರೆಸ್ ಮಾಡಿ. (ವೈ-ಫೈನಲ್ಲಿ ಎಲ್ಲಾ ಬಗೆಯ ಫೋಟೊ, ಆಡಿಯೊ, ವೀಡಿಯೊ, ಡಾಕ್ಯುಮೆಂಟ್ ಡೌನ್‌ಲೋಡ್ ಆಗಲಿದೆ. ಇದರಿಂದ ಮೊಬೈಲ್ ಡೇಟಾ ಉಳಿಯಲಿದೆ)

ಹಂತ 05:
When roaming ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ. ಫೋಟೊ, ಆಡಿಯೊ, ವೀಡಿಯೊ, ಡಾಕ್ಯುಮೆಂಟ್ ಎಂಬ ನಾಲ್ಕು ಆಯ್ಕೆಗಳು ಕಾಣಿಸಿಕೊಳ್ಳಲಿದ್ದು, ಅವುಗಳ ಮುಂದಿರುವ ಚೆಕ್ ಬಾಕ್ಸ್ ಅನ್ನು ಅನ್ ಚೆಕ್ ಮಾಡಿ, ನಂತರ ಓಕೆ ಪ್ರೆಸ್ ಮಾಡಿ. (ರೋಮಿಂಗ್ ಸಂದರ್ಭದಲ್ಲಿ ನಿಮ್ಮ ಡೇಟಾ ಬೆಲೆಯೂ ದುಪ್ಪಟಾಗಲಿದ್ದು, ಇದರಿಂದ ನಿಮ್ಮ ಹಣವನ್ನು ಉಳಿಸಬಹುದಾಗಿದೆ)


Click it and Unblock the Notifications



