ಪಾಕಿಗಳ ಕೃತ್ಯಕ್ಕೆ ವೇದಿಕೆಯಾಗ್ತಿದೆ ವಾಟ್ಸ್‌ಆಪ್‌..! ಸೇನೆಯಿಂದ ಬಂತೂ ಎಚ್ಚರಿಕೆ ಸಂದೇಶ..!

By Gizbot Bureau
|

ರಾಷ್ಟ್ರದ ಭದ್ರತೆಗೆ ಸಂಬಂಧಿಸಿದ ಹಲವು ರಹಸ್ಯ ಮಾಹಿತಿಗಳನ್ನು ತಿಳಿಯಲು ವಿದೇಶಿ ಗೂಢಾಚಾರಿಗಳು ಭಾರತೀಯ ಅಧಿಕಾರಿಗಳ ಹಿಂದೆ ಬಿದ್ದಿರುವುದು ನಿಮಗೆಲ್ಲಾ ಗೊತ್ತಿದೆ. ಈಗ ಅಂತಹದ್ದೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದ್ದು, ಭಾರತೀಯ ರಕ್ಷಣಾ ವ್ಯವಸ್ಥೆಯಲ್ಲಿ ಭಾರೀ ಸಂಚಲನ ಮೂಡಿಸಿದೆ. ಹೌದು, ಉತ್ತರ ಪ್ರದೇಶ ಪೊಲೀಸರು ಮತ್ತು ಸೇನಾ ಗುಪ್ತಚರ ಇಲಾಖೆ ಪಾಕಿಸ್ತಾನಿ ಗೂಢಾಚಾರಿಯನ್ನು ಪತ್ತೆ ಮಾಡಿದ್ದಾರೆ.

ಪಾಕಿಗಳ ವೇದಿಕೆಯಾಗ್ತಿದೆ ವಾಟ್ಸ್‌ಆಪ್‌! ಸೇನೆಯಿಂದ ಬಂತೂ ಎಚ್ಚರಿಕೆ ಸಂದೇಶ..!

ಪಾಕಿಸ್ತಾನಿ ಸ್ಪೈ 2015 ರಿಂದ 2018ರವರೆಗೆ ಭಾರತೀಯ ಸೇನೆ, ವಾಯು ಸೇನೆ, ನೌಕಾ ಪಡೆ, ಅರೆಸೇನಾ ಪಡೆಗಳು ಮತ್ತು ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್ ಹಾಗೂ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಸೇರಿ 98ಕ್ಕೂ ಹೆಚ್ಚು ಅಧಿಕಾರಿಗಳ ಕಂಪ್ಯೂಟರ್‌ ಸಿಸ್ಟಮ್‌ಗಳನ್ನು ಹ್ಯಾಕ್‌ ಮಾಡಲು ಪ್ರಯತ್ನಿಸಿದ್ದಾರೆ. ಸೇಜಲ್‌ ಕಪೂರ್‌ ಎಂಬ ಹೆಸರಿನ ಗೂಢಾಚಾರಿ ವಿಸ್ಪರ್ ಮತ್ತು ಗ್ರಾವಿಟಿ ರ್ಯಾಟ್ ಎಂಬ ಆಪ್‌ಗಳನ್ನು ಫೇಸ್‌ಬುಕ್‌ನಲ್ಲಿ ಬಳಸಿರುವುದು ಬಯಲಾಗಿದೆ.

ಭಾರತೀಯ ಸೇನಾ ಅಧಿಕಾರಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಗುರಿಯಾಗಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. 2018ರಿಂದಲೂ ಸೇನೆ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಿಂದ ವಿಡಿಯೋ ಹಂಚಿಕೊಂಡಿದ್ದು, ವೈಯಕ್ತಿಕ ಮತ್ತು ಕಚೇರಿಯ ವಾಟ್ಸ್‌ಆಪ್‌ ಗ್ರೂಪ್‌ಗಳಲ್ಲಿ ಎಚ್ಚರಿಕೆ ವಹಿಸುವಂತೆ ತನ್ನ ಸಿಬ್ಬಂದಿಗೆ ಹೇಳಿದೆ. ಇದಕ್ಕೂ ಮುಂಚೆ ಭಾರತೀಯ ಗಡಿ ರೇಖೆಯಲ್ಲಿ ಸೇವೆ ಸಲ್ಲಿಸುವ ಸೈನಿಕರಿಗೆ ವಾಟ್ಸ್‌ಆಪ್ ಸೇರಿ ಮತ್ತಿತರ ಸಾಮಾಜಿಕ ಜಾಲತಾಣಗಳನ್ನು ಬಳಸದಂತೆ ನಿರ್ದೇಶನ ನೀಡಿತ್ತು. ಈಗ ಭಾರತೀಯ ಸೇನೆ ವಾಟ್ಸ್‌ಆಪ್‌ ಭದ್ರತಾ ಸೂಚನೆಗಳನ್ನು ತನ್ನ ಸಿಬ್ಬಂದಿಗೆ ನೀಡಿದ್ದು, ಪಾಲಿಸುವಂತೆ ತಿಳಿಸಿದೆ. ವಾಟ್ಸ್‌ಆಪ್‌ಗೆ ಸಂಬಂಧಿಸಿದಂತೆ ಸೇನೆ ಏನೇಲ್ಲಾ ಸೂಚನೆಗಳನ್ನು ನೀಡಿದೆ ಮುಂದೆ ನೋಡಿ..

ವಾಟ್ಸ್‌ಆಪ್‌ ಗ್ರೂಪ್‌ ಪರಿಶೀಲಿಸಿ

ವಾಟ್ಸ್‌ಆಪ್‌ ಗ್ರೂಪ್‌ ಪರಿಶೀಲಿಸಿ

ನೀವಿರುವ ಎಲ್ಲಾ ವಾಟ್ಸ್‌ಆಪ್‌ ಗ್ರೂಪ್‌ಗಳನ್ನು ನಿಯಮಿತವಾಗಿ ಪರಿಶೀಲಿಸಿ.

ಕಾಂಟ್ಯಾಕ್ಟ್ ಸೇವ್‌ ಮಾಡಿ

ಗ್ರೂಪ್‌ಗಳಲ್ಲಿನ ಎಲ್ಲಾ ಕಾಂಟ್ಯಾಕ್ಟ್‌ಗಳನ್ನು ಅವರ ಹೆಸರಿನಲ್ಲಿ ಸೇವ್‌ ಮಾಡಿ.

ಅನಾಮಧೇಯ ಸಂಖ್ಯೆ..!

ಅನಾಮಧೇಯ ಸಂಖ್ಯೆ..!

ನೀವಿರುವ ವಾಟ್ಸ್‌ಆಪ್‌ ಗ್ರೂಪ್‌ನಲ್ಲಿ ಯಾವುದೇ ಅನಾಮಧೇಯ ವಾಟ್ಸ್‌ಆಪ್‌ ಸಂಖ್ಯೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಗ್ರೂಪ್‌ ಅಡ್ಮಿನ್‌ಗೆ ಮಾಹಿತಿ

ಒಂದು ವೇಳೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿದರೆ, ಗ್ರೂಪ್‌ ಅಡ್ಮಿನ್‌ಗೆ ಖಂಡಿತವಾಗಿಯೂ ಮಾಹಿತಿ ನೀಡಿ.

ಹಳೇ ಸಿಮ್‌ ಕಾರ್ಡ್‌ ನಾಶ

ಹಳೇ ಸಿಮ್‌ ಕಾರ್ಡ್‌ ನಾಶ

ನೀವು ನಿಮ್ಮ ಮೊಬೈಲ್‌ ಸಂಖ್ಯೆಯನ್ನು ಬದಲಾಯಿಸಿದರೆ, ಹಳೇ ಸಿಮ್‌ ಕಾರ್ಡ್‌ನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿ.

ಹೊಸ ಸಂಖ್ಯೆ ಖಚಿತಪಡಿಸಿಕೊಳ್ಳಿ

ನೀವಿಗ ಅಧಿಕೃತ ಕಚೇರಿಯ ವಾಟ್ಸ್‌ಆಪ್‌ ಗ್ರೂಪ್‌ಗಳಲ್ಲಿ ಹೊಸ ಸಂಖ್ಯೆ ಆಡ್‌ ಆಗಿರುವುದನ್ನು ಖಚಿತಪಡಿಸಿಕೊಳ್ಳಿ. ಹಾಗೆಯೇ ನಿಮ್ಮ ಹಳೇ ಮೊಬೈಲ್ ಸಂಖ್ಯೆ ಗ್ರೂಪ್‌ನಿಂದ ಡಿಲೀಟ್ ಆಗಿರವ ಬಗ್ಗೆ ಕನ್ಫರ್ಮ್‌ ಮಾಡಿಕೊಳ್ಳಿ.

ಚೈನೀಸ್‌ ಸಂಖ್ಯೆ..?

ಚೈನೀಸ್‌ ಸಂಖ್ಯೆ..?

ಸೇನೆಯ ಯಾವುದೇ ವಾಟ್ಸ್‌ಆಪ್‌ ಗ್ರೂಪ್‌ಗಳಲ್ಲಿ +86ರಿಂದ ಪ್ರಾರಂಭವಾಗುವ ಚೀನಾದ ಮೊಬೈಲ್ ಸಂಖ್ಯೆಗಳ ಬಗ್ಗೆ ಎಚ್ಚರವಿರಲಿ.

+86 ಸಂಖ್ಯೆ ಬಗ್ಗೆ ಇರಲಿ ಎಚ್ಚರ

+86ರಿಂದ ಪ್ರಾರಂಭವಾಗುವ ಚೀನಾದ ಎಲ್ಲಾ ಮೊಬೈಲ್ ಸಂಖ್ಯೆಗಳ ಮೇಲೆ ನಿಗಾ ವಹಿಸುವಂತೆ ಭಾರತೀಯ ಸೇನೆ ತನ್ನ ಸಿಬ್ಬಂದಿಗೆ ತಿಳಿಸಿದೆ.

Best Mobiles in India

English summary
WhatsApp Security Tips By Indian Army

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X