Home
Apps

ವಾಟ್ಸ್ ಆಪ್ ನಲ್ಲಿ ಲಭ್ಯವಾಗಲಿದೆ ಈ ಎರಡು ಹೊಸ ಫೀಚರ್ ಗಳು!

By Gizbot Bureau

ಇತ್ತೀಚೆಗೆ ಫೇಸ್ ಬುಕ್ ತನ್ನ ಪ್ರಸಿದ್ಧ ಮೆಸೇಜಿಂಗ್ ಆಪ್ ವಾಟ್ಸ್ ಆಪ್ ನಲ್ಲಿ ಜಾಹೀರಾತುಗಳನ್ನು ತರುವುದಾಗಿ ಪ್ರಕಟಿಸಿತ್ತು. ಇದೀಗ ಬಂದಿರುವ ಹೊಸ ವರದಿಯ ಪ್ರಕಾರ ಹೊಸದಾಗಿ ಎರಡು ಫೀಚರ್ ಗಳು ಈ ಫ್ಲ್ಯಾಟ್ ಫಾರ್ಮ್ ಗೆ ಸೇರಿಕೊಳ್ಳುತ್ತಿದೆ.ವಾಟ್ಸ್ ಆಪ್ ನ ಎಲ್ಲಾ ಮಾಹಿತಿಗಳನ್ನು ಕಲೆಹಾಕುವ ಟ್ವೀಟರ್ ಅಕೌಂಟ್ ಆಗಿರುವ ವಾಬೇಟಾಇನ್ಫೋ ಈ ಹೊಸ ಎರಡು ಫೀಚರ್ ಗಳ ಬಿಡುಗಡೆಯ ಸುದ್ದಿಯನ್ನು ತಿಳಿಸಿದೆ.

ವಾಟ್ಸ್ ಆಪ್ ಸ್ಟೇಟಸ್ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ:

ವಾಟ್ಸ್ ಆಪ್ ಸ್ಟೇಟಸ್ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ:

ಹೌದು ವರದಿಯ ಅನುಸಾರ ವಾಟ್ಸ್ ಆಪ್ ಬಳಕೆದಾರರು ತಮ್ಮ ವಾಟ್ಸ್ ಆಪ್ ಸ್ಟೇಟಸ್ ನ್ನು ಫೇಸ್ ಬುಕ್ ಸ್ಟೋರಿಯಾಗಿ ಹಂಚಿಕೊಳ್ಳುವುದಕ್ಕೆ ಅವಕಾಶ ನೀಡಲಾಗುತ್ತದೆ. ಇದೀಗ ವಾಟ್ಸ್ ಆಪ್ ನಲ್ಲಿ 'Add to Facebook Story' ಬಟನ್ ಲಭ್ಯವಾಗಲಿದೆ.ಆದರೆ ಈ ಬಟನ್ ಹೊಂದಿರುವುದಕ್ಕಾಗಿ ಮೊದಲು ಬಳಕೆದಾರರು ತಮ್ಮ ಡಿವೈಸ್ ನಲ್ಲಿ ಫೇಸ್ ಬುಕ್ ನ್ನು ಇನ್ಸ್ಟಾಲ್ ಮಾಡಿರುವ ಅಗತ್ಯವಿದೆ.

ವಾಬೇಟಾ ಇನ್ಫೋ ಮಾಹಿತಿ:

ವಾಬೇಟಾ ಇನ್ಫೋ ಮಾಹಿತಿ:

ಅಧಿಕೃತ ಪೋಸ್ಟ್ ನಲ್ಲಿ ವಾಬೇಟಾಇನ್ಫೋ, "ಒಂದು ವೇಳೆ ಫೇಸ್ ಬುಕ್ ಆಪ್ ಇನ್ಸ್ಟಾಲ್ ಆಗಿದ್ದರೆ ವಾಟ್ಸ್ ಆಪ್ ನಿಮಗೆ ಹೊಸ ಆಯ್ಕೆಯನ್ನು ನೀಡುತ್ತದೆ ಅದರ ಹೆಸರು Add to Facebook Story.ಇದನ್ನು ಟ್ಯಾಪ್ ಮಾಡಿದಾಗ ನಿಮ್ಮ ಸ್ಟೋರಿಯನ್ನು ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುವುದಕ್ಕೆ ರೀಡೈರೆಕ್ಟ್ ಆಗಲಿದ್ದೀರಿ.ಈ ಆಯ್ಕೆಯನ್ನು ಬಳಸಿ ವಾಟ್ಸ್ ಆಪ್ ನಿಮ್ಮ ಸ್ಟೇಟಸ್ ನ್ನು ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುವುದಕ್ಕೆ ಅವಕಾಶ ನೀಡುತ್ತದೆ ಅದರಲ್ಲಿ ಇಮೇಜ್ ಗಳು, ವೀಡಿಯೋಗಳು, ಜಿಫ್ ಫೈಲ್ ಗಳು ಮತ್ತು ಟೆಕ್ಸ್ಟ್ ಗಳು ಇರಬಹುದು.ಈ ಪ್ರೊಸೆಸ್ ಅಟ್ಯೋಮ್ಯಾಟಿಕ್ ಆಗಿರುವುದಿಲ್ಲ. ಬಳಕೆದಾರರು ಮ್ಯಾನುವಲ್ ಆಗಿ ಇದನ್ನು ಆಯ್ಕೆ ಮಾಡಬೇಕು" ಎಂದು ಅದು ತಿಳಿಸಿದೆ.

ಪ್ರೊಫೈಲ್ ಗೆ ಕ್ಯೂಆರ್ ಕೋಡ್:

ಪ್ರೊಫೈಲ್ ಗೆ ಕ್ಯೂಆರ್ ಕೋಡ್:

ಇದರ ಜೊತೆಗೆ ಆಪ್ ನಲ್ಲಿ ಪ್ರೊಫೈಲ್ ಗೆ ಕ್ಯೂಆರ್ ಕೋಡ್ ಲಭ್ಯವಾಗುತ್ತದೆ. ಸ್ನ್ಯಾಪ್ ಚಾಟ್, ಫೇಸ್ ಬುಕ್ ಮೆಸೇಂಜರ್ ಈಗಾಗಲೇ ಈ ರೀತಿಯ ಐಡೆಂಟಿಫಿಕೇಷನ್ ಫೀಚರ್ ನ್ನು ಬಳಸುತ್ತಿದೆ ಇದೀಗ ವಾಟ್ಸ್ ಆಪ್ ಕೂಡ ಇದಕ್ಕೆ ಸೇರಿಕೊಳ್ಳುತ್ತಿದೆ. ಈ ಫೀಚರ್ ಬಳಕೆದಾರರಿಗೆ ಲಭ್ಯವಾದ ಮೇಲೆ ಯಾರಿಗಾದರೂ ಪ್ರೊಫೈಲ್ ನೇವಿಗೇಟ್ ಮಾಡಬೇಕಿದ್ದರೆ ಕೇವಲ ಕ್ಯೂಆರ್ ಕೋಡ್ ತೋರಿಸಿದರೂ ಸಾಕು ಮತ್ತು ವಾಟ್ಸ್ ಆಪ್ ಅಕೌಂಟಿಗೆ ಸಂಬಂಧಿಸಿದ ಮೊಬೈಲ್ ನಂಬರ್ ಸಾಕು. ಇದು ತಮ್ಮ ಸ್ನೇಹಿತರಿಗೆ ಕಾಂಟ್ಯಾಕ್ಟ್ ಡೀಟೇಲ್ ಗಳನ್ನು ಹಂಚಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಒಂದು ವೇಳೆ ತಮ್ಮ ಕ್ಯೂಆರ್ ಕೋಡ್ ಸಾಮಾಜಿಕ ಜಾಲತಾಣದಲ್ಲಿ ಅನಗತ್ಯವಾಗಿ ಹಂಚಿಕೆಯಾಗಿ ಬೇಡದ ಮನವಿಗಳು ಬರುತ್ತಿದ್ದರೆ ಅದನ್ನು ಕೂಡಲೇ ಅಥವಾ ಯಾವುದೇ ಸಂದರ್ಬದಲ್ಲಿ ರಿವೋಕ್ ಮಾಡುವುದಕ್ಕೆ ಅವಕಾಶವಿರುತ್ತದೆ.

ಬೇಟಾ ವರ್ಷನ್ ನಲ್ಲಿ ಲಭ್ಯ:

ಬೇಟಾ ವರ್ಷನ್ ನಲ್ಲಿ ಲಭ್ಯ:

ಸದ್ಯ ಮೇಲೆ ಹೇಳಿರುವ ಎರಡೂ ಫೀಚರ್ ಗಳು ಬೇಟಾ ವರ್ಷನ್ ನಲ್ಲಿ ಲಭ್ಯವಿದ್ದು ಕೆಲವೇ ದಿನಗಳಲ್ಲಿ ಎಲ್ಲರ ವಾಟ್ಸ್ ಆಪ್ ನಲ್ಲೂ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ.

Best Mobiles in India

English summary
WhatsApp set to get these two new features
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+