2019 ಜನವರಿ 1ರಿಂದ ವಾಟ್ಸ್ಆಪ್‌ನಲ್ಲಿ ಶಾಕಿಂಗ್ ಬದಲಾವಣೆ!..ಏನು ಗೊತ್ತಾ?

  |

  ವಿಶ್ವದಲ್ಲೇ ಅತ್ಯಂತ ಹೆಚ್ಚು ಬಳಕೆದಾರರನ್ನು ಹೊಂದಿರುವ 'ವಾಟ್ಸ್ಆಪ್' ಮೆಸೇಜಿಂಗ್​ ಆಪ್ 2019 ಜನವರಿ ತಿಂಗಳಿನಲ್ಲಿ ಶಾಕಿಂಗ್ ಬದಲಾವಣೆಯೊಂದನ್ನು ಮಾಡುತ್ತಿದೆ. ಇಲ್ಲಿಯವರೆಗೂ ಜಾಹಿರಾತುಗಳಿಲ್ಲದೆ ಉಚಿತ ಸೇವೆ ನೀಡುತ್ತಿದ್ದ ವಾಟ್ಸ್ಆಪ್, ಮುಂದಿನ ದಿನಗಳಲ್ಲಿ ತನ್ನಲ್ಲಿ ಜಾಹಿರಾತನ್ನು ಪ್ರಕಟಿಸಲಿದೆ ಎನ್ನಲಾಗಿದ್ದ ಯನ್ನು ಈಗ ವಾಟ್ಸ್ಆಪ್ ಸಂಸ್ಥೆಯೇ ಖಚಿತಪಡಿಸಿದೆ.

  ಹೌದು, ಫೇಸ್​​ಬುಕ್ ಒಡೆತನದಲ್ಲಿರುವ ವಾಟ್ಸ್​ಆಪ್​​ ಇಷ್ಟು ವರ್ಷಗಳ ಕಾಲ ಜಾಹೀರಾತುಗಳಿಂದ ದೂರ ಉಳಿದಿತ್ತು. ಆದರೆ, ಇದೀಗ ವ್ಯವಹಾರ ವಿಸ್ತರಣೆ ದೃಷ್ಟಿಯಿಂದ ಜಾಹೀರಾತು ನೀಡಲು ಮುಂದಾಗಿರುವುದಾಗಿ ಸಂಸ್ಥೆಯ ಉಪಾಧ್ಯಕ್ಷ ಕ್ರಿಸ್​ ಡೇನಿಯಲ್ಸ್​ ಹೇಳಿದ್ದಾರೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಜಾಹಿರಾತು ವದಂತಿ ಸುದ್ದಿ ನಿಜವಾಗಿದೆ.

  2019 ಜನವರಿ 1ರಿಂದ ವಾಟ್ಸ್ಆಪ್‌ನಲ್ಲಿ ಶಾಕಿಂಗ್ ಬದಲಾವಣೆ!..ಏನು ಗೊತ್ತಾ?

  ಈ ಮೊದಲು ಯಾವುದೇ ಕಾರಣಕ್ಕೂ ತನ್ನಲ್ಲಿ ಜಾಹೀರಾತು ಪ್ರಕಟಿಸುವುದಿಲ್ಲ ಎಂದು ಹೇಳಿದ್ದ ವಾಟ್ಸ್ಆಪ್ ಸಂಸ್ಥೆ ಈಗ ತನ್ನ ಈ ನಿರ್ಧಾರದಲ್ಲಿ ಯೂ ಟರ್ನ್ ಹೊಡೆದಿದೆ. ಹಾಗಾದರೆ, ವಾಟ್ಸ್ಆಪ್​ನಲ್ಲಿ ಜಾಹೀರಾತುಗಳು ಹೇಗೆ ಕಾಣಿಸಿಕೊಳ್ಳಲಿವೆ? ಜಾಹಿರಾತುಗಳಿಂದ ಬಳಕೆದಾರರಿಗೆ ಕಿರಿಕಿರಿ ಆಗುವ ಸಂಭವ ಇದೆಯೇ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಮೊದಲೇ ಹೇಳಲಾಗಿತ್ತು!

  ವಾಟ್ಸ್ಆಪ್​ನಲ್ಲಿ ಜಾಹೀರಾತುಗಳು 2019ರಿಂದ ಆರಂಭವಾಗಲಿವೆ ಎಂದು ಈ ವರ್ಷದ ಆರಂಭದಲ್ಲೇ ವಾಲ್​ ಸ್ಟ್ರೀಟ್​ ಜರ್ನಲ್​ ಪ್ರಕಟಿಸಿದ್ದ ವರದಿಯಲ್ಲಿಯೇ ಹೇಳಲಾಗಿತ್ತು. ಇನ್ನು ಕಳೆದ ತಿಂಗಳಷ್ಟೇ WaBetaInfo ಪ್ರಕಟಿಸಿರುವ ವರದಿ ಅನ್ವಯ ವಾಟ್ಸ್‌ಆಪ್ ತನ್ನ​ ಬಳಕೆದಾರರ ಸ್ಟೇಟಸ್​ನಲ್ಲಿ ಜಾಹೀರಾತುಗಳನ್ನು ತೋರಿಸಲಿದೆ ಎಂದು ಹೇಳಿದ್ದನ್ನು ಸಹ ನೀವು ನೋಡಬಹುದು.

  ಜಾಹಿರಾತು ಟೆಸ್ಟಿಂಗ್ ಆರಂಭ!

  ಫೇಸ್​ಬುಕ್​ ಇದೇ ವರ್ಷ ಜೂನ್​ನಲ್ಲಿ ಇನ್ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಜಾಹೀರಾತನ್ನು ಆರಂಭಿಸಿತ್ತು. ಇದೇ ರೀತಿ ಈಗ ವಾಟ್ಸ್ಆಪ್ ಮೂಲಕವೂ ಜಾಹಿರಾತು ಟೆಸ್ಟಿಂಗ್​ನ್ನೂ ಅನ್ನು ಈಗಾಗಲೇ ಆರಂಭಿಸಿದೆ ಎನ್ನಲಾಗಿದೆ. ಲಭ್ಯವಾದ ಮಾಹಿತಿ ಅನ್ವಯ ಇನ್ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಕಾಣಿಸುವ ಜಾಹಿರಾತುಗಂತೆ ವಾಟ್ಸ್ಆಪ್‌ನಲ್ಲಿಯೂ ಜಾಹಿರಾತುಗಳು ಕಾಣಿಸಿಕೊಳ್ಳಲಿವೆಯಂತೆ.

  ಸ್ಟೇಟಸ್‌ನಲ್ಲಿ ಜಾಹಿರಾತು!

  ಇನ್ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಕಾಣಿಸುವಂತೆ ವಾಟ್ಸ್ಆಪ್‌ನ ಸ್ಟೇಟಸ್ ಮೂಲಕ ಮಾತ್ರ ಜಾಹಿರಾತುಗಳನ್ನು ಪ್ರಕಟಿಸಲು ಸಂಸ್ಥೆ ನಿರ್ಧರಿಸಿದೆ ಎಂದು ಹೇಳಲಾಗಿದೆ. ಈ ಜಾಹೀರಾತುಗಳು ವಿಡಿಯೋ ಹಾಗೂ ಚಿತ್ರದ ರೂಪದಲ್ಲಿ ಇರಲಿವೆ. ಬಳಕೆದಾರರು ಆ ಜಾಹಿರಾತುಗಳನ್ನು ಕ್ಲಿಕ್ ಮಾಡಿದಾಗ ನೇರವಾಗಿ ಜಾಹಿರಾತು ನೀಡಿದ ಕಂಪೆನಿಗಳ ವೆಬ್‌ಸೈಟ್ ತೆರೆದುಕೊಳ್ಳಲಿದೆ.

  ಗ್ರಾಹಕರಿಗಿಲ್ಲ ಕಿರಿಕಿರಿ!

  ಉಚಿತವಾಗಿ ಸೇವೆಯನ್ನು ನೀಡುತ್ತಿದ್ದ ವಾಟ್ಸಆಪ್‌ನಲ್ಲಿ ಆದಾಯ ಮಾಡಲು ಮುಂದಾಗಿರುವ ಮಾತೃಸಂಸ್ಥೆ ಫೇಸ್‌ಬುಕ್, ವಾಟ್ಸ್ಆಪ್ ಮೂಲಕ ಪ್ರಕಟಿಸು ಜಾಹಿರಾತುಗಳು ಬಳಕೆದಾರರಿಗೆ ಕಿರಿಕಿರಿಯಾಗದಂತೆ ನೋಡಿಕೊಳ್ಳಲು ಪ್ರಯತ್ನಿಸಿದೆ. ವಾಟ್ಸ್ಆಪ್ ಸ್ಟೇಟಸ್ ಬಿಟ್ಟರೆ ಬೇರೆಲ್ಲಿಯೂ ಜಾಹಿರಾತು ನೀಡಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯಕ್ಕೆ ಕಂಪೆನಿಯೇ ಬಂದಿದೆಯಂತೆ.

  ಜನವರಿ 1 ರಿಂದ ಆರಂಭ!

  ವಾಟ್ಸ್ಆಪ್ ಬಳಕೆದಾರರ ಸ್ಟೇಟಸ್​ ವಿಭಾಗದಲ್ಲಿ ಜಾಹೀರಾತುಗಳು ಕಾಣಿಸಿಕೊಳ್ಳಲಿರುವುದು ಖಚಿತವಾದರೂ, ಸದ್ಯ ಜಾಹೀರಾತುಗಳು ಯಾವಾಗ ಕಾಣಿಸಿಕೊಳ್ಳಲಿವೆ ಎನ್ನುವ ಕುರಿತು ಸ್ಪಷ್ಟಪಡಿಸಿಲ್ಲ. ಆದರೆ, ವಾಟ್ಸ್ಆಪ್ ಮೂಲಗಳು ಬಿಟ್ಟುಕೊಟ್ಟಿರುವ ವದಂತಿಗಳಂತೆ, 2019 ನೇ ಜನವರಿ 1 ನೇ ತಾರೀಖಿನ ವರ್ಷಾರಂಭದ ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

  ಮೇಧಾವಿಗಳಲ್ಲಿರುವ ಈ ಸಾಮಾನ್ಯ 8 ಲಕ್ಷಣಗಳು ಅವರಿಗೇ ತಿಳಿದಿರುವುದಿಲ್ಲವಂತೆ..!!

  ಪ್ರಪಂಚದಲ್ಲಿ ಎಲ್ಲರೂ ಮೇಧಾವಿಗಳಾಗಲು ಸಾಧ್ಯವಿಲ್ಲ. ಆದರೆ, ಮೇಧಾವಿಗಳು ಹುಟ್ಟು ಪ್ರಪಂಚದಲ್ಲಿ ಎಂದೂ ಕಡಿಮೆಯಾಗಿಲ್ಲ ಎನ್ನುವ ಮಾತು ನೂರಕ್ಕೆ ನೂರರಷ್ಟು ನಿಜ ಎನ್ನಬಹುದು.! ಏಕೆಂದರೆ, ಎಲ್ಲರಿಗಿಂತ ವಿಭಿನ್ನವಾಗಿ ಅಸಮಾನ್ಯ ಬುದ್ದಿವಂತಿಕೆ ಹೊಂದುವವರ ಸಂಖ್ಯೆ ಭೂಮಿ ಮೇಲೆ ಹುಟ್ಟುತ್ತಲೇ ಇರುತ್ತದೆ.!

  ಆದರೆ, ಹೀಗೆ ಹುಟ್ಟುವ ಎಷ್ಟೋ ಮೇಧಾವಿಗಳಲ್ಲಿ ಕೆಲವರು ಮಾತ್ರ ಬೆಳಕಿಗೆ ಬಂದರೆ, ಇನ್ನು ಕೆಲವರು ಬೆಳೆಯುತ್ತಾ ತಮ್ಮ ಮೇಧಾವಿ ಶಕ್ತಿಯನ್ನು ಅಡಗಿಸಿಟ್ಟಿಕೊಳ್ಳುತ್ತಾರಂತೆ.! ಇದರಿಂದ ಮೇಧಾವಿಯಾಗಿದ್ದವನೂ ಕೂಡ ಸಮಾಜದಲ್ಲಿ ಎಂದೂ ಗುರುತಿಸಿಕೊಳ್ಳದೇ ಉಳಿದುಕೊಳ್ಳುತ್ತಾನೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.!!

  ಎಷ್ಟೋ ಮೇಧಾವಿಗಳು ಹೆಚ್ಚು ಬುದ್ದಿವಂತರಾಗಿದ್ದರೂ ಕೂಡ ಅವರು ಮರೆಯಲ್ಲಿರುವುದಕ್ಕೆ ಅವರ ಮನೋ ದೌರ್ಬಲ್ಯವೇ ಕಾರಣವಂತೆ.! ಹಾಗಾಗಿ, ನೀವು ಮೇಧಾವಿಗಳಾಗಿದ್ದು, ಮನೋ ದೌರ್ಬಲ್ಯದಿಂದ ಏನನ್ನೂ ಸಾಧಿಸಲು ಸಾಧ್ಯವಾಗದಿದ್ದರೆ, ಮೇಧಾವಿಗಳಲ್ಲಿ ಕಾಣುವ ಸಾಮಾನ್ಯ ಲಕ್ಷಣಗಳೂ ನಿಮ್ಮಲ್ಲೂ ಇವೆಯಾ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

  ತಮ್ಮೊಳಗೆ ತಾವು ಮಾತನಾಡುವುದು!!

  ಮೇಧಾವಿಗಳು ಹೆಚ್ಚು ಬುದ್ದಿವಂತರಾಗಿದ್ದರೂ ಕೂಡ ಅವರು ಯಾವಾಗಲೂ ಒಂದು ವಿಷಯದ ಬಗ್ಗೆ ತಮ್ಮಲ್ಲಿ ತಾವು ಮಾತನಾಡುತಿರುತ್ತಾರಂತೆ. ಅದೇ ಸಮಯದಲ್ಲಿ ಆ ವಿಷಯದ ಬಗ್ಗೆ ಹತ್ತಾರು ರೀತಿಯಲ್ಲಿ ಯೋಚಿಸುತ್ತಿರುತ್ತಾರಂತೆ.!!

  ಯಾವಾಗಲೂ ಒಂಟಿಯಾಗಿ, ಶಾಂತವಾಗಿರಬೇಕು

  ಮೇಧಾವಿಗಳು ಯಾವಾಗಲೂ ಒಂಟಿಯಾಗಿ, ಶಾಂತವಾಗಿರಬೇಕು ಎಂದು ಬಯಸುತ್ತಾರಂತೆ. 10 ಜನರೊಂದಿಗೆ ಹೋಗುತ್ತಿದ್ದರೂ ಸಹ ತನ್ನ ಭಾವನೆಯಲ್ಲಿ ಬಹುಮಟ್ಟಿಗೆ ಒಂಟಿಯಾಗಿರಲು ಪ್ರಯತ್ನಿಸುತ್ತಾರೆ. ಅಂದರೆ ಇವ ಸಂಘ ಜೀವಿಯಲ್ಲ.!!

  ನಿರುದ್ಯೋಗಿಗಳೂ ಇವರು!!

  ಮೇಧಾವಿಗಳಿಗೆ ಯಾರ ಬಳಿಯೂ ಕೆಲಸ ಮಾಡಲು ಇಷ್ಟ ಇರುವುದಿಲ್ಲವಂತೆ.! ಒಂದು ವೇಳೆ ಹಣಕ್ಕಾಗಿ ಕೆಲಸ ಮಾಡುತ್ತಿದ್ದರೂ ಸಹ ಮಾಡುತ್ತಿರುವ ಉಧ್ಯೋಗದ ಮೇಲೆ ಅವರಿಗೆ ಶ್ರದ್ದೆ ಇರುವುದಿಲ್ಲವಂತೆ.!! ಅವರು ತನ್ನದೇ ಕಲ್ಪನೆಗಳಲ್ಲಿರುವಾಗ ಕೆಲಸದ ಬಗ್ಗೆ ಚಿಂತಿಸುವುದಿಲ್ಲವಂತೆ.!!

  ಊಹಾತ್ಮಕ ಶಕ್ತಿ, ಸೃಜನಶೀಲತೆ

  ಮೇಧಾವಿಗಳು ಯಾವುದೇ ವಿಷಯಗಳನ್ನಾದರೂ ಸಹ ಊಹೆ ಮಾಡಿಕೊಳ್ಳುವ ಊಹಾತ್ಮಕ ಶಕ್ತಿ ಹೊಂದಿರುತ್ತಾರಂತೆ. ಊಹೆ ಮಾಡಿದ ವಿಷಯಗಳನ್ನು ಸೃಜನಾತ್ಮಕವಾಗಿ ರೂಪಿಸಿ ಕಾರ್ಯ ರೂಪಕ್ಕೆ ತರಬಲ್ಲ ಶಕ್ತಿ ಅವರಿಗೆ ಇರುತ್ತದೆಯಂತೆ.!!

  ಫ್ಯಾಷನ್ ಇಷ್ಟವಿಲ್ಲದಿರುವುದು!!

  ಹೆಚ್ಚು ಮೇಧಾವಿಗಳಿಗೆ ಫ್ಯಾಷನ್ ಎಂಬುದರ ಮೇಲೆ ಕಾಳಜಿಯೇ ಇರುವುದಿಲ್ಲವಂತೆ. ಕನಿಷ್ಠ ಗಡ್ಡ ಮಾಡುವಿಕೆ ಕೂಡ ಟೈಮ್ ವೇಸ್ಟ್ ಎಂದು ಪರಿಗಣಿಸುವ ಅವರು ಯಾವುದೇ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳರು.! ಏಕೆಂದರೆ, ಅವರ ಮೆದುಳು ಆ ಸಮಯದಲ್ಲಿ ಅತಿ ಹೆಚ್ಚು ಕೆಲಸ ಮಾಡುತ್ತಿರುತ್ತದೆಯಂತೆ.!!

  ಹೆಚ್ಚು ಕೇಳಿಸಿಕೊಳ್ಳುತ್ತಾರೆ.!!

  ಮೇಧಾವಿಗಳು ಪ್ರಪಂಚವನ್ನು ನೋಡಿ, ಕೇಳಿ ಕಲಿಯುತ್ತಾರೆ. ಇವರಿಗೆ ಹೊಸ ಹೊಸ ವಿಷಯ ಕಲಿಯಲು ಆಸಕ್ತಿ. ಆದ್ದರಿಂದ ಇವರಿಗೆ ಹೆಚ್ಚು ಮಾತನಾಡುವ ಉತ್ಸಾಹ ಇರುವುದಿಲ್ಲವಂತೆ. ಇವರ ಬಳಿ ಯಾರೂ ಏನೇ ವಾದ ಮಾಡಿದರೂ ಸಹ ಅವರ ಬಳಿ ಹೆಚ್ಚು ವಾದ ಮಾಡಲು ಮೇಧಾವಿಗಳು ಇಷ್ಟಪಡುವುದಿಲ್ಲವಂತೆ.!!

  ಕಲ್ಮಶ ಇಲ್ಲದೆ ನಗುತ್ತಾರಂತೆ!!

  ಮೇಧಾವಿಗಳ ನಗು ತುಂಬಾ ಪರಿಪೂರ್ಣವಾಗಿ ಕಲ್ಮಶವಿರದ ನಗುವಾಗಿರುತ್ತದೆಯಂತೆ. ಚಿಕ್ಕ ಚಿಕ್ಕ ಜೋಕ್ಸ್ಗಳಿಗೂ ಸಹ ಚೆನ್ನಾಗಿ ಖುಷಿಪಡುವ ಇವರು ಖಿನ್ನತೆ ಇಲ್ಲದೆ ಶಾಂತವಾಗಿರುತ್ತಾರೆ.!! ಆದರೆ, ಭಾವನಾ ಪ್ರಪಂಚಕ್ಕೆ ಹೆಚ್ಚು ಬೆಲೆಯನ್ನು ನೀಡುತ್ತಿರುತ್ತಾರೆ.!!

  ಬೇರೆಯವರ ಅವಲಂಬನೆ!!

  ತಮ್ಮ ಕೆಲಸವನ್ನು ತಾವೆ ಮಾಡದವರು ಎಂದರೆ ಮೇಧಾವಿಗಳು ಮಾತ್ರ.! ಇವರು ಇವರ ಕೆಲಸಕ್ಕಾಗಿ ಬೇರೆಯವರನ್ನು ಅವಲಂಬಿಸುತ್ತಾರಂತೆ. ತನ್ನ ತಲೆಗೆ ಮೀರಿದ ಭಾದ್ಯತೆಯನ್ನು ತನ್ನ ತಲೆಯ ಮೇಲೆ ಹಾಕಿಕೊಳ್ಳಲು ಮೇಧಾವಿಗಳು ಎಂದೂ ಇಷ್ಟಪಡುವುದಿಲ್ಲವಂತೆ.!!

  ಅವರಿಗೆ ಗೊತ್ತಿರುವುದಿಲ್ಲವಂತೆ.!!

  ಮೇಧಾವಿಗೆ ತಾನು ಬುದ್ದಿವಂತ ಎಂದು ತಿಳಿದಿದ್ದರೂ ಸಹ ನಾನು ಏನಾದರೂ ಸಾಧಿಸುತ್ತೇನೆ ಎಂಬುದು ಅವರಿಗೆ ಗೊತ್ತಿರುವುದಿಲ್ಲವಂತೆ. ತನ್ನ ಸೋಂಬೇರಿತನದಿಂದ ಎಲ್ಲವನ್ನು ಆಲಕ್ಷ್ಯದಿಂದ ಕಾಣುವ ಮೇಧಾವಿಗೆ ಕಷ್ಟಗಳು ಎದುರಾದರೆ ಮಾತ್ರ ಸಾಧನೆಗೆ ಮುಂದಾಗುತ್ತಾನಂತೆ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  WhatsApp will finally start showing ads to its users in Status which was being speculated for a long time. to know more visit to kannada. gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more