Home
Apps

ಮತ್ತೆ ಕೆಲ ಮೊಬೈಲ್‌ಗಳಲ್ಲಿ ವಾಟ್ಸ್‌ಆಪ್ ಸೇವೆ ಸ್ಥಗಿತ..ನಿಮ್ಮ ಮೊಬೈಲ್ ಈ ಲೀಸ್ಟ್‌ನಲ್ಲಿದೆಯಾ?

By Bhaskar N J

ಹಳೆಯ ಸಾಧನಗಳಿಗೆ ತನ್ನ ನೂತನ ಆಪ್ ಹೊಂದಾಣಿಕೆಯಾಗದ ಕಾರಣ ವಿಶ್ವದಲ್ಲಿಯೇ ಅತಿ ಹೆಚ್ಚು ಬಳಕೆಯಲ್ಲಿರುವ ಮೆಸೆಂಜಿಂಗ್ ಆಪ್‌ ವಾಟ್ಸ್ಆಪ್ ಸದ್ಯದಲ್ಲೇ ಒಂದಷ್ಟು ಮೊಬೈಲ್‌ಗಳಲ್ಲಿ ತನ್ನ ಸೇವೆಯನ್ನು ಕೊನೆಗೊಳಿಸಲಿದೆ. ಈಗಾಗಲೇ ಕೆಲ ಮೊಬೈಲ್‌ಗಳಲ್ಲಿ ವಾಟ್ಸ್‌ಆಪ್ ಸ್ಥಗಿತಗೊಂಡಿದ್ದು, ಇನ್ನೂ ಒಂದಿಷ್ಟು ಮೊಬೈಲ್‌‌ಗಳಲ್ಲಿ ವಾಟ್ಸ್ಆಪ್ ಸೇವೆ ಕೊನೆಗೊಳ್ಳಲಿದೆ .

ಈ ಬಗ್ಗೆ ವಾಟ್ಸ್ಆಪ್ ಕಂಪೆನಿ ತನ್ನ ಅಧಿಕೃತ ವೆಬ್‌‌ಸೈಟ್‌ನಲ್ಲಿ ಮಾಹಿತಿ ನೀಡಿದ್ದು, ಸದ್ಯದ ನಿರ್ಧಾರ ಅತ್ಯಂತ ಕಠಿಣವಾಗಿದೆ. ಇದು ಅನಿವಾರ್ಯವಾಗಿರುವುದರಿಂದ ನಾವು ಈ ಹೆಜ್ಜೆ ಇಡುತ್ತಿದ್ದೇವೆ. ನಾವು ವಾಟ್ಸ್‌ಆಪ್ ಅನ್ನು ಸಂಪರ್ಕಿಸಲು ಸಾಧ್ಯವಾಗದ ಫೋನ್ ಬಳಕೆ ಮಾಡುತ್ತಿದ್ದಲ್ಲಿ ದಯವಿಟ್ಟು ಉತ್ತಮ ದರ್ಜೆಯ ಮೊಬೈಲ್‌ನ್ನು ಖರೀದಿಸಿ ಎಂದು ತಿಳಿಸಿದೆ.

ಮತ್ತೆ ಕೆಲ ಮೊಬೈಲ್‌ಗಳಲ್ಲಿ ವಾಟ್ಸ್‌ಆಪ್ ಸೇವೆ ಸ್ಥಗಿತ..ನಿಮ್ಮ ಮೊಬೈಲ್?

ನಿಮ್ಮ ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ವಾಟ್ಸ್‌ಆಪ್ ಸಂಪರ್ಕ ಬೇಕಿದ್ದು, ಪ್ರಸ್ತುತ ನಾವು ಉಲ್ಲೇಖಿಸಿರುವ ಯಾವುದೇ ಹ್ಯಾಂಡ್‌ಸೆಟ್‌ ಅನ್ನು ನೀವು ಬಳಸುತ್ತಿದ್ದರೆ ಅದನ್ನು ಬದಲಾಯಿಸಲು ವಾಟ್ಸ್ಆಪ್ ಸೂಚಿಸಿದೆ. ಹಾಗಾದರೆ, ವಾಟ್ಸ್‌ಆಪ್ ಸೇವೆ ಸ್ಥಗಿತವಾಗಲಿರುವ ಮತ್ತು ಈಗಾಗಲೇ ಸ್ಥಗಿತಗೊಂಡಿರುವ ಮೊಬೈಲ್‌ ಫೋನ್‌ಗಳು ಯಾವುವು ಎಂದು ತಿಳಿಯಿರಿ.

ನೋಕಿಯಾ ಮೊಬೈಲ್‌ಗಳು!

ನೋಕಿಯಾ ಮೊಬೈಲ್‌ಗಳು!

ನೋಕಿಯಾ S40 ಅಥವಾ ನೋಕಿಯಾ ಆಶಾ ಸರಣಿಯ ಫೋನ್‌ಗಳು ಇನ್ನು ಎಂದಿಗೂ ವಾಟ್ಸ್ಆಪ್ ಅನ್ನು ಬೆಂಬಲಿಸುವುದಿಲ್ಲ. ನೋಕಿಯಾ ಸಿಂಬಿಯಾನ್ ಎಸ್ 60 ಕೂಡ ಈ ಒಟ್ಟಿಯಲ್ಲಿದೆ ಎಂದು ವಾಟ್ಸ್ಆಪ್ ತಿಳಿಸಿದೆ. ಹಾಗಾಗಿ, ಈಗಲೂ ಬಹು ಬಳಕೆಯ ನೋಕಿಯಾ ಆಶಾ ಸರಣಿ ಪೋನ್‌ಗಳಿಗೆ ಇನ್ನು ವಾಟ್ಸ್‌ಆಪ್ ಆಯ್ಕೆ ಇಲ್ಲ.

ಆಂಡ್ರಾಯ್ಡ್ ಮೊಬೈಲ್‌ಗಳು!

ಆಂಡ್ರಾಯ್ಡ್ ಮೊಬೈಲ್‌ಗಳು!

ಹಳೆಯ ಆಂಡ್ರಾಯ್ಡ್ ಮೊಬೈಲ್‌ ಸಾಧನಗಳಲ್ಲಿಯೂ ವಾಟ್ಸ್‌ಆಪ್ ಇನ್ನೆರಡು ವರ್ಷಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ವಾಟ್ಸ್‌ಆಪ್ ತಿಳಿಸಿದೆ. ಆಂಡ್ರಾಯ್ಡ್ ವರ್ಶನ್ 2.3.7 ಮತ್ತು ಅದಕ್ಕಿಂತ ಮುನ್ನದ ಆಂಡ್ರಾಯ್ಡ್ ಬೆಂಬಲಿತ ಸಾಧನಗಳಲ್ಲಿ ಫೆಬ್ರವರಿ 1 2020 ರಿಂದ ವಾಟ್ಸ್‌ಆಪ್ ಕಾರ್ಯನಿರ್ವಹಿಸುವುದಿಲ್ಲ ಎಂದು ವಾಟ್ಸ್‌ಆಪ್ ಹೇಳಿದೆ.

ಆಪಲ್ ಮೊಬೈಲ್‌ಗಳು!

ಆಪಲ್ ಮೊಬೈಲ್‌ಗಳು!

ಇನ್ನು ಐಫೋನ್ಗಳಿಗೆ ಬಂದಾಗ, ಐಒಎಸ್ 6 ವಾಟ್ಸ್‌ಆಪ್ ಬೂಟ್ ಅನ್ನು ಪಡೆಯುತ್ತದೆ ಮತ್ತು ಐಫೋನ್ 3GS ವಾಟ್ಸ್‌ಆಪ್ ಅನ್ನು ಬೆಂಬಲಿಸದ ಸಾಧನವಾಗಲಿದೆ ಎಂದು ವಾಟ್ಸ್‌ಆಪ್ ಉಲ್ಲೇಖಿಸಿದೆ. ಐಫೋನ್ 3 ಜಿಎಸ್ / ಐಒಎಸ್ 6 ಫೆಬ್ರವರಿ 1, 2020 ರಿಂದ ವಾಟ್ಸ್‌ಆಪ್ ಸೇವೆಯನ್ನು ಪಡೆಯುವುದಿಲ್ಲ ಎಂದು ವಾಟ್ಸ್‌ಆಪ್ ತಿಳಿಸಿದೆ.

ವಿಂಡೋಸ್ ಮೊಬೈಲ್‌ಗಳು!

ವಿಂಡೋಸ್ ಮೊಬೈಲ್‌ಗಳು!

ವಿಂಡೋಸ್ ಫೋನ್ 7.0 ಮತ್ತು 8.0 ಕೂಡ ವಾಟ್ಸ್‌ಆಪ್ ನವೀಕರಣಗಳನ್ನು ಪಡೆಯುವಲ್ಲಿ ಆಗುವುದಿಲ್ಲ ಎಂದು ವಾಟ್ಸ್‌ಆಪ್ ತಿಳಿಸಿದೆ. ಅಂತೆಯೇ, ಒಂದು ಕಾಲದ ಸ್ಮಾರ್ಟ್‌ ಫೋನುಗಳಾದ ಬ್ಲ್ಯಾಕ್‌ಬೆರ್ರಿ ಓಎಸ್ ಮತ್ತು ಬ್ಲ್ಯಾಕ್‌ ಬೆರಿ 10 ಫೋನ್‌ಗಳು ಈಗಾಗಲೇ ವಾಟ್ಸ್‌ಆಪ್ ಸೇವೆಯನ್ನು ಕಳೆದುಕೊಂಡಿವೆ.

ಇತ್ತೀಚಿನ ಮೊಬೈಲ್ ಖರೀದಿಸಿ!

ಇತ್ತೀಚಿನ ಮೊಬೈಲ್ ಖರೀದಿಸಿ!

ವಾಟ್ಸ್ಆಪ್ ಸೇವೆ ಕೊನೆಗೊಳ್ಳುತ್ತಿರುವ ಮೊಬೈಲ್‌‌ಗಳನ್ನು ನೀವು ಬಳಸುತ್ತಿದ್ದರೆ ಇತ್ತೀಚಿನ ಮೊಬೈಲ್ ಖರೀದಿಸಿ ವಾಟ್ಸ್ಆಪ್ ಅನ್ನು ಉಪಯೋಗಿಸಿ. ಈ ಸಲಹೆ ವಾಟ್ಸ್‌ಆಪ್ ಆಪ್ ಬಳಸುವುದಕ್ಕೆ ಮಾತ್ರವಲ್ಲ. ವಾಟ್ಸ್‌ಆಪ್‌ನಂತಹ ಹಲವು ಆಪ್‌ಗಳು ಈಗಾಗಲೇ ನಿಮ್ಮ ಮೊಬೈಲ್‌ನಲ್ಲಿ ಕಾರ್ಯ ನಿರ್ವಹಿಸದೇ ಇರಬಹುದು.

Best Mobiles in India

English summary
WhatsApp says that these platforms don’t offer the kind of capabilities it needs to expand the app’s features in the future.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+