ವಾಟ್ಸ್‌ಆಪ್‌ನ ಹಲವು ಆಯ್ಕೆಗಳು ಬದಲಾಗಲಿದೆ...!
ವಾಟ್ಸ್‌ಆಪ್ ತನ್ನ ಬಳಕೆದಾರರಿಗೆ ಹೊಸ ಹೊಸ ಆಯ್ಕೆಗಳನ್ನು ನೀಡುತ್ತಿರುವುದು ತಿಳಿದಿದೆ. ಈ ಬಾರಿ ಹೊಸ ಆಯ್ಕೆಯನ್ನು ನೀಡುವ ಬದಲು ಇರುವ ಫೀಚರ್ ಗಳನ್ನು ಹೊಸ ಮಾದರಿಯಲ್ಲಿ ಬದಲಾವಣೆಯನ್ನು ಮಾಡಲು ಮುಂದಾಗಲಿದೆ ಎನ್ನಲಾಗಿದೆ. ವಾಟ್ಸ್‌ಆಪ್ ಈಗಾಗಲೇ ಬದಲಾವಣೆಯ ಕಾರ್ಯದಲ್ಲಿ ಮಗ್ನವಾಗಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

ವಾಟ್ಸ್‌ಆಪ್ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿರುವುದು ಅದರ ವಿಡಿಯೋ ಕಾಲ್ ಮತ್ತು ವಾಯ್ಸ್ ಮೆಸೇಜ್‌ನಿಂದಾಗಿ. ಈ ಎರಡು ಸೇವೆಯನ್ನು ಮತ್ತಷ್ಟು ಉತ್ತಮ ಪಡಿಸಲು ವಾಟ್ಸ್‌ಆಪ್ ಡೆವಲಪರ್ ಮುಂದಾಗಿದ್ದಾರೆ ಎನ್ನಲಾಗಿದೆ. ವಾಟ್ಸ್‌ಆಪ್ ವಿಡಿಯೋ ಕಾಲ್ ಮತ್ತಷ್ಟು ಸುಂದರವಾಗಲಿದೆ.

ವಾಯ್ಸ್-ವಿಡಿಯೋ ಕಾಲ್ ಸ್ವೀಚ್:
ಈಗಾಗಲೇ ವಾಟ್ಸ್‌ಆಪ್ ವಾಯ್ಸ್ ಮತ್ತು ವಿಡಿಯೋ ಕಾಲ್ ಆಯ್ಕೆಯನ್ನು ನೀಡಿದೆ. ಆದರೆ ವಾಟ್ಸ್‌ಆಪ್ ವಿಡಿಯೋ ಮತ್ತು ವಾಯ್ಸ್ ಕಾಲ್ ನಡುವೆ ಆನ್‌ಕಾಲ್‌ನಲ್ಲಿ ಬದಲಾಯಿಸಿಕೊಳ್ಳುವ ಅವಕಾಶವನ್ನು ನೀಡಿಲ್ಲ. ಆದರೆ ಈ ಬಾರಿ ವಿಡಿಯೋ ಮತ್ತು ವಾಯ್ಸ್ ಕಾಲ್ ನಡುವೆ ಬದಲಾಯಿಸಿಕೊಳ್ಳುವ ಆಯ್ಕೆಯನ್ನು ನೀಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಲ್ಲದೇ ವಾಯ್ಸ್ ಮೆಸೇಜ್ ಕಳುಹಿಸುವ ಅವಕಾಶ:
ಇದಲ್ಲದೇ ವಾಟ್ಸ್‌ಆಪ್ ವಾಯ್ಸ್ ಮೇಸೆಜ್ ಕಳುಹಿಸುವ ಅವಕಾಶವನ್ನು ಈಗಾಗಲೇ ನೀಡಿದ್ದು, ಆದರೆ ಅದನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಕ್ರಮಕ್ಕೆ ಮುಂದಾಗಿದೆ. ವಾಯ್ಸ್ ಮೇಸೆಜ್ ಕಳುಹಿಸುವ ವಿಧಾನವನ್ನು ಬದಲಾಯಿಸಲಿದೆ ಮತ್ತು ಸುಲಭವಾಗಿಸಲಿದೆ.

ಮತ್ತಷ್ಟು ಬದಲಾವಣೆ ಸಾಧ್ಯತೆ:
ಈಗಾಗಲೇ ಹೊಸ ಆಯ್ಕೆಗಳನ್ನು ನೀಡುವ ಜೊತೆಗೆ ಹಳೇಯ ಆಯ್ಕೆಗಳನ್ನು ಬದಲಾಯಿಸಲು ವಾಟ್ಸ್‌ಆಪ್ ಮುಂದಾಗಿದೆ. ತನ್ನ ಹಳೇಯ ಆಯ್ಕೆಗಳನ್ನು ಸುಧಾರಿಸಲು ಮುಂದಾಗಿದೆ ಇದರಿಂದಾಗಿ ವಾಟ್ಸ್‌ಆಪ್ ಬಳಕೆದಾರರು ಹೊಸ ಅನುಭವನ್ನು ಪಡೆಯಲಿದ್ದಾರೆ.


Click it and Unblock the Notifications








