ಈ ವಾಟ್ಸಾಪ್ ವೈಶಿಷ್ಟ್ಯವು ಅನಗತ್ಯ ಚಾಟ್‌ಗಳನ್ನು ಹೈಡ ಮಾಡಲು ಅನುಮತಿಸುತ್ತದೆ. ಹೇಗೆ ?

By Gizbot Bureau
|

ಜಗತ್ತಿನಾದ್ಯಂತ ಅತಿದೊಡ್ಡ ಹಾಗೂ ಜನಪ್ರಿಯ ಮೆಸ್ಸೆಂಜರ್ ಆ್ಯಪ್ ವಾಟ್ಸಾಪ್ ಆಗಿದೆ, ಯಾವುದೇ ಕ್ಷಣದಲ್ಲಿಯೂ, ಯಾವುದೇ ಸ್ಥಳದಿಂದಲೂ ಜನರು ತಮ್ಮ ಆತ್ಮಿಯರೂಂದಿಗೆ ಸಂಪರ್ಕದಲ್ಲಿರಲು ವಾಟ್ಸಾಪ ಬಳಸುತ್ತಾರೆ. ಇದೀಗ ಇದು ಫೆಸಬುಕ ಒಡೆತನದಲ್ಲಿದ್ದು, ವಾಟ್ಸಾಪ ಉಚಿತ ಮತ್ತು ಸರಳ, ಸುರಕ್ಷಿತ, ಮತ್ತು ನಂಬಲಾರ್ಹ ಮೆಸೇಜಿಂಗ್ ಮತ್ತು ಕಾಲಿಂಗ್ ಸೇವೆಗಳನ್ನು ಒದಗಿಸುತ್ತದೆ. ಇದು ಜಗತ್ತಿನಾದ್ಯಂತ ಎಲ್ಲಾ ಫೋನ್‌ಗಳಲ್ಲಿ ಲಭ್ಯವಿದ್ದು ವೈವಿಧ್ಯಮಯ ಫೋಟೋಗಳು, ವೀಡಿಯೊಗಳು, ದಾಖಲೆಗಳು, ಸ್ಥಳ, ಹಾಗೂ ವಾಯ್ಸ್ ಕಾಲ್‍ಗಳನ್ನು ಮಾಡಬಹುದಾಗಿದೆ.

ಈ ವಾಟ್ಸಾಪ್ ವೈಶಿಷ್ಟ್ಯವು ಅನಗತ್ಯ ಚಾಟ್‌ಗಳನ್ನು ಹೈಡ ಮಾಡಲು ಅನುಮತಿಸುತ್ತದೆ. ಹೇಗ

ವಾಟ್ಸಾಪನಲ್ಲಿ ಅನಗತ್ಯವಾದ ಚಾಟ್ಸ್ ಗಳನ್ನು ಮರೆಮಾಡುವುದರ ಬಗ್ಗೆ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದು ಅನಗತ್ಯವಾದ ಚಾಟ್ಸಗಳನ್ನು ಮರೆಮಾಡಲು ನಿಮಗೆ ಸಹಾಯಕವಾಗಿದೆ. ಹೌದು, ವಾಟ್ಸಾಪ ಇತ್ತೀಚೆಗೆ ಆರ್ಕೈವ್ ಮಾಡಿದ ಚಾಟ್ಸ್ ಫೋಲ್ಡರ್ ಗಾಗಿ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಒಮ್ಮೆ ನೀವು ಚಾಟ್ಸ್ ಅನ್ನು ಆರ್ಕೈವ್ ಮಾಡಿದರೆ, ಅದು ಮುಖ್ಯ ವೀಕ್ಷಣೆಯಿಂದ ಮರೆಮಾಡುತ್ತದೆ. ಇದರರ್ಥ ನೀವು ನಿಮ್ಮ ವಾಟ್ಸಾಪ್ ಚಾಟ್ ಸ್ಕ್ರೀನ್‌ನಿಂದ ಸಂದೇಶಗಳನ್ನು ಮರೆಮಾಡಬಹುದು ಮತ್ತು ಅಗತ್ಯವಿದ್ದರೆ ಅದನ್ನು ನಂತರ ನೋಡಬಹುದು.

ಆರ್ಕೈವ್ ಚಾಟ್ಸ್ ವೈಶಿಷ್ಟ್ಯವೆನೆಂದರೆ ಆರ್ಕೈವ್ ಮಾಡಿದ ಚಾಟ್ಸ್ ಫೋಲ್ಡರನಲ್ಲಿ ಸಿಲುಕಿಕೊಳ್ಳುವುದನ್ನು ಮುಂದುವರಿಸುತ್ತದೆ ಮತ್ತು ಚಾಟ್ ಗಳು ಮುಖ್ಯ ಚಾಟ್ ಲಿಸ್ಟನಲ್ಲಿ ಕಾಣಿಸಿಕೊಳ್ಳುವುದಿಲ್ಲ. ನಿಮ್ಮ ಚಾಟ್ಸ್ ಪಟ್ಟಿಯಿಂದ ಒಬ್ಬ ವ್ಯಕ್ತಿಯನ್ನು ಅಥವಾ ಗುಂಪು ಚಾಟ್ ಅನ್ನು ಮರೆಮಾಡಲು ನಿಮಗೆ ಅನುಮತಿಸುತ್ತದೆ. ನೀವು ಅನಆರ್ಕೈವ್ ಮಾಡಿದಾಗ ಮಾತ್ರ ಚಾಟ್ ಗಳು ಮುಖ್ಯ ಲಿಸ್ಟನಲ್ಲಿ ನೋಡಬಹುದಾಗಿದೆ.

ಸೂಚನೆ:

* ಚಾಟ್ ಅನ್ನು ಆರ್ಕೈವ್ ಮಾಡುವುದರಿಂದ ಚಾಟ್ ಅನ್ನು ಅಳಿಸುವುದಿಲ್ಲ ಅಥವಾ ಅದನ್ನು ನಿಮ್ಮ SD ಕಾರ್ಡ್‌ಗೆ ಬ್ಯಾಕಪ್ ಮಾಡುವುದಿಲ್ಲ.

* ಆರ್ಕೈವ್ ಮಾಡಿದ ವೈಯಕ್ತಿಕ ಅಥವಾ ಗುಂಪು ಚಾಟ್‌ಗಳು ಆ ವ್ಯಕ್ತಿ ಅಥವಾ ಗುಂಪು ಚಾಟ್‌ನಿಂದ ಹೊಸ ಸಂದೇಶವನ್ನು ಸ್ವೀಕರಿಸಿದಾಗ ಆರ್ಕೈವ್ ಆಗಿರುತ್ತವೆ.

* ಆರ್ಕೈವ್ ಮಾಡಿದ ಚಾಟ್‌ಗಳಿಗಾಗಿ ನೀವು ಸೂಚಿಸದಿದ್ದರೆ ಅಥವಾ ಉತ್ತರಿಸದಿದ್ದರೆ ನೊಟಿಪಿಕೀಶನ್ ಬರುವುದಿಲ್ಲ.

"ಬಳಕೆದಾರರು ತಮ್ಮ ಚಾಟ್ ಗಳನ್ನು ಫೋಲ್ಡರ್ ನಲ್ಲಿಡಲು ಬಯಸುತ್ತಾರೆ ಹಾಗಾಗಿ ಹೊಸ ಆರ್ಕೈವ್ ಮಾಡಿದ ಚಾಟ್ಸ ಸೆಟ್ಟಿಂಗ್ ಗಳು ಅಂದರೆ ಆರ್ಕೈವ್ ಮಾಡಿದ ಯಾವುದೇ ಚಾಟ್ಸ್ ಥ್ರೆಡ್ ,ಆರ್ಕೈವ್ ಮಾಡಿದ ಫೋಲ್ಡರ್ ನಲ್ಲಿಯೇ ಉಳಿಯುತ್ತದೆ, ಆ ಥ್ರೆಡ್ ಗೆ ಹೊಸ ಮೆಸೇಜಸ್ ಕಳುಹಿಸಿದರೂ ಸಹ," ಎಂದು ವಾಟ್ಸಾಪ ಹೇಳಿದೆ.

ಚಾಟ್ಸ್ ಗಳನ್ನು ಆರ್ಕೈವ್ ಮಾಡಲು ಅನುಸರಿಸಬೇಕಾದ ಹಂತಗಳು:

* ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ವಾಟ್ಸಾಪ ಓಪನ್ ಮಾಡಿರಿ.

* ಚಾಟ್ಸ್ ಟ್ಯಾಬ್‌ನಲ್ಲಿ, ನೀವು ಮರೆಮಾಡಲು ಬಯಸುವ ಚಾಟ್ ಅನ್ನು ಟ್ಯಾಪ್ ಮಾಡಿ ಮತ್ತು ಹಿಡಿದುಕೊಳ್ಳಿ.

ಪರದೆಯ ಮೇಲ್ಭಾಗದಲ್ಲಿರುವ ಆರ್ಕೈವ್ ಬಟನ್ ಅನ್ನು ಟ್ಯಾಪ್ ಮಾಡಿ.

* ಎಲ್ಲಾ ಚಾಟ್‌ಗಳನ್ನು ಆರ್ಕೈವ್ ಮಾಡಲು, ಚಾಟ್ಸ್ ಟ್ಯಾಬ್‌ನಲ್ಲಿ, ಹೆಚ್ಚಿನ ಆಯ್ಕೆಗಳು> ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡಿ.

ಚಾಟ್‌ಗಳು> ಚಾಟ್ ಇತಿಹಾಸ> ಎಲ್ಲಾ ಚಾಟ್‌ಗಳನ್ನು ಆರ್ಕೈವ್ ಮಾಡಿ ಟ್ಯಾಪ್ ಮಾಡಿ.

ಒಮ್ಮೆ ಚಾಟ್ಸ್ ಗಳನ್ನು ಡಿಲಿಟ ಮಾಡುವುದು ಎಂದರೆ ಅವೆಲ್ಲವನ್ನೂ ಶಾಶ್ವತವಾಗಿ ತೊಡೆದುಹಾಕುವುದು ಮತ್ತು ಅವು ಮರಳಿ ನೋಡಲಾಗುವುದಿಲ್ಲ. ಆದ್ದರಿಂದ ಆರ್ಕೈವ್ ಫೋಲ್ಡರ್ ಸಹಾಯಕಾರಿಯಾಗಿದೆ, ಯಾವುದೇ ತೊಂದರೆ ಇಲ್ಲದೆ ಅನಗತ್ಯ ಚಾಟ್ಸ್ ಮರೆಮಾಡಹುದಾಗಿದೆ.

Best Mobiles in India

Read more about:
English summary
WhatsApp Tips And Tricks: Steps To Hide Unwanted Chats On WhatsApp

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X