ವಾಟ್ಸ್ ಆಪ್ ಗೆ ಎಂಟ್ರಿ ಕೊಡಲಿವೆ ಅನಿಮೇಟೆಡ್ ಸ್ಟಿಕ್ಕರ್ ಗಳು

By Gizbot Bureau
|

ಇಮೇಜ್ ಗಳನ್ನು ಡೂಡಲಿಂಗ್ ಮಾಡುವಾಗ ವಾಟ್ಸ್ ಆಪ್ ನಲ್ಲಿ ಬಳಕೆದಾರರಿಗೆ ಸ್ಟಿಕ್ಕರ್ ಮತ್ತು ಎಮೋಜಿಗಳನ್ನು ಹುಡುಕುವುದಕ್ಕೆ ಅವಕಾಶ ನೀಡುವ ಫೀಚರ್ ಬಗ್ಗೆ ವಾಟ್ಸ್ ಆಪ್ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂಬ ಬಗ್ಗೆ ಕಳೆದ ತಿಂಗಳು ವರದಿಯಾಗಿತ್ತು.

ಸ್ಟಿಕ್ಕರ್ ಗಳಿಗೆ ಹೊಸ ರೂಪ:

ಸ್ಟಿಕ್ಕರ್ ಗಳಿಗೆ ಹೊಸ ರೂಪ:

ಇದೀಗ ಒಂದು ತಿಂಗಳ ನಂತರ ಫೇಸ್ ಬುಕ್ ಮಾಲೀಕತ್ವದ ಸಾಮಾಜಿಕ ಮೆಸೇಜಿಂಗ್ ಕಂಪೆನಿ ವಾಟ್ಸ್ ಆಪ್ ಹೊಸ ಫೀಚರ್ ವೊಂದನ್ನು ಬಿಡುಗಡೆಗೊಳಿಸುವ ಬಗ್ಗೆ ಸುದ್ದಿಯಾಗಿದ್ದು ಇದು ಸ್ಟಿಕ್ಕರ್ ಗಳನ್ನು ಇನ್ನಷ್ಟು ಆಕರ್ಷಕ ರೀತಿಯಲ್ಲಿ ಹಂಚಿಕೊಳ್ಳುವುದಕ್ಕೆ ಅವಕಾಶ ನೀಡಲಿದೆ ಎಂದು ತಿಳಿದುಬಂದಿದೆ.

ವಾಬೇಟಾಇನ್ಫೋ ಮಾಹಿತಿ:

ವಾಬೇಟಾಇನ್ಫೋ ಮಾಹಿತಿ:

ಪ್ರಸಿದ್ಧ ಮೆಸೇಜಿಂಗ್ ಆಪ್ ವಾಟ್ಸ್ ಆಪ್ ಬಗ್ಗೆ ಎಲ್ಲಾ ಮಾಹಿತಿಗಳನ್ನು ಕಲೆಹಾಕುವ ವಾಬೇಟಾಇನ್ಫೋ ವರದಿಯ ಪ್ರಕಾರ ಎನಿಮೇಟೆಡ್ ಸ್ಟಿಕ್ಕರ್ ಗಳಿಗೆ ವಾಟ್ಸ್ ಆಪ್ ಫ್ಲ್ಯಾಟ್ ಫಾರ್ಮ್ ನಲ್ಲಿ ಪರಿಚಯಿಸುವ ಪ್ಲಾನ್ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಇದು ಕೇವಲ ಆಂಡ್ರಾಯ್ಡ್ ಮತ್ತು ಐಓಎಸ್ ಗೆ ಮಾತ್ರವೇ ಸೀಮಿತವಾಗಿರದೇ ವಾಟ್ಸ್ ಆಪ್ ವೆಬ್ ವರ್ಷನ್ ನಲ್ಲೂ ಕೂಡ ಲಭ್ಯವಾಗಲಿದೆ.

ಅನಿಮೇಟೆಡ್ ಸ್ಟಿಕ್ಕರ್:

ಅನಿಮೇಟೆಡ್ ಸ್ಟಿಕ್ಕರ್:

ವಾಟ್ಸ್ ಆಪ್ ಬಳಕೆದಾರರು ಅನಿಮೇಟೆಡ್ ಸ್ಟಿಕ್ಕರ್ ಗಳನ್ನು ತಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್, ಐಫೋನ್ ಮತ್ತು ವಾಟ್ಸ್ ಆಪ್ ವೆಬ್ ಮೂಲಕ ಹಂಚಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಈ ಬಗೆಗಿನ ಸಿಹಿಸುದ್ದಿ ಏನೆಂದರೆ ಇವುಗಳು GIF ಗಳಂತಲ್ಲ ಕೇವಲ ಕೆಲವು ಸೆಕೆಂಡ್ ಗಳಿಗೆ ಮಾತ್ರವೇ ಪ್ಲೇ ಆಗುವುದಲ್ಲ ಬದಲಾಗಿ ಮೆಸೇಜ್ ಕಳಿಸಿದವರು ಮತ್ತು ಅದನ್ನು ಪಡೆದವರು ಇಬ್ಬರೂ ಕೂಡ ಯಾವಾಗಲೂ ಪ್ಲೇ ಆಗುತ್ತಿರುವಂತಹ ಅನಿಮೇಟ್ ಆಗಿರುವಂತ ಸ್ಟಿಕ್ಕರ್ ಗಳನ್ನು ಪಡೆಯುತ್ತಾರೆ.

ಹೆಚ್ಚು ಮನರಂಜನೆ:

ಹೆಚ್ಚು ಮನರಂಜನೆ:

ಹೆಚ್ಚುವರಿಯಾಗಿ ಥರ್ಡ್ ಪಾರ್ಟಿ ಅನಿಮೇಟೆಡ್ ಸ್ಟಿಕ್ಕರ್ ಗಳಿಗೂ ಕೂಡ ಬೆಂಬಲ ನೀಡುತ್ತದೆ ಎನ್ನಲಾಗಿದೆ. ಇದು ವಾಟ್ಸ್ ಆಪ್ ನಲ್ಲಿ ಸಂವಹನ ನಡೆಸುವವರಿಗೆ ಹೆಚ್ಚಿನ ಮನರಂಜನೆಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ.

ಬೇಟಾ ವರ್ಷನ್ ನಲ್ಲಿ ಲಭ್ಯವಿಲ್ಲ

ಬೇಟಾ ವರ್ಷನ್ ನಲ್ಲಿ ಲಭ್ಯವಿಲ್ಲ

ಯಾವುದೇ ಬೇಟಾ ವರ್ಷನ್ ನಲ್ಲೂ ಕೂಡ ಅನಿಮೇಟೆಡ್ ಸ್ಟಿಕ್ಕರ್ಸ್ ಸದ್ಯ ಲಭ್ಯವಿಲ್ಲ. ಬಹುಶ್ಯಃ ಅದಕ್ಕಾಗಿ ನೀವು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಬೇಟಾ ಬಳಕೆದಾರರಿಗೆ ಲಭ್ಯವಾಗುವವರೆಗೆ ಕಾಯಲೇಬೇಕಾಗಬಹುದು. ಅನಿಮೇಡೆಟ್ ಸ್ಟಿಕ್ಕರ್ ಗಳಿಗಾಗಿ ಮಾತ್ರವೇ ಕಂಪೆನಿ ಕಾರ್ಯನಿರ್ವಹಿಸುತ್ತಿಲ್ಲ.

ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದಕ್ಕೆ ಅವಕಾಶವಿಲ್ಲ:

ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದಕ್ಕೆ ಅವಕಾಶವಿಲ್ಲ:

ಇದಕ್ಕೂ ಮುನ್ನ ವಾಟ್ಸ್ ಆಪ್ ನಲ್ಲಿ ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದಕ್ಕೆ ಅವಕಾಶ ನೀಡದಂತೆ ಮಾಡುವ ಫೀಚರ್ ಬಗ್ಗೆ ಕಾರ್ಯನಿರ್ವಹಿಸುತ್ತಿದೆ ಎಂಬ ಬಗ್ಗೆ ಸುದ್ದಿಯಾಗಿತ್ತು. ತಮ್ಮ ಸ್ಮಾರ್ಟ್ ಫೋನ್ ನಲ್ಲಿ ಒಂದು ವೇಳೆ ಬಳಕೆದಾರರು ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದಕ್ಕೆ ಅವಕಾಶ ನೀಡಿದಾಗ ಮಾತ್ರವೇ ಇತರರಿಗೆ ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಒಂದು ವೇಳೆ ರಿಸ್ಟ್ರಿಕ್ಟ್ ಮಾಡಿದರೆ ಯಾರೂ ಕೂಡ ನಿಮ್ಮ ವಾಟ್ಸ್ ಆಪ್ ಸ್ಟೇಟಸ್ ಅಥವಾ ಚಾಟ್ ಗಳನ್ನು ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದಕ್ಕೆ ಅವಕಾಶವಿರುವುದಿಲ್ಲ . ಆದರೆ ಈ ದೃಢೀಕರಣದ ಫೀಚರ್ ಆಪ್ ಲಾಕ್ ಆಗಿದ್ದಾಗ ಕೂಡ ಕರೆಗಳನ್ನು ರಿಸೀವ್ ಮಾಡುವುದಕ್ಕೆ ಮತ್ತು ಮೆಸೇಜ್ ಗಳಿಗೆ ಪ್ರತಿಕ್ರಿಯೆ ನೀಡುವುದಕ್ಕೆ ಅವಕಾಶ ನೀಡುತ್ತದೆ.

ವೆಕೇಷನ್ ಮೋಡ್:

ವೆಕೇಷನ್ ಮೋಡ್:

ಇದಿಷ್ಟೇ ಅಲ್ಲದೆ ವೆಕೇಷನ್ ಮೋಡ್ ನಲ್ಲಿ ಕೆಲವು ಬದಲಾವಣೆಯನ್ನು ಪರಿಚಯಿಸುವುದಕ್ಕೆ ಕೂಡ ವಾಟ್ಸ್ ಆಪ್ ಚಿಂತಿಸುತ್ತಿದೆ ಎಂದು ತಿಳಿದುಬಂದಿದೆ. ವೆಕೇಷನ್ ಮೋಡ್ ನ್ನು ಇದೀಗ ಇಗ್ನೋರ್ ಆರ್ಕೈವ್ಡ್ ಚಾಟ್ಸ್ ಎಂದು ಕರೆಯಲಾಗಿದೆ ಮತ್ತು ಇದು ಬಳಕೆದಾರರಿಗೆ ಆರ್ಕೈವ್ಡ್ ಚಾಟ್ ನಲ್ಲಿ ಮೆಸೇಜ್ ರಿಸೀವ್ ಮಾಡಿದಾಗ ಕೂಡ ಆರ್ಕೈವ್ಡ್ ಚಾಟ್ ನ್ನು ನಿಯಂತ್ರಿಸುವುದಕ್ಕೆ ಅವಕಾಶ ನೀಡುತ್ತದೆ.

Best Mobiles in India

English summary
WhatsApp to get animated stickers soon

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X