ಡಾರ್ಕ್ ಮೋಡ್ ಅನೇಬಲ್ ನಲ್ಲಿ ಬ್ಯಾಟರಿ ಸೇವರ್ ಸೆಟ್ಟಿಂಗ್ಸ್ ನೀಡಲಿರುವ ವಾಟ್ಸ್ ಆಪ್

By Gizbot Bureau
|

ತನ್ನ ಆಂಡ್ರಾಯ್ಡ್ ಆಪ್ ನಲ್ಲಿ ಡಾರ್ಕ್ ಮೋಡ್ ನ್ನು ತರುವುದಕ್ಕಾಗಿ ವಾಟ್ಸ್ ಆಪ್ ನಿರಂತರವಾಗಿ ಕೆಲಸ ಮಾಡುತ್ತಿದೆ.ಕಳೆದ ಒಂದು ವರ್ಷದಲ್ಲಿ ಹಲವು ವರದಿಗಳನ್ನು ನಾವು ಈ ನಿಟ್ಟಿನಲ್ಲಿ ನೋಡಿದ್ದೇವೆ. ಆಂಡ್ರಾಯ್ಡ್ 10 ರ ಡಾರ್ಕ್ ಥೀಮ್ ನ್ನು ಸಾಮಾಜಿಕ ಮೆಸೇಜಿಂಗ್ ಆಪ್ ಬೆಂಬಲಿಸುವ ನಿಟ್ಟಿನಲ್ಲಿ ಈಗಾಗಲೇ ಹಲವು ಬಾರಿ ಕಂಪೆನಿಯು ಹೇಗೆ ಆಪ್ ನ ತನ್ನ ವಿಭಿನ್ನ ವಿಭಾಗಗಳನ್ನು ರೀಡಿಸೈನ್ ಮಾಡಿದೆ ಎಂಬ ಬಗ್ಗೆ ವರದಿ ಮಾಡಲಾಗಿದೆ.

ಹೊಸ ವರದಿ:

ಹೊಸ ವರದಿ:

ಇದೀಗ ತನ್ನ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಡಾರ್ಕ್ ಮೋಡ್ ನ್ನು ಫೇಸ್ ಬುಕ್ ಮಾಲೀಕತ್ವದ ಸಾಮಾಜಿಕ ಮೆಸೇಜಿಂಗ್ ಆಪ್ ಹೇಗೆ ಅಭಿವೃದ್ಧಿಗೊಳಿಸಲಿದೆ ಎಂಬ ಬಗ್ಗೆ ಹೊಸ ವರದಿಯೊಂದು ಲಭ್ಯವಾಗಿದೆ.

ಹೊಸ ಥೀಮ್ ಸೆಕ್ಷನ್:

ಹೊಸ ಥೀಮ್ ಸೆಕ್ಷನ್:

ವಾಟ್ಸ್ ಆಪ್ ಮತ್ತು ಅದರ ಅಭಿವೃದ್ಧಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆಹಾಕುವ ಬ್ಲಾಗ್ ಆಗಿರುವ ವಾಬೇಟಾ ಇನ್ಫೋ ನೀಡಿರುವ ಹೊಸ ವರದಿಯ ಪ್ರಕಾರ,ಆಪ್ ನ ಸೆಟ್ಟಿಂಗ್ಸ್ ಮೆನುವಿನ ಅಡಿಯಲ್ಲಿ ಹೊಸ ಥೀಮ್ ಸೆಕ್ಷನ್ ಇರುತ್ತದೆ ಇದರಲ್ಲಿ ಬಳಕೆದಾರರು ಮೂರು ಆಯ್ಕೆಗಳಲ್ಲಿ ಒಂದನ್ನು ಆರಿಸುವುದಕ್ಕೆ ಅವಕಾಶವಿರುತ್ತದೆ.

ಮೂರು ಪ್ರಮುಖ ಥೀಮ್ ಗಳು:

ಮೂರು ಪ್ರಮುಖ ಥೀಮ್ ಗಳು:

ಲೈಟ್ ಥೀಮ್ ನ್ನು ಸದ್ಯ ನಾವು ವಾಟ್ಸ್ ಆಪ್ ನಲ್ಲಿ ಬಳಸುತ್ತಿದ್ದೇವೆ. ಡಾರ್ಕ್ ಥೀಮ್ ಹೆಸರೇ ಸೂಚಿಸುವಂತೆ ಆಪ್ ನಲ್ಲಿ ಮುಂದಿನ ದಿನಗಳಲ್ಲಿ ನಾವು ನಿರೀಕ್ಷಿಸಬಹುದು. ಮೂರನೇ ಥೀಮ್ ಬ್ಯಾಟರಿ ಸೇವರ್ ಥೀಮ್- ಇದು ನಿಮ್ಮ ಫೋನಿನ ಬ್ಯಾಟರಿ ಸೇವರ್ ಸೆಟ್ಟಿಂಗ್ಸ್ ನ್ನು ಆಧರಿಸಿರುತ್ತದೆ ಮತ್ತು ಇದನ್ನು ಸೆಟ್ ಮಾಡಿದರೆ ಬ್ಯಾಟರಿಯ ಮಟ್ಟವು ಒಂದು ಹಂತಕ್ಕಿಂತ ಕಡಿಮೆಯಾದಾಗ ಬ್ಯಾಟರಿ ಉಳಿತಾಯಕ್ಕಾಗಿ ಆಪ್ ನಲ್ಲಿ ಕೆಲವು ಬದಲಾವಣೆಗಳಾಗುತ್ತದೆ.

ಸಮಸ್ಯೆ:

ಸಮಸ್ಯೆ:

ಆದರೆ ಇದರಲ್ಲಿ ಒಂದು ಸಮಸ್ಯೆ ಇದೆ. ಮೂರನೆಯ ಬ್ಯಾಟರಿ ಸೇವಲ್ ಆಯ್ಕೆಯು ವರದಿಯ ಪ್ರಕಾರ ಆಂಡ್ರಾಯ್ಡ್ 9.0 ಪೈ ಮತ್ತು ಅದಕ್ಕಿಂತ ಹಳೆಯ ಗೂಗಲ್ ಆಪರೇಟಿಂಗ್ ಸಿಸ್ಟಮ್ ಇರುವ ಆಂಡ್ರಾಯ್ಡ್ ಫೋನ್ ಗಳಲ್ಲಿ ಮಾತ್ರವೇ ಲಭ್ಯವಾಗುತ್ತದೆ.

ಆಂಡ್ರಾಯ್ಡ್ 10ನಲ್ಲಿ ಹೇಗಿರುತ್ತದೆ ಗೊತ್ತಾ?

ಆಂಡ್ರಾಯ್ಡ್ 10ನಲ್ಲಿ ಹೇಗಿರುತ್ತದೆ ಗೊತ್ತಾ?

ಹೊಸದಾಗಿ ಬಿಡುಗಡೆಗೊಂಡಿರುವ ಆಂಡ್ರಾಯ್ಡ್ 10 ನಲ್ಲಿ ಹೊಸ ರೀತಿಯ ಸಿಸ್ಟಮ್ ನ ಡೀಫಾಲ್ಟ್ ಆಯ್ಕೆಯು ಲಭ್ಯವಾಗುತ್ತದೆ. ಈ ಆಯ್ಕೆಯನ್ನು ಯಾವಾಗ ನೀವು ಅನೇಬಲ್ ಮಾಡುತ್ತೀರೋ ಆಗ ಸ್ವಯಂಚಾಲಿತವಾಗಿ ವಾಟ್ಸ್ ಆಪ್ ಥೀಮ್ ನಿಮ್ಮ ಸಿಸ್ಟಮ್ ಥೀಮ್ ನ ಆಧಾರದಲ್ಲಿ ಸ್ವಯಂಚಾಲಿತವಾಗಿ ಸೆಟ್ ಆಗುತ್ತದೆ. ಅಂದರೆ ಒಂದು ವೇಳೆ ನಿಮ್ಮ ಆಂಡ್ರಾಯ್ಡ್ 10 ನಿಂದ ಪವರ್ಡ್ ಆಗಿರುವ ಫೋನ್ ಡಾರ್ಕ್ ಥೀಮ್ ನಲ್ಲಿ ಕೆಲಸ ಮಾಡುತ್ತಿದ್ದರೆ, ನಿಮ್ಮ ಫೋನಿನ ವಾಟ್ಸ್ ಆಪ್ ಕೂಡ ಡಾರ್ಕ್ ಮೋಡ್ ನಲ್ಲಿ ರನ್ ಆಗುತ್ತದೆ.

ಅಧಿಕೃತವಾಗಿ ಬಿಡುಗಡೆಗೊಂಡಿಲ್ಲ:

ಅಧಿಕೃತವಾಗಿ ಬಿಡುಗಡೆಗೊಂಡಿಲ್ಲ:

ಸದ್ಯ ಈ ಫೀಚರ್ ವಾಟ್ಸ್ ಆಪ್ ಬೇಟಾ ಆಂಡ್ರಾಯ್ಡ್ ವರ್ಷನ್ 2.19.353 ನಲ್ಲಿ ಲಭ್ಯವಿದೆ. ಆದರೆ ಒಂದು ವೇಳೆ ಈ ಫೀಚರ್ ನ್ನು ನೀವು ನಿಮ್ಮ ಫೋನಿನಲ್ಲಿ ಕಾಣುತ್ತಿಲ್ಲವಾದರೆ ಹೆದರುವ ಅಗತ್ಯವಿಲ್ಲ. ವಾಟ್ಸ್ ಆಪ್ ಅಧಿಕೃತವಾಗಿ ಈ ಡಾರ್ಕ್ ಥೀಮ್ ಫೀಚರ್ ನ್ನು ತನ್ನ ಆಂಡ್ರಾಯ್ಡ್ ಆಪ್ ನಲ್ಲಿ ಬಿಡುಗಡೆಗೊಳಿಸಿಲ್ಲ ಮತ್ತು ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಯಾವಾಗ ಗ್ರಾಹಕರು ಈ ಫೀಚರ್ ನ್ನು ಪಡೆಯಲಿದ್ದಾರೆ ಎಂಬ ಬಗ್ಗೆ ಕೂಡ ವಾಟ್ಸ್ ಆಪ್ ಯಾವುದೇ ಮಾಹಿತಿಯನ್ನು ಇದುವರೆಗೂ ನೀಡಿಲ್ಲ. ಆದರೆ, ಖಂಡಿತ ಹೆಚ್ಚು ಸಮಯವನ್ನು ಕಂಪೆನಿ ಇನ್ನು ತೆಗೆದುಕೊಳ್ಳಲಿಕ್ಕಿಲ್ಲ ಎಂಬ ನಂಬಿಕೆ ಇದೆ. ಅಧಿಕೃತವಾಗಿ ಇನ್ನು ಕೆಲವೇ ದಿನಗಳಲ್ಲಿ ಕಂಪೆನಿ ಈ ಫೀಚರ್ ನ್ನು ಪ್ರಕಟಿಸಲಿದ್ದು ವಾಟ್ಸ್ ಆಪ್ ನ ಪ್ರತಿಯೊಬ್ಬ ಬಳಕೆದಾರರು ಬಳಸುವಂತೆ ಆಗಲಿದೆ.

Most Read Articles
Best Mobiles in India

English summary
WhatsApp To Get Battery Saver Setting Under Dark Mode

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X