ವಾಟ್ಸ್‌ಆಪ್‌ನಲ್ಲಿ ಬರ್ತಿವೆ ಹೊಸ ಫೀಚರ್..! ಬಳಸಲು ರೆಡಿಯಾಗಿ..!
ಇತ್ತೀಚೆಗೆ ಸಾಕಷ್ಟು ಹೊಸ ವೈಶಿಷ್ಟ್ಯತೆಗಳನ್ನು ಸೇರಿಸುತ್ತಿರುವ ವಾಟ್ಸ್ ಆಪ್ ಮತ್ತೊಂದೆರಡು ವೈಶಿಷ್ಟ್ಯತೆಗಳನ್ನು ಮುಂಬರುವ ದಿನಗಳಲ್ಲಿ ಸೇರಿಸುವ ಸೂಚನೆಯನ್ನು ನೀಡಿದೆ. ಜಗತ್ತಿನಾದ್ಯಂತ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿರುವ ವಾಟ್ಸ್ ಆಪ್ ತನ್ನ ಆಂಡ್ರಾಯ್ಡ್ ಮತ್ತು ಐಓಎಸ್ ಎರಡೂ ಬಳಕೆದಾರರಿಗಾಗಿ ಹೊಸದಾಗಿ ಎರಡು ವೈಶಿಷ್ಟ್ಯತೆಯನ್ನು ಸೇರಿಸುವ ಬಗ್ಗೆ ಸಾಕಷ್ಟು ಶ್ರಮಿಸುತ್ತಿದೆ ಎಂಬ ಸುದ್ದಿ ಕೇಳಿಬರುತ್ತಿದೆ.


ವರದಿಯೊಂದರ ಪ್ರಕಾರ ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ರಿಪ್ಲೈಗಾಗಿ ಸ್ವೈಪ್ ಮಾಡುವುದು(ಈಗಾಗಲೇ ಐಓಎಸ್ ನಲ್ಲಿ ಲಭ್ಯವಿದೆ) ವೈಶಿಷ್ಟ್ಯತೆಯನ್ನು ತನ್ನೆಲ್ಲಾ ವಾಟ್ಸ್ ಆಪ್ ಬಳಕೆದಾರರಿಗೆ ತರಲು ಪ್ರಯತ್ನಿಸುತ್ತದೆ. ಅಂದರೆ ಹೊಸ ಅಪ್ ಡೇಟ್ ಮೂಲಕ ಆಂಡ್ರಾಯ್ಡ್ ಬಳಕೆದಾರರು ಕೂಡ ಈ ಸೌಲಭ್ಯವನ್ನು ಬಳಕೆ ಮಾಡಲು ಸಾಧ್ಯವಾಗುತ್ತದೆ. ಎರಡನೆಯದಾಗಿ ಡಾರ್ಕ್ ಮೋಡ್ ವೈಶಿಷ್ಟ್ಯತೆಯನ್ನು ಆಂಡ್ರಾಯ್ಡ್ ಮತ್ತು ಐಓಎಸ್ ಎರಡೂ ಬಳಕೆದಾರರಿಗೆ ತರುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆಯಂತೆ.
ರಿಪ್ಲೈಗಾಗಿ ಸ್ಪೈಪ್ :
ವರದಿಯ ಪ್ರಕಾರ ಗೂಗಲ್ ಪ್ಲೇ ಬೇಟಾ ಪ್ರೋಗ್ರಾಮ್ ನ ಮೂಲಕ ಅಪ್ ಡೇಟ್ ನ್ನು ಮಾಡಿದ್ದು ಅದರ ವರ್ಷನ್ 2.18.282 ಆಗಿದೆ. ಈ ಹೊಸ ಅಪ್ ಡೇಟ್ ನಲ್ಲಿ ರಿಪ್ಲೈಗಾಗಿ ಸ್ವೈಪ್ ಆಯ್ಕೆಯೂ ಕೂಡ ಸೇರಿಸಲಾಗಿರುತ್ತದೆ ಎಂದು ವರದಿಯು ಹೇಳಲಾಗಿತ್ತಾದರೂ ಇದುವರೆಗೂ ಅದನ್ನು ಸೇರಿಸಿಲ್ಲ. ಆಂಡ್ರಾಯ್ಡ್ ಬಳಕೆದಾರರಿಗೆ ಅದನ್ನು ಬಿಡುಗಡೆಗೊಳಿಸುವ ಮುನ್ನ ಕೆಲವು ಬದಲಾವಣೆಗಳನ್ನು ಮಾಡಲು ವಾಟ್ಸ್ ಆಪ್ ಇಚ್ಛಿಸುತ್ತಿದೆ ಎಂದು ತಿಳಿದುಬಂದಿದೆ. ಐಓಎಸ್ ಬಳಕೆದಾರರು ಈ ವೈಶಿಷ್ಟ್ಯತೆಯನ್ನು ಸುಮಾರು ಒಂದು ವರ್ಷದ ಹಿಂದೆಯಿಂದಲೇ ಬಳಕೆ ಮಾಡುತ್ತಿದ್ದಾರೆ.
ಸಾಮಾನ್ಯ ಸಾಂಪ್ರದಾಯಿಕ ರಿಪ್ಲೈ ವೈಶಿಷ್ಟ್ಯತೆಗಿಂತ ಈ ರಿಪ್ಲೈ ವೈಶಿಷ್ಟ್ಯತೆಯು ಹೆಚ್ಚು ವೇಗವಾಗಿ ಕೆಲಸ ಮಾಡುತ್ತದೆ. ಗೆಷ್ಚರ್ ಮೂಲಕವೇ ಮೆಸೇಜ್ ಗಳಿಗೆ ರಿಪ್ಲೈ ಮಾಡಲು ಈ ವೈಶಿಷ್ಟ್ಯತೆಯು ಅವಕಾಶವನ್ನು ಬಳಕೆದಾರರಿಗೆ ನೀಡುತ್ತದೆ. ಮೆಸೇಜ್ ನ್ನು ಸೈಡ್ ನಲ್ಲಿ ಸ್ಪೈಪ್ ಮಾಡಿ ಮತ್ತು ನೀವು ಖಾಲಿಯಾಗಿರುವ ಒಂದು ರಿಪ್ಲೈ ಬಾಕ್ಸ್ ನ್ನ ಕಾಣಲು ಸಾಧ್ಯವಾಗುತ್ತದೆ ಮತ್ತು ಅದರಲ್ಲಿ ರಿಪ್ಲೈ ಮೆಸೇಜ್ ಟೈಪ್ ಮಾಡಿ ಕೂಡಲೇ ಕಳುಹಿಸಲು ಅನುಕೂಲವಾಗಿರುತ್ತದೆ. ಹಲವು ದಿನಗಳ ಹಿಂದೆಯೇ ಐಓಎಸ್ ಬಳಕೆದಾರರಿಗೆ ಲಭ್ಯವಾಗಿರುವ ಈ ವೈಶಿಷ್ಟ್ಯತೆಯು ಇನ್ನು ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್ ಬಳಕೆದಾರರೂ ಕೂಡ ಪಡೆಯಲಿದ್ದಾರೆ ಎಂಬುದೇ ಸಂತಸದ ವಿಚಾರ.

ಯಾವಾಗ ಈ ವೈಶಿಷ್ಟ್ಯತೆಯು ಸಂಪೂರ್ಣವಾಗಿ ಬಿಡುಗಡೆಗೊಂಡು ಲಭ್ಯವಾಗುತ್ತದೆ ಎಂಬ ಬಗ್ಗೆ ಅಧಿಕೃತ ದಿನಾಂಕವನ್ನು ಪ್ರಕಟಪಡಿಸಲಾಗಿಲ್ಲ. ಇದರ ಜೊತೆಗೆ ವಾಟ್ಸ್ ಆಪ್ ನ ವರ್ಷನ್ 2.18.282 ರಲ್ಲಿ ಮತ್ತೊಂದು ಅಪ್ ಡೇಟ್ ಕೂಡ ಇರಲಿದೆ. ಅದುವೇ ಗುಂಪಿನ ಸದಸ್ಯರ ಲಿಸ್ಟ್ ಅನ್ನು ಎಕ್ಸ್ ಪಾಂಡ್ ಮಾಡುವ ವೈಶಿಷ್ಟ್ಯತೆ. ಒಂದು ವೇಳೆ ಯಾವುದೇ ಗುಂಪಿನಲ್ಲಿ ಅತೀ ಹೆಚ್ಚು ಸದಸ್ಯರು ಇದ್ದಲ್ಲಿ ಅದರಲ್ಲಿ ಹೆಚ್ಚು ಬಟನ್ ಗಳು ಲಭ್ಯವಿರುತ್ತದೆ.
ಡಾರ್ಕ್ ಮೋಡ್
ಇದೊಂದು ವಾಟ್ಸ್ ಆಪ್ ನಲ್ಲಿ ಬರುವ ಟಾಪ್ ವೈಶಿಷ್ಟ್ಯತೆಗಳಲ್ಲಿ ಒಂದೆನಿಸಿದೆ. ನಾವು ನಮ್ಮ ಜೀವನದಲ್ಲಿ ಹೆಚ್ಚು ಬ್ಯೂಸಿಯಾಗಿರುತ್ತೇವೆ ಮತ್ತು ಹೆಚ್ಚಿನವರು ತಮ್ಮ ಹಾಸಿಗೆಯಲ್ಲಿ ಮಲಗಿರುವ ಸಂದರ್ಬದಲ್ಲೇ ಸ್ವಲ್ಪ ಫ್ರೀ ಆಗಿ ಇದ್ದು ವಾಟ್ಸ್ ಆಪ್ ನೋಡುತ್ತಾರೆ ಮತ್ತು ಕುಟುಂಬದ ಗುಂಪಿನ ಎಲ್ಲಾ ಮೆಸೇಜ್ ಗಳನ್ನು ಓದುತ್ತಾರೆ ಮತ್ತು ಅದಕ್ಕೆ ರಿಪ್ಲೈ ಮಾಡಿ ಹರಟುತ್ತಾರೆ.

ಅಂದರೆ ಕತ್ತಲೆಯಲ್ಲಿ ವಾಟ್ಸ್ ಆಪ್ ಮೆಸೇಜ್ ಗಳನ್ನು ನೋಡುವುದು ಕಣ್ಣುಗಳಿಗೆ ಆಯಾಸ ಮಾಡಬಹುದು. ಹಾಗಾಗಿ ಡಾರ್ಕ್ ಮೋಡ್ ವೈಶಿಷ್ಟ್ಯತೆಯು ಈ ನಿಟ್ಟಿನಲ್ಲಿ ಸಹಾಯ ಮಾಡುತ್ತದೆ. ಟ್ವೀಟರ್, ಯುಟ್ಯೂಬ್, ಮತ್ತು ಟೆಲಿಗ್ರಾಂ ಸೇರಿದಂತೆ ಈಗಾಗಲೇ ಹಲವು ಆಪ್ ಗಳಲ್ಲಿ ಈ ಡಾರ್ಕ್ ಮೋಡ್ ವೈಶಿಷ್ಟ್ಯತೆಯು ಲಭ್ಯವಿದೆ. ಇನ್ನು ಕೆಲವೇ ದಿನಗಳಲ್ಲಿ ವಾಟ್ಸ್ ಆಪ್ ನಲ್ಲೂ ಕೂಡ ಡಾರ್ಕ್ ಮೋಡ್ ವೈಶಿಷ್ಟ್ಯತೆಯು ಲಭ್ಯವಾಗಲಿದೆ. ಆಂಡ್ರಾಯ್ಡ್ ಮತ್ತು ಹೊಸ ಐಫೋನ್ ಗಳಲ್ಲಿ ಈ ವೈಶಿಷ್ಟ್ಯತೆಯು ಸದ್ಯದಲ್ಲಿ ಲಭ್ಯವಾಗಲಿದೆ ಮತ್ತು ಈ ನಿಟ್ಟಿನಲ್ಲಿ ವಾಟ್ಸ್ ಆಪ್ ಸಾಕಷ್ಟು ಕೆಲಸ ಮಾಡುತ್ತಿದೆ ಎಂದು ವಾಬೇಟಾಇನ್ಫೋ ವರದಿಯು ತಿಳಿಸಿದೆ.


Click it and Unblock the Notifications








