ಇನ್ನು ಕೆಲವೇ ದಿನದಲ್ಲಿ ವಾಟ್ಸ್ ಆಪ್ ಗೆ ಸೇರಲಿದೆ 5 ಹೊಸ ವೈಶಿಷ್ಟ್ಯಗಳು

|

ಇತ್ತೀಚೆಗೆ ನಡೆದ ಫೇಸ್ ಬುಕ್ ನ ವಾರ್ಷಿಕ ಅಭಿವರ್ಧಕ ಸಮ್ಮೇಳನ ಎಫ್ 8 ನಲ್ಲಿ ವಾಟ್ಸ್ ಆಪ್ ಗೆ ಇನ್ನಷ್ಟು ವೈಶಿಷ್ಟ್ಯಗಳು ಸೇರುವ ಬಗ್ಗೆ ಮಾಹಿತಿ ಬಹಿರಂಗ ಪಡಿಸಲಾಗಿದೆ. ಇದು ಕೆಲವು ಫೇಸ್ ಬುಕ್ ನ ವ್ಯವಹಾರಿಕ ಆಪ್ ಗಳನ್ನೂ ಕೂಡ ಒಳಗೊಂಡಿರಲಿದೆ. European General Data Protection Regulation (GDPR) ಕಾನೂನಿಗೂ ಪ್ರತಿಕ್ರಿಯಿಸಿರುವ ವಾಟ್ಸ್ ಆಪ್, ಯಾವೆಲ್ಲ ವಯಕ್ತಿಕ ಮಾಹಿತಿಗಳನ್ನು ಬಳಕೆದಾರನಿಂದ ಪಡೆಯಲಾಗಿದೆ ಎಂಬ ಬಗೆಗಿನ ಸಂಪೂರ್ಣ ವಿವರವನ್ನು ಬಳಕೆದಾರನೂ ತಿಳಿಯುವಂತೆ ಮಾಡಲಾಗಿದೆ. ಇಲ್ಲಿದೆ ನೋಡಿ ಪ್ರಮುಖ 5 ವೈಶಿಷ್ಟ್ಯಗಳ ವಿವರ.

ಇನ್ನು ಕೆಲವೇ ದಿನದಲ್ಲಿ ವಾಟ್ಸ್ ಆಪ್ ಗೆ ಸೇರಲಿದೆ 5 ಹೊಸ ವೈಶಿಷ್ಟ್ಯಗಳು

1. ವಾಟ್ಸ್ ಆಪ್ ಗ್ರೂಪ್ ವೀಡಿಯೋ ಕರೆಗಳು

ವಾಟ್ಸ್ ಆಪ್ ಗ್ರೂಪ್ ವೀಡಿಯೋ ಕರೆಗಳನ್ನು ಮಾಡುವ ಅವಕಾಶವು ಆಂಡ್ರಾಯ್ಡ್ ಮತ್ತು IOS ನಲ್ಲಿ ಲಭ್ಯವಾಗಲಿದ್ದು, ಆದಷ್ಟು ಬೇಗನೆ ನಿಮ್ಮ ಮೊಬೈಲ್ ನಲ್ಲಿ ಕಾಣಬಹುದಾಗಿದೆ. ಒಂದು ಆಯ್ದ ಗುಂಪಿನ ವ್ಯಕ್ತಿಗಳು ವಾಟ್ಸ್ ಆಪ್ ನಲ್ಲೂ ಒನ್-ಟು-ಒನ್ ವೀಡಿಯೋ ಕಾಲಿಂಗ್ ಮಾಡಿಕೊಳ್ಳಲು ಅವಕಾಶವಾಗಲಿದೆ. ಚಿಕ್ಕದೊಂದು ಐಕಾನ್ ಪರದೆಯ ಮೇಲ್ಬಾಗದ ಬಲಬದಿಯಲ್ಲಿ ಕಾಣಿಸಲಿದ್ದು, ಬಳಕೆದಾರರು ಬೇಕಿದ್ದರೆ ಅಲ್ಲಿ ಯಾವೆಲ್ಲ ವ್ಯಕ್ತಿಗಳನ್ನು ವೀಡಿಯೋ ಸಂಭಾಷನೆಗೆ ಕರೆಯಬೇಕು ಎಂದು ನಿರ್ಧರಿಸಿ ಅವರನ್ನು ಸೇರಿಸಿಕೊಳ್ಳಬಹುದಾಗಿದೆ.

2. ಅಕೌಂಟ್ ಮಾಹಿತಿಯನ್ನು ಒಳಗೊಂಡ ವರದಿ ಪಡೆಯಲು

Request account info report ಅನ್ನುವುದೊಂದು ಮತ್ತೊಂದು ವಿಶೇಷ ವೈಶಿಷ್ಟ್ಯ ಸಿಗಲಿದೆ. ನಿಮ್ಮ ವಾಟ್ಸ್ ಆಪ್ ಬಗೆಗಿನ ಸಂಪೂರ್ಣ ವಿವರವನ್ನು ನೀವು ಇನ್ನೊಬ್ಬರಿಗೆ ನೀಡಲು ಮತ್ತು ಬೇರೆ ಯಾವುದಾದರೂ ಅಪ್ಲಿಕೇಷನ್ ನಲ್ಲಿ ಬಳಸಲು ಇದು ನೆರವಾಗಲಿದೆ. ಹಾಗಂತ ಇದು ನಿಮ್ಮ ವಯಕ್ತಿಕ ಮೆಸೇಜ್ ಗಳನ್ನು ಒಳಗೊಂಡಿರುವುದಿಲ್ಲ. ಬದಲಾಗಿ ಈ ವರದಿಯಲ್ಲಿ ನಿಮ್ ಫೋನ್ ನಂಬರ್, ಹಿಂದಿನ ಐಪಿ ಕನೆಕ್ಷನ್ ವಿವರ,ಡಿವೈಸ್ ನ ಮಾಹಿತಿ, ಡಿವೈಸ್ ಮ್ಯಾನುಫ್ಯಾಕ್ಚರರ್, ಪ್ರೊಫೈಲ್ ಪಿಕ್ಚರ್, ನಿಮ್ಮ ಎಲ್ಲಾ ಕಾಂಟ್ಯಾಕ್ಟ್ ನ ನಂಬರ್ ಗಳು, ನೀವು ಯಾವೆಲ್ಲ ಗ್ರೂಪ್ ನಲ್ಲಿದ್ದೀರೋ ಆ ಗ್ರೂಪಿನ ಹೆಸರು, ನೀವು ಯಾವೆಲ್ಲ ಕಾಂಟ್ಯಾಕ್ಟ್ ನಂಬರ್ ನ್ನು ಬ್ಲಾಕ್ ಮಾಡಿದ್ದೀರೋ ಆ ವಿವರವನ್ನು ಇದು ಒಳಗೊಂಡಿರುತ್ತದೆ.

How to send WhatsApp Payments invitation to others - GIZBOT KANNADA

3. ಗ್ರೂಪಿನ ವೈಶಿಷ್ಟ್ಯವನ್ನು ನಿರ್ಬಂಧಿಸುವ ಅವಕಾಶ

ವಾಟ್ಸ್ ಆಪ್ ನಲ್ಲಿ"Restrict Group” ಎಂಬ ಹೊಸ ವೈಶಿಷ್ಟ್ಯವನ್ನು ios, ಆಂಡ್ರಾಯ್ಡ್ ಮತ್ತು ವಿಂಡೋಸ್ ಫೋನ್ ಗಳಲ್ಲಿ ಕಾಣಬಹುದು. ಈ ಫೀಚರ್ ಮೂಲಕ ನೀವು ಗ್ರೂಪಿನ ಅಡ್ಮಿನ್ ಕಳಿಸಿದ ಮೆಸೇಜ್ ಗಳನ್ನು ಮಾತ್ರ ಕಾಣಬಹುದಾಗಿದೆ. ಗ್ರೂಪಿನ ಎಲ್ಲಾ ಸದಸ್ಯರು ಈ ಮೆಸೇಜ್ ಗಳನ್ನು ಕಾಣಬಹುದು. ಆದರೆ ಅಡ್ಮಿನ್ ಮಾತ್ರ ಮೇಸೇಜಿಗೆ ಪ್ರತ್ಯುತ್ತರ ಕಳಿಸುವ ಅವಕಾಶವಿರುತ್ತೆ. ಉಳಿದವರು ಕೇವಲು ಓದಲು ಮಾತ್ರ ಅವಕಾಶವಿರುತ್ತೆ. ಅಷ್ಟೇ ಅಲ್ಲ Restrict Group” ವೈಶಿಷ್ಟ್ಯದಿಂದಾಗಿ ಅಡ್ಮಿನ್ ಅಲ್ಲದವರು ಫೋಟೋ ಕಳಿಸುವುದು, ವೀಡಿಯೋಗಳು,ಜಿಐಎಫ್, ಡಾಕ್ಯುಮೆಂಟ್ಸ್, ವಾಯ್ಸ್ ಮೆಸೇಜ್ ಕಳಿಸುವುದಕ್ಕೆ ಅಡ್ಮಿನ್ ಗಳು ಅನುಮತಿ ನೀಡಿದ್ದರೆ ಮಾತ್ರ ಸಾಧ್ಯವಾಗುತ್ತೆ.

4. ಫೇಸ್ಬುಕ್ ಫೋಟೋಗಳನ್ನು ವಾಟ್ಸ್ ಆಪ್ ನಲ್ಲಿ ಹಂಚಿಕೊಳ್ಳುವ ಅವಕಾಶ

ಫೇಸ್ಬುಕ್ ನ ಕಟೆಂಟ್ ಗಳನ್ನು ವಾಟ್ಸ್ ಆಪ್ ನಲ್ಲಿ ಹಂಚಿಕೊಳ್ಳುವ ಅವಕಾಶವೊಂದು ಇನ್ನು ಮುಂದೆ ಲಭ್ಯವಾಗಲಿದೆ. ಈ ಬಗ್ಗೆ ಫೇಸ್ ಬುಕ್ ನಿಂದಾಗಲೀ ಅಥವಾ ವಾಟ್ಸ್ ಆಪ್ ನಿಂದಾಗಿ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಕೆಲವು ಬೀಟಾ ಬಳಕೆದಾರರು ಈ ಸೌಲಭ್ಯ ಪಡೆದಿರುವ ಬಗ್ಗೆ ಮಾಹಿತಿ ಹೊರಹಾಕಿದ್ದಾರೆ.

ಶೇರ್ ಬಟನ್ ನ್ನು ಫೇಸ್ ಬುಕ್ ನಲ್ಲಿ ಟ್ಯಾಪ್ ಮಾಡಿದಾಗ, ನೀವು ಮೂರು ಆಯ್ಕೆಗಳನ್ನು ಕಾಣುತ್ತೀರಿ, 'Share Now’, 'Write Post’ ಮತ್ತು 'Send in WhatsApp’.ನೀವು ಮೂರನೇ ಆಯ್ಕೆಯನ್ನು ಒತ್ತಿದರೆ ಫೋಟೋ ಅಥವಾ ವೀಡಿಯೋವನ್ನು ಕಳಿಸಲು ಒಂದು ಲಿಂಕ್ ಜನರೇಟ್ ಆಗುತ್ತದೆ. ಅದನ್ನು ಕಳಿಸಿದರಾಯ್ತು ವಾಟ್ಸ್ ಆಪ್ ನಲ್ಲಿ ಶೇರ್ ಆಗುತ್ತದೆ.

5. ಚಾಟ್ ಫಿಲ್ಟರ್ಸ್

Chat filters’ ವೈಶಿಷ್ಟ್ಯವು ಬ್ಯುಸಿನೆಸ್ ಅಕೌಂಟ್ ಗಳಲ್ಲಿ ವೇಗವಾಗಿ ನಿರ್ಧಿಷ್ಟ ಮೆಸೇಜ್ ಗಳನ್ನು ಹುಡುಕಲು ಸಹಾಯ ಮಾಡುತ್ತೆ. ಈ ವೈಶಿಷ್ಟ್ಯವು ಬಳಕೆದಾರರ ಗುಂಪಿನಲ್ಲಿ ಇನ್ನೂ ಓದದ ಚಾಟ್, ಗ್ರೂಪ್ ಮತ್ತು ಬ್ರಾಡ್ ಕಾಸ್ಟ್ ಯಾವುದರಲ್ಲಾದರೂ ಬಳಕೆ ಮಾಡಲು ನೆರವಾಗುತ್ತೆ. ಇನ್ಸ್ಟಾ ಗ್ರಾಂ ನಲ್ಲಿ ಆಕ್ಷನ್ ಬಟನ್ ನಂತೆಯೇ ಇದು ಕೆಲಸ ಮಾಡಲಿದೆ. ಅಗತ್ಯವಿರುವವರು ಇನ್ ಬಾಕ್ಸ್ ಗೆ ತರಲು ಸಹಾಯ ಮಾಡುವಂತೆ ಇದೂ ಕೂಡ ಅಗತ್ಯವಿರುವ ಮೆಸೇಜ್ ಗಳ ಹುಡುಕಾಟಕ್ಕೆ ನೆರವಾಗುತ್ತೆ. ಒಳ್ಳೆಯ ವ್ಯಕ್ತಿಗೆ ಉತ್ತಮ ಸೇವೆ ಒದಗಿಸುವುದು, ಸದಾ ಮಾತುಕತೆಯಲ್ಲಿರಲು ನೆರವು ಮಾಡಿಕೊಡುವುದು ಇದರ ಉದ್ದೇಶವಾಗಿದೆ.

Best Mobiles in India

English summary
WhatsApp update: Here are 5 latest features you can’t miss. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X