ಬದಲಾಯಿತು ವಾಟ್ಸ್‌ಆಪ್‌ನ "ಡಿಲೀಟ್‌ ಫಾರ್‌ ಎವರಿಒನ್‌"..! ಬದಲಾವಣೆ ಏನು ಗೊತ್ತಾ..?

|

ಸಾಮಾಜಿಕ ಜಾಲತಾಣದ ದೈತ್ಯ ಫೇಸ್‌ಬುಕ್‌ ಒಡೆತನದಲ್ಲಿರುವ ಜನಪ್ರಿಯ ಮೇಸೆಂಜಿಂಗ್‌ ಆಪ್‌ ವಾಟ್ಸ್‌ಆಪ್‌ ತನ್ನ ಪ್ರಮುಖ ಫೀಚರ್‌ನಲ್ಲಿ ಬದಲಾವಣೆಯನ್ನು ತಂದಿದೆ. ಡಿಲೀಟ್‌ ಫಾರ್‌ ಎವರಿಒನ್‌ ಫೀಚರ್‌ನಲ್ಲಿ ಬದಲಾವಣೆ ತಂದಿರುವ ವಾಟ್ಸ್‌ಆಪ್‌ ಮೆಸೇಜ್‌ ಡಿಲೀಟ್‌ ಮಾಡುವ ಸಮಯವನ್ನು ವಿಸ್ತರಿಸುವ ಇರಾದೆಯಲ್ಲಿದೆ.

ಬದಲಾಯಿತು ವಾಟ್ಸ್‌ಆಪ್‌ನ

ಹೌದು, ವಾಟ್ಸ್‌ಆಪ್‌ನ ಬೆಟಾ ಆವೃತ್ತಿಯ WABetaInfo ಎಂಬ ಟ್ವಿಟ್ಟರ್‌ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಪ್ರಕಟಿಸಿರುವ ವಾಟ್ಸ್‌ಆಪ್‌ ಬಳಕೆದಾರರ ಅನುಭವವನ್ನು ಉತ್ತಮಗೊಳಿಸಲು ಮತ್ತೊಂದು ಆಯ್ಕೆಯನ್ನು ತರುತ್ತಿದ್ದು, ವಾಟ್ಸ್‌ಆಪ್‌ ಬಳಕೆದಾರರಿಗೆ ಈ ಫೀಚರ್‌ನ ಬದಲಾವಣೆ ಯಾವ ರೀತಿ ಅನುಕೂಲವಾಗುತ್ತೋ ಕಾದು ನೋಡಬೇಕು. ಡಿಲೀಟ್‌ ಫಾರ್‌ ಎವರಿಒನ್ ಫೀಚರ್‌ನಲ್ಲಿ ಏನೇಲ್ಲಾ ಬದಲಾವಣೆ ಆಗಿದೆ ಎಂಬುದನ್ನು ಮುಂದೆ ನೋಡಿ.

ಏನು ಬದಲಾವಣೆ..?

ಏನು ಬದಲಾವಣೆ..?

ಡಿಲೀಟ್ ಮಾಡುವ ಸಮಯದಲ್ಲಿ ವಾಟ್ಸ್‌ಆಪ್‌ ಭಾರೀ ವಿಸ್ತರಣೆಯನ್ನು ಮಾಡಿದೆ. ಈ ಮೊದಲು ಡಿಲೀಟ್‌ ಫಾರ್‌ ಎವರಿಒನ್‌ ಫೀಚರ್‌ಗೆ 1 ಗಂಟೆ 8 ನಿಮಿಷ 16 ಸೆಕೆಂಡ್‌ಗಳ ಕಾಲಾವಕಾಶವನ್ನು ನೀಡಿದ್ದ ವಾಟ್ಸ್‌ಆಪ್‌ ಈಗ ಆ ಸಮಯವನ್ನು ವಿಸ್ತರಿಸಿ ಬರೋಬ್ಬರಿ 13 ಗಂಟೆ 8 ನಿಮಿಷ 16 ಸೆಕೆಂಡ್‌ಗಳ ಕಾಲಾವಕಾಶವನ್ನು ಮೆಸೇಜ್‌ ಡಿಲೀಟ್‌ ಮಾಡಲು ನೀಡುತ್ತಿದೆ.

ಒಂದಿಷ್ಟು ಕಡೆ ಡಿಲೀಟ್‌ ಆಗಲ್ಲ..!

ಒಂದಿಷ್ಟು ಕಡೆ ಡಿಲೀಟ್‌ ಆಗಲ್ಲ..!

ವಾಟ್ಸ್‌ಆಪ್‌ ಸಮಯ ವಿಸ್ತರಿಸಿ ಬಳಕೆದಾರರಿಗೆ ಉತ್ತಮ ಆಯ್ಕೆಯನ್ನು ನೀಡಿದೆ. ಆದರೆ, ಒಂದಿಷ್ಟು ಕಡೆ ನೀವು ಡಿಲೀಟ್‌ ಫಾರ್‌ ಎವರಿಒನ್‌ ಆಯ್ಕೆ ಕ್ಲಿಕ್ ಮಾಡಿದರು ಮೆಸೇಜ್‌ ಅಳಿಸಲ್ಲ ಎಂದು ಕೂಡ ಹೇಳಿದೆ. ಹೌದು, 13 ಗಂಟೆ 8 ನಿಮಿಷ 16 ಸೆಕೆಂಡ್‌ಗಳ ಒಳಗೆ ನೀವು ಮೆಸೇಜ್‌ನ್ನು ಎಲ್ಲರ ನಂಬರ್‌ನಿಂದ ಡಿಲೀಟ್‌ ಮಾಡಬಹುದು. ಆದರೆ, ಒಂದು ವೇಳೆ ಫೋನ್‌ ಸ್ವಿಚ್‌ ಆಫ್‌ ಆಗಿ ನಿಮ್ಮ ಮೆಸೇಜ್‌ ಸ್ವೀಕೃತವಾಗಿರದಿದ್ದರೆ ನಿಮ್ಮ ಮೆಸೇಜ್‌ ಡಿಲೀಟ್‌ ಆಗಲ್ಲ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಳಿತು.

ಆರಂಭದಲ್ಲಿದ್ದ ಸಮಯವೇಷ್ಟು..?

ಆರಂಭದಲ್ಲಿದ್ದ ಸಮಯವೇಷ್ಟು..?

ಇದುವರೆಗೂ ವಾಟ್ಸ್‌ಆಪ್‌ ಡಿಲೀಟ್‌ ಫಾರ್‌ ಎವರಿಒನ್‌ ಫೀಚರ್‌ನಲ್ಲಿ ಸಮಯವನ್ನು ವಿಸ್ತರಿಸುತ್ತಾ ಬಂದಿದೆ. ಈಗ ಆಗಿರುವ ವಿಸ್ತರಣೆ ಎರಡನೇಯ ಬಾರಿಯದ್ದಾಗಿದೆ. ವರ್ಷಾರಂಭದಲ್ಲಿ ಡಿಲೀಟ್‌ ಫಾರ್‌ ಎವರಿಒನ್‌ ಆಯ್ಕೆಯನ್ನು ಪರಿಚಯಿಸಿದ್ದ ವಾಟ್ಸ್‌ಆಪ್‌ ಕೇವಲ 7 ನಿಮಿಷಗಳ ಅವಕಾಶವನ್ನು ಬಳಕೆದಾರನಿಗೆ ಮೆಸೇಜ್‌ ಡಿಲೀಟ್‌ ಮಾಡಲು ಅವಕಾಶ ನೀಡಿತ್ತು.

ಸ್ಟೀಕ್ಕರ್ಸ್‌ ಪರಿಚಯ..!

ಸ್ಟೀಕ್ಕರ್ಸ್‌ ಪರಿಚಯ..!

ಹೀಗಾಗಲೇ ಎಲ್ಲಾ ಮೇಸೆಂಜಿಂಗ್‌ ಆಪ್‌ಗಳಲ್ಲಿ ಸ್ಟೀಕ್ಕರ್‌ಗಳು ರಾರಾಜಿಸುತ್ತಿವೆ. ಆದರೆ, ವಾಟ್ಸ್‌ಆಪ್‌ ಬಳಕೆದಾರರು ಮಾತ್ರ ಸ್ಟೀಕ್ಕರ್ಸ್‌ ಬಳಕೆಯಿಂದ ವಂಚಿತರಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ವಾಟ್ಸ್‌ಆಪ್‌ ಬಳಕೆದಾರರು ಕೂಡ ಸ್ಟೀಕ್ಕರ್ಸ್‌ ಫೀಚರ್‌ ಬಳಸಲಿದ್ದಾರೆ. ಹೀಗಾಗಲೇ iOS ನಲ್ಲಿ ಸ್ಟೀಕ್ಕರ್ಸ್‌ ಬಳಕೆಯನ್ನು ಪರಿಚಯಿಸಿರುವ ವಾಟ್ಸ್‌ಆಪ್‌ ಅತಿ ಶೀಘ್ರದಲ್ಲಿ ಆಂಡ್ರಾಯ್ಡ್‌ನಲ್ಲೂ ಕೂಡ ಸ್ಟೀಕ್ಕರ್ಸ್‌ ಪರಿಚಯಿಸುತ್ತದೆ. ಹೊಸ ಎಮೋಜಿಗಳ ಪರಿಚಯವನ್ನೂ ಸಹ ವಾಟ್ಸ್‌ಆಪ್‌ ಮಾಡಲಿದೆ.

ವಿಡಿಯೋ ಕಾಲ್‌ ಬಗ್‌ ಫಿಕ್ಸ್‌

ವಿಡಿಯೋ ಕಾಲ್‌ ಬಗ್‌ ಫಿಕ್ಸ್‌

ವಾಟ್ಸ್‌ಆಪ್‌ ವಿಡಿಯೋ ಕಾಲ್‌ನಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದ ಸಮಸ್ಯೆಯನ್ನು ವಾಟ್ಸ್‌ಆಪ್‌ ಬಗೆಹರಿಸಿದ್ದು, ಆಂಡ್ರಾಯ್ಡ್‌ ಮತ್ತು iOSಗಳಲ್ಲಿ ಅಪ್‌ಡೇಟ್‌ ಮಾಡುವ ಮೂಲಕ ವಿಡಿಯೋ ಕಾಲ್‌ನಲ್ಲಿನ ಸಮಸ್ಯೆಗೆ ಇತಿಶ್ರೀ ಹಾಡಿದೆ. ವಾಟ್ಸ್‌ಆಪ್‌ನಲ್ಲಿ ವಿಡಿಯೋ ಕಾಲ್‌ ಮಾಡಿದಾಗ ಫೋನ್‌ ಕ್ರಾಶ್‌ ಆಗುವ ಸಮಸ್ಯೆಯನ್ನು ಬಳಕೆದರರು ಅನುಭವಿಸುತ್ತಿದ್ದರು.

Best Mobiles in India

English summary
WhatsApp updates ‘Delete for Everyone’ feature with new rules: Here’s all you need to know. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X