ಭಾರೀ ಕುತೂಹಲವನ್ನು ಕೆರಳಿಸಿದ್ದ ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್ ಪೇಮೆಂಟ್ ಸೇವೆ ಕೊನೆಗೂ ಆರಂಭಗೊಂಡಿದೆ. ಬಹು ದಿನಗಳಿಂದ ವಾಟ್ಸ್‌ಆಪ್ ಭಾರತದಲ್ಲಿ UPI ಆಧಾರಿತ ಪೇಮೆಂಟ್ ಸೇವೆಯನ್ನು ಶುರುವಾಗಲಿದೆ ಎನ್ನುವ ನಿರೀಕ್ಷೆ ಕೊನೆಯಾಗಿದ್ದು, ಪೇಮೆಂಟ್ ಸೇವೆ ಶುರುವಾಗಿದೆ. ಮೊದಲಿಗೆ ಕೆಲವೇ ಕೆಲವು ಬಳಕೆದಾರರಿಗೆ ವಾಟ್ಸ್‌ಆಪ್ ಈ ಹೊಸ ಆಯ್ಕೆಯನ್ನು ನೀಡಿದ್ದು, ಶೀಘ್ರವೇ ಸಾಮಾನ್ಯ ಬಳಕೆದಾರರಿಗೆ ನೀಡಲಿದೆ.

ನಿಮ್ಮ ವಾಟ್ಸ್‌ಆಪ್ ನಲ್ಲಿಯೂ ಈ ಹೊಸ ಸೇವೆಯೂ ಕಾಣಿಸಿಕೊಂಡಿದೆಯೇ ಎಂಬುದನ್ನು ಒಮ್ಮೆ ಚೆಕ್ ಮಾಡಿ ನೋಡಿಕೊಳ್ಳಿ. ಫೇಸ್‌ಬುಕ್ ಒಡೆತನದ ವಾಟ್ಸ್ಆಪ್ ಈಗಾಗಲೇ ಪೇಮೆಂಟ್ ಸೇವೆಯನ್ನು ನೀಡುವ ಸಲುವಾಗಿ ಭಾರತದ ಹಲವು ಬ್ಯಾಂಕುಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ವಾಟ್ಸ್‌ಆಪ್ ಪೇಮೆಂಟ್ ಸದ್ದು ಜೋರಾಗಿರಲಿದೆ.
ಹೊಸ ಆಪ್‌ಡೇಟ್:
ವಾಟ್ಸ್‌ಆಪ್ ಬೀಟಾ ಆವೃತ್ತಿ v2.18.41 ಬಳಕೆದಾರರಿಗೆ ಈ ಹೊಸ ಆಯ್ಕೆಯೂ ದೊರೆಯುತ್ತಿದೆ ಎನ್ನಲಾಗಿದೆ. ಈ ಹೊಸ ಆಯ್ಕೆಯೂ ಕ್ಯಾಮೆರಾ ಐಕಾನ್ ಮಾದರಿಯಲ್ಲಿ ಪಾಪ್ ಆಪ್ ಆಗಲಿದ್ದು, ಬಳಕೆಯೂ ತೀರ ಸುಲಭವಾಗಲಿದೆ.
ಹಳೇ UPI ಐಡಿ ಬಳಕೆ:
ವಾಟ್ಸ್ಆಪ್ ತನ್ನ ಬಳಕೆದಾರರಿಗೆ ಹಳೇಯ UPI ಐಡಿ ಬಳಕೆಯನ್ನು ಮಾಡಿಕೊಳ್ಳಲು ಅವಕಾಶ ನೀಡಿಲಿದೆ. ಅಲ್ಲದೇ ಹೊಸ UPI ಐಡಿಯನ್ನು ಕ್ರಿಯೆಟ್ ಮಾಡಲು ಸಹ ಅವಕಾಶವನ್ನು ಮಾಡಿಕೊಡಲಿದೆ. ಇದರಲ್ಲಿ ಹಲವು ಬ್ಯಾಂಕ್‌ಗಳು ಸದ್ಯಕ್ಕೆ ಕಾಣಿಸಿಕೊಂಡಿದೆ. ಮುಂದೆ ಇನ್ನಷ್ಟು ಬ್ಯಾಂಕ್ ಗಳು ಆಡ್ ಆಗುವ ಸಾಧ್ಯತೆ ಇದೆ.
ಬ್ಯಾಂಕ್‌ಗಳ ಪಟ್ಟಿ:
ಆಕ್ಸಿಸ್ ಬ್ಯಾಂಕ್, HDFC ಬ್ಯಾಂಕ್, ICICI ಬ್ಯಾಂಕ್, ಯಸ್ ಬ್ಯಾಂಕ್ ಮತ್ತು ಏರ್‌ಟೆಲ್ ಪೇಮೆಂಟ್ ಬ್ಯಾಂಕ್, ಆಂಧ್ರಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹ ಕಾಣಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಇನಷ್ಟು ಬ್ಯಾಂಕ್ ಆಡ್ ಆಗಲಿದೆ.
ಅನುಮತಿ ಪಡೆದಿದೆ:
ಫೇಸ್‌ಬುಕ್ ಒಡೆತನದ ವಾಟ್ಸ್ಆಪ್ 2017ರಲ್ಲೇ ಕೇಂದ್ರ ಸರಕಾರದಿಂದ ಪೇಮೆಂಟ್ ಸೇವೆಯನ್ನು ಆರಂಭಿಸಲು ಅನುಮತಿ ಪಡೆದುಕೊಂಡಿದೆ ಎನ್ನಲಾಗಿದೆ. ಸದ್ಯ ಬೀಟಾ ಸೇವೆಯನ್ನು ಆರಂಭ ಮಾಡಿದ್ದು, ಶೀಘ್ರವೇ ಸಾಮಾನ್ಯ ಬಳಕೆದಾರರಿಗೂ ಈ ಸೇವೆ ದೊರೆಯಲಿದೆ.
ಬೇರೆ ಆಪ್ ಗಳಿಗೆ ಕಂಟಕ:
ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಗೂಗಲ್ ತೆಜ್, ಹೈಕ್, ಪೋನ್ ಪೇ ಆಪ್ ಗಳಿಗೆ ವಾಟ್ಸ್‌ಆಪ್ ಪೇಮೆಂಟ್ ಆಪ್ ಭರ್ಜರಿ ಸ್ಪರ್ಧೆಯನ್ನು ನೀಡಿದ್ದು, ಅನೇಕ ಆಪ್‌ಗಳು ತಮ್ಮ ಸೇವೆಯನ್ನು ನಿಲ್ಲಿಸುವ ಸಾಧ್ಯತೆಯೂ ಇದೇ ಎನ್ನಲಾಗಿದೆ.
ಓದಿರಿ: ಸ್ಯಾಮ್‌ಸಂಗ್ ಹೊಸ ಪ್ರಯತ್ನ: ಹಾನರ್, ನೋಕಿಯಾ ಮತ್ತು ಶಿಯೋಮಿಗೆ ಸೆಡ್ಡು..!
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.