ಟೆಲಿಗ್ರಾಂನಲ್ಲಿರುವ ಈ 5 ಫೀಚರ್ ಗಳು ವಾಟ್ಸ್ ಆಪ್ ನಲ್ಲೂ ಬೇಕಿದೆ

By Gizbot Bureau
|

ಜಗತ್ತಿನ ಅತ್ಯಂತ ಪ್ರಸಿದ್ಧ ಮೆಸೇಜಿಂಗ್ ಫ್ಲ್ಯಾಟ್ ಫಾರ್ಮ್ ಆಗಿರುವ ವಾಟ್ಸ್ ಆಪ್ ತನ್ನ ಬಳಕೆದಾರರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ತನ್ನ ಪ್ರತಿಸ್ಪರ್ಧಿಗಳಿಗಿಂತ ಮುಂದೆ ಇರುವ ನಿಟ್ಟಿನಲ್ಲಿ ಹೊಸ ಹೊಸ ಅಪ್ ಡೇಟ್ ಗಳನ್ನು ಮತ್ತು ವೈಶಿಷ್ಟ್ಯತೆಗಳನ್ನು ಪರಿಚಯಿಸಲೇಬೇಕಾಗುತ್ತದೆ.

ಟೆಲಿಗ್ರಾಂನಲ್ಲಿರುವ ಈ 5 ಫೀಚರ್ ಗಳು ವಾಟ್ಸ್ ಆಪ್ ನಲ್ಲೂ ಬೇಕಿದೆ

ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ಐಓಎಶ್ ಮತ್ತು ಆಂಡ್ರಾಯ್ಡ್ ಎರಡೂ ಫ್ಲ್ಯಾಟ್ ಫಾರ್ಮ್ ಗಳಲ್ಲೂ ಕೂಡ ಬಹಳ ಪ್ರಸಿದ್ಧಿಯಾಗಿದೆ.ಆದರೂ ಕೂಡ ಮಾರುಕಟ್ಟೆಯಲ್ಲಿ ವಾಟ್ಸ್ ಆಪ್ ಗೆ ಪ್ರತಿಸ್ಪರ್ಧಿಗಳಿದ್ದಾರೆ ಮತ್ತು ಅವರು ವಾಟ್ಸ್ ಆಪ್ ನೆಲೆಯನ್ನು ನಿಧಾನವಾಗಿ ಅತಿಕ್ರಮಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಟೆಲಿಗ್ರಾಂನ ಆರಂಭಿಕ ಯಶಸ್ಸು ಅದರ ಗೌಪ್ಯತೆ ನೀತಿಗಳಿಂದಾಗಿತ್ತು ಆದರೆ ಇದೀಗ ಟೆಲಿಗ್ರಾಂ ಹಲವು ಹೊಸ ವೈಶಿಷ್ಟ್ಯತೆಗಳನ್ನು ಬಿಡುಗಡೆಗೊಳಿಸಿದ್ದು ಬಳಕೆದಾರರಿಗೆ ಉತ್ತಮ ಅನುಭವ ನೀಡುವ ನಿಟ್ಟಿನಲ್ಲಿ ಈ ಹೊಸ ವೈಶಿಷ್ಟ್ಯತೆಗಳು ಬಿಡುಗಡೆಗೊಂಡಿವೆ.

ಟೆಲಿಗ್ರಾಂ ಸ್ಥಿರವಾಗಿ ಸದ್ಯ 20 ಕೋಟಿ ಬಳಕೆದಾರರನ್ನು ಹೊಂದಿದೆ ಮತ್ತು ಮುಂಬರುವ ವರ್ಷಗಳಲ್ಲಿ ಈ ಸಂಖ್ಯೆ ದ್ವಿಗುಣವಾಗುವ ನಿರೀಕ್ಷೆ ಇದೆ.ಯಾಕೆಂದರೆ ಕಂಪೆನಿಯು ವಾಟ್ಸ್ ಆಪ್ ಗೆ ಸ್ಪರ್ಧಿಸಲು ಹಲವು ಹೊಸ ವೈಶಿಷ್ಟ್ಯತೆಗಳನ್ನು ಪರಿಚಯಿಸಿದೆ. ನಾಯಕತ್ವದ ಸ್ಥಾನದಲ್ಲೇ ಉಳಿಯಬೇಕು ಎಂದಾದರೆ ವಾಟ್ಸ್ ಆಪ್ ಇನ್ನಷ್ಟು ಕೆಲಸ ಮಾಡಬೇಕು ಎಂಬುದನ್ನು ಸಾಬೀತು ಮಾಡುತ್ತಿದೆ ಟೆಲಿಗ್ರಾಂನ ಹೊಸ ಅಪ್ ಡೇಟ್ ಗಳು.

ಸ್ಮಾರ್ಟ್ ನೋಟಿಫಿಕೇಷನ್ ಗಳು:

ಸ್ಮಾರ್ಟ್ ನೋಟಿಫಿಕೇಷನ್ ಗಳು:

ಟೆಲಿಗ್ರಾಂನಲ್ಲಿರುವ ಸ್ಮಾರ್ಟ್ ನೋಟಿಫಿಕೇಷನ್ ಫೀಚರ್ ಬಳಕೆದಾರರಿಗೆ ಗ್ರೂಪ್ ನ್ನು ಮ್ಯೂಟ್ ಮಾಡುವುದಕ್ಕೆ ಅವಕಾಶ ನೀಡುತ್ತದೆ. ಅವನು/ಅವಳಿಗೆ ನೋಟಿಫಿಕೇಷನ್ ಕೇವಲ ಜನರು ಅವರ ಹೆಸರನ್ನು ನಮೂದಿಸಿದಾಗ ಅಥವಾ ಇವರ ಮೆಸೇಜಿಗೆ ರಿಪ್ಲೈ ಮಾಡಿದಾಗ ಮಾತ್ರವೇ ಲಭ್ಯವಾಗುತ್ತದೆ. ಈ ಫೀಚರ್ ಖಂಡಿತ ವಾಟ್ಸ್ ಆಪ್ ನಲ್ಲಿ ತಪ್ಪಿಹೋಗುತ್ತಿದೆ.

ಗ್ರೂಪ್ ಅನುಮತಿಗಳು:

ಗ್ರೂಪ್ ಅನುಮತಿಗಳು:

ನಿರ್ಧಿಷ್ಟ ಕಟೆಂಟ್ ಗಳನ್ನು ಗ್ರೂಪ್ ನಲ್ಲಿ ಪೋಸ್ಟ್ ಮಾಡುವುದಕ್ಕೆ ಗ್ರೂಪಿನ ಎಲ್ಲಾ ಸದಸ್ಯರನ್ನು ರಿಸ್ಟ್ರಿಕ್ಟ್ ಮಾಡುವುದಕ್ಕೆ ಅಥಾ ಡೀಫಾಲ್ಟ್ ಅನುಮತಿಗಳನ್ನು ಸೆಟ್ ಮಾಡುವುದಕ್ಕೆ ಟೆಲಿಗ್ರಾಂನಲ್ಲಿ ಬಳಕೆದಾರರಿಗೆ ಅವಕಾಶವಿರುತ್ತದೆ ಅಥವಾ ಸದಸ್ಯರಿಗೆ ಮೇಸೇಜ್ ಕಳುಹಿಸುವಾಗ ರಿಸ್ಟ್ರಿಕ್ಟ್ ಮಾಡಿ ಅಡ್ಮಿಟ್ ಮಾತ್ರವೇ ಮೆಸೇಜ್ ಕಳುಹಿಸಲು ಅನುಮತಿಸಿಕೊಳ್ಳುವಂತ ಆಯ್ಕೆ ಇದೆ.

ಮ್ಯೂಟ್ ಮಾಡಲಾಗಿರುವ ಮೆಸೇಜ್ ಗಳು:

ಮ್ಯೂಟ್ ಮಾಡಲಾಗಿರುವ ಮೆಸೇಜ್ ಗಳು:

ಬಳಕೆದಾರರಿಗೆ ವಯಕ್ತಿಕ ಅಥವಾ ಗ್ರೂಪ್ ಮೆಸೇಜ್ ನ್ನು ನೋಟಿಫಿಕೇಷನ್ ಸೌಂಡ್ ಇಲ್ಲದೆಯೇ ಕಳುಹಿಸುವುದಕ್ಕೆ ಟೆಲಿಗ್ರಾಂನಲ್ಲಿ ಅವಕಾಶವಿರುತ್ತದೆ. ರಿಸೀವರ್ ಗೆ ಯಾವುದೇ ತೊಂದರೆ ಆಗದಂತೆ ಮೆಸೇಜ್ ಕಳುಹಿಸುವುದಕ್ಕೆ ಇರುವ ಅತ್ಯುತ್ತಮ ಮಾರ್ಗ ಇದಾಗಿದೆ ಮತ್ತು ಇಂತಹ ಫೀಚರ್ ಖಂಡಿತ ವಾಟ್ಸ್ ಆಪ್ ನಲ್ಲಿ ಅಗತ್ಯವಿದೆ.

ಸ್ಲೋ ಮೋಡ್:

ಸ್ಲೋ ಮೋಡ್:

ಒಂದು ಗ್ರೂಪ್ ನಲ್ಲಿ ಎಷ್ಟು ಬಾರಿ ಪೋಸ್ಟ್ ಕಳುಹಿಸಬಹುದು ಎಂಬುದನ್ನು ಲಿಮಿಟ್ ಮಾಡುವ ಅವಕಾಶವೇ ಸ್ಲೋ ಮೋಡ್. ಮೆಸೇಜ್ ಗಳ ಹರಿಯುವಿಕೆಯನ್ನು ಗುಂಪಿನಲ್ಲಿ ತಡೆಯುವ ಅವಕಾಶವು ಗ್ರೂಪ್ ಅಡ್ಮಿನ್ ಗೆ ನೀಡಲಾಗಿರುತ್ತದೆ. ಯಾವಾಗ ಗ್ರೂಪ್ ಅಡ್ಮಿನ್ ಸ್ಲೋ ಮೋಡ್ ಗೆ ಸ್ವಿಚ್ ಆಗುತ್ತಾರೋ ಆಗ ಅಡ್ಮಿಟ್ ಸೆಟ್ ಮಾಡಿದ ಟೈಮ್ ಇಂಟರ್ವಲ್ ನಷ್ಟು ಮಾತ್ರವೇ ಮೆಸೇಜ್ ಗಳನ್ನು ಕಳುಹಿಸುವುದಕ್ಕೆ ಗ್ರೂಪಿನ ಸದಸ್ಯರಿಗೆ ಅವಕಾಶವಿರುತ್ತದೆ. ಮುಂದಿನ ಮೆಸೇಜ್ ಕಳುಹಿಸುವುದಕ್ಕೆ ನೀವು ಕಾಯಬೇಕು ಮತ್ತು ಎಷ್ಟು ಸಮಯ ಕಾಯಬೇಕು ಎಂಬ ಮಾಹಿತಿ ಕೂಡ ಬಳಕೆದಾರರಿಗೆ ಲಭ್ಯವಾಗುತ್ತದೆ.

ಫೈಲ್ ಸೈಜ್ ಲಿಮಿಟ್

ಫೈಲ್ ಸೈಜ್ ಲಿಮಿಟ್

ವಾಟ್ಸ್ ಆಪ್ ನ ಕಾಂಟ್ಯಾಕ್ಸ್ ನಲ್ಲಿ ನಿಮ್ಮ ಫೈಲ್ ಗಳನ್ನು ಕಳುಹಿಸುವುದಕ್ಕೆ ಸೈಜ್ ಲಿಮಿಟ್ ಇದೆ. 100ಎಂಬಿಗಿಂತ ದೊಡ್ಡದಾಗಿರುವ ಫೈಲ್ ಗಳನ್ನು ಕಳುಹಿಸುವುದಕ್ಕೆ ವಾಟ್ಸ್ ಆಪ್ ನಲ್ಲಿ ಬಳಕೆದಾರರಿಗೆ ಸಾಧ್ಯವಾಗುವುದಿಲ್ಲ. ಇನ್ನೊಂದೆಡೆ ಟೆಲಿಗ್ರಾಂನಲ್ಲಿ 1.5ಜಿಬಿ ವರೆಗಿನ ಯಾವುದೇ ರೀತಿಯ ಫೈಲ್ ಗಳನ್ನು ಬೇಕಿದ್ದರೂ ಸೆಂಡ್ ಮಾಡಬಹುದು ಮತ್ತು ರಿಸೀವ್ ಮಾಡಬಹುದಾಗಿದೆ.

Best Mobiles in India

English summary
WhatsApp users want these five features on Telegram

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X