Home
Apps

ವಾಟ್ಸ್ ಆಪ್ ನಲ್ಲಿ ಮೆಸೇಜ್ ಫಾರ್ವಡ್ ಮಾಡಿದರೆ ತಿಳಿಯುತ್ತದೆ..!

By Gizbot bureau

ವಾಟ್ಸ್ ಆಪ್ ತನ್ನ ವೈಶಿಷ್ಟ್ಯಗಳ ಪಟ್ಟಿಗೆ ಮತ್ತೊಂದನ್ನು ಸೇರಿಸಿಕೊಳ್ಳುತ್ತಿದೆ. ಕಂಪೆನಿಯು ಫಾರ್ವರ್ಡ್ ಮಾಡಲಾಗುವ ಸಂದೇಶಗಳಲ್ಲಿ ಹೊಸ "ಫಾರ್ವರ್ಡ್ಡ್" ಟ್ಯಾಗ್ ಅನ್ನು ಸೇರಿಸಿದೆ. ಭಾರತೀಯರು ವಾಟ್ಸ್ ಆಪ್ ನ್ನು ಹೆಚ್ಚಾಗಿ ಫಾರ್ವಡ್ ಮೆಸೇಜ್ ಮತ್ತು ಪ್ರತಿದಿನ ಶುಭಾಶಯಗಳನ್ನು ಕಳುಹಿಸಲು ಬಳಸುತ್ತಾರೆ. ನಿಜ ಹೇಳಬೇಕು ಎಂದರೆ, ಇತ್ತೀಚೆಗಷ್ಟೇ ಅಂದರೆ ಈ ವರ್ಷದ ಜನವರಿಯಲ್ಲಿ ವಾಲ್ ಸ್ಟ್ರೀಟ್ ಜರ್ನಲ್ ಮಾಡಿದ ವರದಿಯಂತೆ ಮೂರರಲ್ಲಿ ಒಬ್ಬರು ಭಾರತೀಯ ಸ್ಮಾರ್ಟ್ ಫೋನ್ ಬಳಕೆದಾರರು , ಫಾರ್ವರ್ಡ್ ಮಾಡುವ ಶುಭ ಮುಂಜಾನೆಯಂತ ಟೆಕ್ಸ್ಟ್ ಮತ್ತು ಚಿತ್ರಗಳ ಶುಭಾಶಯಗಳಿಂದಲೇ ಸ್ಟೋರೇಜ್ ಸಮಸ್ಯೆಯನ್ನು ಎದುರಿಸುತ್ತಿದ್ದಾರಂತೆ.

ವಾಟ್ಸ್ ಆಪ್ ನಲ್ಲಿ ಮೆಸೇಜ್ ಫಾರ್ವಡ್ ಮಾಡಿದರೆ ತಿಳಿಯುತ್ತದೆ..!

ಈ ಹೊಸ ಅಪ್ ಡೇಟ್ ನ ಕಾರಣದಿಂದಾಗಿ ಫಾರ್ವಡ್ ಆಗಿರುವ ಮೆಸೇಜ್ ಗಳು ಇನ್ನು ಮುಂದೆ ಮೆಸೇಜ್ ಪಡೆದವರು ಮತ್ತು ಕಳುಹಿಸಿದವರಿಬ್ಬರಲ್ಲೂ ಟ್ಯಾಗ್ ಆಗಿ ಇರಲಿದೆ. ಈ ಹೊಸ ಟ್ಯಾಗ್ ನಿಂದಾಗಿ, ಮೆಸೇಜ್ ಗಳು ತಮ್ಮ ಜಾಣ್ಮೆಯನ್ನು ಕಳೆದುಕೊಳ್ಳುತ್ತವೆ ಮತ್ತು ಅಂತಿಮವಾಗಿ ಒಬ್ಬರಿಂದ ಒಬ್ಬರಿಗೆ ಸ್ಥಿರವಾಗಿ ಹರಿದಾಡುವುದು ಕಡಿಮೆಯಾಗುತ್ತದೆ. ಆ ಮೂಲಕ ನಿಮ್ಮ ವಾಟ್ಸ್ ಆಪ್ ಇನ್ ಬಾಕ್ಸ್ ನಲ್ಲಿ ತುಂಬಿಕೊಳ್ಳುವ ಶುಭಮುಂಜಾನೆ, ಶುಭರಾತ್ರಿಯಂತ ಅಕ್ಷರಗಳು ಮತ್ತು ಚಿತ್ರಗಳು ಕಡಿಮೆಯಾಗಲಿವೆ.

ಈ ವೈಶಿಷ್ಟ್ಯದ ಮತ್ತೊಂದು ಲಾಭವೇನೆಂದರೆ ಫಾರ್ವಡ್ ಮಾಡಿದ ಮೆಸೇಜ್ ಗಳನ್ನು ಬಿಟ್ಟು ಕೇವಲ ವಯಕ್ತಿಕವಾಗಿ ಕಳುಹಿಸಿದ ಮೆಸೇಜ್ ಗಳನ್ನು ಮಾತ್ರ ಓದಲು ಅವಕಾಶ ಮಾಡಿ ಕೊಡುವುದೂ ಆಗಿದೆ. ಪ್ರಮುಖವಾಗಿ ಗುಂಪಿನ ಚಾಟ್ ಗಳಲ್ಲಿ ಈ ರೀತಿಯ ಫಾರ್ವಡ್ ಟೆಕ್ಸ್ಟ್ ಮತ್ತು ಚಿತ್ರಗಳುಳ್ಳ ಮೇಸೇಜ್ ಗಳ ಸಂದಣಿ ಹೆಚ್ಚಿರುತ್ತದೆ. ಈ ವೈಶಿಷ್ಟ್ಯದಿಂದಾಗಿ ಮೆಸೇಜ್ ಪಡೆದ ವ್ಯಕ್ತಿ ಫಾರ್ವಡೆಡ್ ಮೆಸೇಜ್ ಮತ್ತು ನಿಜವಾದ ಮೆಸೇಜ್ ಗಳನ್ನು ಪ್ರತ್ಯೇಕಿಸಿಕೊಳ್ಳಲು ಸಹಾಯಕವಾಗಿದೆ.

ವಾಟ್ಸ್ ಆಪ್ ನಿಜಕ್ಕೂ ರಾಶಿಗಳಂತೆ ಇಂತಹ ಫಾರ್ವಡೆಡ್ ಮೆಸೇಜ್ ಗಳನ್ನು ಜೋಡಿಸಿಡಲು ಅವಕಾಶ ನೀಡುತ್ತದೆಯೋ ಅಥವಾ ಇಲ್ಲವೋ ಎಂಬುದಿನ್ನೂ ಸ್ಪಷ್ಟವಾಗಿ ತಿಳಿದಿಲ್ಲ. ಈಗಾಗಲೇ ವಾಟ್ಸ್ ಆಪ್ ನ ಇಮೇಜ್ ಗಳನ್ನು ಸೇವ್ ಮಾಡಲು ಅವಕಾಶ ನೀಡುತ್ತದೆ. ಈ ವೈಶಿಷ್ಟ್ಯದ ಮೂಲಕ ಇದನ್ನೂ ಬಿಟ್ಟರೆ ವಾಟ್ಸ್ ಆಪ್ ಬಳಕೆಯಲ್ಲಿ ಮತ್ತೊಂದು ಹೆಜ್ಜೆ ಇಟ್ಟಂತಾಗುತ್ತದೆ.

ವಾಟ್ಸ್ ಆಪ್ ನಲ್ಲಿ ಮೆಸೇಜ್ ಫಾರ್ವಡ್ ಮಾಡಿದರೆ ತಿಳಿಯುತ್ತದೆ..!

ಈ ವೈಶಿಷ್ಟ್ಯವು ಯಾರು ವಾಟ್ಸ್ ಆಪ್ ನ ಬೆಟಾ ಪ್ರೋಗ್ರಾಮ್ ನ ಚಂದಾದಾರರಾಗಿದ್ದಾರೋ ಅಂತಹ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಸದ್ಯ ಈ ವೈಶಿಷ್ಟ್ಯವನ್ನು ವರ್ಷನ್ 2.18.179 Beta. Ios ನಲ್ಲಿ ಆಕ್ಸಿಸ್ ಮಾಡಬಹುದಾಗಿದೆ ಮತ್ತು ವೆಬ್ ಬಳಕೆದಾರರಿಗೆ ಇಂತಹ ಯಾವುದೇ ಅಪ್ ಡೇಟ್ ಗಳು ಸದ್ಯ ಲಭ್ಯವಾಗಿಲ್ಲ. ಆದರೆ, ಇನ್ನು ಕೆಲವೇ ತಿಂಗಳಿನಲ್ಲಿ ಎಲ್ಲಾ ಫ್ಲ್ಯಾಟ್ ಫಾರ್ಮ್ ನಲ್ಲೂ ಇದು ಅಪ್ ಆಗುವ ನಿರೀಕ್ಷೆ ಇದೆ. ಈ ಹೊಸ ವೈಶಿಷ್ಟ್ಯವನ್ನು “ ಬ್ಲೂ ಟಿಕ್” ವೈಶಿಷ್ಟ್ಯದಂತೆ ಇನ್ಸ್ ಟೆಂಟ್ ಮೆಸೇಜಿಂಗ್ ಫ್ಲ್ಯಾಟ್ ಫಾರ್ಮ್ ನಲ್ಲಿ ಆಫ್ ಮಾಡಿ ಇಡಲು ಸಾಧ್ಯವಿಲ್ಲ.

ಈ ವರ್ಷದಲ್ಲಿ ನಡೆದ ಫೇಸ್ ಬುಕ್ ಎಫ್ 8 ನ ಸಮಾವೇಶದಲ್ಲಿ, ಕಂಪೆನಿಯು ವಾಟ್ಸ್ ಆಪ್ ನಲ್ಲಿ ಗ್ರೂಪ್ ಕಾಲಿಂಗ್ ವೈಶಿಷ್ಟ್ಯ ಲಭ್ಯವಾಗಲಿದ್ದು, ಕನಿಷ್ಟ ನಾಲ್ಕು ಮಂದಿ ಈ ಕಾಲ್ ನಲ್ಲಿ ಭಾಗವಹಿಸಬಹುದೆಂದು ತಿಳಿಸಿತ್ತು. ಮುಂದಿನ ತಿಂಗಳಲ್ಲಿ ವಾಟ್ಸ್ ಆಪ್ ನಲ್ಲಿ ಈ ವೈಶಿಷ್ಟ್ಯವು ಲಭ್ಯವಾಗಲಿದೆ. ಇನ್ನೊಂದು ವೈಶಿಷ್ಟ್ಯವೆಂದರೆ ಸ್ಟಿಕ್ಕರ್ಸ್ ಗಳಿಗೆ ಹೆಚ್ಚಿನ ಬೆಂಬಲ ಸಿಗಲಿದೆ. ವಾಟ್ಸ್ ಆಪ್ ಈಗಾಗಲೇ ಬಳಕೆದಾರರು ಅಪ್ಲಿಕೇಷನ್ ಓಪನ್ ಮಾಡದೇ ಹೇಗೆ ಚಾಟ್ ಮಾಡಲು ಸಾಧ್ಯವಿದೆ ಎಂಬ ಬಗ್ಗೆ ಕೆಲಸ ಮಾಡುತ್ತಿದೆ. ಇದನ್ನು ಪ್ರಾರಂಭಿಸುವುದಕ್ಕಾಗಿ ವಾಟ್ಸ್ ಆಪ್ ಒಂದು ಹೊಸ ಡೊಮೈನ್ 'wa.me' ಅನ್ನೋ ಹೊರತಂದಿದೆ, ಈ ವೆಬ್ಬಿನ ಶಾರ್ಟ್ ಲಿಂಕ್ api.whatsapp.com' ಇದಾಗಿದೆ.

ಈ ಯುಆರ್ ಎಲ್ ಮೂಲಕ ಬಳಕೆದಾರರು ಕೇವಲ ಕಾಂಟ್ಯಾಕ್ಟ್ ನಂಬರ್ ಟೈಪ್ ಮಾಡಿ ಆ ಮೂಲಕ ಮೆಸೇಜ್ ಕಳಿಸಬಹುದು ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಈ ವೈಶಿಷ್ಟ್ಯವು ಆಂಡ್ರಾಯ್ಡ್ ಜೊತೆಗೆ ವಾಟ್ಸ್ ಆಪ್ ವರ್ಷನ್ 2.18.138 ನಲ್ಲಿ ಲಭ್ಯವಿದೆ.ಒಮ್ಮೆ ನೀವು ಯುಆರ್ ಎಲ್ ಜೊತೆಗೆ ಫೋನ್ ನಂಬರ್ ಟೈಪ್ ಮಾಡಿ , ಸೆಂಡ್ ಮೆಸೇಜ್ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಮೆಸೇಜ್ ಕಳಿಸಿ ಬಿಡಬಹುದಾಗಿದೆ.

Best Mobiles in India

English summary
WhatsApp users will now know if someone has forwarded a text, not typed and sent it.To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+