ಬ್ಲ್ಯಾಕ್‌ಬೆರಿ, ನೋಕಿಯಾಗಳಲ್ಲಿ ವಾಟ್ಸಾಪ್ ಇನ್ನುಮುಂದೆ ಇಲ್ಲ

Written By:

ಜಾಗತಿಕ ಮೆಸೇಜ್‌ ಸೇವೆ "ವಾಟ್ಸಾಪ್‌" ಈ ವರ್ಷ ಕಳೆದ ನಂತರ ಬ್ಲ್ಯಾಕ್‌ಬೆರಿ ಮತ್ತು ನೋಕಿಯಾ ಮೊಬೈಲ್‌ಗಳಿಗೆ ಸಪೋರ್ಟ್‌ ಮಾಡುವುದಿಲ್ಲ ಎಂದು ತೀರ್ಮಾನ ಕೈಗೊಂಡಿದೆ. ಹಾಗೂ ಕೆಲವು ಆಂಡ್ರಾಯ್ಡ್‌ ಡಿವೈಸ್‌ಗಳಿಗೂ ಸಪೋರ್ಟ್‌ ಮಾಡುವುದಿಲ್ಲವಂತೆ. ಅವು ಯಾವ ಮೊಬೈಲ್‌ಗಳು, ವಾಟ್ಸಾಪ್‌ ಏಕೆ ಸಪೋರ್ಟ್‌ ಮಾಡುವುದಿಲ್ಲ ಎಂದು ಇಂದಿನ ಲೇಖನ ಓದಿ ತಿಳಿದುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಲ್ಯಾಕ್‌ಬೆರಿ ಮೊಬೈಲ್‌ಗೆ ವಾಟ್ಸಾಪ್‌ ಸಪೋರ್ಟ್‌ ಇಲ್ಲ

ಬ್ಲ್ಯಾಕ್‌ಬೆರಿ ಮೊಬೈಲ್‌ಗೆ ವಾಟ್ಸಾಪ್‌ ಸಪೋರ್ಟ್‌ ಇಲ್ಲ

ವಾಟ್ಸಾಪ್

ಜಾಗತಿಕ ಮೆಸೇಜಿಂಗ್‌ ಆಪ್‌ 'ವಾಟ್ಸಾಪ್‌' 2016 ವರ್ಷದ ನಂತರ ಬ್ಲ್ಯಾಕ್‌ಬೆರಿ ಮೊಬೈಲ್‌ಗಳಿಗೆ ಸಪೋರ್ಟ್‌ ಮಾಡುವುದನ್ನು ನಿಲ್ಲಿಸುವುದಾಗಿ ವಾಟ್ಸಾಪ್‌ ತೀರ್ಮಾನ ಕೈಗೊಂಡಿದೆ.

ವಾಟ್ಸಾಪ್ ಸಪೋರ್ಟ್‌ ಮಾಡದ ಇತರೆ ಮೊಬೈಲ್‌ಗಳು

ವಾಟ್ಸಾಪ್ ಸಪೋರ್ಟ್‌ ಮಾಡದ ಇತರೆ ಮೊಬೈಲ್‌ಗಳು

ವಾಟ್ಸಾಪ್

ನೋಕಿಯಾ S40, ನೋಕಿಯಾ ಸಿಂಬಿಯಾನ್‌ S60, ಆಂಡ್ರಾಯ್ಡ್ 2.1, ಆಂಡ್ರಾಯ್ಡ್ 2.2, ವಿಂಡೋಸ್‌ ಫೋನ್‌ 7.1 ಆಪರೇಟಿಂಗ್‌ ಸಿಸ್ಟಮ್‌ಗಳಿಗೂ ಸಹ 2016 ನೇ ವರ್ಷ ಕಳೆದ ನಂತರ ಸಪೋರ್ಟ್‌ ಮಾಡುವುದಿಲ್ಲ.

ವಾಟ್ಸಾಪ್‌ ಸಪೋರ್ಟ್‌ ಮಾಡದಿರಲು ಕಾರಣವೇನು?

ವಾಟ್ಸಾಪ್‌ ಸಪೋರ್ಟ್‌ ಮಾಡದಿರಲು ಕಾರಣವೇನು?

ವಾಟ್ಸಾಪ್

"ವಾಟ್ಸಾಪ್" ಅಪ್ಲಿಕೇಶನ್‌ನಲ್ಲಿ ಮುಂದಿನ ದಿನಗಳಲ್ಲಿ ಹಲವು ಫೀಚರ್‌ಗಳನ್ನು ಅಭಿವೃದ್ದಿಪಡಿಸಲು ತೀರ್ಮಾನ ಕೈಗೊಂಡಿದೆಯಂತೆ. ಆ ಫೀಚರ್‌ಗಳಿಗೆ ಬ್ಲ್ಯಾಕ್‌ಬೆರಿ ಮತ್ತು ಮೇಲೆ ಹೇಳಲಾದ ಹಲವು ಮೊಬೈಲ್‌ಗಳು ಸಪೋರ್ಟ್‌ ಮಾಡಲು ಸಾಮರ್ಥ್ಯ ಹೊಂದಿಲ್ಲದಿರುವುದರಿಂದ ಈ ತೀರ್ಮಾನ ಕೈಗೊಂಡಿರುವುದಾಗಿ ಕಂಪನಿ ಬ್ಲಾಗ್‌ ಪೋಸ್ಟ್‌ನಲ್ಲಿ ಹೇಳಲಾಗಿದೆ.

ಮೊಬೈಲ್‌ ಅಪ್‌ಗ್ರೇಡ್‌

ಮೊಬೈಲ್‌ ಅಪ್‌ಗ್ರೇಡ್‌

ವಾಟ್ಸಾಪ್

ವಾಟ್ಸಾಪ್ ಬಳಕೆದಾರರು ಗೆಳೆಯರು, ಫ್ಯಾಮಿಲಿ, ಪ್ರೀತಿಪಾತ್ರರೊಂದಿಗೆ ಸಂಪರ್ಕದಲ್ಲಿರಲು ತಮ್ಮ ಮೊಬೈಲ್‌ ಅನ್ನು ಅಪ್‌ಗ್ರೇಡ್‌ ಮಾಡಿಕೊಳ್ಳಿ ಎಂದು ಹೇಳಿದೆ.

 1 ಶತಕೋಟಿ ಬಳಕೆದಾರರು

1 ಶತಕೋಟಿ ಬಳಕೆದಾರರು

ವಾಟ್ಸಾಪ್

ವಾಟ್ಸಾಪ್‌ ಆಪ್‌ ಅನ್ನು ಇಂದು 1 ಶತಕೋಟಿ ಜನರು ಬಳಕೆ ಮಾಡುತ್ತಿದ್ದಾರೆ. ಅಲ್ಲದೇ ವಾಟ್ಸಾಪ್‌ ಇತ್ತೀಚೆಗೆ ತಾನೆ ತನ್ನ 7ನೇ ಹುಟ್ಟುಹಬ್ಬ ಆಚರಿಸಿಕೊಂಡಿದೆ.

 42 ಶತಕೋಟಿ ಮೆಸೇಜ್‌ಗಳು

42 ಶತಕೋಟಿ ಮೆಸೇಜ್‌ಗಳು

ವಾಟ್ಸಾಪ್

ಪತ್ರಿದಿನವು ಸಹ ವಾಟ್ಸಾಪ್‌ ಆಪ್‌ ವೇದಿಕೆಯಲ್ಲಿ 42 ಶತಕೋಟಿ ಮೆಸೇಜ್‌ಗಳು ರವಾನೆಯಾಗುತ್ತವೆ, 1.6 ಶತಕೋಟಿ ಫೋಟೋಗಲು ಹಾಗೂ 250 ಶತಕೋಟಿ ವೀಡಿಯೋಗಳು ಹಂಚಿಕೆಯಾಗುತ್ತವೆ ಎಂದು ವಾಟ್ಸಾಪ್‌ ಸಹ-ಸಂಸ್ಥಾಪಕರಾದ ಜಾನ್‌ ಕೋಂ ಫೇಸ್‌ಬುಕ್‌ನಲ್ಲಿ ಹೇಳಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
WhatsApp will no longer work on BlackBerry and Nokia platforms. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot