Home
Apps

ಇರುವುದೆಲ್ಲವ ಬಿಟ್ಟು ವಾಟ್ಸ್‌ಆಪ್ ಒಂದೇ ಸಾಕು ಎನ್ನಲು ಇದೊಂದೇ ಆಯ್ಕೆ ಸಾಕು..!

By Srinidhi

ದಿನೇ ದಿನೇ ಬಳಕೆದಾರರಿಗೆ ಹೊಸ ಆಯ್ಕೆಗಳನ್ನು ನೀಡುತ್ತಿರುವ ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್, ಸದ್ಯ ಮತ್ತೊಂದು ಹೊಸ ಆಯ್ಕೆಯೊಂದಿಗೆ ಬಳಕೆದಾರರ ಮುಂದೆ ನಿಂತಿದೆ. F8 ಡೆವಲಪರ್ ಕಾನ್‌ಫರೆನ್ಸ್ ನಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿರುವ ವಾಟ್ಸ್‌ಆಪ್ ಶೀಘ್ರವೇ ಬಳಕೆದಾರರಿಗೆ ಗ್ರೂಪ್ ವಿಡಿಯೋ ಕಾಲಿಂಗ್ ಮಾಡುವ ಅವಕಾಶವನ್ನು ಮಾಡಿಕೊಡಲಿದೆ.

ಇರುವುದೆಲ್ಲವ ಬಿಟ್ಟು ವಾಟ್ಸ್‌ಆಪ್ ಒಂದೇ ಸಾಕು ಎನ್ನಲು ಇದೊಂದೇ ಆಯ್ಕೆ ಸಾಕು..!

ಈಗಾಗಲೇ ಫೇಸ್‌ಬುಕ್ ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಮ್ ನಲ್ಲಿರುವ ಆಯ್ಕೆಗಳನ್ನು ವಾಟ್ಸ್‌ಆಪ್‌ಗೂ ತುಂಬುತ್ತಿರುವ ಫೇಸ್‌ಬುಕ್, ಇದೇ ಮೊದಲ ಭಾರಿಗೆ ವಾಟ್ಸ್‌ಆಪ್‌ನಲ್ಲಿಯೂ ಗ್ರೂಪ್ ವಿಡಿಯೋ ಕಾಲಿಂಗ್ ಮಾಡುವ ಅವಕಾಶವನ್ನು ಮಾಡಿಕೊಡಲಿದೆ ಎನ್ನಲಾಗಿದೆ. ಇದರಿಂದಾಗಿ ವಾಟ್ಸ್‌ಆಪ್ ಬಳಕೆದಾರರು ಬೇರೆ ಆಪ್‌ಗಳನ್ನು ಕಾಲಿಂಗ್‌ಗಾಗಿ ಬಳಸುವುದನ್ನು ತಪ್ಪಿಸಲಿದೆ ಎನ್ನಲಾಗಿದೆ.

ಗ್ರೂಪ್ ವಿಡಿಯೋ ಕಾಲಿಂಗ್:

ಗ್ರೂಪ್ ವಿಡಿಯೋ ಕಾಲಿಂಗ್:

ಈ ಹಿಂದೆ ವಾಟ್ಸ್‌ಆಪ್ ತನ್ನ ಬಳಕೆದಾರರಿಗೆ ವಿಡಿಯೋ ಕಾಲಿಂಗ್ ಮಾಡುವ ಅವಕಾಶವನ್ನು ಮಾಡಿಕೊಟ್ಟ ಸಂದರ್ಭದಲ್ಲಿಯೇ ಮಾರುಕಟ್ಟೆಯ ಇತರೆ ವಿಡಿಯೋ ಕಾಲಿಂಗ್ ಆಪ್‌ಗಳು ನಷ್ಟ ಅನುಭವಿಸಿದ್ದವು, ಈಗ ಹೊಸ ಮಾದರಿಯಲ್ಲಿ ಗ್ರೂಪ್ ವಿಡಿಯೋ ಕಾಲಿಂಗ್ ನೀಡುತ್ತಿದೆ.

ಪ್ರತಿ ದಿನ 2 ಬಿಲಿಯನ್ ನಿಮಿಷದ ಕಾಲಿಂಗ್:

ಪ್ರತಿ ದಿನ 2 ಬಿಲಿಯನ್ ನಿಮಿಷದ ಕಾಲಿಂಗ್:

ಇಡೀ ವಿಶ್ವದಲ್ಲಿ ಒಂದು ಬಿಲಿಯನ್‌ಗೂ ಅಧಿಕ ಮಂದಿ ವಾಟ್ಸ್‌ಆಪ್ ಕಾಲಿಂಗ್ ಸೇವೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಇದೇ ಮಾದರಿಯಲ್ಲಿ ಪ್ರತಿ ನಿತ್ಯ ಸುಮಾರು 2 ಬಿಲಿಯನ್ ನಿಮಿಷಗಳ ವಾಟ್ಸ್‌ಆಪ್ ಕಾಲಿಂಗ್ ಬಳಕೆಯಾಗುತ್ತಿದೆ.

ಈಗಾಗಲೇ ಆಯ್ಕೆ ಇದೆ:

ಈಗಾಗಲೇ ಆಯ್ಕೆ ಇದೆ:

ಈಗಾಗಲೇ ಮಾರುಕಟ್ಟೆಯಲ್ಲಿ ವಾಟ್ಸ್‌ಆಪ್ ಬಳಕೆದಾರರಿಗೆ ವಿಡಿಯೋ ಕಾಲಿಂಗ್‌ನಿಂದ ಆಡಿಯೋ ಕಾಲಿಂಗ್‌ಗೆ ವರ್ಗಾಹಿಸಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಇದೇ ಮಾದರಿಯಲ್ಲಿ ಗ್ರೂಪ್ ವಿಡಿಯೋ ಕಾಲಿಂಗ್ ಆಯ್ಕೆಯೂ ಸಹ ಅದಕ್ಕೆ ಸೇರಿಕೊಳ್ಳಲಿದೆ.

ಸ್ಟೀಕರ್ ಬರಲಿದೆ:

ಸ್ಟೀಕರ್ ಬರಲಿದೆ:

ವಾಟ್ಸ್‌ಆಪ್ ಬಳಕೆಯ ನಂತರದಲ್ಲಿಯೇ ಎಮೋಜಿಗಳು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗಲು ಶುರುವಾಗಿತ್ತು. ಇದೇ ಮಾದರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿರುವ ಸ್ಟೀಕರ್‌ಗಳು ವಾಟ್ಸ್‌ಆಪ್‌ನಲ್ಲಿ ಶೀಘ್ರವೇ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಇದಲ್ಲದೇ ಇನ್ನು ಅನೇಕ ಹೊಸ ಆಯ್ಕೆಗಳು ಲಭ್ಯವಿದೆ.

ಗ್ರೂಪ್ ಆಡ್ಮಿನ್‌ಗಳನ್ನು ಕಿತ್ತಾಕಬಹುದು:

ಗ್ರೂಪ್ ಆಡ್ಮಿನ್‌ಗಳನ್ನು ಕಿತ್ತಾಕಬಹುದು:

ವಾಟ್ಸ್‌ಆಪ್‌ ಗ್ರೂಪ್‌ಗಳು ಇಂದು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದ್ದು, ವಿಷಯಗಳ ಚರ್ಚೆಗೆ, ಕುಟುಂಬದ ವೇದಿಕೆಯಾಗಿ, ಕ‍ಚೇರಿಯಲ್ಲಿ ಸಂವಹನಕ್ಕಾಗಿ ವಾಟ್ಸ್‌ಆಪ್ ಗ್ರೂಪ್ ಬಳಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ತಂಡದ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ಅವರನ್ನು ಗ್ರೂಪ್‌ ನಿಂದ ಕಿತ್ತು ಹಾಕುವ ಅಧಿಕಾರವನ್ನು ಗ್ರೂಪ್ ಆಡ್ಮಿನ್‌ ಗಳಿಗೆ ನೀಡಲಾಗಿತ್ತು. ಸದ್ಯ ಇದೇ ಮಾದರಿಯಲ್ಲಿ ತಂಡ ಸದಸ್ಯರು ತಂಡದ ಆಡ್ಮಿನ್‌ಗಳನ್ನು ತೆಗೆದು ಹಾಕುವ ಅವಕಾಶ ಮಾಡಿಕೊಟ್ಟೆದೆ.

ಆದ್ಯತೆ ನೋಟಿಫಿಕೇಷನ್:

ಆದ್ಯತೆ ನೋಟಿಫಿಕೇಷನ್:

ಇದು ಹೊಸದಾಗಿ ವಾಟ್ಸ್‌ಆಪ್ ನೀಡಿರುವ ಆಯ್ಕೆಯಾಗಿದ್ದು, ನಿಮಗೆ ಬೇಕಾದ ವ್ಯಕ್ತಿಯ ಚಾಟ್ ಅನ್ನು ಪಿನ್ ಟು ಟಾಪ್ ಮಾಡಿಕೊಳ್ಳುವ ಮಾದರಿಯಲ್ಲಿ ನಿಮಗೆ ಬೇಕಾದ ವ್ಯಕ್ತಿಯ ಚಾಟ್ ಇಲ್ಲವೇ ಗ್ರೂಪ್ ನೋಷಿಫಿಕೇಷನ್ ಮೊದಲು ತೋರಿಸುವಂತೆ ಆದ್ಯತೆ ನೋಷಿಫಿಕೇಷನ್ ಇಟ್ಟು ಕೊಳ್ಳಬಹುದಾಗಿದೆ. ಇಂದು ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗೆ ಲಭ್ಯವಿದೆ.

ಹಣಕ್ಕಾಗಿ ಮನವಿ:

ಹಣಕ್ಕಾಗಿ ಮನವಿ:

ಹೊಸದಾಗಿ ಕಾರ್ಯಚರಣೆಯನ್ನು ಆರಂಭಿಸಿರುವ ವಾಟ್ಸ್‌ಆಪ್ ಪೇಮೆಂಟ್ ಸೇವೆಯಲ್ಲಿ ಬಳಕೆದಾರರು ಹಣವನ್ನು ಕಳುಹಿಸುವ ಮಾದರಿಯಲ್ಲಿ, ಗೂಗಲ್ ತೇಜ್ ನಲ್ಲಿ ಹಣವನ್ನು ರಿಕ್ವೆಸ್ಟ್ ಮಾಡುವ ಮಾದರಿಯಲ್ಲಿ ವಾಟ್ಸ್‌ಆಪ್ ನಲ್ಲಿಯೂ ಸ್ನೇಹಿತರಿಗೆ ಹಣಕಳುಹಿಸಲು ಮನವಿಯನ್ನು ಮಾಡಬಹುದಾಗಿದೆ.

ಫೋಟೋ ಡಿಲೀಟ್ ಆದರೆ ಚಿಂತೆ ಇಲ್ಲ

ಫೋಟೋ ಡಿಲೀಟ್ ಆದರೆ ಚಿಂತೆ ಇಲ್ಲ

ಚಾಟಿಂಗ್‌ನಲ್ಲಿ ಡಿಲೀಟ್ ಮಾಡಿದ ಫೋಟೋಗಳನ್ನು ಮತ್ತೇ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನು ವಾಟ್ಸ್‌ಆಪ್ ನೀಡಿದೆ. ನಿಮ್ಮ ಎಲ್ಲಾ ವಿಡಿಯೋ, ಜಿಫ್ ಮತ್ತು ಫೋಟೋಗಳು ವಾಟ್ಸ್‌ಆಪ್ ತನ್ನ ಸರ್ವರ್‌ನಲ್ಲಿ ಸೇವ್ ಮಾಡಿಕೊಳ್ಳಲಿದೆ. ನಿಮಗೆ ಬೇಕಾದ ಸಂದರ್ಭದಲ್ಲಿ ನೀವು ಮತ್ತೇ ಅವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
WhatsApp will soon add support for Group Video calls. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+