Home
Apps

ವಾಟ್ಸ್ ಆಪ್ ಗ್ರೂಪ್ ಸೃಷ್ಟಿಸಲು ಸದಸ್ಯರ ಅನುಮತಿ ಪಡೆಯಬೇಕಾಗಿರುವ ಹೊಸ ಫೀಚರ್

By Gizbot Bureau

ಯಾವುದೇ ಗ್ರೂಪಿಗೆ ಸುಮ್ಮನೆ ನಿಮ್ಮನ್ನು ವಾಟ್ಸ್ ಆಪ್ ನಲ್ಲಿ ಸೇರಿಸಲಾಗುತ್ತಿದೆಯೇ? ಇದು ಅತರ್ಜಾಲದಲ್ಲಿ ಅತೀಹೆಚ್ಚು ಕೇಳಲಾಗಿರುವ ವಾಟ್ಸ್ ಆಪ್ ಪ್ರಶ್ನೆ. ಖಂಡಿತ ಈ ರೀತಿ ನಿಮಗೆ ಅಪರಿಚಿತವಾಗಿರುವ ಯಾವುದೇ ಗ್ರೂಪಿಗೆ ಸುಖಾಸುಮ್ಮನೆ ಸೇರಿಸುವುದು ಕಿರಿಕಿರಿಯ ಸಂಗತಿಯೇ ಸರಿ.

ವಾಟ್ಸ್ ಆಪ್ ಗ್ರೂಪ್ ನಿರ್ಮಾಣಕ್ಕೆ ಹೊಸ ರೂಲ್ಸ್:

ವಾಟ್ಸ್ ಆಪ್ ಗ್ರೂಪ್ ನಿರ್ಮಾಣಕ್ಕೆ ಹೊಸ ರೂಲ್ಸ್:

ವಾಟ್ಸ್ ಆಪ್ ನಲ್ಲಿ ಏನು ಮಾಡಬೇಕು,ಏನು ಮಾಡಬಾರದು ಎಂಬ ಬಗ್ಗೆ ಖಂಡಿತ ಕೆಲವು ನಿಯಮಗಳಿವೆ. ಆದರೆ ಅದರ ಪಾಲನೆಯಲ್ಲಿ ತಪ್ಪುಗಳಾಗುತ್ತಿರಬಹುದು. ವಾಟ್ಸ್ ಆಪ್ ಪ್ರತಿಯೊಬ್ಬ ಬಳಕೆದಾರನೂ ಕೂಡ ವಾಟ್ಸ್ ಆಪ್ ಬಳಕೆಯಿಂದ ಖುಷಿಯಾಗಿರಬೇಕು ಎಂದು ಬಯಸುತ್ತದೆ. ಆದರೆ ಕೆಲವು ಬೆಳವಣಿಗೆಗಳು ವಾಟ್ಸ್ ಆಪ್ ಕಿರಿಕಿರಿ ಎನ್ನಿಸುವಂತೆ ಮಾಡಿರಬಹುದು. ಅದರಲ್ಲಿ ಈ ಅನಗತ್ಯ ಗ್ರೂಪಿಗೆ ನಿಮ್ಮನ್ನು ಸೇರಿಸುವುದು ಕೂಡ ಆಗಿದೆ. ಆದರೆ ಈ ಸಮಸ್ಯೆಗೆ ಇನ್ನು ಕೆಲವೇ ದಿನಗಳಲ್ಲಿ ಫುಲ್ ಸ್ಟಾಪ್ ಬೀಳಲಿದೆ.

ಗ್ರೂಪ್ ಇನ್ವಿಟೇಷನ್ ಫೀಚರ್:

ಗ್ರೂಪ್ ಇನ್ವಿಟೇಷನ್ ಫೀಚರ್:

ವಾಬೇಟಾ ಇನ್ಫೋ ನೀಡಿರುವ ವರದಿಯ ಪ್ರಕಾರ ವಾಟ್ಸ್ ಆಪ್ ಈಗಾಗಲೇ ಗ್ರೂಪ್ ಆಮಂತ್ರಣ(ಇನ್ವಿಟೇಷನ್) ಫೀಚರ್ ಬಗ್ಗೆ ಕೆಲಸ ನಿರ್ವಹಿಸುತ್ತಿದೆ. ಇದು ವಾಟ್ಸ್ ಆಪ್ ಮೆಸೇಂಜರ್ ಮತ್ತು ವಾಟ್ಸ್ ಆಪ್ ಬ್ಯುಸಿನೆಸ್ ಫ್ಲಾಟ್ ಫಾರ್ಮ್ ಎರಡರಲ್ಲೂ ಕೂಡ ಜಾರಿಗೆ ಬರುತ್ತದೆ. ಮುಂದಿನ ಐಓಎಸ್ ಬೇಟಾ ಅಪ್ ಡೇಟ್ ನಲ್ಲಿ ಈ ಫೀಚರ್ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.

72 ತಾಸಿಗೆ ಇನ್ವಿಟೇಷನ್ ಎಕ್ಸ್ ಪೈರ್:

72 ತಾಸಿಗೆ ಇನ್ವಿಟೇಷನ್ ಎಕ್ಸ್ ಪೈರ್:

ಈ ವರದಿಯು ಹೇಳುವ ಪ್ರಕಾಯ ಯಾವುದೇ ಗ್ರೂಪಿನ ಅಡ್ಮಿನ್ ನಿಮ್ಮನ್ನು ಅವರ ಗ್ರೂಪಿಗೆ ಸೇರಿಸಲು ಅಸಾಧ್ಯವಾದಾಗ ಅವರು ಗ್ರೂಪ್ ಇನ್ವಿಟೇಷನ್ ಮೂಲಕ ನಿಮ್ಮನ್ನು ಅವರ ಗ್ರೂಪಿಗೆ ಸೇರಿಸಿಕೊಳ್ಳುವುದಕ್ಕೆ ನಿಮ್ಮ ಬಳಿ ಅನುಮತಿಯನ್ನು ಕೇಳಬಹುದು. ಈ ಆಮಂತ್ರಣವು 72 ತಾಸುಗಳ ನಂತರ ಎಕ್ಸ್ ಪೈರ್ ಆಗುತ್ತದೆ.

 ಫೀಚರ್ ಸೆಟ್ಟಿಂಗ್ಸ್ ಹೇಗೆ?

ಫೀಚರ್ ಸೆಟ್ಟಿಂಗ್ಸ್ ಹೇಗೆ?

ಈ ಫೀಚರ್ ನ್ನು ಮ್ಯಾನೇಜ್ ಮಾಡಲು ನೀವು ವಾಟ್ಸ್ ಆಪ್ ಸೆಟ್ಟಿಂಗ್ಸ್> ಅಕೌಂಟ್ಸ್> ಪ್ರೈವೆಸಿ> ಗ್ರೂಪ್ಸ್> ಹು ಕ್ಯಾನ್ ಆಡ್ ಮಿ ಟು ಗ್ರೂಪ್ಸ್ ಗೆ ತೆರಳಬೇಕು. ನಿಮಗೆ ಮೂರು ಆಯ್ಕೆಗಳು ಸಿಗುತ್ತದೆ-ಎಲ್ಲರೂ, ನಿಮ್ಮ ಕಾಂಟ್ಯಾಕ್ಸ್ ನವರು ಮತ್ತು ಯಾರೂ ಇಲ್ಲ.

ಎಲ್ಲರೂ(ANYONE)

ಎಲ್ಲರೂ(ANYONE)

ನೀವು ಎಲ್ಲರೂ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿದರೆ ನಿಮ್ಮನ್ನ ಯಾರು ಬೇಕಿದ್ದರೂ ಅವರ ಗ್ರೂಪಿಗೆ ಸೇರಿಸಿಕೊಳ್ಳಲು ಸಾಧ್ಯವಿರುತ್ತದೆ ಮತ್ತು ನೀವು ಯಾವುದೇ ಆಮಂತ್ರಣವನ್ನು ರಿಸೀವ್ ಮಾಡುವುದಿಲ್ಲ.

ನಿಮ್ಮ ಕಾಂಟ್ಯಾಕ್ಟ್ಸ್ ನವರು(my contacts)

ನಿಮ್ಮ ಕಾಂಟ್ಯಾಕ್ಟ್ಸ್ ನವರು(my contacts)

ಒಂದು ವೇಳೆ ನೀವು ನಿಮ್ಮ ಕಾಂಟ್ಯಾಕ್ಟ್ಸ್ ನಲ್ಲಿರುವವರು ಮಾತ್ರ ಎಂದು ಆಯ್ಕೆ ಮಾಡಿದರೆ ನಿಮ್ಮ ಕಾಂಟ್ಯಾಕ್ಟ್ಸ್ ನಲ್ಲಿರುವ ಸದಸ್ಯರು ಅಡ್ಮಿನ್ ಆಗಿರುವ ಗ್ರೂಪಿಗೆ ನಿಮ್ಮನ್ನ ಸೇರಿಸುವುದಕ್ಕೆ ಅನುಮತಿ ಇರುತ್ತದೆ ಮತ್ತು ಒಂದು ವೇಳೆ ನಿಮ್ಮ ಕಾಂಟ್ಯಾಕ್ಟ್ ನಲ್ಲಿ ಇಲ್ಲದ ಸದಸ್ಯರು ಯಾರಾದರೂ ಗ್ರೂಪ್ ನಿರ್ಮಿಸುತ್ತಿದ್ದರೆ ನಿಮ್ಮನ್ನ ಸೇರಿಸಲು ಪ್ರಯತ್ನಿಸಿದರೆ ನಿಮಗೆ ಆಮಂತ್ರಣ ಸಿಗುತ್ತದೆ.

ಯಾರೂ ಬೇಡ(nobody)

ಕೊನೆಯದಾಗಿ ಒಂದು ವೇಳೆ ನೀವು ನೋಬಡಿ ಅಥವಾ ಯಾರೂ ಬೇಡ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿದ್ದರೆ ಯಾವುದೇ ವ್ಯಕ್ತಿ ನಿಮ್ಮನ್ನ ಯಾವುದಾದರೂ ಗ್ರೂಪಿಗೆ ಸೇರಿಸಲು ಪ್ರಯತ್ನಿಸಿದರೆ ಕೂಡಲೇ ನಿಮಗೆ ಆಮಂತ್ರಣ ಬರುತ್ತದೆ. ನೀವು ಆಮಂತ್ರಣವನ್ನು ಒಪ್ಪಿದರೆ ಮಾತ್ರವೇ ಗುಂಪಿಗೆ ನೀವು ಸೇರ್ಪಡೆಯಾಗುತ್ತದೆ. ಈ ಫೀಚರ್ ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.

ಸೆಟ್ಟಿಂಗ್ಸ್ ರಿಡಿಸೈನ್:

ಇತ್ತೀಚೆಗೆ ವಾಟ್ಸ್ ಆಪ್ ತನ್ನ ಸೆಟ್ಟಿಂಗ್ಸ್ ಮೆನುವನ್ನು ರೀಡಿಸೈನ್ ಮಾಡಿ ಮತ್ತು ಹೆಚ್ಚು ಮಾಹಿತಿಗಳನ್ನು ಸೇರಿಸಿದೆ. ಸೆಟ್ಟಿಂಗ್ಸ್ ಮೆನುವಿನಲ್ಲಿ ಹೊಸ ಐಕಾನ್ ಇದ್ದು ಹೆಚ್ಚು ವಿವರಣೆಯನ್ನು ಫಂಕ್ಷನ್ ಗಳ ಬಗ್ಗೆ ಮತ್ತು ಪ್ರತಿಯೊಂದು ಆಪ್ಶನ್ ಗಳ ಬಗ್ಗೆ ನೀಡಲಾಗಿದೆ. ಹೊಸದಾಗಿ ಪೇಮೆಂಟ್ ಅನ್ನೋ ಆಯ್ಕೆಯೂ ಇದ್ದು ಇದು ವಾಟ್ಸ್ ಆಪ್ ಪೇಮೆಂಟ್ ಸೇವೆಯ ಮೂಲಕ ನೀವು ಮಾಡಿರುವ ಎಲ್ಲಾ ಪಾವತಿಯನ್ನು ತೋರಿಸುತ್ತದೆ.

Best Mobiles in India

English summary
WhatsApp will soon require that admins ask permission from users before adding them to a group
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+