Home
Apps

ಈ ಡಿವೈಸ್‌ಗಳಲ್ಲಿ ಇನ್ಮುಂದೆ ವಾಟ್ಸ್ಆಪ್ ಕೆಲಸ ಮಾಡಲ್ಲ...!

By Gizbot bureau

ವಾಟ್ಸ್ ಆಪ್ ಸದ್ಯದಲ್ಲೇ ತನ್ನ ಬೆಂಬಲವನ್ನು ಈ ಕೆಳಗೆ ನಾವು ತಿಳಿಸಿರುವ ಸ್ಮಾರ್ಟ್ ಫೋನ್ ಗಳಲ್ಲಿ ನಿಲ್ಲಿಸಲಿದೆ. ಎಸ್.. ನೀವು ಸರಿಯಾಗೇ ಓದಿದ್ದೀರಿ.. ಎಲ್ಲಾ ಮೊಬೈಲ್ ನಲ್ಲೂ ಇನ್ನು ಮುಂದೆ ವಾಟ್ಸ್ ಆಪ್ ಬರುವುದಿಲ್ಲ.. ವಾಟ್ಸ್ ಆಪ್ ಚಾಟಿಂಗ್ ಆಪ್ ಇನ್ನು ಕೆಲವೇ ದಿನದಲ್ಲಿ ತನ್ನ ಬೆಂಬಲವನ್ನು ಕೆಲವು ಫೋನ್ ಗಳಲ್ಲಿ ನಿಲ್ಲಿಸಲಿದ್ದು, ಕಂಪೆನಿಯು ಹೊಸ ಪಟ್ಟಿಯನ್ನು ಬಿಡುಗಡೆಗೊಳಿಸಿದೆ ಮತ್ತು ಆ ಪಟ್ಟಿಯಲ್ಲಿರುವ ಫೋನ್ ಗಳಲ್ಲಿ ಇನ್ನು ಮುಂದೆ ಅಂದರೆ 2018 ರಲ್ಲಿ ವಾಟ್ಸ್ ಆಪ್ ಯಾವುದೇ ಅಪ್ ಡೇಟನ್ನು ನೀಡುವುದಿಲ್ಲವಂತೆ.

ಈ ಡಿವೈಸ್‌ಗಳಲ್ಲಿ ಇನ್ಮುಂದೆ ವಾಟ್ಸ್ಆಪ್ ಕೆಲಸ ಮಾಡಲ್ಲ...!

ವಾಟ್ಸ್ ಆಪ್ ಈಗಾಗಲೇ ತನ್ನ ಬಳಕೆದಾರರಿಗೆ ಸಲಹೆ ನೀಡಿದ್ದು ಹೊಸ ವರ್ಷನ್ ಗಳಿಗೆ ಅಪ್ ಗ್ರೇಡ್ ಆಗುವಂತೆ ಹೇಳಿದೆ. " ... ಇನ್ನು ಮುಂದೆ ನಾವು ಈ ಆಪರೇಟಿಂಗ್ ಸಿಸ್ಟಮ್ ಗಳಿಗೆ ಆಕ್ಟೀವ್ ಆಗಿ ಇರುವುದಿಲ್ಲ, ಕೆಲವು ವೈಶಿಷ್ಟ್ಯತೆಗಳು ಯಾವುದೇ ಸಮಯದಲ್ಲಾದರೂ ನಿಂತು ಬಿಡಬಹುದು. ಒಂದು ವೇಳೆ ನೀವು ಹಳೆಯ ಆಪರೇಟಿಂಗ್ ಸಿಸ್ಟಮ್ ಅನ್ನೇ ಬಳಕೆ ಮಾಡುತ್ತಿದ್ದರೆ, ಕೂಡಲೇ ಹೊಸ ವರ್ಷನ್ ಗೆ ಅಪ್ ಗ್ರೇಡ್ ಆಗಿ “ ಎಂದು ವಾಟ್ಸ್ ಆಪ್ ತಮ್ಮ ಸಪೋರ್ಟ್ ಪೇಜ್ ನಲ್ಲಿ ಹೇಳಿಕೊಂಡಿದೆ.

ಯಾವೆಲ್ಲ ಆಪರೇಟಿಂಗ್ ಸಿಸ್ಟಮ್ ನಲ್ಲಿ ಈಗಾಗಲೇ ವಾಟ್ಸ್ ಆಪ್ ಬೆಂಬಲ ನಿಂತಿದೆ ಎಂದರೆ :

-- 2.3.3 ಕ್ಕಿಂತ ಹಳೆಯದಾದ ಆಂಡ್ರಾಯ್ಡ್ ವರ್ಷನ್

-- ವಿಂಡೋಸ್ ಫೋನ್ 8.0 ಮತ್ತು ಅದಕ್ಕಿಂತ ಹಳೆಯದು

-- ಐಫೋನ್ 3ಜಿಎಸ್/iOS 6

-- ನೋಕಿಯಾ Symbian S60

-- ಬ್ಲಾಕ್ ಬೆರ್ರಿ ಓಎಸ್ ಮತ್ತು ಬ್ಲಾಕ್ ಬೆರಿ 10

ಈ ಡಿವೈಸ್‌ಗಳಲ್ಲಿ ಇನ್ಮುಂದೆ ವಾಟ್ಸ್ಆಪ್ ಕೆಲಸ ಮಾಡಲ್ಲ...!

ಯಾವೆಲ್ಲ ಆಪರೇಟಿಂಗ್ ಸಿಸ್ಟಮ್ ನಲ್ಲಿ ಇನ್ನು ಕೆಲವೇ ದಿನದಲ್ಲಿ ವಾಟ್ಸ್ ಆಪ್ ಬೆಂಬಲ ನಿಲ್ಲಲ್ಲಿದೆ ಎಂದರೆ :

-- ನೋಕಿಯಾ ಎಸ್ 40 ಡಿಸೆಂಬರ್ 31, 2018 ವರೆಗೆ

-- ಆಂಡ್ರಾಯ್ಡ್ ವರ್ಷನ್ 2.3.7 ಮತ್ತು ಹಳೆಯದು ಫೆಬ್ರವರಿ 1, 2020ರ ವರೆಗೆ

-- iOS 7 ಮತ್ತು ಹಳೆಯದು ಫೆಬ್ರವರಿ 1, 2020ವರೆಗೆ

ವಾಟ್ಸ್ ಆಪ್ ಈ ಕೆಳಗಿನ ಯಾವುದಾದರೂ ವರ್ಷನ್ ಗೆ ನೀವು ಅಪ್ ಗ್ರೇಡ್ ಆಗುವಂತೆ ಸಲಹೆ ನೀಡುತ್ತದೆ

-- ಆಂಡ್ರಾಯ್ಡ್ ರನ್ನಿಂಗ್ OS 4.0 ಮತ್ತು ಮೇಲಿನದು

-- ಐಫೋನ್ ರನ್ನಿಂಗ್ iOS 8 ಮತ್ತು ಮೇಲಿನದು

-- ವಿಂಡೋಸ್ ಫೋನ್ 8.1 ಮತ್ತು ಮೇಲಿನದು

ನಿಮ್ಮದೂ ಈ ಪಟ್ಟಿಯಲ್ಲಿದ್ದರೆ, ಕೂಡಲೇ ಅಪ್ ಡೇಟ್ ಆಗಿ ಬಿಡಿ.

Best Mobiles in India

English summary
WhatsApp will soon stop working on these devices, see if yours is on the list. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+