Home
Apps

ಜನವರಿ 1 ರಿಂದ ಈ ಫೋನ್‌ಗಳಲ್ಲಿ WhatsApp ಕೆಲಸ ಮಾಡಲ್ಲ! ಇಲ್ಲಿದೆ ಲಿಸ್ಟ್

ಜನವರಿ 1 ರಿಂದ ಈ ಫೋನ್‌ಗಳಲ್ಲಿ ವಾಟ್ಸಾಪ್ (WhatsApp) ಕೆಲಸ ಮಾಡಲ್ಲ! ವಾಟ್ಸಾಪ್ ಬಳಕೆದಾರರಿಗೆ ಇದು ದೊಡ್ಡ ಶಾಕಿಂಗ್ ಸುದ್ದಿ. ಹೌದು, 20ಕ್ಕೂ ಹೆಚ್ಚು ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ತನ್ನ ಸೇವೆಯನ್ನು ನಿಲ್ಲಿಸಲಿದೆ. ಸ್ಯಾಮ್‌ಸಂಗ್, ಮೊಟೊ, ಸೋನಿ ಮತ್ತು ಎಲ್‌ಜಿ ಸೇರಿದಂತೆ ಕೆಲವು ಪ್ರಸಿದ್ಧ ಕಂಪನಿಗಳ ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಕೆಲಸ ಮಾಡುವುದನ್ನು ನಿಲ್ಲಿಸಲಿದೆ. ಹಾಗಾದ್ರೆ, ಯಾವ್ಯಾವ ಫೋನ್‌ಗಳಲ್ಲಿ ವಾಟ್ಸಾಪ್ ಕೆಲಸ ನಿಲ್ಲಿಸಲಿದೆ? ಆ ಪಟ್ಟಿಯಲ್ಲಿ ನಿಮ್ಮ ಮೊಬೈಲ್‌ ಸಹ ಇದೆಯೇ? ಚೆಕ್ ಮಾಡಿಕೊಳ್ಳಿ.

ವಿಶ್ವಾದ್ಯಂತ ಹೆಚ್ಚು ಬಳಕೆಯಾಗುವ ಆಪ್ ಎಂದರೆ ಅದು ವಾಟ್ಸಾಪ್. ಪ್ರತಿ ದಿನ ಹೊಸ ಹೊಸ ಫೀಚರ್ಸ್ ಪರಿಚಯಿಸುತ್ತಿದೆ. ಆದರೆ, ಈ ಇನ್‌ಸ್ಟಂಟ್‌ ಮೆಸೇಜ್‌ ಆಪ್‌ ಜನವರಿ 1, 2025 ರಿಂದ ಅನೇಕ ಫೋನ್‌ಗಳಲ್ಲಿ ತನ್ನ ಸೇವೆಯನ್ನು ನಿಲ್ಲಿಸಲಿದೆ. ಮಾಹಿತಿಯ ಪ್ರಕಾರ, ಹೊಸ ವರ್ಷದ ಮೊದಲ ದಿನದಿಂದ, ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ 20ಕ್ಕೂ ಹೆಚ್ಚು ಸ್ಮಾರ್ಟ್‌ಫೋನ್‌ಗಳಲ್ಲಿ ವರ್ಕ್ ಆಗಲ್ಲ. ಹೀಗಾಗಿ, ನಿಮ್ಮ ಸ್ಮಾರ್ಟ್‌ಫೋನ್ ಯಾವುದು? ಯಾವ ವರ್ಶನ್? ಹಳೆಯದೋ ಅಥವಾ ಹೊಸದೋ? ತಕ್ಷಣವೇ ಸೆಟ್ಟಿಂಗ್‌ ಕ್ಲಿಕ್ ಮಾಡಿ ಪರಿಶೀಲಿಸಿ.

ಜ.1 ರಿಂದ ಈ ಫೋನ್‌ಗಳಲ್ಲಿ WhatsApp ಕೆಲಸ ಮಾಡಲ್ಲ! ಇಲ್ಲಿದೆ ಪಟ್ಟಿ

ವಾಸ್ತವವಾಗಿ, ಹಳೆಯ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ವಾಟ್ಸಾಪ್ ತನ್ನ ಸಪೋರ್ಟ್ ಮಾಡುವುದಿಲ್ಲ. ಇದು ಬಹುತೇಕ ಪ್ರತಿ ವರ್ಷವೂ ಕಂಡುಬರುತ್ತದೆ. ಇದರ ಹಿಂದಿನ ಕಾರಣವೆಂದರೆ ಹಳೆಯ ಆಪರೇಟಿಂಗ್ ಸಿಸ್ಟಮ್‌ಗಳಿಗೆ ವಾಟ್ಸಾಪ್ ತನ್ನ ಸಪೋರ್ಟ್‌ ನಿಲ್ಲಿಸಿದಾಗ, ಹೊಸ ವೈಶಿಷ್ಟ್ಯಗಳು ಹಳೆಯ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಹೀಗಾಗಿ, ಭದ್ರತಾ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ಮಾಡಲಾಗುತ್ತದೆ. ಕೆಲ ಹಳೆಯ ಆಂಡ್ರಾಯ್ಡ್ ಫೋನ್‌ಗಳಲ್ಲಿ ಇನ್ಮುಂದೆ ವಾಟ್ಸಾಪ್ ಕೆಲಸ ಮಾಡಲ್ಲ.

ಆಂಡ್ರಾಯ್ಡ್‌ನ ಈ ಆವೃತ್ತಿಯಲ್ಲಿ ವಾಟ್ಸಾಪ್ ಕೆಲಸ ಮಾಡಲ್ಲ

ಒಂದು ವೇಳೆ ನೀವು, ಆಂಡ್ರಾಯ್ಡ್‌ನ KitKat ಆವೃತ್ತಿ ಬಳಸುತ್ತಿದ್ದರೆ, ನಿಮಗಿದು ಬೇಸರದ ಸುದ್ದಿಯಾಗಿದೆ. 10 ವರ್ಷಗಳ ಹಿಂದೆ ಬಿಡುಗಡೆಯಾದ ಈ ಇನ್‌ಸ್ಟಂಟ್‌ ಮೆಸೇಜ್‌ ಆಪ್‌ ಈ ಆವೃತ್ತಿಯನ್ನು ಹೊಸ ವರ್ಷದಿಂದ ಬೆಂಬಲಿಸುವುದಿಲ್ಲ. ಅಂದರೆ, ಜನವರಿ 1ರ (2025) ನಂತರ ಕಿಟ್‌ಕ್ಯಾಟ್ ಆವೃತ್ತಿಯ ಫೋನ್‌ಗಳಲ್ಲಿ ವಾಟ್ಸಾಪ್ ಕೆಲಸ ನಿರ್ವಹಿಸುವುದನ್ನು ನಿಲ್ಲಿಸುತ್ತದೆ. ನೀವು ಅದನ್ನು ನಿಲ್ಲಿಸಲು ಬಯಸಿದರೆ, ಆಪರೇಟಿಂಗ್ ಸಿಸ್ಟಮ್ ಅನ್ನು ಅಪ್ಡೇಟ್ ಮಾಡಬೇಕು ಅಥವಾ ಹೊಸ ಫೋನ್ ಖರೀದಿಸಬೇಕು.

ಸ್ಯಾಮ್‌ಸಂಗ್‌ನ ಈ ಫೋನ್‌ಗಳಲ್ಲಿ ವಾಟ್ಸಪ್‌ ಕೆಲಸ ಮಾಡಲ್ಲ

ಇನ್ನು, ಯಾವ್ಯಾವ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಪ್‌ ತನ್ನ ಸಪೋರ್ಟ್ ನಿಲ್ಲಿಸಲಿದೆ ಗೊತ್ತಾ..? ಆ 20ಕ್ಕೂ ಹೆಚ್ಚು ಮೊಬೈಲ್‌ಗಳ ಪಟ್ಟಿ ಇಲ್ಲಿದೆ ನೋಡಿ.

ಈ ಸ್ಯಾಮ್‌ಸಂಗ್‌ ಫೋನ್‌ಗಳಲ್ಲಿ ವಾಟ್ಸಪ್‌ ವರ್ಕ್ ಆಗಲ್ಲ

* Samsung Galaxy S3
* Galaxy Note 2
* Galaxy Ace 3
* Galaxy S4 Mini

HTC ಯಾವ ಫೋನ್‌ಗಳಲ್ಲಿ ವಾಟ್ಸಪ್‌ ಕೆಲಸ ಮಾಡಲ್ಲ

* One X
* One X+
* Desire 500
* Desire 600

ಈ ಸೋನಿ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಸಹ ಕೆಲಸ ನಿರ್ವಹಿಸುವುದಿಲ್ಲ

* Sony Xperia Z
* Xperia SP
* Xperia T
* Xperia V

ಈ LG ಫೋನ್‌ಗಳಲ್ಲಿಯೂ ಸಹ ವಾಟ್ಸಪ್‌ ಲಭ್ಯವಿರಲ್ಲ

* Optimus G
* Nexus 4
* G2 Mini
* L90

ಮೊಟೊರೊಲಾ ಈ ಫೋನ್‌ಗಳಲ್ಲಿ ವಾಟ್ಸಪ್‌ ಸೇವೆ ಸ್ಥಗಿತ

* Moto G
* Moto Razr HD
* Moto E 2014

ಹಳೆಯ ಚಾಟ್‌ಗಳನ್ನು ಬ್ಯಾಕಪ್ ಮಾಡಿ

ನೀವು, ಈ ಫೋನ್‌ಗಳಲ್ಲಿ ಯಾವುದಾದರೂ ಒಂದನ್ನು ಬಳಸುತ್ತಿದ್ದರೆ, ಖಂಡಿತ ವಾಟ್ಸಪ್‌ ಸಪೋರ್ಟ್‌ ಮಾಡಲ್ಲ. ಇದು ಖಚಿತವಾಗಿದೆ. ಹೀಗಾಗಿ, ನೀವು ಹೊಸ ಫೋನ್ ಖರೀದಿಸಲು ಬಯಸಿದರೆ, ತಪ್ಪದೇ ನಿಮ್ಮ ಹಳೆಯ ಚಾಟ್‌ಗಳನ್ನು ಬ್ಯಾಕಪ್ ಮಾಡಿಕೊಳ್ಳಿ. ಈ ಮೂಲಕ ಹಳೆಯ ಚಾಟ್‌ಗಳನ್ನು ಹೊಸ ಫೋನಿನಲ್ಲಿ ಮುಂದುವರಿಸಬಹುದು.

Best Mobiles in India

English summary
WhatsApp Will Stop Working on these Smartphones from January 1: see Full List Here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+