ಪೂರ್ತಿ ಬದಲಾಯಿತು ವಾಟ್ಸ್‌ಆಪ್‌..! ಬಂದಿವೆ ಹೊಸ ಫೀಚರ್ಸ್‌..!

|

ವಾಟ್ಸ್ ಆಪ್ ನಲ್ಲಿ ಹಲವು ಹೊಸ ವೈಶಿಷ್ಟ್ಯತೆಗಳನ್ನು ಪರಿಚಯಿಸಲಾಗುತ್ತಿದೆ. ಇತ್ತೀಚೆಗೆ ಈ ಮೆಸೇಜಿಂಗ್ ಫ್ಲಾಟ್ ಫಾರ್ಮ್ ನಲ್ಲಿ ಸ್ಟಿಕ್ಕರ್ಸ್ ಮತ್ತು ಪಿಐಪಿ ಮೋಡ್ ನ್ನು ಪರಿಚಯಿಸಲಾಗಿದೆ. ಅದಕ್ಕೂ ಮುಂಚೆ ಬಿಡುಗಡೆಗೊಂಡ “ಡಿಲೀಟ್ ಫಾರ್ ಎವೆರಿವನ್” ವೈಶಿಷ್ಟ್ಯತೆಯು ಎಲ್ಲಾ ವಾಟ್ಸ್ ಆಪ್ ಬಳಕೆದಾರರಿಗೂ ಇಷ್ಟವಾಗಿತ್ತು.ಇದೀಗ ಆಂಡ್ರಾಯ್ಡ್ ಮತ್ತು ಐಓಎಸ್ ಮತ್ತು ವಿಂಡೋಸ್ ಫೋನ್ ವರ್ಷನ್ ನ ಆಪ್ ಗಳಲ್ಲಿ ಮೂರು ಹೊಸ ವೈಶಿಷ್ಟ್ಯತೆಗಳನ್ನು ಸೇರಿಸುವ ಕೆಲಸ ನಡೆಯುತ್ತಿದೆ.

ಪೂರ್ತಿ ಬದಲಾಯಿತು ವಾಟ್ಸ್‌ಆಪ್‌..! ಬಂದಿವೆ ಹೊಸ ಫೀಚರ್ಸ್‌..!

ಅದುವೇ ವೆಕೇಷನ್ ಮೋಡ್, ಸೈಲೆಂಟ್ ಮೋಡ್ ಮತ್ತು ಲಿಂಕ್ಡ್ ಅಕೌಂಟ್ ವೈಶಿಷ್ಟ್ಯತೆಗಳು. ವಾಬೆಟಾಇನ್ಫೋ ಮಾಹಿತಿಯ ಪ್ರಕಾರ, ವಾಟ್ಸ್ ಆಪ್ ನ ಬೆಟಾ ವರ್ಷನ್ ನಲ್ಲಿ ಈ ಮೂರು ವೈಶಿಷ್ಟ್ಯತೆಗಳು ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಗೊಳ್ಳಲಿದೆ. ಉಳಿದ ಬಳಕೆದಾರರು ಈ ಅಪ್ ಡೇಟ್ ಗಳನ್ನು ನಂತರದ ದಿನಗಳಲ್ಲಿ ಪಡೆಯಲಿದ್ದಾರೆ.

ಯಾವ್ಯಾವ ಫೀಚರ್ಸ್‌

ಯಾವ್ಯಾವ ಫೀಚರ್ಸ್‌

ವೆಕೇಷನ್ ಮೋಡ್ ವೈಶಿಷ್ಟ್ಯತೆಯು ಇದೀಗ ಅಭಿವೃದ್ಧಿ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ಬಳಕೆದಾರರಿಗೆ ಬಳಸಲು ಬಿಡುಗಡೆಗೊಳ್ಳಲಿದೆ. ಇನ್ನೂ ಕೆಲವು ಡೆವಲಪ್ ಮೆಂಟ್ ಮಾಡಬೇಕಾದ ಅಂಶಗಳು ಈ ವೈಶಿಷ್ಟ್ಯತೆಯಲ್ಲಿರುವುದರಿಂದಾಗಿ ಬಿಡುಗಡೆಯು ನಿಧಾನವಾಗುತ್ತಿದೆ. ಎಲ್ಲಾ ಬಳಕೆದಾರರಿಗೆ ಬಿಡುಗಡೆಗೊಳಿಸುವುದಕ್ಕೂ ಮುನ್ನ ಕೆಲವು ಇಂಪ್ರೂಮೆಂಟ್ ಗಳನ್ನು ಮಾಡಬೇಕಾಗಿರುವ ಅನಿವಾರ್ಯತೆ ಇದೆ. ಸೈಲೆಂಟ್ ಮೋಡ್ ವೈಶಿಷ್ಟ್ಯತೆಯು ಆಂಡ್ರಾಯ್ಡ್ ಬೇಟಾ ವರ್ಷನ್ ನಲ್ಲಿ ಬಿಡುಗಡೆಗೊಂಡಿದೆ.ಲಿಂಕ್ಡ್ ಅಕೌಂಟ್ ವೈಶಿಷ್ಟ್ಯತೆಯು ಇನ್ನೂ ಬಿಡುಗಡೆಗೊಳ್ಳಬೇಕಾಗಿದೆ. ಹಾಗಾದ್ರೆ ಈ ವೈಶಿಷ್ಟ್ಯತೆಯ ಲಾಭಗಳೇನು ಅನ್ನುವುದರ ವಿವರ ಈ ಕೆಳಗಿದೆ.

ವೇಕೇಷನ್ ಮೋಡ್

ವೇಕೇಷನ್ ಮೋಡ್

ಹೆಸರೇ ಸೂಚಿಸುವಂತೆ, ವೆಕೇಷನ್ ಮೋಡ್ ವೈಶಿಷ್ಟ್ಯತೆಯು ಆರ್ಕೈವ್ಡ್ ಚಾಟ್ಸ್ ಗಳಿಗೆ ಕೆಲವು ಬದಲಾವಣೆಗಳನ್ನು ತರುತ್ತದೆ. ವಾಟ್ಸ್ ಆಪ್ ನ ನೋಟಿಫಿಕೇಷನ್ ಸೆಟ್ಟಿಂಗ್ಸ್ ನಲ್ಲಿ ಇದನ್ನು ಅನೇಬಲ್ ಮಾಡಿದ ನಂತರ ಈ ಮೊದಲೇ ಮ್ಯೂಟ್ ಆಗಿದ್ದ ಕಾನ್ವರ್ಸೇಷನ್ ನಲ್ಲಿ ಒಂದು ವೇಳೆ ಹೊಸ ಮೆಸೇಜ್ ರಿಸೀವ್ ಆದಾಗ ಆರ್ಕೈವ್ಡ್ ಚಾಟ್ಸ್ ಗಳನ್ನು ಅನ್ ಆರ್ಕೈವ್ಡ್ ಮಾಡಲು ಸಾಧ್ಯವಾಗುವುದಿಲ್ಲ.ಈ ವೈಶಿಷ್ಟ್ಯತೆಯನ್ನು ಹಲವು ಬಳಕೆದಾರರು ಮನವಿ ಮಾಡಿದ್ದರು.

ಸೈಲೆಂಟ್ ಮೋಡ್

ಸೈಲೆಂಟ್ ಮೋಡ್

ವೆಕೇಷನ್ ಮೋಡ್ ವೈಶಿಷ್ಟ್ಯತೆಯು ಸೈಲೆಂಟ್ ಮೋಡ್ ವೈಶಿಷ್ಚಯತೆಯನ್ನೇ ಆಧರಿಸಿದೆ.ಈ ವೈಶಿಷ್ಟ್ಯತೆಯು ಮ್ಯೂಟೆಡ್ ಚಾಟ್ಸ್ ಗಳಿಗೆ ಆಪ್ ಬ್ಯಾಡ್ಜ್ ಗಳನ್ನು ಹೈಡ್ ಮಾಡಲು ಅವಕಾಶ ಮಾಡಿಕೊಡುತ್ತದೆ. ಕೆಲವು ಲಾಂಚರ್ ಗಳು ಆಪ್ ಬ್ಯಾಡ್ಜ್ ನಲ್ಲಿ ಹಲವಾರು ಹೊಸ ಮೆಸೇಜ್ ಗಳನ್ನು ರಿಸೀವ್ ಮಾಡಿರುವಂತೆ ತೋರಿಸಲಾಗುತ್ತದೆ. ಇದನ್ನು ಪದೇ ಪದೇ ನೋಡಲು ತೊಂದರೆದಾಯಕವಾಗಿರುತ್ತದೆ. ಅದರಲ್ಲೂ ಮ್ಯೂಟೆಡ್ ಚಾಟ್ ಗಳನ್ನು ನೋಡಲು ಕಿರಿಕಿರಿ ಆಗುತ್ತದೆ. ಮ್ಯೂಟೆಡ್ ಚಾಟ್ ಅಥವಾ ಗ್ರೂಪ್ ಚಾಟ್ ನಲ್ಲಿ ಹೊಸ ಮೆಸೇಜ್ ಗಳಿರುವುದನ್ನು ಸೈಲೆಂಟ್ ಮೋಡ್ ವೈಶಿಷ್ಟ್ಯತೆಯಿಂದಾಗಿ ಆಪ್ ಬ್ಯಾಡ್ಜ್ ನಲ್ಲಿ ಅಡ್ರೆಸ್ ಆಗುವುದು ತಪ್ಪುತ್ತದೆ. ಈ ವೈಶಿಷ್ಟ್ಯತೆಯ ಲಾಭವನ್ನು ಈಗಾಗಲೇ ಬಳಕೆದಾರರು ಪಡೆಯಬಹುದಾಗಿದೆ.

ಲಿಂಕ್ಡ್ ಅಕೌಂಟ್ಸ್

ಲಿಂಕ್ಡ್ ಅಕೌಂಟ್ಸ್

ಮತ್ತೊಂದು ವೈಶಿಷ್ಟ್ಯತೆಯೆಂದರೆ ಅಂದು ಲಿಂಕ್ಡ್ ಅಕೌಂಟ್ಸ್. ಇದು ವಾಟ್ಸ್ ಆಪ್ ಬ್ಯುಸಿನೆಸ್ ಯ್ಯೂಸರ್ ಗೆ ಹೆಚ್ಚು ಬಳಕೆಯಾಗುತ್ತದೆ ಮತ್ತು ಇದು ಪ್ರೊಫೈಲ್ ಸೆಟ್ಟಿಂಗ್ ನ ಅಡಿಯಲ್ಲಿ ಬರುತ್ತದೆ. ಇದು ಇನ್ಸ್ಟಾಗ್ರಾಂನ್ನು ಬೆಂಬಲಿಸುತ್ತದೆ. ಕ್ರಿಡೆನ್ಶಿಯಲ್ಸ್ ನ್ನು ಎಂಟರ್ ಮಾಡಿದ ನಂತರ ಈ ಆಯ್ಕೆಯನ್ನು ಟ್ಯಾಪ್ ಮಾಡುವುದರಿಂದಾಗಿ ಬ್ಯುಸಿನೆಸ್ ನ ವಾಟ್ಸ್ ಆಪ್ ಮತ್ತು ಇನ್ಸ್ಟಾಗ್ರಾಂ ಪ್ರೊಫೈಲ್ ಎರಡನ್ನೂ ಕನೆಕ್ಟ್ ಮಾಡಿಕೊಳ್ಳಬಹುದು.ಲಿಂಕ್ಡ್ ಅಕೌಂಟ್ಸ್ ನಿಮಗೆ ಅಕೌಂಟಿನ ಪಾಸ್ ವರ್ಡ್ ನ್ನು ರಿಕವರ್ ಮಾಡಿಕೊಳ್ಳಲು ಸಹಕಾರಿಯಾಗಿರುತ್ತದೆ ಮತ್ತು ಸ್ವಯಂಚಾಲಿತವಾಗಿ ಇನ್ಸ್ಟಾಗ್ರಾಂನಲ್ಲಿ ಸ್ಟೇಟಸ್ ಶೇರ್ ಮಾಡಲು ಸಹಾಯವಾಗುತ್ತದೆ.

Best Mobiles in India

English summary
WhatsApp working on Linked Accounts, Vacation Mode and Silent Mode features. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X