ವಾಟ್ಸ್ ಆಪ್ ಇಂಡಿಯಾದ ಮುಖ್ಯಸ್ಥ ಯಾರು ಗೊತ್ತಾ?

|

ಅಭಿಜಿತ್ ಬೋಸ್, Ezetap ಸಂಸ್ಥೆಯ ಸಹ ಸಂಸ್ಥಾಪಕ ಮತ್ತು ಸಿಇಓ. ಇದೀಗ ವಾಟ್ಸ್ ಆಪ್ ಇಂಡಿಯಾದ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. 2019 ರ ಆರಂಭದಲ್ಲಿ ಇವರು ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ಸಂಸ್ಥೆಯಲ್ಲಿ ಕೆಲಸ ಆರಂಭಿಸಲಿದ್ದಾರೆ.

ವಾಟ್ಸ್ ಆಪ್ ಇಂಡಿಯಾದ ಮುಖ್ಯಸ್ಥ ಯಾರು ಗೊತ್ತಾ?

ಒಮ್ಮೆ ಅವರು ವಾಟ್ಸ್ ಆಪ್ ಇಂಡಿಯಾಕ್ಕೆ ಸೇರಿದ ನಂತರ ಗುರುಗ್ರಾಮ್ ಭಾರತದಿಂದ ಹೊರಬರಲಿದ್ದಾರೆ. ಅವರು ಮತ್ತು ಅವರ ತಂಡ ತಮ್ಮ ಗ್ರಾಹಕರೊಂದಿಗೆ ಕನೆಕ್ಟ್ ಆಗಿರುವ ದೊಡ್ಡ ಮತ್ತು ಸಣ್ಣ ಬ್ಯುಸಿನೆಸ್ ಗಳನ್ನು ಹೆಚ್ಚು ಕೇಂದ್ರೀಕರಿಸಲಿದ್ದಾರೆ. ಹೊಸ ಸ್ಥಾನವನ್ನು ಅಲಂಕರಿಸಿದ ನಂತರ ಭಾರತ ಮೂಲದ ತಂಡವನ್ನು ಕಂಪೆನಿಯಲ್ಲಿ ಬಿಲ್ಡ್ ಮಾಡುವ ಉದ್ದೇಶವನ್ನು ಇವರು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಇದೇ ಮೊದಲ ಬಾರಿಗೆ ವಾಟ್ಸ್ ಆಪ್ ಭಾರತದ ಮುಖ್ಯಸ್ಥರನ್ನು ನೇಮಕ ಮಾಡಿದೆ. ನಕಲಿ ಸುದ್ದಿ ಹರಡುತ್ತಿರುವ ಬಗ್ಗೆ ವಾಟ್ಸ್ ಆಪ್ ಭಾರತ ಸರ್ಕಾರದಿಂದ ದೊಡ್ಡ ಮಟ್ಟದಲ್ಲಿ ಎಚ್ಚರಿಕೆಯನ್ನು ಎದುರಿಸುತ್ತಿದೆ. ಮತ್ತೊಂದು ದೊಡ್ಡ ಚಾಲೆಂಜ್ ವಾಟ್ಸ್ ಆಪ್ ಗೆ ಭಾರತದಲ್ಲಿ ಇರುವುದೆಂದರೆ ಪೇಮೆಂಟ್ ಬ್ಯುಸಿನೆಸ್. ಅಭಿಜಿತ್ ಬೋಸ್ ಅವರ ಆಯ್ಕೆಯು ಇದೇ ಕಾರಣಕ್ಕೆ ಆಗಿದ್ದು ಇವರು ಎಂಡ್-ಟು-ಎಂಟ್ ಪೇಮೆಂಟ್ ಫ್ಲಾಟ್ ಫಾರ್ಮ್ ವಿಚಾರದಲ್ಲಿ ಬಹಳ ಅನುಭವವನ್ನು ಹೊಂದಿರುವವರಾಗಿದ್ದಾರೆ. ತನ್ನ ಪೇಮೆಂಟ್ ಫ್ಲ್ಯಾಟ್ ಫಾರ್ಮ್ ನಲ್ಲಿ ದೊಡ್ಡ ಅಭಿವೃದ್ಧಿಯನ್ನು ವಾಟ್ಸ್ ಆಪ್ ನಿರೀಕ್ಷಿಸುತ್ತಿದೆ.,

Ezetap ಒಂದು ಬೆಂಗಳೂರು ಮೂಲದ ಪೇಮೆಂಟ್ ಸೆಲ್ಯೂಷನ್ ಕಂಪೆನಿ ಆಗಿದ್ದು 2011 ರಲ್ಲಿ ಆರಂಭವಾಗಿದೆ. ಈ ಫ್ಲ್ಯಾಟ್ ಫಾರ್ಮ್ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದಿದೆ. ಪ್ರತಿ ತಿಂಗಳು 1,100 ಕೋಟಿ ಟ್ರ್ಯಾನ್ಶ್ಯಾಕ್ಷನ್ ನಡೆಸಲಾಗುತ್ತಿದೆ ಮತ್ತು ದೇಶದಾದ್ಯಂತ 2 ಲಕ್ಷ ಡಿಪ್ಲ್ಯಾಯ್ ಮೆಂಟ್ ಇದೆ.

ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ನಲ್ಲಿ ಎಂಬಿಎ ಪದವೀಧರರಾಗಿರುವ ಇವರು ಟೆಕ್ನಾಲಜಿ ಇಂಡಸ್ಟ್ರಿಯಲ್ಲಿ 20 ವರ್ಷದ ಕೆಲಸದ ಅನುಭವವನ್ನು ಹೊಂದಿರುತ್ತಾರೆ.ಮೆಕಾನಿಕಲ್ ಇಂಜಿನಿಯರಿಂಗ್ ನ್ನು ಅಲ್ಯೂಮಿನಸ್ ಆಫ್ ಕಾರ್ನಲ್ ಯುನಿವರ್ಸಿಟಿಯಲ್ಲಿ ಕಲಿತಿದ್ದಾರೆ.ಒರೆಕಲ್,ಇನ್ಟ್ಯೂಟ್,ಎನ್ ಜಿಪೇ ಮತ್ತು ಸೈಬೆಲ್ ಕಂಪೆನಿಗಳಲ್ಲಿ ಕೆಲಸ ಮಾಡಿರುವ ಅನುಭವ ಇವರಿಗಿದೆ.

ಭಾರತದಲ್ಲಿ ಸುಮಾರು ಒಂದು ಮಿಲಿಯನ್ ಬಳಕೆದಾರರು ಇದ್ದಾರೆ. ಸ್ಮಾಲ್ ಬ್ಯುಸಿನೆಸ್ ಮಾಲೀಕರಿಗಾಗಿ ವಾಟ್ಸ್ ಆಪ್ ಇದೀಗ ವಾಟ್ಸ್ ಆಪ್ ಬ್ಯುಸಿನೆಸ್ ಆಪ್ ನ್ನು ಬಿಡುಗಡೆಗೊಳಿಸಿದ್ದು ಮತ್ತು ವಾಟ್ಸ್ ಆಪ್ ಬ್ಯುಸಿನೆಸ್ ಎಪಿಐ(ಅಪ್ಲಿಕೇಷನ್ ಪ್ರೊಗ್ರಾಮಿಂಗ್ ಇಂಟರ್ಫೇಸ್) ನ್ನು ದೊಡ್ಡ ಬ್ಯುಸಿನೆಸ್ ಗಾಗಿ ದೇಶದಲ್ಲಿ ಕಳೆದ ವರ್ಷ ಬಿಡುಗಡೆಗೊಳಿಸಿದೆ. ಇದನ್ನು ನಿಭಾಯಿಸಬೇಕಾಗಿರುವ ಜವಾಬ್ದಾರಿ ಇವರ ಮೇಲಿದೆ. ಅಷ್ಟೇ ಅಲ್ಲ, ಸದ್ಯ ಭಾರತದಲ್ಲಿ ಎದುರಿಸುತ್ತಿರುವ ಕೆಲವು ವಾಟ್ಸ್ ಆಪ್ ಸಂಬಂಧಿತ ಸಮಸ್ಯೆಗಳು ಉದಾಹರಣೆಗೆ ಫೇಕ್ ನ್ಯೂಸ್ ಹರಡುವಿಕೆಯನ್ನು ತಡೆಗಟ್ಟುವುದಕ್ಕೆ ಇನ್ನಷ್ಟು ಕ್ರಮಗಳು ಇತ್ಯಾದಿಗಳನ್ನು ಇವರು ನಿಭಾಯಿಸಬೇಕಾಗುತ್ತದೆ.

Most Read Articles
Best Mobiles in India

Read more about:
English summary
Who is head of WhatsApp India?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X