Home
Apps

ಸುಳ್ಳಿನ ಕಂತೆಯಿಂದ ಗೂಗಲ್‌ ಮ್ಯಾಪ್ಸ್‌ ಆಗುತ್ತಿದೆ ಅಪಾಯಕಾರಿ..!

By Gizbot Bureau

ತಂತ್ರಜ್ಞಾನದಿಂದ ಎಷ್ಟು ಒಳ್ಳೆಯದಿದೆಯೋ.. ಅಷ್ಟೇ ಕೆಟ್ಟದ್ದಿದೆ ಎಂಬುದು ನಿಮಗೆಲ್ಲಾ ಗೊತ್ತು. ಎಷ್ಟೇ ಒಳ್ಳೆ ಟೆಕ್ನಾಲಜಿಯಿದ್ದರೂ ದುಷ್ಕರ್ಮಿಗಳ ಕೈಗೆ ಸಿಕ್ಕು ಕೆಟ್ಟದಾಗುತ್ತಿದೆ. ಇಂತಹ ಹಲವು ಉದಾಹರಣೆಗಳನ್ನು ನಾವು ತಂತ್ರಜ್ಞಾನ ಜಗತ್ತಿನ ಇತಿಹಾಸದಲ್ಲಿ ನೋಡಬಹುದು. ಹೌದು, ಈಗ ಅಂತಹದ್ದೇ ಸ್ಥಿತಿ ಜಗತ್ತಿನಲ್ಲಿ ಅತಿ ಹೆಚ್ಚು ಜನ ಬಳಸುವ ಗೂಗಲ್‌ ಮ್ಯಾಪ್ಸ್‌ಗೆ ಬಂದಿದೆ. ಪ್ರತಿ ತಿಂಗಳಿಗೆ ಸಾವಿರಾರು ನಕಲಿ ಅಕೌಂಟ್‌ಗಳು ಗೂಗಲ್ ಮ್ಯಾಪ್ಸ್‌ಗೆ ಸೇರುತ್ತಲೆ ಇವೆ. ವರದಿಯೊಂದರ ಪ್ರಕಾರ 11 ಮಿಲಿಯನ್ ನಕಲಿ ಅಂಗಡಿಗಳು, ಫೋನ್‌ ಸಂಖ್ಯೆಗಳು ಗೂಗಲ್‌ ಮ್ಯಾಪ್ಸ್‌ನಲ್ಲಿ ಪತ್ತೆಯಾಗಿವೆ.

ಹೇಳಿದ ಜಾಗದಲ್ಲಿ ಅಂಗಡಿಗಳಿಲ್ಲ

ಹೇಳಿದ ಜಾಗದಲ್ಲಿ ಅಂಗಡಿಗಳಿಲ್ಲ

ಗೂಗಲ್‌ ಮ್ಯಾಪ್ಸ್‌ ಪಟ್ಟಿಯಲ್ಲಿನ ಲೊಕೇಷನ್‌ಗಳಲ್ಲಿ ಬಹಳಷ್ಟು ವ್ಯವಹಾರಗಳು ತಿಳಿಸಿದ ಲೊಕೇಷನ್‌ಗಳಲ್ಲಿ ಇಲ್ಲವೇ ಇಲ್ಲ. ಮತ್ತು ಗುತ್ತಿಗೆದಾರರು, ರಿಪೇರಿದಾರರು, ಕಾರ್‌ ಟೌವಿಂಗ್‌ ಸೇವೆಗಳ ಹೆಸರಿನಲ್ಲಿ ಹಗರಣ ನಡೆಯುತ್ತಿದೆ ಎಂಬುದು ಬಯಲಾಗಿದೆ. ವಾಲ್‌ ಸ್ಟ್ರೀಟ್‌ ಜರ್ನಲ್‌ ಈ ಬಗ್ಗೆ ವರದಿ ಬಿಡುಗಡೆ ಮಾಡಿದ್ದು, ಗೂಗಲ್‌ಗೆ ಎಚ್ಚರಿಕೆಯನ್ನು ನೀಡಿದೆ.

ಗೂಗಲ್‌ ವರದಿಯಂತೆ 0.5% ಸುಳ್ಳು

ಗೂಗಲ್‌ ವರದಿಯಂತೆ 0.5% ಸುಳ್ಳು

ಗೂಗಲ್‌ 2017ರಲ್ಲಿ ಸಂಶೋಧನೆ ಮಾಡಿದಂತೆ ಶೇ.0.5ರಷ್ಟು ಮಾತ್ರ ಸ್ಥಳೀಯ ಸರ್ಚಿಂಗ್‌ನಲ್ಲಿ ಸುಳ್ಳು ಮಾಹಿತಿಯಿದೆ ಎಂದು ಹೇಳಿತ್ತು. ಆದರೆ, ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿ ಬೇರೆಯದ್ದೇ ಆದ ಆಘಾತಕಾರಿ ಮಾಹಿತಿಯನ್ನು ನೀಡುತ್ತಿದೆ. ಇನ್ನು, ಈ ಬೆಳವಣಿಗೆಗೆ ಗೂಗಲ್‌ ತನ್ನದೇ ಆದ ವಿವರಣೆ ನೀಡುತ್ತಿದ್ದು, ಇದನ್ನು, ಗೂಗಲ್‌ನಲ್ಲಿ ಆಂತರಿಕವಾಗಿ 'ಡ್ಯುರೆಸ್ ವರ್ಟಿಕಲ್ಸ್' ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ವ್ಯವಹಾರದ ವಿಶ್ವಾಸಾರ್ಹತೆ ಪರಿಶೀಲನೆಗೆ ಹೆಚ್ಚಿನ ಸಮಯವಿಲ್ಲದಿರುವುದು ಇದಕ್ಕೆಲ್ಲಾ ಕಾರಣ ಎಂದಬುದು ಗೂಗಲ್ ವಾದ.

20ರಲ್ಲಿ 13 ಸುಳ್ಳು ವ್ಯವಹಾರ

20ರಲ್ಲಿ 13 ಸುಳ್ಳು ವ್ಯವಹಾರ

ವಾಲ್‌ ಸ್ಟ್ರೀಟ್‌ ಜರ್ನಲ್‌ ಅಧ್ಯಯನ ಗೂಗಲ್ ಮ್ಯಾಪ್ಸ್‌ನ ಸರ್ಚಿಂಗ್‌ ಪಟ್ಟಿಯಲ್ಲಿರುವ ಪ್ರತಿ 20 ವ್ಯವಹಾರಗಳಲ್ಲಿ 13 ವ್ಯವಹಾರಗಳು ಸುಳ್ಳು ಎಂದಿದೆ. ಇನ್ನು, ಈ 20 ವ್ಯವಹಾರಗಳಲ್ಲಿ ನಿಜವಾಗಿ ಗೂಗಲ್‌ ಮಾರ್ಗಸೂಚಿಯತೆ ವ್ಯವಹಾರ ನಡೆಸುವುದು ಕೇವಲ 2 ಎಂದರೆ ನಂಬಲೇಬೇಕು.

ಗೂಗಲ್ ಪರಿಶೀಲನೆ

ಗೂಗಲ್ ಪರಿಶೀಲನೆ

ಇನ್ನು, ಗೂಗಲ್‌ ಪತ್ರಗಳನ್ನು ಕಳುಹಿಸುವ ಮೂಲಕ, ಕರೆ, ಇಮೇಲ್ ಮಾಡುವ ಮೂಲಕ ವ್ಯವಹಾರಗಳ ವಿಶ್ವಾಸಾರ್ಹತೆಯನ್ನು ಪರಿಶೀಲಿಸುತ್ತಿದೆ. ಗೂಗಲ್‌ ವೆಬ್‌ಸೈಟ್‌ಗೆ ಒಟಿಪಿ ನಮೂದಿಸಿದ ನಂತರವೇ ಗೂಗಲ್‌ ಮ್ಯಾಪ್ಸ್‌ ಸರ್ಚ್‌ ಪಟ್ಟಿಯಲ್ಲಿ ವ್ಯವಹಾರಗಳಿಗೆ ಅವಕಾಶ ನೀಡುತ್ತಿದೆ. ಆದರೂ, ಹಗರಣಕಾರರು ನಕಲಿ ವಿಳಾಸ ಮತ್ತು ಫೋನ್‌ ಸಂಖ್ಯೆಯಿಂದ ನೈಜ ವ್ಯವಹಾರಗಳ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತಿದ್ದಾರೆ ಎಂದು ವರದಿ ಹೇಳಿದೆ.

ಮೈ ಬ್ಯುಸಿನೆಸ್ ಫೀಚರ್

ಮೈ ಬ್ಯುಸಿನೆಸ್ ಫೀಚರ್

ಗೂಗಲ್‌ ವಾಲ್‌ ಸ್ಟ್ರೀಟ್‌ ಜರ್ನಲ್ ವರದಿ ಬಂದ ದಿನವೇ ತನ್ನ ಮ್ಯಾಪ್ಸ್‌ ಸೇವೆಯಲ್ಲಿ ಮೈ ಬ್ಯುಸಿನೆಸ್‌ ಎಂಬ ಹೊಸ ಫೀಚರ್‌ಅನ್ನು ಪರಿಚಯಿಸಿದ್ದು, ಗ್ರಾಹಕರಿಗೆ ವ್ಯಾಪಾರಿಗಳು ರೀವಾರ್ಡ್ ನೀಡುವ ಆಯ್ಕೆ, ಕಂಪನಿ ಪ್ರೊಫೈಲ್‌ಗಳ ಕಸ್ಟಮೈಸ್‌ನಂತಹ ಆಯ್ಕೆಗಳನ್ನು ವ್ಯಾಪಾರಿಗಳಿಗೆ ನೀಡಿದೆ. ಇನ್ನು, ವಂಚನೆಯನ್ನು ತಡೆಯುವಲ್ಲಿ ಅನೇಕ ಕ್ರಮಗಳನ್ನು ಗೂಗಲ್ ಕೈಗೊಳ್ಳುತ್ತಿರುವುದ ಕೂಡ ವಂಚಕರಿಗೆ ಕಡಿವಾಣ ಹಾಕಲು ಸಹಾಯಕವಾಗಿದೆ.

Best Mobiles in India

English summary
Why Google Maps Is Dangerous For Some Users
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+