ನಿಮ್ಮ 'ವಾಟ್ಸ್ಆಪ್' ನಂಬರ್ ಬ್ಲಾಕ್ ಆಗಲು ಕಾರಣ ಏನು ಗೊತ್ತಾ?

|

'ನೀವು ಬಳಸುವ ವಾಟ್ಸ್ಆಪ್ ನಂಬರ್ ಮೇಲೆ ನಿಷೇಧ ಹೇರಲಾಗಿದೆ. ಸಹಾಯಕ್ಕಾಗಿ ನಮ್ಮ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಿ' ಎಂಬ ಈ ಸಂದೇಶ ಬಂದರೆ ನಿಮ್ಮ ವಾಟ್ಸ್ಆಪ್ ಖಾತೆಯ ಮೇಲೆ ಈಗ ನಿರ್ಬಂಧ ಹೇರಲಾಗಿದೆ ಎಂದರ್ಥ. ಅಂದರೆ, ನೀವು ವಾಟ್ಸ್ಆಪ್ ಖಾತೆಯನ್ನು ತೆರೆಯಲು ನೀಡಿದ್ದ ನಿಮ್ಮ ಮೊಬೈಲ್ ನಂಬರ್ ಅನ್ನು ವಾಟ್ಸ್ಆಪ್ ಕಂಪೆನಿ ಬ್ಲಾಕ್ ಮಾಡಿರುತ್ತದೆ. ಈ ರೀತಿಯಾಗಿ ನಿಷೇಧ ಹೇರಿದ ನಂತರ ನೀವು ವಾಟ್ಸ್ಆಪ್ ಸೇವೆಯನ್ನು ಬಳಸಲು ಸಾಧ್ಯವಿಲ್ಲ.

ಹೌದು, ಗಾಳಿಸುದ್ದಿಗಳು ಮತ್ತು ದ್ವೇಷ ಕೆರಳಿಸುವ ಸಂದೇಶಗಳ ಮೇಲೆ ನಿಗಾವಹಿಸುತ್ತಿರುವ ಸಾಮಾಜಿಕ ಜಾಲತಾಣಗಳಾದ ವಾಟ್ಸ್ಆಪ್, ಫೇಸ್‌ಬುಕ್, ಟ್ವಿಟರ್ ಮುಂತಾದ ತಾಣಗಳು ತಮ್ಮ ಸೇವೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿವೆ. ಬಳಕೆದಾರರ ಮೇಲೆ ನಿಗಾವಹಿಸುವಂತೆ ಕೇಂದ್ರ ಸರರ್ಕಾರದಿಂದ ಎಚ್ಚರಿಕೆಗಳು ರವಾನೆಯಾಗುತ್ತಲೇ ಇರುವುದರಿಂದ ಬಳಕೆದಾರರ ಸಣ್ಣ ತಪ್ಪುಗಳಿಗೂ ನಿರ್ಬಂಧ ಹೇರುವ ಕಟ್ಟುನಿಟ್ಟಿನ ಕ್ರಮಕ್ಕೆ ಈ ಎಲ್ಲಾ ಸಂಸ್ಥೆಗಳು ಗಟ್ಟಿ ನಿರ್ಧಾರ ಮಾಡಿವೆ.

ನಿಮ್ಮ 'ವಾಟ್ಸ್ಆಪ್' ನಂಬರ್ ಬ್ಲಾಕ್ ಆಗಲು ಕಾರಣ ಏನು ಗೊತ್ತಾ?

ಇದೇ ಕಾರಣಕ್ಕೆ ಈಗಾಗಲೇ ಸಾವಿರಾರು ಜನರ ಖಾತೆಗಳನ್ನು ನಿಷೇಧಿಸಿ ವಾಟ್ಸ್ಆಪ್ ಶಾಕ್ ನೀಡಿದೆ. ನಿಮಗೆ ಗೊತ್ತಾ?, ನಿಮ್ಮ ವಾಟ್ಸ್ಆಪ್ ಖಾತೆಯನ್ನು ಬ್ಯಾನ್ ಮಾಡಬೇಕಿದ್ದರೆ, ಬೇರೆ ಬಳಕೆದಾರರು ನಮ್ಮ ವಿರುದ್ಧ ದೂರು ನೀಡಲೇಬೇಕೆಂದೇನಿಲ್ಲ. ಕಾನೂನು-ವಿರೋಧಿ, ಅಶ್ಲೀಲ, ಮಾನಹಾನಿಕರ ಅಥವಾ ಬೆದರಿಕೆಯ ಸಂದೇಶಗಳನ್ನು ಕಳುಹಿಸುವುದು ಅಪರಾಧವಾಗಿದ್ದು,
ಅದರ ಬಳಕೆಯ ನಿಯಮಗಳನ್ನು ಉಲ್ಲಂಘಿಸಿದರೆ ಸಹ ನಿಮ್ಮ ಖಾತೆ ಬ್ಯಾನ್ ಆಗಬಹುದು.

ಇಷ್ಟು ಮಾತ್ರವಲ್ಲದೆ, ನಿಮ್ಮ ವಾಟ್ಸ್ಆಪ್ ಖಾತೆಯಿಂದ ಹಿಂಸೆಗೆ ಪ್ರಚೋದನೆ ನೀಡುವ ಯಾವುದೇ ಆಡಿಯೋ, ವೀಡಿಯೊ, ಪಠ್ಯ ಅಥವಾ ಇನ್ಯಾವುದೇ ರೂಪದ ಸಂದೇಶಗಳನ್ನು ಕಳುಹಿಸುವುದರಿಂದ ಖಾತೆ ಬ್ಯಾನ್ ಆಗಬಹುದು.ಅಂತೆಯೇ, ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿಇಲ್ಲದ ನಂಬರ್‌ಗಳಿಗೆ ಪದೇ ಪದೇ ಸಂದೇಶ ಕಳುಹಿಸುವುದು ಕೂಡ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂಬುದು ಇದೀಗ ನಿಮಗೆ ತಿಳಿದಿರಲಿ.

ನಿಮ್ಮ 'ವಾಟ್ಸ್ಆಪ್' ನಂಬರ್ ಬ್ಲಾಕ್ ಆಗಲು ಕಾರಣ ಏನು ಗೊತ್ತಾ?

ಇನ್ನು ಈ ಎಲ್ಲಾ ಅಂಶಗಳ ಜೊತೆಯಲ್ಲಿ, ಇತರರು ಕೂ ನಿಮ್ಮ ವಾಟ್ಸ್ಆಪ್ ಖಾತೆಯ ಮೇಲೆ ದೂರು ನೀಡಿ ನಿಷ್ಕ್ರಿಯವಾಗುವಂತೆ ಮಾಡಬಹುದು. ನಿಮ್ಮ ಫೋನ್ ಸಂಖ್ಯೆಯನ್ನು ನೀಡಿ, ನಿಮ್ಮ ವಾಟ್ಸ್ಆಪ್ ಖಾತೆಯಿಂದ ಕಿರಿಕಿರಿ ಮಾಡುವ ಅಥವಾ ಇನ್ಯಾವುದೇ ರೀತಿಯಲ್ಲಿ ಅಪಾಯಕಾರಿಯಾದ ಸಂದೇಶಗಳು ಬರುತ್ತಿವೆ ಅಂತ ವಾಟ್ಸ್ಆಪ್‌ಗೆ ದೂರು ಸಲ್ಲಿಸಿದರೆ ನಿಮ್ಮ ವಾಟ್ಸ್ಆಪ್ ಖಾತೆ ಬ್ಲಾಕ್ ಆಗಬಹುದು. ಆದರೆ, ಇದಕ್ಕೆ ದೂರುದಾರರು ಸ್ಪಷ್ಟ ದಾಖಲೆಯನ್ನು ಒದಗಿಸಬೇಕು.

Best Mobiles in India

English summary
Many WhatsApp users have blocked you in a short period. If many people prevent you from sending them messages. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X