ವಾಟ್ಸ್ ಆಪ್ ನ ಈ ಫೀಚರ್ ಅನುಪಯುಕ್ತವಾಗುವುದು ಹೇಗೆ ಗೊತ್ತಾ?

By Gizbot Bureau
|

ಇನ್ಸೆಂಟ್ ಮೆಸೇಜಿಂಗ್ ಆಪ್ ವಾಟ್ಸ್ ಆಪ್ ಹೊಸ ಫೀಚರ್ ನ್ನು ಬಿಡುಗಡೆಗೊಳಿಸಿದೆ. ಈ ಫೀಚರ್ ಕಾಂಟ್ಯಾಕ್ಟ್ ನ ಪ್ರೊಫೈಲ್ ಪಿಕ್ಚರ್ ಮೀಡಿಯಾ ಲೈಬ್ರರಿಯಲ್ಲಿ ಸೇವ್ ಆಗುವುದನ್ನು ಡಿಸೇಬಲ್ ಮಾಡುವ ಅವಕಾಶವನ್ನು ನೀಡುತ್ತದೆ. ಹಾಗಂತ ಯಾರೂ ಬೇಕಿದ್ದರೂ ನಿಮ್ಮ ಪ್ರೊಫೈಲ್ ಪಿಕ್ಚರ್ ಪಡೆದುಕೊಳ್ಳಲು ಸಾಧ್ಯವಿಲ್ಲವೇ ಎಂದು ಕೇಳಿದರೆ ಅದಕ್ಕೆ ಉತ್ತರ ಸಾಧ್ಯ ಎಂಬುದೇ ಆಗಿದೆ. ಹಾಗಾಗಿ ಈ ಫೀಚರ್ ಇದ್ದರೂ ಕೂಡ ಪ್ರಯೋಜನಕ್ಕೆ ಇಲ್ಲದಂತಾಗುವ ಸಾಧ್ಯತೆ ನಿಚ್ಚಳವಾಗಿದೆ.

ಯಾವ ವರ್ಷನ್ ನಲ್ಲಿ ಲಭ್ಯ:

ಯಾವ ವರ್ಷನ್ ನಲ್ಲಿ ಲಭ್ಯ:

ವಾಟ್ಸ್ ಆಪ್ ನ ಮುಂಬರುವ ಎಲ್ಲಾ ಫೀಚರ್ ಗಳ ಬಗ್ಗೆ ಮಾಹಿತಿ ಕಲೆಹಾಕುವ ಆನ್ ಲೈನ್ ಪೋರ್ಟಲ್ ವಾಬೇಟಾಇನ್ಫೋ ಮಾಡಿರುವ ಟ್ವೀಟ್ ನಲ್ಲಿ ಈ ಫೀಚರ್ ಆಂಡ್ರಾಯ್ಡ್ ಬೇಟಾ ವರ್ಷನ್ 2.19.319 ನಲ್ಲಿ ಡಿಸೇಬಲ್ ಆಯ್ಕೆ ಇದೆ ಎಂದು ಹೇಳಿದೆ ಇನ್ನು ವಾಟ್ಸ್ ಆಪ್ ಬ್ಯುಸಿನೆಸ್ ಬೇಟಾ ಐಓಎಸ್ 2.19.60.5 ನಲ್ಲೂ ಲಭ್ಯವಿದೆ ಎಂದು ತಿಳಿಸಿದೆ.

ಈ ಫೀಚರ್ ನ್ನು ಬಿಡುಗಡೆಗೊಳಿಸುವ ಮುನ್ನ ವಾಟ್ಸ್ ಆಪ್ "ಶೇರ್" ಐಕಾನ್ ನ್ನು ಕಾಂಟ್ಯಾಕ್ಟ್ ಪ್ರೊಫೈಲ್ ಪಿಕ್ಚರ್ ನಲ್ಲಿ ತೋರಿಸುತ್ತಿತ್ತು. ಅದನ್ನು ಟ್ಯಾಪ್ ಮಾಡುವ ಮೂಲಕ ವಾಟ್ಸ್ ಆಪ್ ಬಳಕೆದಾರರು ಪ್ರೊಫೈಲ್ ಪಿಕ್ಚರ್ ನ್ನು ಸ್ಮಾರ್ಟ್ ಫೋನಿನ ಗ್ಯಾಲರಿಯಲ್ಲಿ ಸೇವ್ ಮಾಡುವ ಅಥವಾ ಸೋಷಿಯಲ್ ಮೀಡಿಯಾ ಚಾನಲ್ ಗಳಲ್ಲಿ ಹಂಚಿಕೊಳ್ಳುವ ಅವಕಾಶವನ್ನು ನೀಡುತ್ತಿತ್ತು.

ಸ್ಕ್ರೀನ್ ಶಾಟ್ ಗೆ ಅವಕಾಶ:

ಸ್ಕ್ರೀನ್ ಶಾಟ್ ಗೆ ಅವಕಾಶ:

ಇದೀಗ ವಾಟ್ಸ್ ಆಪ್ ಈ ಐಕಾನ್ ನ್ನು ಸಂಪೂರ್ಣವಾಗಿ ರಿಮೂವ್ ಮಾಡಿದೆ. ಗ್ರೂಪ್ ಐಕಾನಿನ ಕೇಸ್ ನಲ್ಲೂ ಕೂಡ ರಿಮೂವ್ ಮಾಡಲಾಗಿದೆ. ಆದರೆ, ಕಾಂಟ್ಯಾಕ್ಟ್ ನ ಸ್ಕ್ರೀನ್ ಶಾಟ್ ತೆಗೆದುಕೊಳ್ಳುವ ಆಯ್ಕೆಯು ಇನ್ನೂ ಕೂಡ ಹಾಗೆಯೇ ಲಭ್ಯವಿದೆ. ಸ್ಕ್ರೀನ್ ಶಾಟ್ ಮೂಲಕ ಬಳಕೆದಾರರು ಈಗಲೂ ಕೂಡ ಫೋಟೋವನ್ನು ತಮ್ಮ ಸ್ಮಾರ್ಟ್ ಫೋನಿನಲ್ಲಿ ಸೇವ್ ಮಾಡಿಕೊಳ್ಳುವ ಅವಕಾಶವಿದೆ.

ಫೀಚರ್ ನ ಉದ್ದೇಶ ಈಡೇರಿಲ್ಲ:

ಫೀಚರ್ ನ ಉದ್ದೇಶ ಈಡೇರಿಲ್ಲ:

ಸದ್ಯ ಬೇಟಾ ವರ್ಷನ್ ನಲ್ಲಿ ಲಭ್ಯವಾಗಿರುವ ಫೀಚರ್ ಮುಂದಿನ ದಿನಗಳಲ್ಲಿ ಎಲ್ಲಾ ವಾಟ್ಸ್ ಆಪ್ ಬಳಕೆದಾರರಿಗೂ ಕೂಡ ಲಭ್ಯವಾಗುತ್ತದೆ. ಡಿಸೇಬಲ್ ಮಾಡುವ ಮೂಲಕ ಈ ಫೀಚರ್ ನ ನಿಜವಾದ ಉದ್ದೇಶವು ಸಂಪೂರ್ಣವಾಗಿ ಈಡೇರದ ಹಿನ್ನೆಲೆಯಲ್ಲಿ ವಾಟ್ಸ್ ಆಪ್ ಈ ಫೀಚರ್ ನ್ನು ಹಿಂಪಡೆಯುವ ಸಾಧ್ಯತೆಯನ್ನು ಕೂಡ ತಳ್ಳಿಹಾಕುವಂತಿಲ್ಲ.

ಎಮೋಜಿ ರಿಡಿಸೈನ್:

ಇತ್ತೀಚೆಗೆ ವಾಟ್ಸ್ ಆಪ್ 155 ಎಮೋಜಿಯನ್ನು ಆಂಡ್ರಾಯ್ಡ್ ಬೇಟಾ ಬಳಕೆದಾರರಿಗಾಗಿ ರಿಡಿಸೈನ್ ಮಾಡಿ ಬಿಡುಗಡೆಗೊಳಿಸಿದೆ ಎಂದು ವರದಿ ಮಾಡಲಾಗಿತ್ತು. ಆಪ್ ವರ್ಷನ್ 2.19.139 ನಲ್ಲಿ ವಾಟ್ಸ್ ಆಪ್ ಬಳಕೆದಾರರು ಈ ರಿಡಿಸೈನ್ ಮಾಡಲಾಗಿರುವ ಎಮೋಜಿಗಳನ್ನು ಆಕ್ಸಿಸ್ ಮಾಡಲು ಅವಕಾಶವಿದೆ ಎಂಬುದಾಗಿ ವಾಬೇಟಾಇನ್ಫೋ ಹೇಳಿತ್ತು. ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ಎಲ್ಲಾ ಎಮೋಜಿಗಳನ್ನು ರಿಡಿಸೈನ್ ಮಾಡಿಲ್ಲ ಆದರೆ ಕೆಲವು ಎಮೋಜಿಗಳನ್ನು ರಿಡಿಸೈನ್ ಮಾಡಿದೆ ಮತ್ತು ಕೆಲವು ಎಮೋಜಿಗಳಿಗೆ ಕೆಲವೇ ಕೆಲವು ಬದಲಾವಣೆಗಳನ್ನು ಮಾಡಿದೆ.

ನೈಟ್ ಮೋಡ್:

ಇದರ ಜೊತೆಗೆ ವಾಬೇಟಾಇನ್ಫೋ ನೈಟ್ ಮೋಡ್ ನ್ನು ಕೂಡ ವಾಟ್ಸ್ ಆಪ್ ಟೆಸ್ಟಿಂಗ್ ನಡೆಸುತ್ತಿದ್ದು ಕೆಲವೇ ದಿನಗಳಲ್ಲಿ ಆಪ್ ನಲ್ಲಿ ಈ ವೈಶಿಷ್ಟ್ಯತೆಯನ್ನು ನಿರೀಕ್ಷೆ ಮಾಡಬಹುದು ಎಂದು ತಿಳಿಸಿದೆ.

Best Mobiles in India

Read more about:
English summary
Why this useful sounding WhatsApp feature maybe completely useless

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X