2020ರಲ್ಲಿ ಬದಲಾಗಲಿದೆ ವೈ-ಫೈ..! ಬರಲಿದೆ ವೇಗದ ವೈ-ಫೈ 6..!

|

ಮುಂದಿನ ಪೀಳಿಗೆಯ ವೈರ್‌ಲೆಸ್‌ ತಂತ್ರಜ್ಞಾನ ವೈ-ಫೈ 6 ಈ ವರ್ಷ ಅಂದರೆ, 2019ರಲ್ಲಿ ಪರಿಚಯಿಸಲಾಗಿದೆ, ಆದರೆ, ವೈ-ಫೈ 6ನ ಪರಿಣಾಮವನ್ನು 2020ರಲ್ಲಿ ನೋಡಬಹುದಾಗಿದೆ. ಸಿಎನ್‌ಇಟಿ ವರದಿ ಪ್ರಕಾರ, ಹೊಸ ಆವೃತ್ತಿ ವೈ-ಫೈ ರೂಟರ್ಸ್‌ ಮತ್ತು ಅದನ್ನು ಬೆಂಬಲಿಸುವ ಕ್ಲೈಂಟ್ ಸಾಧನಗಳಿಂದ ವೇಗದ ಹಾಗೂ ಹೆಚ್ಚು ಪರಿಣಾಮಕಾರಿಯಾದ ಕಾರ್ಯಕ್ಷಮತೆ ನೀಡುತ್ತದೆ.

ಆಪಲ್

ಈಗಾಗಲೇ ಆಪಲ್ (ಐಫೋನ್ 11 ಸರಣಿ) ಮತ್ತು ಸ್ಯಾಮ್‌ಸಂಗ್ (ನೋಟ್ 10 ಸರಣಿ) ವೈ-ಫೈ 6 ಅನ್ನು ಬೆಂಬಲಿಸುತ್ತಿವೆ. 2020ರಲ್ಲಿ ವೈ-ಫೈ 6 ಗ್ರಾಹಕರ ಬಳಕೆಗೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ತಜ್ಞರು ಇದ್ದಾರೆ. ಜನವರಿ ಮೊದಲ ವಾರದಲ್ಲಿ ಆಯೋಜಿಸಲ್ಪಟ್ಟಿರುವ ಸಿಇಎಸ್ 2020ರಲ್ಲಿ, ವೈ-ಫೈ 6 ಅನ್ನು ಬೆಂಬಲಿಸುವ ಹಲವು ಸಾಧನಗಳನ್ನು ಅನಾವರಣಗೊಳಿಸುವ ನಿರೀಕ್ಷೆ ಇದೆ.

MU-MIMOಗೆ ಬೆಂಬಲ

MU-MIMOಗೆ ಬೆಂಬಲ

ಡಿಜಿಟಲ್ ಟ್ರೆಂಡ್‌ಗಳ ಹಿಂದಿನ ವರದಿಯ ಪ್ರಕಾರ, MU-MIMO ತಂತ್ರಜ್ಞಾನಗಳಿಗೆ ವೈ-ಫೈ 6 ಬೆಂಬಲ ನೀಡುತ್ತದೆ, MU-MIMO ಎಂಬುದು ಮೊಬೈಲ್ ಸಾಧನಗಳೊಂದಿಗೆ ಸಂಪರ್ಕ ಸುಧಾರಿಸುವ ತಂತ್ರಜ್ಞಾನವಾಗಿದೆ. ವೈ-ಫೈ 6 ಕೂಡ ಹೆಚ್ಚು ವೇಗದಿಂದ ಕೂಡಿದ್ದು, ಮನೆಗಳು ಅಥವಾ ಕಚೇರಿಗಳಲ್ಲಿ ವೈ-ಫೈ ಸಂಪರ್ಕ ಗರಿಷ್ಠ ಮಟ್ಟದಲ್ಲಿರುವಂತೆ ವೈ-ಫೈ 6 ಪರಿಹರಿಸುತ್ತದೆ ಎನ್ನಲಾಗಿದೆ.

ಬೀಮ್‌ಫಾರ್ಮಿಂಗ್‌

ಬೀಮ್‌ಫಾರ್ಮಿಂಗ್‌

ಬಹು ವರದಿಗಳ ಪ್ರಕಾರ, ವರ್ಧಿತ ಬೀಮ್‌ಫಾರ್ಮಿಂಗ್‌ ಸಾಮರ್ಥ್ಯಗಳೊಂದಿಗೆ ವೈ-ಫೈ 6 ಬರುತ್ತದೆ. ಸಾಧನಗಳು ಸಂಪರ್ಕ ಸಮಸ್ಯೆ ಎದುರಿಸುತ್ತಿದ್ದರೆ ನಿರ್ದಿಷ್ಟ ಸಾಧನಗಳಲ್ಲಿ ಸಂಕೇತಗಳನ್ನು ಕಳುಹಿಸಲು ರೂಟರ್ ಬೀಮ್‌ಫಾರ್ಮಿಂಗ್‌ ವಿಧಾನವನ್ನು ಬಳಸುತ್ತದೆ. ವೈ-ಫೈ 6 ಬೀಮ್‌ಫಾರ್ಮಿಂಗ್ ಅನ್ನು ಸುಧಾರಿಸುವುದರಿಂದ ಉತ್ತಮ ವೇಗದ ಸಂಪರ್ಕ ಹೊಂದಿರುತ್ತದೆ.

ಸುಧಾರಿತ ಬ್ಯಾಟರಿ ಬಾಳಿಕೆ

ಸುಧಾರಿತ ಬ್ಯಾಟರಿ ಬಾಳಿಕೆ

ವೈ-ಫೈ 6 ತರುವ ಇತರ ದೊಡ್ಡ ಅಪ್‌ಗ್ರೇಡ್ ಎಂದರೆ ಬ್ಯಾಟರಿ ಬಾಳಿಕೆಯ ಸುಧಾರಣೆ. ಟಿಡಬ್ಲ್ಯೂಟಿ ಅಥವಾ ಟಾರ್ಗೆಟ್ ವೇಕ್ ಟೈಮ್ ಎಂಬ ಹೊಸ ತಂತ್ರಜ್ಞಾನವನ್ನು ವೈ-ಫೈ 6 ಬೆಂಬಲಿಸುತ್ತದೆ. ವೈ-ಫೈ ಸಂಪರ್ಕಿತ ಸಾಧನಗಳು ವೈ-ಫೈ ಸಂಕೇತಗಳನ್ನು ಪಡೆಯಲು ಹೇಗೆ ಮತ್ತು ಯಾವಾಗ ಎಚ್ಚರಗೊಳ್ಳಬಹುದು ಎಂಬುದನ್ನು ಕಸ್ಟಮೈಸ್ ಮಾಡಲು ಈ ತಂತ್ರಜ್ಞಾನ ಸಹಾಯ ಮಾಡುತ್ತದೆ. ಸಾಧನಕ್ಕೆ ವೈ-ಫೈ ಸಂಪರ್ಕ ಅಗತ್ಯವಿಲ್ಲದಿದ್ದರೆ ಸಿಗ್ನಲ್‌ ರವಾನೆಯಾಗುವುದಿಲ್ಲ, ಇದು ಅನಗತ್ಯವಾಗಿ ಬಳಸಲಾಗುವ ಬಹಳಷ್ಟು ಬ್ಯಾಟರಿ ಉಳಿಕೆಗೆ ಕಾರಣವಾಗುತ್ತದೆ.

Most Read Articles
Best Mobiles in India

English summary
According to a report by CNET, “the new standard promises faster, more efficient performance from Wi-Fi routers and client devices that support it." to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X