ವನ್ಯಜೀವಿ ಜಗತ್ತು ತಿಳಿಯಲು ಅಂಗೈಯಲ್ಲಿ ಈ ಆಪ್‌ಗಳು ಇದ್ದರೆ ಸಾಕು..!

|

ಭಾರತದಲ್ಲಿ ವನ್ಯಜೀವಿ ಪ್ರವಾಸೋದ್ಯಮ ಬಹಳ ವೇಗವಾಗಿ ಬೆಳಯುತ್ತಿದೆ. ವೈವಿಧ್ಯತೆಗೆ ಹೆಸರಾಗಿರುವ ಭಾರತೀಯ ವನ್ಯಜೀವಿ ಪ್ರಪಂಚ ನಾಲ್ಕೂ ದಿಕ್ಕಿನಲ್ಲೂ ವಿಭಿನ್ನತೆಯನ್ನು ಹೊಂದಿದೆ. ಆದ್ದರಿಂದಲೇ ಭಾರತವು ವಿಶ್ವ ವನ್ಯಜೀವಿ ಭೂಪಟದಲ್ಲಿ ಹೆಗ್ಗುರುತನ್ನು ಸೃಷ್ಟಿಸಿದೆ. ಭಾರತದಲ್ಲಿ ರಾಯಲ್‌ ಬೆಂಗಾಲ್‌ ಟೈಗರ್‌, ಭಾರತೀಯ ಆನೆಗಳು, ರೈನೋಸ್‌ನಂತಹ ವಿಶೇಷ ಪ್ರಾಣಿ ಸಂಕುಲವನ್ನು ಭಾರತ ಹೊಂದಿದೆ. ಇನ್ನು ಪಶ್ಚಿಮ ಘಟ್ಟ ಹಾಗೂ ಹಿಮಾಲಯ ಪರ್ವತಗಳನ್ನು ಗಮನಿಸಿದರೆ ನಿಮಗೆ ಗೊತ್ತಿರದ ವಿಶಿಷ್ಟವಾದ ಪ್ರಾಣಿ ಪ್ರಭೇದಗಳು ಕೂಡ ದೊರೆಯುತ್ತವೆ.

ವನ್ಯಜೀವಿ ಜಗತ್ತು ತಿಳಿಯಲು ಅಂಗೈಯಲ್ಲಿ ಈ ಆಪ್‌ಗಳು ಇದ್ದರೆ ಸಾಕು..!

ಈ ವಿಭಿನ್ನ ಪ್ರಾಣಿ ಸಂಕುಲದಿಂದ ಭಾರತದಲ್ಲಿ ವನ್ಯಜೀವಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ. ಈ ವನ್ಯಜೀವಿ ಪ್ರವಾಸಿಗರಿಗೆ ಹಲವು ಆಪ್‌ಗಳು ಭಾರತೀಯ ವನ್ಯಜೀವಿಗಳ ಪ್ರಪಂಚವನ್ನು ಪರಿಚಯಿಸುವ ಕಾರ್ಯಗಳನ್ನು ಮಾಡುತ್ತಿವೆ. ಅದರಂತೆ ನೀವು ಶೀಘ್ರದಲ್ಲಿಯೇ ಯಾವುದಾದರೂ ಅಭಯಾರಣ್ಯಕ್ಕೆ ಭೇಟಿ ನೀಡಲು ಅಥವಾ ವನ್ಯಜೀವಿ ಪ್ರವಾಸದ ಭಾಗವಾಗಿ ಯಾವುದಾದರೂ ಕಾಡಿಗೆ ಹೋಗುತ್ತೇನೆ ಎಂದುಕೊಂಡರೆ ನಿಮಗೆ ದಾರಿ ತೋರಿಸಲು, ಮಾಹಿತಿ ನೀಡಲು ಮಾರ್ಗದರ್ಶಿಗಳಾಗಿ ಕೆಲಸ ಮಾಡುತ್ತವೆ. ಅಂತಹ ವನ್ಯಜೀವಿಗಳಿಗೆ ಸಂಬಂಧಿಸಿದ ಆಪ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಅವುಗಳ ಬಗ್ಗೆ ಒಂದು ಕ್ವಿಕ್‌ ಲುಕ್‌ ನೋಡ್ಕೊಂಡು ಬನ್ನಿ..

WildTrails

WildTrails

WildTrails ಆಪ್‌ ಭಾರತದಲ್ಲಿ ವನ್ಯಜೀವಿ ಪ್ರವಾಸೋದ್ಯಮ ಮಾಡುವವರಿಗೆ ಹೇಳಿ ಮಾಡಿಸಿದ ಆಪ್‌ ಆಗಿದೆ. ಪ್ರವಾಸಕ್ಕೆ ಬೇಕಾದ ಅಗತ್ಯ ಸೂಚನೆಗಳನ್ನು ನೀಡುವ ಪರಿಪೂರ್ಣ ಮೊಬೈಲ್ ಅಪ್ಲಿಕೇಶನ್ ಆಗಿದೆ. ಈ ಆಪ್‌ನಲ್ಲಿ ಭಾರತದ ಎಲ್ಲಾ ಅಭಯಾರಣ್ಯಗಳು, ಹುಲಿ ಮೀಸಲು ಪ್ರದೇಶ ಮತ್ತು ಪಕ್ಷಿಧಾಮಗಳು ಸೇರಿದಂತೆ ರಾಷ್ಟ್ರೀಯ ಉದ್ಯಾನವನಗಳು ಸೇರಿ 450ಕ್ಕೂ ಹೆಚ್ಚು ವನ್ಯಜೀವಿ ಸ್ಥಳಗಳ ಇತಿಹಾಸ, ಭೌಗೋಳಿಕತೆ ಮತ್ತು ಅಲ್ಲಿರುವ ಪ್ರಾಣಿಗಳ ಕುರಿತ ವಿವರಣಾತ್ಮಕ ಮಾಹಿತಿ ದೊರೆಯುತ್ತದೆ.

ಹುಲಿಗಳನ್ನು ನೋಡುವ ಸಮಯ, ಗೈಡ್‌ಗಳು ಮತ್ತು ಪರಿಸರವಾದಿಗಳ ಮಾಹಿತಿ, ಹವಾಮಾನ ವಿವರಣೆ, ಅಭಯಾರಣ್ಯದ ಜತೆ ಅಲ್ಲಿನ ಪ್ರಸಿದ್ಧ ಪ್ರಾಣಿಗಳ ಚಿತ್ರಗಳು ಮತ್ತೀತರ ಮಾಹಿತಿಯನ್ನು ನೀಡುತ್ತದೆ. ಅದಲ್ಲದೇ, ವನ್ಯಜೀವಿಗಳಿಗೆ ಸಂಬಂಧಿಸಿದ ಸುದ್ದಿಗಳು, ಲೇಖನಗಳನ್ನು ಒದಗಿಸುತ್ತದೆ. ಮತ್ತು ಕ್ಯಾಮೆರಾ, ಲೆನ್ಸ್‌ ಸೇರಿದಂತೆ ವನ್ಯಜೀವಿ ಪ್ರವಾಸಕ್ಕೆ ಬೇಕಾದ ಸಲಕರಣೆಗಳನ್ನು ಇಲ್ಲಿ ಬಾಡಿಗೆಗೆ ತಗೆದುಕೊಳ್ಳಬಹುದು ಅಥವಾ ಖರೀದಿಸಬಹುದು. ಈ ಆಪ್‌ Android ಮತ್ತು iOS ಸಾಧನಗಳಿಗೆ ಲಭ್ಯವಿದ್ದು, ಬಳಕೆದಾರರು ಡೌನ್‌ಲೋಡ್‌ ಮಾಡಬಹುದು.

Indiawilds

Indiawilds

Indiawilds ಆಪ್‌ ಭಾರತದ ಭವ್ಯ ವನ್ಯಜೀವಿ ಪರಿಚಯವನ್ನು ಚಿತ್ರಗಳು, ವಿಡಿಯೋಗಳು, ಶಬ್ಧಗಳು, ಲೇಖನಗಳು ಮತ್ತು ಪ್ರವಾಸಿಗರ ಪೋಸ್ಟ್‌ಗಳ ಮೂಲಕ ಮಾಡಿಸುತ್ತದೆ. ಈ ಮಾಹಿತಿಯು ಭಾರತದಲ್ಲಿ ವನ್ಯಜೀವಿಗಳ ಕುರಿತು ಪ್ರವಾಸ ಅಥವಾ ಅಧ್ಯಯನ ಕೈಗೊಳ್ಳುವವರಿಗೆ ವನ್ಯಜೀವಿಗಳು ಮತ್ತು ವನ್ಯಜೀವಿಗಳ ವರ್ತನೆಗಳ ಕುರಿತು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಅದಲ್ಲದೇ ಫೋಟೋಗ್ರಾಫಿಯಲ್ಲಿ ಆಸಕ್ತಿ ಹೊಂದಿದ್ದರೆ ಈ ಆಪ್‌ ಮೂಲಕ ಬೇಸಿಕ್‌ ವನ್ಯಜೀವಿ ಛಾಯಾಗ್ರಹಣವನ್ನು ಈ ಆಪ್‌ ಮೂಲಕ ಕಲಿಯಬಹುದು. ಈ ಆಪ್‌ Android ಸಾಧನಗಳಿಗೆ ಲಭ್ಯವಿದೆ.

Wildlife Sanctuaries of India

Wildlife Sanctuaries of India

Wildlife Sanctuaries of India ಆಪ್‌ ಭಾರತದ ಪ್ರಾಣಿ ಸಂಗ್ರಹಾಲಯಗಳನ್ನು ಭೇಟಿ ನೀಡುವ ಪ್ರವಾಸಿಗರಿಗೆ ಹೆಚ್ಚು ಉಪಯುಕ್ತವಾಗುತ್ತದೆ. ಭಾರತವು 442 ಅಭಯಾರಣ್ಯಗಳನ್ನು ಹೊಂದಿದ್ದು, ಪ್ರಾಣಿ ಪ್ರಿಯರಿಗೆ ನೆಚ್ಚಿನ ತಾಣವಾಗಿದೆ. ಭಾರತದ ಅಭಯಾರಣ್ಯಗಳ ಕುರಿತ ಮಾಹಿತಿಯನ್ನು ಪಡೆದುಕೊಳ್ಳಲು ಈ ಅಪ್ಲಿಕೇಷನ್‌ನ್ನು ಪ್ರವಾಸಿಗರು ಬಳಸಬಹುದು. ಅದಲ್ಲದೇ ಅಭಯಾರಣ್ಯಗಳನ್ನು ಹುಡುಕಲು ಮಾರ್ಗದರ್ಶಕನಾಗಿಯೂ ಈ ಆಪ್‌ ನಿಮಗೆ ದಾರಿದೀಪವಾಗುತ್ತದೆ. ಈ ಆಪ್‌ ಕೂಡ Android ಸಾಧನಗಳಿಗೆ ಲಭ್ಯವಿದೆ.

India Jungle Lodges

India Jungle Lodges

ವನ್ಯಜೀವಿ ಪ್ರವಾಸಿಗರನ್ನು ಅರಣ್ಯ ಸಾಹಸಿಗರು ಮತ್ತು ವೃತ್ತಿನಿರತರ ಜೊತೆ ಸಂಪರ್ಕಿಸುವ ವಿಶಿಷ್ಟ ಮೊಬೈಲ್ ಅಪ್ಲಿಕೇಶನ್ India Jungle Lodges ಆಗಿದೆ. ಆಪ್‌ನಲ್ಲಿರುವ ವೃತ್ತಪರರು ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಪ್ರವಾಸಿಗರಿಗೆ ತಿಳಿಸಿಕೊಟ್ಟು, ಕಾಡಿನ ಆಕರ್ಷಕ ರಹಸ್ಯಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತಾರೆ. ಅದಲ್ಲದೇ ಈ ಆಪ್‌ ಮೂಲಕ ವನ್ಯಜೀವಿಗಳನ್ನು ರಕ್ಷಿಸುವಂತೆ ಪ್ರವಾಸಿಗರಿಗೆ ಅರಿವು ಮೂಡಿಸಿ, ವೃತ್ತಿಪರರು ಪ್ರೋತ್ಸಾಹಿಸುತ್ತಾರೆ. ಈ ಆಪ್‌ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಲಭ್ಯವಿದೆ.

ಈ ಆಪ್‍ಗಳು ನಿಮ್ಮ ಮೊಬೈಲ್‍ನಲ್ಲಿದ್ದರೆ ಸರ್ಕಾರಿ ಸೇವೆಗಳೆಲ್ಲಾ ನಿಮ್ಮ ಬೆರಳ ತುದಿಯಲ್ಲಿ..!

ಈ ಆಪ್‍ಗಳು ನಿಮ್ಮ ಮೊಬೈಲ್‍ನಲ್ಲಿದ್ದರೆ ಸರ್ಕಾರಿ ಸೇವೆಗಳೆಲ್ಲಾ ನಿಮ್ಮ ಬೆರಳ ತುದಿಯಲ್ಲಿ..!

ಡಿಜಿಟಲ್ ಇಂಡಿಯಾದ ಸಾಕಾರಕ್ಕಾಗಿ ಸರ್ಕಾರ ಸಾರ್ವಜನಿಕರಿಗಾಗಿ ಹೊಸ ಹೊಸ ಆಪ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚೆಗೆ ತಾನೇ ಎಂಪಾಸ್‌ಪೋರ್ಟ್‌ ಸೇವಾ ಆಪ್‌ನ್ನು ಅಪ್‌ಡೇಟ್ ಮಾಡಿದ್ದ ಕೇಂದ್ರ ಸರ್ಕಾರ ಎಲ್ಲಿಂದ ಬೇಕಾದರೂ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಅವಕಾಶ ನೀಡಿತ್ತು. ಅದೇ ರೀತಿ ಚುನಾವಣಾ ಆಯೋಗ ಕೂಡ ಸಿವಿಜಿಲ್ ಎಂಬ ಆಪ್ ಬಿಡುಗಡೆ ಮಾಡಿ ಚುನಾವಣೆ ಸಮಯದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿತ್ತು.

ಇದೇ ರೀತಿ ಸರ್ಕಾರ ಮತ್ತು ಸಾರ್ವಜನಿಕರ ಮಧ್ಯೆ ಸೇತುವೆಯಂತೆ ಅನೇಕ ಆಪ್‌ಗಳು ಕೆಲಸ ಮಾಡುತ್ತವೆ. ಎಲ್ಲಾ ಇಲಾಖೆಗಳು ತಮ್ಮ ಸೇವೆಗಳನ್ನು ಜನರ ಬಳಿ ತಲುಪಿಸಲು ಆಪ್‌ಗಳ ಮೊರ ಹೋಗುತ್ತಿವೆ. ಯಾಕಂದ್ರೇ, ಸದ್ಯ ಎಲ್ಲರ ಬಳಿ ಸ್ಮಾರ್ಟ್‌ಫೋನ್‌ಗಳು ಇದ್ದೇ ಇರುವುದರಿಂದ ಸಾರ್ವಜನಿಕ ಸೇವೆಗಳು ಜನಕ್ಕೆ ವೇಗವಾಗಿ, ಪಾರದರ್ಶಕವಾಗಿ ತಲುಪಲಿ ಎಂಬ ಕಳಕಳಿ ಹೊಂದಿವೆ. ಒಂದು ಬಾರಿ ಈ ಕೆಳಗೆ ನೀಡಿದ 20 ಸರ್ಕಾರದ ಉಪಯುಕ್ತ ಆಪ್‌ಗಳನ್ನು ಇನ್ಸ್ಟಾಲ್ ಮಾಡಿಕೊಂಡು ನೋಡಿ. ಯಾವಾಗಾದರೂ ಅಗತ್ಯ ಕಾರ್ಯಕ್ಕೆ ಆದರೂ ಆಗಬಹುದು.

1. ಇಂಡಿಯನ್ ಪೊಲೀಸ್ ಆನ್ ಕಾಲ್ ಆಪ್ Indian Police on Call app

1. ಇಂಡಿಯನ್ ಪೊಲೀಸ್ ಆನ್ ಕಾಲ್ ಆಪ್ Indian Police on Call app

ಹೆಸರೇ ಹೇಳುವಂತೆ ಸಾರ್ವಜನಿಕರಿಗೆ ಹತ್ತಿರದ ಪೊಲೀಸ್ ಠಾಣೆಯನ್ನು ಹುಡುಕಿ ಕೊಡುತ್ತದೆ. ಹತ್ತಿರದ ಪೊಲೀಸ್ ಠಾಣೆ ತಲುಪಲು ಬೇಕಾದ ಮಾರ್ಗ, ದೂರವನ್ನು ಗೂಗಲ್ ಮ್ಯಾಪ್‌ನಂತೆ ತೋರಿಸುತ್ತದೆ. ಜಿಲ್ಲಾ ಕಂಟ್ರೋಲ್ ರೂಂ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಪೋನ್ ಸಂಖ್ಯೆಯನ್ನು ಬಳಕೆದಾರರಿಗೆ ತೋರಿಸುತ್ತದೆ. ಅಗತ್ಯವಿದ್ದಾಗ ಒಂದು ಪೋನ್ ಕರೆ ಬಹಳಷ್ಟು ಉಪಯುಕ್ತವಾಗುತ್ತದೆ.

2. ಇಪಾಠಶಾಲಾ ಆಪ್ ePathshala app

2. ಇಪಾಠಶಾಲಾ ಆಪ್ ePathshala app

ಈ ಆಪ್‌ನ್ನು ಮಾನವ ಸಂಪನ್ಮೂಲ ಇಲಾಖೆ ಮತ್ತು ಎನ್‌ಸಿಇಆರ್‌ಟಿ ಸಂಯೋಜನೆಯಲ್ಲಿ ರೂಪಿಸಲಾಗಿದೆ. ಎಲೆಕ್ಟ್ರಾನಿಕ್ ಪುಸ್ತಕಗಳನ್ನು ಮೊಬೈಲ್ ಪೋನ್‌ಗಳಲ್ಲಿ, ಟ್ಯಾಬ್ಲೆಟ್‌ಗಳಲ್ಲಿ ಮತ್ತು ಡೆಸ್ಕ್‌ಟಾಪ್‌ಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಚಕರು ಈ ಆಪ್ ಮೂಲಕ ಅಕ್ಸೇಸ್ ಪಡೆಯಬಹುದು. ಇದರಿಂದ ಡಿವೈಸ್ ಸ್ಟೊರೇಜ್‌ಗನುಗುಣವಾಗಿ ಒಬ್ಬ ವ್ಯಕ್ತಿ ಎಷ್ಟು ಪುಸ್ತಕಗಳನ್ನು ಬೇಕಾದರೂ ಹೊಂದಿರಬಹುದು. ಇಪಾಠಶಾಲಾ ಆಪ್‌ನಲ್ಲಿ ಪಿಂಚ್, ಗುರುತಿಸುವ, ಹೈಲೈಟ್‌ ಮಾಡುವ ಮತ್ತು ಟೆಕ್ಸ್ಟ್‌-ಟು-ಸ್ಪೀಚ್ ಆಯ್ಕೆ ಬಳಸಿ ಅಲ್ಲಿನ ಟೆಕ್ಸ್ಟ್ ಕೇಳಬಹುದಾದ ಫೀಚರ್ಸ್ ಹೊಂದಿದೆ.

3. ಎಂಪರಿವಾಹನ್ ಆಪ್ mParivahan app

3. ಎಂಪರಿವಾಹನ್ ಆಪ್ mParivahan app

ಬಳಕೆದಾರರು ಈ ಆಪ್ ಮೂಲಕ ಚಾಲನಾ ಪರವಾನಗಿಯನ್ನು ಮತ್ತು ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಃನಗಳ ನೋಂದಣಿ ಪತ್ರವನ್ನು ಡಿಜಿಟಲ್ ಪ್ರತಿಯನ್ನು ಇಟ್ಟುಕೊಳ್ಳಬಹುದಾಗಿದೆ. ಅದಲ್ಲದೇ ಸೇಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ನಾಗರೀಕರು ಕಾರು ನೊಂದಣಿಯ ವಿವರ ಮತ್ತು ನೊಂದಣಿಯಾದ ದಿನಾಂಕವನ್ನು ನೋಡಬಹುದಾಗಿದೆ.

4. ಸ್ಟಾರ್ಟ್‌ಅಪ್ ಇಂಡಿಯಾ Startup India

4. ಸ್ಟಾರ್ಟ್‌ಅಪ್ ಇಂಡಿಯಾ Startup India

ಸ್ಟಾರ್ಟ್‌ಅಪ್ ಇಂಡಿಯಾ ಆಪ್ ಉಸಯೋನ್ಮುಖ ಉದ್ಯಮಿಗಳಿಗೆ ಸ್ಟಾರ್ಟ್‌ಅಪ್ ವಾತಾವರಣವನ್ನು ಅರ್ಥ ಮಾಡಿಕೊಳ್ಳಲು ಮಾಹಿತಿಯನ್ನು ನೀಡುತ್ತದೆ. ಈ ಆಪ್ ಮೂಲಕ ಸ್ಟಾರ್ಟ್‌ಅಪ್ ಕುರಿತು ಸರ್ಕಾರ ಹಮ್ಮಿಕೊಂಡ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

5. ಡಿಜಿ ಸೇವಕ್ ಆಪ್ DigiSevak app

5. ಡಿಜಿ ಸೇವಕ್ ಆಪ್ DigiSevak app

ನೀವು ಉತ್ತಮ ಭಾರತಕ್ಕಾಗಿ ಸ್ವಯಂ ಮುಂದೆ ಬಂದು ಸೇವೆ ಸಲ್ಲಿಸುತ್ತೇನೆ ಎಂದರೆ ನಿಮಗೆ ಡಿಜಿ ಸೇವಕ್ ಆಪ್ ಒಳ್ಳೆ ಆಯ್ಕೆ. ನೀವು ಹೊಂದಿರುವ ಕೌಶಲ್ಯ ಮತ್ತು ನಿಮ್ಮ ಆಸಕ್ತಿಗನುಗುಣವಾಗಿ ವಿವಿಧ ಇಲಾಖೆಗಳಿಂದ ನಿಮಗೆ ಕೆಲಸವನ್ನು ನಿಗದಿ ಮಾಡಲಾಗುತ್ತದೆ. ಬೇರೆ ವಾಲ್ಯುಂಟರ್ಸ್‌ಗಳು ಮೌಲ್ಯಿಕರಿಸಿರುವ ಟಾಸ್ಕ್‌ಗಳಿಗೂ ನೀವು ನೋಂದಣಿಯಾಗಬಹುದು.

6. ಜಿಎಸ್‌ಟಿ ರೇಟ್ ಫೈಂಡರ್GST Rate Finder

6. ಜಿಎಸ್‌ಟಿ ರೇಟ್ ಫೈಂಡರ್GST Rate Finder

ಜಿಎಸ್‌ಟಿ ಜಾರಿಯಾಗಿ ಒಂದು ವರ್ಷ ಕಳೆದಿದೆ. ಇನ್ನು ನಿಮಗೆ ಜಿಎಸ್‌ಟಿ ಬಗ್ಗೆ ಗೊಂದಲಗಳಿದ್ದರೆ, ಯಾವ ಸರಕು ಮತ್ತು ಸೇವೆಗಳಿಗೆ ಎಷ್ಟೇಷ್ಟು ಜಿಎಸ್‌ಟಿ ಅನ್ವಯವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕೆಂದರೆ ಜಿಎಸ್‌ಟಿ ರೇಟ್‌ ಫೈಂಡರ್ ಆಪ್ ಡೌನ್‌ಲೋಡ್ ಮಾಡಿಕೊಂಡು ನೋಡಿ. ಸರಳವಾಗಿ ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿ ಜಿಎಸ್‌ಟಿ ವಿವರಗಳನ್ನು ನೀಡಲಾಗಿದೆ.

7. ಉಮಾಂಗ್ UMANG (Unified Mobile Application for New-age Governance)

7. ಉಮಾಂಗ್ UMANG (Unified Mobile Application for New-age Governance)

ಎಲೆಕ್ಟ್ರಾನಿಕ್ದ್‌ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯ (MeitY) ಹಾಗೂ ರಾಷ್ಟ್ರೀಯ ವಿದ್ಯುನ್ಮಾನ ಆಡಳಿತ ವಿಭಾಗ (NeGD) ಜಂಟಿಯಾಗಿ ಉಮಾಂಗ್ ಆಪ್ ಅಭಿವೃದ್ಧಿಪಡಿಸಿವೆ. ಈ ಆಪ್ ಒಂದೇ ವೇದಿಕೆಯಲ್ಲಿ ಎಲ್ಲಾ ಇಲಾಖೆಗಳ ಸೇವೆಯನ್ನು ನಾಗರೀಕರಿಗೆ ಉತ್ತಮ ಹಾಗೂ ಸರಳವಾದ ರೀತಿಯಲ್ಲಿ ನೀಡುತ್ತದೆ. ಆಧಾರ್, ಡಿಜಿಲಾಕರ್, ಪೇಗೋವ್‌ನಂತಹ ಡಿಜಿಟಲ್ ಇಂಡಿಯಾದ ಅನೇಕ ಸೇವೆಗಳು ಇದರಲ್ಲಿ ಲಭ್ಯವಿವೆ.

8. ಇನ್‌ಕ್ರಿಡೆಬಲ್ ಇಂಡಿಯಾ Incredible India

8. ಇನ್‌ಕ್ರಿಡೆಬಲ್ ಇಂಡಿಯಾ Incredible India

ಪ್ರವಾಸಕ್ಕೆ ಸಂಬಂಧಿಸಿದ ಹಲವು ಪ್ರಮುಖ ಮಾಹಿತಿಯನ್ನು ಇನ್‌ಕ್ರಿಡೆಬಲ್ ಇಂಡಿಯಾ ಆಪ್ ನೀಡುತ್ತಿದೆ. ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿಪಡಿಸಿರುವ ಈ ಆಪ್‌ನಲ್ಲಿ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಾಹಿತಿಯನ್ನು ಪಡೆಯಬಹುದಾಗಿದೆ. ಪ್ರವಾಸಿ ಸ್ಥಳದಲ್ಲಿನ ಟೂರ್ ಆಪರೇಟರ್ಸ್, ಸಾರಿಗೆ ಆಪರೇಟರ್ಸ್, ಟ್ರಾವೆಲ್ ಏಜೆಂಟ್‌ಗಳು, ಪ್ರಾದೇಶಿಕ ಮಾರ್ಗದರ್ಶಕರು, ಹೋಟೆಲ್‌ಗಳ ಬಗ್ಗೆ ಮಾಹಿತಿ ಇದೆ.

10. ಎಂಆಧಾರ್ mAadhaar app

10. ಎಂಆಧಾರ್ mAadhaar app

ಯುಐಡಿಎಐನ ಎಂಆಧಾರ್ ಆಪ್ ಮತ್ತೊಂದು ಉಪಯುಕ್ತ ಆಪ್ ಆಗಿದ್ದು, ಆಂಡ್ರಾಯ್ಡ್‌ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಆಧಾರ್ ಗುರುತನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ನಾಗರೀಕರು ಹೊಂದಬೇಕು ಎನ್ನುವ ಗುರಿಯೊಂದಿಗೆ ಈ ಆಪ್ ಬಿಡುಗಡೆಗೊಳಿಸಲಾಗಿದೆ. ಈ ಆಪ್‌ನ ಮತ್ತೊಂದು ಉಪಯೋಗ ಏನೆಂದರೆ eKYC ಮಾಹಿತಿಯನ್ನು ಯಾವ ಸರ್ವೀಸ್ ಪ್ರಾವಿಡರ್‌ಗೂ ಬೇಕಾದರೂ ಹಂಚಿಕೆ ಮಾಡುವ ಆಯ್ಕೆ ಇದೆ. ಕ್ಯೂಆರ್ ಕೋಡ್ ಮೂಲಕ ಆಧಾರ್ ಪ್ರೊಪೈಲ್ ನೋಡುವ ಮತ್ತು ಶೇರ್ ಮಾಡುವ ಆಯ್ಕೆ ಇದೆ. ಅದಲ್ಲದೇ ಬಳಕೆದಾರರ ಬಯೋಮೆಟ್ರಿಕ್ ಡಾಟಾವನ್ನು ಯಾವಾಗ ಬೇಕಾದರೂ ಬ್ಲಾಕ್ ಮಾಡುವ ಅಧಿಕಾರವನ್ನು ಬಳಕೆದಾರರಿಗೆ ನೀಡಲಾಗಿದೆ.

11. ಪೋಸ್ಟ್‌ಇನ್ಫೋ​ Postinfo

11. ಪೋಸ್ಟ್‌ಇನ್ಫೋ​ Postinfo

ಪೋಸ್ಟ್‌ಇನ್ಫೋ ಆಪ್ ಅಂಚೆ ಇಲಾಖೆಯಿಂದ ಬಿಡುಗಡೆಗೊಳಿಸಿದ್ದು, ಸೇಂಟರ್ ಫಾರ್ ಎಕ್ಸಲೆನ್ಸ್‌ ಇನ್ ಪೋಸ್ಟಾಲ್ ಟೆಕ್ನಾಲಜಿ ಅಭಿವೃದ್ಧಿಪಡಿಸಿದೆ. ಈ ಆಪ್‌ನಿಂದ ಪಾರ್ಸಲ್‌ಗಳನ್ನು ಟ್ರಾಕ್ ಮಾಡುವ, ಅಂಚೆ ಕಚೇರಿ ಹುಡುಕುವ, ಪೋಸ್ಟೇಜ್ ಕ್ಯಾಲ್ಕ್ಯುಲೇಟರ್ ಇನ್ಸೂರೆನ್ಸ್ ಪ್ರಿಮಿಯಂ ಕ್ಯಾಲ್ಕ್ಯುಲೇಟರ್ ಮತ್ತು ಬಡ್ಡಿ ಕ್ಯಾಲ್ಕ್ಯುಲೇಟರ್ ಫೀಚರ್ ಹೊಂದಿದೆ. ಅಂಚೆ ಇಲಾಖೆಯ ಜೀವ ವಿಮಾ ಪಾಲಿಸಿ ಹಾಗೂ ಗ್ರಾಮೀಣ ಪೋಸ್ಟಾಲ್ ಜೀವ ವಿಮಾದ ಬಗ್ಗೆ ಮಾಹಿತಿ ಹೊಂದಿದ್ದು, ಪ್ರೀಮಿಯಂಗಳನ್ನು ಪಾವತಿಸುವ ಆಯ್ಕೆಯನ್ನು ಆಪ್‌ನಲ್ಲಿ ನೀಡಲಾಗಿದೆ.

12. ಮೈಗೋವ್ MyGov

12. ಮೈಗೋವ್ MyGov

ಮೈ ಗೋವ್ ಆಪ್ ಸರ್ಕಾರದಲ್ಲಿ ನಾಗರೀಕರ ಸಹಭಾಗಿತ್ವವನ್ನು ಹೆಚ್ಚಿಸುವ ಸಲುವಾಗಿ ಬಿಡುಗಡೆಯಾಗಿದೆ. ಬಳಕೆದಾರರು ವಿವಿಧ ಮಂತ್ರಾಲಯಗಳಿಗೆ ಮತ್ತು ಸಹಭಾಗಿತ್ವದ ಸಂಸ್ಥೆಗಳಿಗೆ ಹೊಸ ಐಡಿಯಾಗಳನ್ನು, ಕಮೆಂಟ್ , ಸಲಹೆಗಳನ್ನು ನೀಡಬಹುದಾಗಿದೆ. ಅದಲ್ಲದೇ ಹೊಸ ಯೋಜನೆಯ ಅಥವಾ ಕಾಯ್ದೆಯ ರೂಪಿಸುವಲ್ಲಿ ನೇರವಾಗಿ ಭಾಗವಹಿಸಬಹುದು.

Best Mobiles in India

English summary
WILDLIFE APPS FOR TRAVELLERS IN INDIA. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X