ಗೂಗಲ್ ಆಪ್ ಬಳಸಿ 1,000 ರುಪಾಯಿವರೆಗೆ ಗೆಲ್ಲುವುದು ಹೇಗೆ ಗೊತ್ತಾ?
ಗೂಗಲ್ ಪೇ ಆಪ್ ಮೂಲಕ ಮತ್ತೊಂದು ರಿವಾರ್ಡ್ ಕಾರ್ಯಕ್ರಮವನ್ನು ಗೂಗಲ್ ಹಮ್ಮಿಕೊಂಡಿದೆ. ಕೆಲವು ಸರಳವಾದ ಹಂತಗಳನ್ನು ಅನುಸರಿಸುವ ಮೂಲಕ 1,000 ರುಪಾಯಿವರೆಗೆ ಗೆಲ್ಲುವ ಅವಕಾಶವನ್ನು ಗ್ರಾಹಕರಿಗೆ ಗೂಗಲ್ ನೀಡುತ್ತಿದೆ. ಹೊಸ ರಿವಾರ್ಡ್ ಫಂಕ್ಷನ್ ನ್ನು ಆಡಿಯೋ ರಿವಾರ್ಡ್ಸ್ ಎಂದು ಕರೆಯಲಾಗಿದೆ ಮತ್ತು ಇದು ಗೂಗಲ್ ಪೇ ಆಪ್ ನ ಪ್ರಮೋಷನ್ ಸೆಕ್ಷನ್ ನ ಅಡಿಯಲ್ಲಿ ಆನ್-ಏರ್ ಎಂಬ ಹೆಸರಿನಲ್ಲಿ ಲಭ್ಯವಿದೆ.

ಯುಟ್ಯೂಬ್ ಅಥವಾ ಟಿವಿಯಲ್ಲಿ ಯಾವುದೇ ಗೂಗಲ್ ಪೇ ಜಾಹೀರಾತು ಬಂದಾಗ ಬಳಕೆದಾರರು ಅದನ್ನು ಗೂಗಲ್ ಪೇ ಆಪ್ ನಲ್ಲಿ ಕೇಳುವಂತೆ ಮಾಡಬೇಕು. ಆ ಮೂಲಕ ಅವರು ಸ್ಕ್ರ್ಯಾಚ್ ಕಾರ್ಡ್ ನ್ನು ಗೆಲ್ಲಬಹುದು.
ಗೂಗಲ್ ಪೇ ಸಪೋರ್ಟ್ ಪೇಜ್ ಹೇಳುವ ಪ್ರಕಾರ ಈ ಆಫರ್ ಈಗಾಗಲೇ ಲೈವ್ ಆಗಿದೆ ಮತ್ತು ಭಾರತೀಯ ಕಾಲಮಾನ ಡಿಸೆಂಬರ್ 2,2019 ರ 11.59pm ಗೆ ಅಂತ್ಯಗೊಳ್ಳಲಿದೆ.

ಗೂಗಲ್ ಪೇ ನಲ್ಲಿ ಆನ್-ಏರ್ ಆಡಿಯೋ ರಿವಾರ್ಡ್ ಫೀಚರ್ ನ್ನು ಹೇಗೆ ಅನೇಬಲ್ ಮಾಡುವುದು?
ಎಲ್ಲಾ ಗೂಗಲ್ ಪೇ ಅಕೌಂಟ್ ನಲ್ಲೂ ಈ ಫೀಚರ್ ಡೀಫಾಲ್ಟ್ ಆಗಿ ಅನೇಬಲ್ ಆಗಿದೆ. ಆದರೆ, ಒಂದು ವೇಳೆ ನೀವು ಈ ಆಯ್ಕೆಯನ್ನು ಗಮನಿಸಲು ಸಾಧ್ಯವಾಗುತ್ತಿಲ್ಲವಾದರೆ ಗೂಗಲ್ ಅಕೌಂಟ್ ನಲ್ಲಿ ಲೊಕೇಷನ್ ಹಿಸ್ಟರಿಯನ್ನು ಆನ್ ಮಾಡಿ.

ಇದು ಹೇಗೆ ಕೆಲಸ ಮಾಡುತ್ತದೆ?
• ಮೊದಲನೆಯದಾಗಿ,ಗೂಗಲ್ ಪೇ ಆಪ್ ನ ಹೋಮ್ ಸ್ಕ್ರೀನಿನಲ್ಲಿ ಈ ಫೀಚರ್ ಲಭ್ಯವಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.
• ಇದೀಗ, ಟಿವಿಯಲ್ಲಿ ಅಥವಾ ಯುಟ್ಯೂಬ್ ನಲ್ಲಿ ಗೂಗಲ್ ಪೇ ಆಡ್ ಬರುವವರೆಗೆ ಕಾಯಿರಿ.
• ಒಮ್ಮೆ ನೀವು ಯಾವುದೇ ಜಾಹೀರಾತು ಪ್ಲೇ ಆಗುವುದನ್ನು ಗಮನಿಸಿದರೆ, ಗೂಗಲ್ ಪೇ ಆಪ್ ನ್ನು ತೆರೆಯಿರಿ ಮತ್ತು ಪ್ರಮೋಷನ್ ಸೆಕ್ಷನ್ ಗೆ ತೆರಳಿ ಮತ್ತು ಆನ್-ಏರ್ ಆಯ್ಕೆಯನ್ನು ಟ್ಯಾಪ್ ಮಾಡಿ.
• ಇದೀಗ, ಮೈಕ್ರೋಫೋನ್ ಗೆ ಅನುಮತಿ ಕೇಳಿದಾಗ ನೀಡುವುದನ್ನು ಮರೆಯಬೇಡಿ ಮತ್ತು ಆಡಿಯೋ ಸೋರ್ಸ್ ಗೆ ಹತ್ತಿರವಾಗಿ ಅಥವಾ ಕನಿಷ್ಠ 20 ಸೆಕೆಂಡ್ ಆದರೂ ಗೂಗಲ್ ಪೇ ಆಪ್ ಜಾಹೀರಾತು ಕೇಳುವಂತೆ ಆಡಿಯೋವನ್ನು ಹೆಚ್ಚಿಸಿ.
• ಗೂಗಲ್ ಪೇ ಆಪ್ ಜಾಹೀರಾತನ್ನು ಗುರುತಿಸುವವರೆಗೆ ಕಾಯಿರಿ.
• ಒಮ್ಮೆ ಗುರುತಿಸಿದ ನಂತರ, ನೀವು ಸ್ಕ್ರ್ಯಾಚ್ ಕಾರ್ಡ್ ನ್ನು ಗೆಲ್ಲುತ್ತೀರಿ. ಸ್ಕ್ರ್ಯಾಚ್ ಕಾರ್ಡ್ ನಲ್ಲಿ ಹಣ ಬಂದರೆ ಅದನ್ನು ನೀವು ಆಪ್ ನ ಪಾವತಿ ಆಪ್ ಮೂಲಕ ರೀಡಿಮ್ ಮಾಡಿಕೊಳ್ಳಬಹುದು.

ಈ ರೀತಿಯ ಸೌಂಡ್ ಗಳನ್ನು ಮಾಡುವುದು ಬಹಳ ಕುತೂಹಲಕಾರಿಯಾಗಿರುತ್ತದೆ ಆದರೆ ಜಾಹೀರಾತಿನ ಪಾಪ್ ಅಪ್ ಗಾಗಿ ಕಾಯುವುದು ಸ್ವಲ್ಪ ಕಷ್ಟಕರವಾಗಿರುವ ಕೆಲಸವಾಗಿದೆ. ಹಾಗಾಗಿ ನೀವು ಮ್ಯಾನುವಲ್ ಆಗಿ ನೀವು ಯಾವುದೇ ಗೂಗಲ್ ಪೇ ಆಡ್ ನ್ನು ಯುಟ್ಯೂಬ್ ನಲ್ಲಿ ಪ್ಲೇ ಮಾಡಬಹುದು ಮತ್ತು ಆಪ್ ಅದನ್ನು ಕೇಳುವಂತೆ ಮಾಡಿ ರಿವಾರ್ಡ್ ನ್ನು ತಮ್ಮದಾಗಿಸಿಕೊಳ್ಳಬಹುದು. ಒಟ್ಟಿನಲ್ಲಿ ಸಿಂಪಲ್ ಆಗಿರುವ ಕೆಲವು ಸ್ಟೆಪ್ ಗಳನ್ನು ಅನುಸರಿಸಿ 1,000 ರುಪಾಯಿವರೆಗೆ ಗೆಲ್ಲುವ ಅವಕಾಶವನ್ನು ಗೂಗಲ್ ಪೇ ನೀಡುತ್ತಿದೆ.


Click it and Unblock the Notifications








