ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ಮಿ ಟಿವಿ 4, ರೆಡ್ಮಿ ನೋಟ್ 5 ಪ್ರೋ ನ ಬೆಲೆ ಏರಿಸಿದ ಶಿಯೋಮಿ

By Tejaswini P G
|

ಶಿಯೋಮಿ ಸಂಸ್ಥೆಯು ರೆಡ್ಮಿ ನೋಟ್ 5 ಪ್ರೋ ಮತ್ತು 55-ಇಂಚ್ ಮಿ LED ಟಿವಿ 4ಗಳ ಬೆಲೆಯನ್ನು ಕ್ರಮವಾಗಿ ರೂ 1000 ಮತ್ತು ರೂ 5000 ದಷ್ಟು ಏರಿಕೆ ಮಾಡಿದ್ದು ಈ ಹೊಸ ಬೆಲೆ ತಕ್ಷಣದಿಂದಲೇ ಜಾರಿಗೆ ಬರಲಿದೆ. ಭಾರತದಲ್ಲಿ ಈ ಎರಡೂ ಸಾಧನಗಳ ಬೇಡಿಕೆ ಹೆಚ್ಚಿದ್ದು ಅದನ್ನು ಸರಿದೂಗಿಸುವ ಸಲುವಾಗಿ ಬೆಲೆಯಲ್ಲಿ ಹೆಚ್ಚಳವನ್ನು ತರಲಾಗಿದೆಯಂತೆ. ಈ ಎರಡೂ ಸಾಧನಗಳಿಗೆ ಭಾರತದಲ್ಲಿ ಎಷ್ಟರ ಮಟ್ಟಿಗೆ ಬೇಡಿಕೆ ಹೆಚ್ಚಿದೆಯೆಂದರೆ ಭಾರತದಲ್ಲೇ ಅದರ ತಯಾರಿಯನ್ನು ಪ್ರಾರಂಭಿಸಿದ್ದರೂ ಈ ಬೇಡಿಕೆಯನ್ನು ಈಡೇರಿಸಲು ಸಂಸ್ಥೆ ಕಷ್ಟಪಡುತ್ತಿದೆಯಂತೆ. ಈ ಬೆಳೆಯುತ್ತಿರುವ ಬೇಡಿಕೆಯನ್ನು ಈಡೇರಿಸಲು ರೆಡ್ಮಿ ನೋಟ್ 5 ಪ್ರೋ ನ ಉತ್ಪಾದನೆಗೆ ದೊಡ್ಡ ಸಂಖ್ಯೆಯಲ್ಲಿ PCBA ಗಳನ್ನು ಆಮದು ಮಾಡಿಕೊಳ್ಳಬೇಕಾಗಿದೆ. ಮಿ ಟಿವಿ ಗಳು ಚೀನಾದಲ್ಲೇ ಉತ್ಪಾದನೆಯಾಗುತ್ತಿದ್ದು ಅದನ್ನು ಅಲ್ಲಿಂದ ಆಮದು ಮಾಡಿಕೊಳ್ಳಬೇಕಾಗಿದೆ.

ಬೇಡಿಕೆ ಪೂರೈಸಲು ಮಿ ಟಿವಿ 4, ರೆಡ್ಮಿ ನೋಟ್ 5 ಪ್ರೋ ನ ಬೆಲೆ ಏರಿಸಿದ ಶಿಯೋಮಿ


"ನಮ್ಮ ಸ್ಥಳೀಯ PCBA ಉತ್ಪಾದನೆ CY Q3 2018 ರ ಹೊತ್ತಿಗೆ 100% ಉತ್ಪಾದನೆಯನ್ನು ತಲುಪಬಹುದು. ಆದ ಕಾರಣ ಸಧ್ಯದ ಪರಿಸ್ಥಿತಿಯಲ್ಲಿ ದೊಡ್ಡ ಮೊತ್ತದಲ್ಲಿ PCBA ಗಳನ್ನು ಆಮದು ಮಾಡಿಕೊಳ್ಳಬೇಕಾಗಿದೆ. PCBA ಆಮದಿನ ಮೇಲಿನ ತೆರಿಗೆಯಲ್ಲಾಗಿರುವ ವ್ಯತ್ಯಾಸಗಳಿಂದ ಮತ್ತು ರೂಪಾಯಿ ಯ ಮೌಲ್ಯದಲ್ಲಿ ಕುಸಿತ ಕಂಡುಬಂದಿರುವುದರಿಂದ ನಮ್ಮ ವೆಚ್ಚ ಗಣನೀಯವಾಗಿ ಹೆಚ್ಚಿದೆ." ಎಂದು ಶಿಯೋಮಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

"ಹಾಗೆಯೇ ಆಮದು ತೆರಿಗೆಯಲ್ಲಿ ಆಗಿರುವ ವ್ಯತ್ಯಾಸಗಳಿಂದ ಮತ್ತು ರೂಪಾಯಿ ಯ ಮೌಲ್ಯದಲ್ಲಿ ಕುಸಿತದಿಂದಾಗಿ ನಾವು ನಮ್ಮ ಮಿ LED ಟಿವಿ 4 55-ಇಂಚ್ ನ ಬೆಲೆನ್ನೂ ರೂ 5000 ದಷ್ಟು ಹೆಚ್ಚಿಸಿದ್ದು ಅದರ ನೂತನ ಬೆಲೆ 44,999 ಆಗಲಿದೆ. ಈ ನೂತನ ಬೆಲೆ Mi.com, ಮಿ ಹೋಮ್ ಸ್ಟೋರ್ ಮತ್ತು ಫ್ಲಿಪ್ಕಾರ್ಟ್ ನಲ್ಲಿ ಮೇ 1, 2018 ರಿಂದಲೇ ಜಾರಿಗೆ ಬರಲಿದೆ" ಎಂದು ಸಂಸ್ಥೆ ತಿಳಿಸಿದೆ.

ಈ ದರ ಏರಿಕೆಯ ಫಲವಾಗಿ 4GB RAM ಮತ್ತು 64GB ಸ್ಟೋರೇಜ್ ಹೊಂದಿರುವ ರೆಡ್ಮಿ ನೋಟ್ 5 ಪ್ರೋ ಆವೃತ್ತಿ ಯ ಬೆಲೆ ರೂ 14,999 ಆಗಲಿದ್ದು, ಮಿ LED ಟಿವಿ 4 ನ ಬೆಲೆ ರೂ 44,999 ಆಗಲಿದೆ. ಶಿಯೋಮಿ ಸಂಸ್ಥೆಯು ಇತ್ತೀಚೆಗೆ ರೆಡ್ಮಿ ನೋಟ್ 5 ಪ್ರೋ ಪ್ರೀ-ಆರ್ಡರ್ಗಳನ್ನು ಸ್ವೀಕರಿಸಿತ್ತು ಮತ್ತು ಈ ಸಂದರ್ಭದಲ್ಲಿ ಬಹಳ ಬೇಡಿಕೆಯನ್ನು ಎದುರಿಸಿತ್ತು. " Mi.com ನಲ್ಲಿ ಗ್ರಾಹಕರು ನೀಡಿರುವ ರೆಡ್ಮಿ ನೋಟ್ 5 ಪ್ರೋ 4GB+64GB ಯ ಪ್ರೀ-ಆರ್ಡರ್ಗಳನ್ನು ನಾವು ಅದರ ಮೂಲ ಬೆಲೆಯಾದ ರೂ 13,999 ಕ್ಕೆ ಪೂರೈಸಲಿದ್ದೇವೆ. ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಒಂದು ತಿಂಗಳಿಗೆ ಒಂದು ಮಿಲಿಯನ್ ರೆಡ್ಮಿ ನೋಟ್ 5 ಪ್ರೋ ಸ್ಮಾರ್ಟ್ಫೋನ್ಗಳನ್ನು ಉತ್ಪಾದಿಸುವ ಆಶಯ ಹೊಂದಿದ್ದೇವೆ." ಎಂದು ಶಿಯೋಮಿ ಸಂಸ್ಥೆ ತಿಳಿಸಿದೆ.

ಶಿಯೋಮಿ ಶೀಘ್ರದಲ್ಲಿಯೇ ಭಾರತದಲ್ಲಿ ಇನ್ನೂ ಮೂರು ಉತ್ಪಾದನಾ ಘಟಕಗಳನ್ನು ಪ್ರಾರಂಭಿಸಲಿರುವುದಾಗಿ ತಿಳಿಸಿದೆ. ಶಿಯೋಮಿ ಸಂಸ್ಥೆಯು ಈಗಾಗಲೇ ಎರಡು ಉತ್ಪಾದನಾ ಘಟಕಗಳನ್ನು ಹೊಂದಿದ್ದು ಅವುಗಳ ಪೈಕಿ ಒಂದು ಪವರ್ಬ್ಯಾಂಕ್ ಗಳ ಉತ್ಪಾದನೆಗೆ ಸೀಮಿತವಾಗಿದೆ. ನೋಯ್ಡಾ, ಉತ್ತರಪ್ರದೇಶದ ಹೈಪ್ಯಾಡ್ ಟೆಕ್ನಾಲಜಿ ಜೊತೆಗೆ ಕೈಜೋಡಿಸಿರುವ ಶಿಯೋಮಿ ತನ್ನ ಪವರ್ಬ್ಯಾಂಕ್ ನ ಉತ್ಪಾದನಾ ಘಟಕದಲ್ಲೂ ಸ್ಮಾರ್ಟ್ಫೋನ್ ಗಳ ತಯಾರಿಯನ್ನು ಪ್ರಾರಂಭಿಸಿದೆ. ಹೀಗಾಗಿ ಶಿಯೋಮಿ ಈಗ ಭಾರತದಲ್ಲಿ ಒಟ್ಟು ಆರು ಸ್ಮಾರ್ಟ್ಫೋನ್ ಉತ್ಪಾದನಾ ಘಟಕಗಳನ್ನು ಹೊಂದಿದೆ.

ಶಿಯೋಮಿ ಫಾಕ್ಸ್ಕಾನ್ ನ ಸಹಭಾಗಿತ್ವದಲ್ಲಿ ಸ್ಥಳಿಯವಾಗಿ ಶ್ರೀಪೆರಂಬದೂರ್, ಚೆನ್ನೈ ನಲ್ಲಿ PCBA ಗಳ ಉತ್ಪಾದನೆಯನ್ನು ಪ್ರಾರಂಭಿಸಿದೆ. PCBA ಗಳು ಸ್ಮಾರ್ಟ್ಫೋನ್ ನ ಬಹುಮುಖ್ಯ ಅಂಗವಾಗಿದೆ. ಶಿಯೋಮಿ ಈಗಾಗಲೇ 95% ಸ್ಮಾರ್ಟ್ಫೋನ್ ಗಳನ್ನು ಭಾರತದಲ್ಲಿ ಉತ್ಪಾದಿಸಿ-ಜೋಡಿಸುತ್ತಿದೆ. ಭವಿಷ್ಯದಲ್ಲಿ ಶಿಯೋಮಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಮಾರ್ಟ್ಫೋನ್ ಗಳನ್ನು ಭಾರತದಲ್ಲೇ ಸಂಪೂರ್ಣವಾಗಿ ತಯಾರಿಸಲಿದೆ ಎಂದು ಅನಿಸುತ್ತದೆ.

ಕಾರ್ಯಾಚರಣೆಯ ಸಮಯದಲ್ಲಿ ಶಿಯೋಮಿ ಸಧ್ಯಕ್ಕೆ ಒಂದು ಸೆಕೆಂಡ್ ಗೆ ಒಂದು ಸ್ಮಾರ್ಟ್ಫೋನ್ ನಂತೆ ತಯಾರಿಸುತ್ತಿದ್ದರೆ, ಹೊಸ ಕಾರ್ಖಾನೆಗಳು ಕಾರ್ಯಾಚರಣೆ ಪ್ರಾರಂಭಿಸಿದರೆ ಉತ್ಪಾದನಾ ಸಾಮರ್ಥ್ಯ ಒಂದು ಸೆಕೆಂಡ್ ಗೆ ಎರಡು ಸ್ಮಾರ್ಟ್ಫೋನ್ ಗಳಂತೆ ಹೆಚ್ಚಲಿದೆ.

ಕಾರ್ಖಾನೆ ಸಂಪೂರ್ಣವಾಗಿ ತಯಾರಾಗಿ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಲು ಸ್ವಲ್ಪ ಸಮಯ ಬೇಕಾದೀತು. " ಒಂದು ಕಾರ್ಖಾನೆಯನ್ನು ಸ್ಥಾಪಿಸಿ ಅದರಲ್ಲಿ ಪೂರ್ಣ ಪ್ರಮಾಣದ ಉತ್ಪಾದನೆಯನ್ನು ಪ್ರಾರಂಭಿಸಲು 6-9 ತಿಂಗಳು ಬೇಕಾಗುತ್ತದೆ. ಈಗ ಎದುರಾಗಿರುವ 'ಔಟ್ ಆಫ್ ಸ್ಟಾಕ್" ಪರಿಸ್ಥಿತಿಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು ಅದನ್ನು ಎದುರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ" ಎಂದು ಶಿಯೋಮಿ ಯ ಸಹ-ಸಂಸ್ಥಾಪಕ ಮತ್ತು CEO ಆಗಿರುವ ಲೇ ಜುನ್ ತಮ್ಮ ಬೆಂಗಳೂರಿನ ನೂತನ ಹೆಡ್ಕ್ವಾರ್ಟರ್ಸ್ ನಲ್ಲಿ ವರದಿಗಾರರನ್ನುದ್ದೇಶಿಸಿ ಮಾತನಾಡುತ್ತಾ ತಿಳಿಸಿದ್ದಾರೆ.

Best Mobiles in India

English summary
Xiaomi increases price of Mi TV 4, Redmi Note 5 Pro by up to Rs 5,000 to meet growing demand. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X