Home
Apps

ಮಾರುಕಟ್ಟೆಯಲ್ಲಿ ರೆಡ್ ಮಿ 4 ಸ್ಮಾರ್ಟ್ ಫೋನ್ ಬೆಲೆಯಲ್ಲಿ ಇಳಿಕೆ..!

By Lekhaka

ಶಿಯೋಮಿ ಭಾರತೀಯ ಮಾರುಕಟ್ಟೆಯಲ್ಲಿ ಈ ಹಿಂದೆ ಲಾಂಚ್ ಮಾಡಿದ್ದ ರೆಡ್ ಮಿ 4 ಸ್ಮಾರ್ಟ್ ಫೋನ್ ಬಳಕೆದಾರರನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆದಿದ್ದು, ಈ ಹಿನ್ನಲೆಯಲ್ಲಿ ಇದರ ಮಂದಿನ ಆವೃತ್ತಿ ರೆಡ್ ಮಿ 5 ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ. ಹೊಸ ಆವೃತ್ತಿ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ ಹಿನ್ನಲೆಯಲ್ಲಿ ರೆಡ್ ಮಿ 4 ಸ್ಮಾರ್ಟ್ ಫೋನ್ ಬೆಲೆಯಲ್ಲಿ ಶಿಯೋಮಿ ಕಡಿತವನ್ನು ಮಾಡಿದೆ.

ಮಾರುಕಟ್ಟೆಯಲ್ಲಿ ರೆಡ್ ಮಿ 4 ಸ್ಮಾರ್ಟ್ ಫೋನ್ ಬೆಲೆಯಲ್ಲಿ ಇಳಿಕೆ..!


ಈಗಾಗಲೇ ಬಿಡುಗಡೆಯಾದ ಸಂದರ್ಭದಲ್ಲಿ ಹಲವು ದಾಖಲೆಯನ್ನು ನಿರ್ಮಿಸಿದ್ದ ರೆಡ್ ಮಿ 4 ಸ್ಮಾರ್ಟ್ ಫೋನ್, ಬೆಲೆ ಕಡಿತದ ನಂತರದಲ್ಲಿ ಮತ್ತೊಮ್ಮೆ ಹೊಸ ದಾಖಲೆಯನ್ನು ನಿರ್ಮಿಸಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟು ಎರಡು ಆವೃತ್ತಿಯ ಸ್ಮಾರ್ಟ್ ಫೋನ್ ಗಳ ಮೇಲೆ ಬೆಲೆ ಕಡಿತವನ್ನು ಮಾಡಲಿದೆ, ರೂ.500 ಕಡಿತವಾಗಲಿದೆ.

ಈ ಕುರಿತು ಟ್ವಿಟರ್ ನಲ್ಲಿ ಮಾಹಿತಿಯನ್ನು ನೀಡಿರುವ ಶಿಯೋಮಿ, ಅಮೆಜಾನ್ ಮತ್ತು ಮಿ.ಕಾಮ್ ನಲ್ಲಿ ಬಳಕೆದಾರರಿಗೆ ಈ ಆಫರ್ ದೊರೆಯಲಿದೆ ಎನ್ನಲಾಗಿದೆ. 3GB RAM & 32GB ಆವೃತ್ತಿಯೂ ರೂ.8499ಕ್ಕೆ ದೊರೆಯುತ್ತಿದೆ. ಇದೇ ಮಾದರಿಯಲ್ಲಿ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯನ್ನು ರೂ.10,999ಕ್ಕೆ ಲಭ್ಯವಿದೆ.

ಮಾರುಕಟ್ಟೆಯಲ್ಲಿ ರೆಡ್ ಮಿ 4 ಸ್ಮಾರ್ಟ್ ಫೋನ್ ಬೆಲೆಯಲ್ಲಿ ಇಳಿಕೆ..!


ಇದೇ ಮಾದರಿಯಲ್ಲಿ ಶಿಯೋಮಿ ಕಳೆದ ವಾರ ರೆಡ್ ಮಿ 5 ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ರೂ.7999ಕ್ಕೆ ಮಾರಾಟವಾಗುವ ಈ ಸ್ಮಾರ್ಟ್ ಫೋನ್ ಮಾರ್ಚ್ 20ರಿಂದ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಈ ಸ್ಮಾರ್ಟ್ ಫೋನ್ ಸಹ ಕೇವಲ ಅಮೆಜಾನ್ ನಲ್ಲಿ ಮಾತ್ರವೇ ದೊರೆಯಲಿದೆ.

ಶಿಯೋಮಿ ರೆಡ್‌ಮಿ 4 ಫೋನ್ 5 ಇಂಚಿನ HD (720x1280 p) ಡಿಸ್‌ಪ್ಲೇ ಹೊಂದಿದೆ. ಇದರೊಂದಿಗೆ 2.5D ಕರ್ವಡ್ ಗ್ಲಾಸ್ ವಿನ್ಯಾಸವನ್ನು ಕಾಣಬಹುದಾಗಿದ್ದು, ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 420 ಪ್ರೋಸೆಸರ್ ಜೊತೆಗೆ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗದೆ. ಇದರಲ್ಲಿ 4100mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಹ ಇದೆ.

Best Mobiles in India

English summary
Xiaomi Redmi 4 price cut by Rs. 500. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+