2GB RAM ವೆರಿಯಂಟ್ ಶಿಯೋಮಿ ರೆಡ್ಮಿ 5A ಬೆಲೆ ಈಗ ರೂ.5999!

'ದೇಶ್ ಕಾ ಸ್ಮಾರ್ಟ್ಫೋನ್' ಎಂಬ ಹೆಸರಿನಲ್ಲಿ ನವಂಬರ್ 2017ರಲ್ಲಿ ಭಾರತದಲ್ಲಿ ಶಿಯೋಮಿ ರೆಡ್ಮಿ 5A ಲಾಂಚ್ ಆಗಿತ್ತು. ಈ ಸಾಧನ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ

By Tejaswini P G
|

'ದೇಶ್ ಕಾ ಸ್ಮಾರ್ಟ್ಫೋನ್' ಎಂಬ ಹೆಸರಿನಲ್ಲಿ ನವಂಬರ್ 2017ರಲ್ಲಿ ಭಾರತದಲ್ಲಿ ಶಿಯೋಮಿ ರೆಡ್ಮಿ 5A ಲಾಂಚ್ ಆಗಿತ್ತು. ಈ ಸಾಧನ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ : 2GB RAM/16GB ಸ್ಟೋರೇಜ್ ಆವೃತ್ತಿಯ ಬೆಲೆ ರೂ 5,999 ಮತ್ತು 3GB RAM/32GB ಸ್ಟೋರೇಜ್ ಆವೃತ್ತಿಯ ಬೆಲೆ ರೂ 6,999. ಲಾಂಚ್ ನ ಸಂದರ್ಭದಲ್ಲಿ ಶಿಯೋಮಿ ಸಂಸ್ಥೆಯು ರೆಡ್ಮಿ 5A ನ ಬೇಸ್ ಆವೃತ್ತಿಯ 5 ಮಿಲಿಯನ್ ಯುನಿಟ್ಗಳು ಮಾರಾಟವಾಗುವ ತನಕ ಅದರ ಮೇಲೆ ರೂ 1000 ದಷ್ಟು ರಿಯಾಯಿತಿ ಅನ್ವಯವಾಗಲಿದೆ ಎಂದು ಹೇಳಿತ್ತು.

ಇನ್ನು ಮೇಲೆ 2GB RAM/16GB ಸ್ಟೋರೇಜ್ ಹೊಂದಿರುವ ರೆಡ್ಮಿ 5A ನ ಮೂಲ ಆವೃತ್ತಿ ಅದರ ನಿಜವಾದ ಬೆಲೆ ರೂ 5,999 ಕ್ಕೆ ಲಭ್ಯವಾಗಲಿದೆ ಎಂದು ಶಿಯೋಮಿ ಸಂಸ್ಥೆಯು ಟ್ವಿಟ್ಟರ್ ನಲ್ಲಿ ತಿಳಿಸಿದೆ. ಫ್ಲಿಪ್ಕಾರ್ಟ್, Mi.com ಮತ್ತು ಮಿ ಆಫ್ಲೈನ್ ಸ್ಟೋರ್ ಗಳಲ್ಲಿಯೂ ಈ ಹೊಸ ಬೆಲೆಯನ್ನು ಜಾರಿಗೆ ತರಲಾಗಿದೆ. ಈ ಮೂಲಕ ಶಿಯೋಮಿ ಸಂಸ್ಥೆಯು ಈ ವರೆಗೆ ರೆಡ್ಮಿ 5A ಯ 5 ಮಿಲಿಯನ್ ಯುನಿಟ್ಗಳನ್ನು ಮಾರಾಟಮಾಡಿರಬಹುದು ಎಂಬ ತೀರ್ಮಾನಕ್ಕೆ ಬರಬಹುದಾಗಿದೆ. ಜನವರಿಯಲ್ಲಿ ಶಿಯೋಮಿ ಸಂಸ್ಥೆಯು ರೆಡ್ಮಿ 5A ಲಾಂಚ್ ಆದ 1 ತಿಂಗಳಿನಲ್ಲಿ 1 ಮಿಲಿಯನ್ ಯುನಿಟ್ಗಳು ಮಾರಾಟವಾಗಿರುವುದಾಗಿ ತಿಳಿಸಿತ್ತು ಎಂಬುದನ್ನು ಈ ಸಂದರ್ಭದಲ್ಲಿ ನಿಮಗೆ ನೆನಪಿಸ ಬಯಸುತ್ತೇವೆ.

2GB RAM ವೆರಿಯಂಟ್ ಶಿಯೋಮಿ ರೆಡ್ಮಿ 5A ಬೆಲೆ ಈಗ ರೂ.5999!


ರೆಡ್ಮಿ 5A ಸ್ಮಾರ್ಟ್ಫೋನ್ ನ ಬೆಲೆಯನ್ನು ಸ್ಪರ್ಧಾತ್ಮಕವಾಗಿ ನಿಗದಿಪಡಿಸಲಾಗಿದ್ದು, ಬಳಕೆದಾರರ ಹೆಚ್ಚಿನ ಅಗತ್ಯಗಳನ್ನು ಗಮನದಲ್ಲಿರಿಸಿ ಅದಕ್ಕೆ ತಕ್ಕಂತೆ ಫೀಚರ್ಗಳನ್ನು ಇದರಲ್ಲಿ ನೀಡಲಾಗಿದೆ. ಹಾಗಾಗಿ ರೆಡ್ಮಿ 5A ಅನ್ನು 'ದೇಶ್ ಕಾ ಸ್ಮಾರ್ಟ್ಫೋನ್' ಎಂದೇ ಬಿಂಬಿಸಲಾಗಿದೆ. ಈ ಬಜೆಟ್ ಸ್ಮಾರ್ಟ್ಫೋನ್ ಹೆಚ್ಚಿನ ಸಾಮರ್ಥ್ಯವುಳ್ಳ ಬ್ಯಾಟರಿಯನ್ನು ಹೊಂದಿದ್ದು ತುಂಬ ಸಮಯ ಕಾರ್ಯನಿರ್ವಹಿಸಬಲ್ಲದು ಮಾತ್ರವಲ್ಲದೆ ಮೈಕ್ರೋSD ಕಾರ್ಡ್ ಗೆಂದೇ ಮೀಸಲಾದ ಸ್ಲಾಟ್ ಒಂದನ್ನು ಹೊಂದಿದೆ.

ಇದರ ಫೀಚರ್ಗಳ ಕುರಿತು ಹೇಳುವುದಾದರೆ ರೆಡ್ಮಿ 5A ನಲ್ಲಿ 5-ಇಂಚ್ ಡಿಸ್ಪ್ಲೇ ಇದ್ದು 1280X720 ಪಿಕ್ಸೆಲ್ ರೆಸೊಲ್ಯೂಶನ್ ಹೊಂದಿದೆ. ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 425 SoC ಹೊಂದಿದ್ದು ಜೊತೆಗೆ 2GB/3GB RAM ಮತ್ತು 16GB/32GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಆಂಡ್ರಾಯ್ಡ್ ನುಗಾಟ್ ಆಧಾರಿತ MIUI 9 ಆಪರೇಟಿಂಗ್ ಸಿಸ್ಟಮ್ ಹೊಂದಿದೆ ಈ ರೆಡ್ಮಿ 5A.

How to Check Your Voter ID Card Status (KANNADA)

ಸ್ಟೋರೇಜ್ ಸಾಮರ್ಥ್ಯವನ್ನು ವಿಸ್ತರಿಸಲು ಅನುವಾಗುವಂತೆ ಮೈಕ್ರೋSD ಕಾರ್ಡ್ ಗೆಂದೇ ಸ್ಲಾಟ್ ಒಂದನ್ನು ಮೀಸಲಿರಿಸಲಾಗಿದ್ದು, ಡ್ಯುಯಲ್ ಸಿಮ್ ಕಾರ್ಡ್ ಸ್ಲಾಟ್ ಕೂಡ ಇದೆ. ಇದರ ಕ್ಯಾಮೆರಾ ಕುರಿತು ಹೇಳುವುದಾದರೆ ರೆಡ್ಮಿ 5A ನಲ್ಲಿದೆ 13MP ರೇರ್ ಕ್ಯಾಮೆರಾ LED ಫ್ಲ್ಯಾಶ್,f/2.2 ಅಪರ್ಚರ್ ಮತ್ತು PDAF ಸಹಿತ ಮತ್ತು f/2.0 ಅಪರ್ಚರ್ ಹೊಂದಿರುವ 5MP ಸೆಲ್ಫೀ ಕ್ಯಾಮೆರಾ. ಅಷ್ಟೇ ಅಲ್ಲದೆ 3000mAh ಸಾಮರ್ಥ್ಯದ ಬ್ಯಾಟರಿ , 4G VoLTE, 3.5mm ಆಡಿಯೋ ಜ್ಯಾಕ್, ಮೈಕ್ರೋ USB ಪೋರ್ಟ್, ಬ್ಲೂಟೂತ್ 4.1 ಮೊದಲಾದ ಫೀಚರ್ಗಳು ಕೂಡ ರೆಡ್ಮಿ 5A ನಲ್ಲಿದೆ.

Best Mobiles in India

English summary
Xiaomi reverts the Redmi 5A base variant pricing to Rs. 5,999. to know more visit t5o kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X