ಶಿಯೋಮಿ ರೆಡ್ಮಿ ನೋಟ್ 5 ಪ್ರೋ ಗೆ ದೊರೆಯಲಿದೆ ಫೇಸ್ ಅನ್ಲಾಕ್ ಫೀಚರ್!

ಫೆಬ್ರವರಿ 14ರಂದು ರೆಡ್ಮಿ ನೋಟ್ 5 ಪ್ರೋ ಅನ್ನು ಅನಾವರಣಗೊಳಿಸಿದ ಸಂದರ್ಭದಲ್ಲಿ ಮಾರ್ಚ್ ತಿಂಗಳಲ್ಲಿ ಆ ಸ್ಮಾರ್ಟ್ಫೋನ್ ಗೆ ಫೇಸ್ ಅನ್ಲಾಕ್ ಫೀಚರ್ ನೀಡುವುದಾಗಿ ಶಿಯೋಮಿ ಆಶ್ವಾಸನೆ ನೀಡಿತ್ತು.

By Tejaswini P G
|

ಕೆಲ ದಿನಗಳ ಹಿಂದೆ ಶಿಯೋಮಿ ರೆಡ್ಮಿ ನೋಟ್ 5 ನೊಂದಿಗೆ ಶಿಯೋಮಿ ರೆಡ್ಮಿ ನೋಟ್ 5 ಪ್ರೋ ಕೂಡ ಫ್ಲಿಪ್ಕಾರ್ಟ್ ಮತ್ತು Mi.com ಮೂಲಕ ಭಾರತದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು. ರೂ 13,999 ಮತ್ತು ರೂ 16,999 ಬೆಲೆಯ ಈ ಸಾಧನಗಳು ಬಹುಬೇಡಿಕೆಯ ಫೋನ್ಗಳಾಗಿವೆ. ಬಿಡುಗಡೆಯಾದ 3 ನಿಮಿಷಗಳಲ್ಲಿ 3 ಲಕ್ಷ ಸ್ಮಾರ್ಟ್ಫೋನ್ ಗಳು ಮಾರಾಟವಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಫೆಬ್ರವರಿ 14ರಂದು ರೆಡ್ಮಿ ನೋಟ್ 5 ಪ್ರೋ ಅನ್ನು ಅನಾವರಣಗೊಳಿಸಿದ ಸಂದರ್ಭದಲ್ಲಿ ಮಾರ್ಚ್ ತಿಂಗಳಲ್ಲಿ ಆ ಸ್ಮಾರ್ಟ್ಫೋನ್ ಗೆ ಫೇಸ್ ಅನ್ಲಾಕ್ ಫೀಚರ್ ನೀಡುವುದಾಗಿ ಶಿಯೋಮಿ ಆಶ್ವಾಸನೆ ನೀಡಿತ್ತು. ಈಗ ಶಿಯೋಮಿ ಸಂಸ್ಥೆಯು ಈ ಫೀಚರ್ ಅನ್ನು ನೈಟ್ಲೀ ಬಿಲ್ಡ್ ಬಳಕೆದಾರರಿಗೆ ಕ್ಲೋಸ್ಡ್ ಬೀಟಾ ನಲ್ಲಿ ನೀಡಿದೆ. ಈ ಅಪ್ಡೇಟ್ ಫೇಸ್ ಅನ್ಲಾಕ್ ಫೀಚರ್ನೊಂದಿಗೆ ಇನ್ನು ಕೆಲವು ಸಿಸ್ಟಮ್ ಆಪ್ಟಿಮೈಸೇಶನ್ ಫೀಚರ್ಗಳನ್ನು ನೀಡಿದೆ.

ಶಿಯೋಮಿ ರೆಡ್ಮಿ ನೋಟ್ 5 ಪ್ರೋ ಗೆ ದೊರೆಯಲಿದೆ ಫೇಸ್ ಅನ್ಲಾಕ್ ಫೀಚರ್!


ಶಿಯೋಮಿ ಯು ಪ್ರತೀ ಮಂಗಳವಾರ ಗ್ಲೋಬಲ್ ನೈಟ್ಲೀ ಬೀಟಾ ROM ಗಳನ್ನು ಕ್ಲೋಸ್ಡ್ ಬೀಟಾ ಟೆಸ್ಟರ್ಗಳಿಗೆ ಬಿಡುಗಡೆಮಾಡುತ್ತದೆ. ಈ ಸಂಸ್ಥೆ ತನ್ನ ಸ್ಮಾರ್ಟ್ಫೋನ್ಗಳನ್ನು ಟೆಸ್ಟ್ ಮಾಡಲು ಬೇಕಾದ ಕ್ಲೋಸ್ಡ್ ಬೀಟಾ ಟೆಸ್ಟರ್ಗಳನ್ನು MIUI ಫೋರಮ್ ಗಳ ಮೂಲಕ ನಿಯೋಜಿಸುತ್ತದೆ. ಹೊಸ ಫೀಚರ್ಗಳನ್ನು ಗ್ಲೋಬಲ್ ನೈಟ್ಲೀ ಬೀಟಾ ROM ನಲ್ಲಿ ಪರೀಕ್ಷಿಸಿದ ನಂತರ ಶಿಯೋಮಿ ಆ ಫೀಚರ್ ಗಳನ್ನು ಗ್ಲೋಬಲ್ ಬೀಟಾ ROM ಗೆ ಬಿಡುಗಡೆ ಮಾಡುತ್ತದೆ. ನಂತರ ಅದು ಆ ಫೀಚರ್ಗಳನ್ನು ಅಂತಿಮ ಮತ್ತು ಸ್ಥಿರವಾದ ROM ನ ಆವೃತ್ತಿಗೆ ಬಿಡುಗಡೆಮಾಡುತ್ತದೆ.

ಫೇಸ್ ಅನ್ಲಾಕ್ ಫೀಚರ್ ಅನ್ನು ಈಗಾಗಲೇ ಇತ್ತೀಚಿಗಿನ MIUI 9.2 ನೈಟ್ಲೀ ಅಪ್ಡೇಟ್ ಗೆ ಬಿಡುಗಡೆ ಮಾಡಲಾಗಿದೆ. ಹಾಗಾಗಿ ಶಿಯೋಮಿ ಈಗಾಗಲೇ ನೀಡಿರುವ ಭರವಸೆಯಂತೆ ಈ ಫೀಚರ್ ರೆಡ್ಮಿ ನೋಟ್ 5 ಪ್ರೋ ಗೆ ಸ್ಥಿರವಾದ MIUI ROM ನ ಭಾಗವಾಗಿ ಈ ವರ್ಷದ ಮಾರ್ಚ್ ತಿಂಗಳಾಂತ್ಯದಲ್ಲಿ ಲಭಿಸುವುದು ಬಹುತೇಕ ಖಚಿತವಾಗಿದೆ. ಶಿಯೋಮಿ ಸಂಸ್ಥೆಯು ಈ ಸ್ಮಾರ್ಟ್ಫೋನ್ ನ ಗ್ಲೋಬಲ್ ಬೀಟಾ ROM ಮತ್ತು ಸ್ಟೇಬಲ್ ROM ನ ಲಿಂಕ್ ಗಳನ್ನು ಇನ್ನೂ ನೀಡಿಲ್ಲ.ಮುಂದಿನ ವಾರಗಳಲ್ಲಿ ಈ ಮಾಹಿತಿ ನಮಗೆ ಲಭ್ಯವಾಗಬಹುದು ಎಂದು ನಮ್ಮ ಅನಿಸಿಕೆ.

Xiaomi Redmi Note 5 Pro ಮಾರಾಟದ ದಿನಾಂಕ ಫಿಕ್ಸ್!! ಫುಲ್ ಡೀಟೆಲ್ಸ್!!

ಶಿಯೋಮಿ ರೆಡ್ಮಿ ನೋಟ್ 5 ಪ್ರೋ ಗೆ ದೊರೆಯಲಿದೆ ಫೇಸ್ ಅನ್ಲಾಕ್ ಫೀಚರ್!


MIUI 9.2 ಬಿಲ್ಡ್ ಅನ್ನು OTA ಅಪ್ಡೇಟ್ ಆಗಿ ಬಿಡುಗಡೆಮಾಡಲಾಗಿದೆ. ಈ ಮೂಲಕ ಈ ಸಾಧನದ ವರ್ಶನ್ ನಂಬರ್ MIUI 9.2.4 ಆಗಲಿದೆ ಎಂದು ಶಿಯೋಮಿ ಇಂಡಿಯಾ ದ ಪ್ರಾಡಕ್ಟ್ PR ಪ್ರತಿನಿಧಿ ಆದ ಕ್ಲಿಂಟನ್ ಜೆಫ್ ತಿಳಿಸಿದ್ದಾರೆ. ಕೆಲದಿನಗಳ ಹಿಂದೆ ನಡೆದ ರೆಡ್ಮಿ ನೋಟ್ 5 ಪ್ರೋ ನ ಮೊದಲ ಮಾರಾಟದಲ್ಲಿ ಆ ಸಾಧನ ಪಡೆಯುವಲ್ಲಿ ಯಶಸ್ವಿಯಾಗಿರುವ ಗ್ರಾಹಕರು ಕ್ಲೋಸ್ಡ್ ಬೀಟಾ ಟೆಸ್ಟರ್ಗಳ ಗುಂಪಿನಲ್ಲಿ ಭಾಗಿಯಾಗುವ ಮೂಲಕ ತಮ್ಮ ಸ್ಮಾರ್ಟ್ಫೋನ್ ನಲ್ಲಿ ಫೇಸ್ ಅನ್ಲಾಕ್ ಫೀಚರ್ ಹೊಂದಿರುವ ಅಪ್ಡೇಟ್ ಅನ್ನು ಪಡೆಯಬಹುದಾಗಿದೆ.

ಶಿಯೋಮಿ ರೆಡ್ಮಿ ನೋಟ್ 5 ಪ್ರೋ ನ ಮುಂದಿನ ಮಾರಾಟ Mi.com ಮತ್ತು ಫ್ಲಿಪ್ಕಾರ್ಟ್ ನಲ್ಲಿ ಫೆಬ್ರವರಿ 28 ರಂದು ನಡೆಯಲಿದೆ ಎಂದು ನಾವು ಈ ಸಂದರ್ಭದಲ್ಲಿ ತಿಳಿಸಲು ಬಯಸುತ್ತೇವೆ. ಈ ಮಾರಾಟದಲ್ಲೂ ರೆಡ್ಮಿ ನೋಟ್ 5 ಪ್ರೋ ಉತ್ತಮ ಬೇಡಿಕೆಯನ್ನು ಹೊಂದಲಿದೆ ಎಂದು ನಮ್ಮ ಅಭಿಪ್ರಾಯ.

Best Mobiles in India

English summary
Xiaomi Redmi Note 5 Pro gets Face Unlock with MIUI 9.2 update. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X