ರೈಲ್ವೇ ಟಿಕೇಟ್‌ಗೆ ಕ್ಯೂ ನಿಲ್ಲೋದು ಬೇಕಿಲ್ಲ..! ಸಾಮಾನ್ಯ ಟಿಕೇಟ್‌ಗೂ ಆಪ್‌..!

|

ಯಾವಾಗಲಾದರೂ ಅರ್ಜೆಂಟಾಗಿ ಊರಿಗೆ ತೆರಳಬೇಕೆಂದಾಗ ಬಸ್‌, ರೈಲುಗಳಲ್ಲಿ ಟಿಕೇಟ್‌ ಸಿಗುವುದು ಕಷ್ಟ. ಇನ್ನು ವಿಶೇಷ ದಿನಗಳಂದು, ಸಾಲು ಸಾಲು ರಜೆ ದಿನಗಳಂದು ಟಿಕೇಟ್‌ ಪಡೆಯಲು ಹರಸಾಹಸ ಪಡಬೇಕು. ಅದರಲ್ಲೂ ರೈಲ್ವೇಯಲ್ಲಿ ತಿಂಗಳುಗಳ ಮುಂಚೆಯೇ ಟಿಕೆಟ್​ಗಳು ಬುಕ್ ಆಗಿ, ಜನರಲ್‌ ಟಿಕೇಟ್‌ ಮಾತ್ರ ಉಳಿದಿರುತ್ತವೆ. ಈ ಟಿಕೆಟ್​ಗಳನ್ನು ಪಡೆಯಲು ಕೂಡ ಜನರು ಕೆಲ ಸಮಯದಲ್ಲಿ ಭಾರೀ ಕಷ್ಟ ಪಡಬೇಕು.

ರೈಲ್ವೇ ಟಿಕೇಟ್‌ಗೆ ಕ್ಯೂ ನಿಲ್ಲೋದು ಬೇಕಿಲ್ಲ..! ಸಾಮಾನ್ಯ ಟಿಕೇಟ್‌ಗೂ ಆಪ್‌..!

ಪ್ರಯಾಣಿಕರ ಇಂತಹ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೇ ಹೊಸ ಸೇವೆ ಪ್ರಾರಂಭಿಸಿದೆ. ಹೊಸ ಸೇವೆಯ ಮೂಲಕ ಜನರಲ್ ಟಿಕೇಟ್​ಗಳ​ನ್ನು ಕೂಡ ನಿಮ್ಮ ಮೊಬೈಲ್​ನಲ್ಲಿ ಪಡೆಯಬಹುದು. ಅದಕ್ಕಾಗಿಯೇ, UTS (Unreserved Ticket System) ಎಂಬ ಆಪ್‌ನ್ನು ರೈಲ್ವೇ ಇಲಾಖೆ ಪ್ರಾರಂಭಿಸಿದ್ದು, ಇದರಲ್ಲಿ ನೀವು ಕಾಯ್ದಿರಿಸಲಾಗದ ಟಿಕೇಟ್​ ಖರೀದಿಸಬಹುದು. ಹೊಸ ಸೇವೆಯಿಂದ ಸಾಲಿನಲ್ಲಿ ನಿಂತು ಟಿಕೆಟ್ ಪಡೆಯುವ ತೊಂದರೆ ತಪ್ಪಲಿದೆ. ಅದಲ್ಲದೇ ಬಳಕೆದಾರರಿಗೆ ಹೊಸ ಆಯ್ಕೆಯೊಂದನ್ನು ರೈಲ್ವೇ ಇಲಾಖೆ ನೀಡಿದ್ದು, R-Wallet ಎಂಬ ಫೀಚರ್‌ ಪರಿಚಯಿಸಿದೆ.

UTS ಆಪ್‌ ಡೌನ್‌ಲೋಡ್‌ ಮಾಡಿ

UTS ಆಪ್‌ ಡೌನ್‌ಲೋಡ್‌ ಮಾಡಿ

ಮೊದಲಿಗೆ ಪ್ಲೇ ಸ್ಟೋರ್‌ನಿಂ್ UTS ಆಪ್‌ ಡೌನ್​ಲೋಡ್ ಮಾಡಿ. ನಂತರ ನಿಮ್ಮ ವಿವರಗಳನ್ನು ನಮೂದಿಸುವ ಮೂಲಕ ಖಾತೆಯನ್ನು ನೋಂದಾಯಿಸಿ. ಹೆಸರು, ಮೊಬೈಲ್ ಸಂಖ್ಯೆ, ಐಡಿ ಕಾರ್ಡ್​ ಸಂಖ್ಯೆ ಅವಶ್ಯಕವಾಗಿರುತ್ತದೆ. ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.

ಆಪ್‌ಗೆ ಲಾಗಿನ್‌ ಆಗಿ

ಆಪ್‌ಗೆ ಲಾಗಿನ್‌ ಆಗಿ

ನೀವು OTP ನಮೂದಿಸಿದ ನಂತರ ನಿಮ್ಮ ಮೊಬೈಲ್‌ಗೆ ಬಳಕೆದಾರರ ಸಂಖ್ಯೆ ಮತ್ತು ಪಾಸ್‌ವರ್ಡ್‌ ಮೆಸೇಜ್‌ ಮೂಲಕ ಬರುತ್ತದೆ. ಅವುಗಳನ್ನು ಬಳಸಿ ನೀವು UTS ಆಪ್‌​ನಲ್ಲಿ ಲಾಗಿನ್ ಆಗಿ. ಲಾಗಿನ್ ಆದ ನಂತರ ನಿಮಗೆ UTS ಆಪ್‌ನಲ್ಲಿ ಹಲವು ಆಯ್ಕೆಗಳು ಕಾಣಿಸುತ್ತದೆ. ಇದರಲ್ಲಿ R-Wallet, ಟಿಕೇಟ್‌ ಬುಕ್‌ ಮಾಡುವ ಆಯ್ಕೆಗಳು ದೊರೆಯುತ್ತವೆ.

ಬುಕ್‌ ಟಿಕೇಟ್‌

ಬುಕ್‌ ಟಿಕೇಟ್‌

ಲಾಗಿನ್‌ ಆದ ತಕ್ಷಣ ನಿಮಗೆ ಬುಕ್‌ ಟಿಕೇಟ್‌ ಎಂಬ ಆಯ್ಕೆ ಸಿಗುತ್ತದೆ. ಕ್ಲಿಕ್ ಮಾಡಿದರೆ ನಿಮ್ಮ ಮೊಬೈಲ್‌ನಲ್ಲಿ ನಾರ್ಮಲ್‌ ಬುಕ್ಕಿಂಗ್‌, ಕ್ವಿಕ್‌ ಬುಕ್ಕಿಂಗ್‌, ಪ್ಲಾಟ್‌ಫಾರ್ಮ್‌ ಟಿಕೇಟ್‌, ಸೀಸನ್ ಟಿಕೇಟ್‌ ಮತ್ತು ಕ್ಯೂಆರ್‌ ಬುಕ್ಕಿಂಗ್‌ ಆಯ್ಕೆಗಳು ಸಿಗುತ್ತವೆ.

ಎರಡು ರೀತಿಯ ಟಿಕೇಟ್‌ ಆಯ್ಕೆಗಳು

ಎರಡು ರೀತಿಯ ಟಿಕೇಟ್‌ ಆಯ್ಕೆಗಳು

UTS ಆಪ್​ನಲ್ಲಿ ಟಿಕೇಟ್​ ಪಡೆಯಲು ಎಲ್ಲಾ ಆಯ್ಕೆಗಳಿಗೆ ಎರಡು ಆಯ್ಕೆಗಳನ್ನು ನೀಡಲಾಗಿದೆ. ಇವುಗಳಲ್ಲಿ ಒಂದು ಪೇಪರ್​ಲೆಸ್​ ಟಿಕೇಟ್ ಮತ್ತೊಂದು ಪ್ರಿಂಟ್ ಟಿಕೇಟ್​. ಈ ಎರಡು ಟಿಕೇಟ್ ನಿಯಮಗಳು ಕೂಡ ವಿಭಿನ್ನವಾಗಿವೆ.

ಪೇಪರ್‌ಲೆಸ್‌ ಟಿಕೇಟ್‌

ಪೇಪರ್‌ಲೆಸ್‌ ಟಿಕೇಟ್‌

UTS ಆಪ್‌ನಲ್ಲಿ ಲಭ್ಯವಾಗುವ ಪೇಪರ್‌ಲೆಸ್‌ ಟಿಕೇಟ್‌ ಆಯ್ಕೆ ನಿಮಗೆ ನಿಲ್ದಾಣದಿಂದ 5 ಕಿ.ಮೀ.ದೂರದಲ್ಲಿದ್ದರೆ ಲಭ್ಯವಾಗಲಿದೆ. ಈ ಆಯ್ಕೆಯನ್ನು ಆಯ್ದುಕೊಂಡರೆ ಟಿಕೇಟ್​ ನೇರವಾಗಿ ನಿಮ್ಮ ಮೊಬೈಲ್​ಗೆ ಡೌನ್​ಲೋಡ್ ಆಗಲಿದ್ದು, ಪರಿವೀಕ್ಷಕರಿಗೆ ಮೊಬೈಲ್‌ನಲ್ಲಿಯೇ ಟಿಕೇಟ್‌ ತೋರಿಸಬಹುದು.

ಪ್ರಿಂಟ್‌ ಟಿಕೇಟ್‌

ಪ್ರಿಂಟ್‌ ಟಿಕೇಟ್‌

ಎರಡನೇಯದು ಪ್ರಿಂಟ್ ಟಿಕೇಟ್​. ಈ ಆಯ್ಕೆಯನ್ನು ನೀವು ರೈಲು ನಿಲ್ದಾಣದಿಂದ ಹೆಚ್ಚು ದೂರದಲ್ಲಿದ್ದಾಗ ಬಳಸಬಹುದಾಗಿದೆ. ಇಲ್ಲಿ ನೀವು ಟಿಕೇಟ್ ಬುಕ್ ಮಾಡಿ ಪ್ರಿಂಟ್ ತೆಗೆದುಕೊಳ್ಳಬೇಕಾಗುತ್ತದೆ. ಈ ಆಯ್ಕೆ ಕ್ಲಿಕ್‌ ಮಾಡಿ ಟಿಕೇಟ್‌ ತೆಗೆದುಕೊಂಡು ನಿಮ್ಮಲ್ಲಿ ಪ್ರಿಂಟ್ ಟಿಕೇಟ್ ಇಲ್ಲದಿದ್ದರೆ ನಿಮ್ಮ ಟಿಕೇಟ್ ಮಾನ್ಯತೆ ಹೊಂದಿರುವುದಿಲ್ಲ.

R-Wallet

R-Wallet

UTS ಆಪ್‌ನಲ್ಲಿ R-Wallet ಎಂಬ ಹೊಸ ಆಯ್ಕೆ ದೊರೆಯುತ್ತಿದ್ದು, ಡಿಜಿಟಲ್‌ ವ್ಯಾಲೆಟ್‌ಗಳಂತೆ ಕಾರ್ಯನಿರ್ವಹಿಸುತ್ತದೆ. R-Walletನ್ನು ಆನ್​ಲೈನ್ ಬ್ಯಾಂಕಿಂಗ್ ಅಥವಾ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್​ ಮೂಲಕ ರೀಚಾರ್ಜ್ ಮಾಡಿಕೊಳ್ಳಬಹುದು. ರೂ. 100 ರಿಂದ ರೂ. 10 ಸಾವಿರದವರೆಗೆ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ರೂ. 10 ಸಾವಿರಗಳನ್ನು R-Walletಗೆ ರೀಚಾರ್ಜ್‌ ಮಾಡಿಸಿದರೆ ರೂ. 500 ಕ್ಯಾಶ್​ಬ್ಯಾಕ್ ಕೂಡ ದೊರೆಯುತ್ತದೆ. ಈ ವ್ಯಾಲೆಟ್‌ ಮೂಲಕ ಟಿಕೇಟ್‌ಗಳನ್ನು ಖರೀದಿಸಬಹುದಾಗಿದೆ.

ಮತ್ತೀತರ ಆಯ್ಕೆಗಳು

ಮತ್ತೀತರ ಆಯ್ಕೆಗಳು

UTS ಆಪ್‌ನಲ್ಲಿ ಕ್ಯಾನ್ಸಲ್‌ ಟಿಕೇಟ್‌ ಎಂಬ ಆಯ್ಕೆಯಿದ್ದು, ಟಿಕೇಟ್‌ ರದ್ದು ಮಾಡುವ ಆಯ್ಕೆಯನ್ನು ರೈಲ್ವೇ ಇಲಾಖೆ ನೀಡಿದೆ. ಇದರ ಜತೆ ಬುಕ್ಕಿಂಗ್‌ ಇತಿಹಾಸ, ಪ್ರೊಫೈಲ್‌, ಬುಕ್‌ ಆಗಿರುವ ಟಿಕೇಟ್‌ ತೋರಿಸುವ ಆಯ್ಕೆ, ಸಹಾಯ ಮತ್ತು ಲಾಗ್‌ಔಟ್‌ ಆಯ್ಕೆಯನ್ನು ನೀವು ನೋಡಬಹುದು.

Best Mobiles in India

English summary
You can book train ticket from your mobile phone. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X