Home
Apps

ಇನ್ ಸ್ಟಾಗ್ರಾಮ್ ನಲ್ಲಿ ಸ್ನೇಹಿತರೊಂದಿಗೆ ಒಟ್ಟಾಗಿ ಲೈವ್ ವಿಡಿಯೋ ಮಾಡಿ.. !

By Lekhaka

ಜನಪ್ರಿಯ ಫೋಟೋ ಶೇರಿಂಗ್ ಆಪ್ ಇನ್ ಸ್ಟಾಗ್ರಾಮ್ ಹೊಸದೊಂದು ಆಯ್ಕೆಯನ್ನು ತನ್ನ ಬಳಕೆದಾರರಿಗೆ ನೀಡಲು ಮುಂದಾಗಿದೆ. ನಿಮ್ಮ ಸ್ನೇಹಿತರೊಂದಿಗೆ ಒಟ್ಟಾಗಿ ಲೈವ್ ನಡೆಸುವ ಅವಕಾಶವನ್ನು ಮಾಡಿಕೊಡಲು ಮುಂದಾಗಿದೆ ಎನ್ನಲಾಗಿದೆ.

ಇನ್ ಸ್ಟಾಗ್ರಾಮ್ ನಲ್ಲಿ ಸ್ನೇಹಿತರೊಂದಿಗೆ ಒಟ್ಟಾಗಿ ಲೈವ್ ವಿಡಿಯೋ ಮಾಡಿ..	!

ಈ ಹೊಸ ಆಯ್ಕೆಯು ಆಂಡ್ರಾಯ್ಡ್ ಮತ್ತು ಐಎಸ್ಒ ಬಳಕೆದಾರರಿಗೆ ಮುಕ್ತವಾಗಿದೆ ಎನ್ನಲಾಗಿದೆ. ಈ ಆಯ್ಕೆಯಲ್ಲಿ ನಿಮ್ಮ ಸ್ನೇಹಿತರೊಂದಿಗೆ ಲೈವ್ ವಿಡಿಯೋ ಮಾಡಬಹುದಾಗಿದೆ. ನಿಮ್ಮ ಬ್ರಾಡ್ ಕಾಸ್ಟಿಂಗ್ ಗೆ ನಿಮ್ಮ ಸ್ನೇಹಿತರಿಗೆ ಆಹ್ವಾನವನ್ನು ಕಳುಹಿಸಬಹುದಾಗಿದೆ.

ಅದಕ್ಕಾಗಿಯೇ ಆಡ್ ಬಟನ್ ಅನ್ನು ನೀಡಲಾಗಿದೆ. ಅಲ್ಲದೇ ಇನ್ನೊಬ್ಬರು ಸ್ನೇಹಿತರು ಆಡ್ ಅದ ನಂತರದಲ್ಲಿ ಸ್ಕ್ರಿನ್ ಎರಡು ಭಾಗವಾಗಲಿದೆ. ಅಲ್ಲದೇ ನೀವು ನಿಮ್ಮ ಸ್ನೇಹಿತರನ್ನು ಲೈವ್ ಮಧ್ಯದಿಂದ ತೆಗೆದು ಹಾಕುವ ಅವಕಾಶವನ್ನು ಸಹ ಇಲ್ಲಿ ಮಾಡಿಕೊಡಲಾಗಿದೆ.

ಅಲ್ಲದೇ ನಿಮ್ಮ ಸ್ನೇಹಿತರು ಬೇಕೆಂದರೆ ಲೈವ್ ನಿಂದ ಹೊರ ಹೋಗುವ ಅವಕಾಶವನ್ನು ಮಾಡಿಕೊಟ್ಟಿದೆ. ಅಲ್ಲದೇ ನಿಮ್ಮ ಬ್ರಾಡ್ ಕಾಸ್ಟ್ ಆದ ನಂತರದಲ್ಲಿ ನಿಮ್ಮ ವಿಡಿಯೋವನ್ನು ನೀವು ಶೇರ್ ಮಾಡಬಹುದಾಗಿದೆ. ಅಲ್ಲದೇ ಲೈವ್ ವೇಳೆಯಲ್ಲಿ ಕಾಂಮೆಂಟ್ ಗಳಿಗೆ ಉತ್ತರ ನೀಡಬಹುದಾಗಿದೆ.

ಈಗಾಗಲೇ ಲೈವ್ ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡಿದ್ದು, ಈ ಹೊಸ ಆಯ್ಕೆಯಿಂದಾಗಿ ಮತ್ತಷ್ಟು ಖ್ಯಾತಿಯನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ. ಈ ಹೊಸ ಆಯ್ಕೆ ಯುವ ಸಮುದಾಯವನ್ನು ಹೆಚ್ಚು ಸೆಳೆಯಲಿದೆ ಎನ್ನಲಾಗಿದೆ.

Best Mobiles in India

English summary
This feature was brought in by a new update and it can be found in Instagram version 20 for both iOS and Android platforms.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+