ಇನ್ಮುಂದೆ ಕ್ರೋಮ್‌ಗೆ ಲಿಂಕ್ ಆಗದೆ ಜಿಮೇಲ್ ಲಾಗಿನ್ ಆಗಬಹುದು
ಗೂಗಲ್ ಕ್ರೋಮ್ ತನ್ನ ಕ್ರೋಮ್ 70 ರಲ್ಲಿ ಹೊಸ ನಿಫ್ಟಿ ವೈಶಿಷ್ಟ್ಯತೆಗಳನ್ನು ಸೇರಿಸಿದೆ. ಶೇರ್ ಮಾಡಿಕೊಂಡ ಡಿವೈಸ್ ಗಳಲ್ಲಿ ಲಾಗ್ ಔಟ್ ಆದ ನಂತರವೂ ನೀವು ಗೂಗಲ್ ವೆಬ್ ಸೈಟ್ ಗಳಿಗೆ ಲಿಂಕ್ ಆಗಿ ಇರುವ ಚಿಂತೆಯಿಂದ ಇನ್ನು ದೂರವಿರಬಹುದು.

ಬಳಕೆದಾರರಿಗೆ ಆನ್/ಆಫ್ ಮಾಡುವ ಆಯ್ಕೆ
ಈ ಬಗ್ಗೆ ಗೂಗಲ್ ಬ್ಲಾಗ್ ಪೋಸ್ಟ್ ನಲ್ಲಿ ಪ್ರಕಟಿಸಿದೆ. ಕ್ರೋಮ್ ನಿಭಾಯಿಸುವ ಸೈನ್ ಇನ್ ಗಳನ್ನು ಈಗ ಟರ್ನ್ ಆಫ್ ಮತ್ತು ಟರ್ನ್ ಆನ್ ಮಾಡುವ ಮೂಲಕ ಇನ್ನಷ್ಟು ಸರಳಗೊಳಿಸಲಾಗಿದೆ. ವೆಬ್ ಬೇಸ್ಡ್ ಸೈನ್ ಇನ್ ಜೊತೆಗೆ ಬ್ರೌಸರ್ ಬೇಸ್ಡ್ ಸೈನ್ ಇನ್ ಗಳನ್ನು ಟರ್ನ್ ಆನ್ ಮತ್ತು ಆಫ್ ಮಾಡಲು ಅವಕಾಶವಿರುತ್ತದೆ. ಅಂದರೆ ಯಾವಗ ನೀವು ಗೂಗಲ್ ವೆಬ್ ಸೈಟ್ ಗಳಿಗೆ ಸೈನ್ ಆಗುತ್ತೀರೋ ಆಗ ಸ್ವಯಂಚಾಲಿತವಾಗಿ ಕ್ರೋಮ್ ಗೂ ಕೂಡ ಅದೇ ಅಕೌಂಟಿನಲ್ಲಿ ಸೈನ್ ಇನ್ ಆಗುತ್ತೀರಿ.

ಸಮಯದ ಉಳಿತಾಯ:
ಇದರ ಅರ್ಥ ನೀವು ಯಾವಾಗ ಕ್ರೋಮ್ ನಿಂದ ಯಾವಾಗ ನೇರವಾಗಿ ನೀವು ಸೈನ್ ಔಟ್ ಆಗುತ್ತೀರೋ ಅಥವಾ ಯಾವುದೇ ಗೂಗಲ್ ವೆಬ್ ಸೈಟ್ ನಿಂದ ಸೈನ್ ಔಟ್ ಆಗುತ್ತೀರೋ ಆಗ ಎಲ್ಲಾ ಗೂಗಲ್ ಅಕೌಂಟ್ ಗಳಿಂದಲೂ ಸಂಪೂರ್ಣವಾಗಿ ಸೈನ್ ಔಟ್ ಆಗಿರುತ್ತೀರಿ. ಆ ಮೂಲಕ ಮಾನ್ಯುವಲಿ ಇತರ ವೆಬ್ ಸೈಟ್ ಗಳಿಂದ ಸೈನ್ ಔಟ್ ಮಾಡಲು ತೆಗೆದುಕೊಳ್ಳುವ ಸಮಯಗಳನ್ನು ಉಳಿಸುತ್ತದೆ.

ಡಿಫಾಲ್ಟ್ ಸಿಂಕ್ ಆಗಲ್ಲ
ಗೂಗಲ್ ಸ್ಪಷ್ಟನೆ ನೀಡಿರುವಂತೆ ಈ ಸೈನ್ ಇನ್ ಪ್ರೊಸೆಸ್ ನಲ್ಲಿ, ಕ್ರೋಮ್ ಸಿನ್ಕ್ರನೈಜೇಷನ್ ಡೀಫಾಲ್ಟ್ ಆಗಿ ಟ್ರಿಗರ್ ಆಗುವುದಿಲ್ಲವಂತೆ. ಒಂದು ವೇಳೆ ಇತರ ಡಿವೈಸ್ ಗಳಲ್ಲಿ ಸೇವ್ ಆಗಿರುವ ನಿಮ್ಮ ಬ್ರೌಸಿಂಗ್ ಹಿಸ್ಟರಿ, ಪಾಸ್ ವರ್ಡ್ ಗಳು, ಮತ್ತು ಬುಕ್ ಮಾರ್ಕ್ ಗಳು ನಿಮಗೆ ಎಲ್ಲಾ ಕಡೆಗಳಲ್ಲೂ ಅಗತ್ಯವಿದೆ ಎಂದಾದರೆ ಕ್ರೋಮ್ ಯುಐ ನಲ್ಲಿ ಬಲಭಾಗದ ಪೆನಲ್ ನಲ್ಲಿರುವ ಸಿನ್ಕ್ರನೈಜೇಷನ್ ನ್ನು ಆನ್ ಮಾಡಿದರೆ ಆಯ್ತು.

ಕುಕ್ಕೀಸ್ ಗಳನ್ನು ಡಿಲೀಟ್ ಮಾಡುವ ಸೌಲಭ್ಯ:
ಕೆಲವೊಮ್ಮೆ ಕುಕ್ಕೀಸ್ ಗಳು ಸಾಕಷ್ಟು ತೊಂದರೆಯನ್ನು ನೀಡುತ್ತದೆ. ಆದರೆ ಈ ಅಪ್ ಡೇಟ್ ನಲ್ಲಿ ಮತ್ತೊಂದು ಪ್ರಮುಖ ಲಾಭವೆಂದರೆ ಕ್ರೋಮ್ 70 ನೀವು ಸೈನ್ ಔಟ್ ಆದ ಕೂಡಲೇ ಎಲ್ಲಾ ಕುಕ್ಕೀಸ್ ಗಳನ್ನು ಕೂಡ ಡಿಲೀಟ್ ಮಾಡುತ್ತದೆ. ಹಾಗಾಗಿ ಕುಕ್ಕೀಸ್ ಗಳಿಂದ ಯಾರೂ ಕೂಡ ನಿಮ್ಮ ಬಗ್ಗೆ ಏನನ್ನೂ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ನಿಮ್ಮ ಅಂತರ್ಜಾಲದ ಭದ್ರತೆಯನ್ನು ಹೆಚ್ಚಿಸುವಲ್ಲಿ ಈ ಅಪ್ ಡೇಟ್ ಹೆಚ್ಚು ನೆರವು ನೀಡುತ್ತದೆ ಎಂದು ಕ್ರೋಮ್ ಹೇಳುತ್ತಿದೆ.


Click it and Unblock the Notifications





