Home
Apps

ವಾಟ್ಸ್ ಆಪ್ ನಲ್ಲಿ ಈ ಕೆಲಸಗಳನ್ನು ಮಾಡಿದರೆ ನೀವು ಜೈಲಿಗೆ ಹೋಗುತ್ತೀರಿ

ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ತಪ್ಪು ಮಾಹಿತಿ, ಕೆಟ್ಟ ಸಂದೇಶ ಇತ್ಯಾದಿಗಳ ವಿರುದ್ಧ ಸಮರ ಸಾರಿದೆ. ವಾಟ್ಸ್ ಆಪ್ ಖಂಡಿತವಾಗಿಯೂ ಜಾಗತಿಕವಾಗಿ ಜನರ ಸಂವಹನವನ್ನು ಸರಳಗೊಳಿಸಿದೆ ಎಂಬುದು ನಿಜ. ವಾಟ್ಸ್ ಆಪ್ ಗ್ರೂಪ್ ಇದರಲ್ಲಿ ದೊಡ್ಡ ಪಾತ್ರ ವಹಿಸಿದೆ. ಆದರೆ ಇದರ ಜೊತೆಗೆ ಸಮಸ್ಯೆಯೂ ಹುಟ್ಟಿದೆ. ತಪ್ಪು ಸಂದೇಶಗಳು, ಸುಳ್ಳಿ ಸುದ್ದಿಗಳನ್ನು ಹರಡುವಿಕೆ ವಾಟ್ಸ್ ಆಪ್ ನಲ್ಲಿ ಇತ್ತೀಚೆಗೆ ಅಧಿಕಗೊಂಡಿದೆ. ಇದಕ್ಕೆ ಕಡಿವಾಣ ಹಾಕುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ವಾಟ್ಸ್ ಆಪ್ ನಲ್ಲಿ ಈ ಕೆಲಸಗಳನ್ನು ಮಾಡಿದರೆ ನೀವು ಜೈಲಿಗೆ ಹೋಗುತ್ತೀರಿ

ಪ್ರತಿ ಬಳಕೆದಾರರ ಮೆಟಾ ಡಾಟಾವನ್ನು ಕಂಪೆನಿಯು ಕಲೆಕ್ಟ್ ಮಾಡುತ್ತದೆ ಮತ್ತು ಇದನ್ನು ಕಾನೂನು ಅಗತ್ಯತೆ ಬಿದ್ದಾಗ ಕಾನೂನಿಗೆ ತೋರಿಸಲು ಕೂಡ ವಾಟ್ಸ್ ಆಪ್ ಮುಂದಾಗುತ್ತದೆ ಎಂಬ ವಿಚಾರ ಹೆಚ್ಚಿನ ವಾಟ್ಸ್ ಆಪ್ ಬಳಕೆದಾರರಿಗೆ ತಿಳಿದಿರಲಿಕ್ಕಿಲ್ಲ. ಮೆಸೇಜ್ ಗಳು ಎನ್ಕ್ರಿಪ್ಟ್ ಆಗಿರುತ್ತದೆ. ಒಂದು ವೇಳೆ ಪೋಲೀಸರಿಗೆ ಇದರ ಅಗತ್ಯತೆ ಬಿದ್ದರೆ ನಿಮ್ಮ ಹೆಸರು, ಐಪಿ ಅಡ್ರೆಸ್, ಮೊಬೈಲ್ ನಂಬರ್, ಸ್ಥಳ, ಮೊಬೈಲ್ ನೆಟ್ ವರ್ಕ್, ಮೊಬೈಲ್ ಹ್ಯಾಂಡ್ ಸೆಟ್ ಟೈಪ್ ಸೇರಿದಂತೆ ಹಲವು ಮಾಹಿತಿಗಳನ್ನು ನೀಡಲಾಗುತ್ತದೆ. ಪೋಲೀಸರು ನೀವು ಯಾರ ಜೊತೆಗೆ ಚಾಟ್ ಮಾಡುತ್ತಿದ್ದೀರಿ, ಎಷ್ಟು ಹೊತ್ತು , ಯಾವ ಸಮಯಕ್ಕೆ ಚಾಟ್ ಮಾಡಿದ್ದೀರಿ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ.

ಇನ್ಫರ್ಮೇಷನ್ ಟೆಕ್ನಾಲಜಿ ಆಕ್ಟ್-200 ದ ಪ್ರಕಾರ ಈ ಕೆಳಗೆ ತಿಳಿಸಿರುವ ಯಾವುದೇ ಕೃತ್ಯದಲ್ಲಿ ವಾಟ್ಸ್ ಆಪ್ ಬಳಕೆದಾರ ತೊಡಗಿದ್ದರೆ ಅಂತಹವರನ್ನು ಅರೆಸ್ಟ್ ಮಾಡುವುದಕ್ಕೆ ಪೋಲೀಸರಿಗೆ ಅವಕಾಶವಿರುತ್ತದೆ. ವಾಟ್ಸ್ ಆಪ್ ಗಾಗಿ ದೇಶದಲ್ಲಿ ಯಾವುದೇ ಸಪರೇಟ್ ಕಾನೂನುಗಳಿಲ್ಲ. ಹಾಗಾಗಿ ಯಾವೆಲ್ಲ ಕೃತ್ಯಗಳನ್ನು ವಾಟ್ಸ್ ಆಪ್ ನಲ್ಲಿ ನಡೆಸುವಂತಿಲ್ಲ ಎಂಬ ಬಗ್ಗೆ ಮೊದಲು ತಿಳಿದುಕೊಳ್ಳಿ.

ಗ್ರೂಪ್ ಅಡ್ಮಿನ್ ಅರೆಸ್ಟ್

ಗ್ರೂಪ್ ಅಡ್ಮಿನ್ ಅರೆಸ್ಟ್

ವಾಟ್ಸ್ ಆಪ್ ನ ಗ್ರೂಪ್ ನಲ್ಲಿ ಗ್ರೂಪಿನ ಯಾವುದೇ ಸದಸ್ಯ ಬೇಜವಾಬ್ದಾರಿಯುತವಾಗಿ ವರ್ತಿಸಿದರೆ ಗ್ರೂಪ್ ಅಡ್ಮಿನ್ ನ್ನು ಬಂಧಿಸಬಹುದು.

ವೇಶ್ಯಾವಾಟಿಕೆ ಮತ್ತು ದೇಹ ವ್ಯಾಪಾರಕ್ಕೆ ಅವಕಾಶವಿಲ್ಲ

ವಾಟ್ಸ್ ಆಪ್ ನಲ್ಲಿ ಯಾವುದೇ ರೀತಿಯ ದೇಹದ ವ್ಯಾಪಾರ ಮತ್ತು ವೇಶ್ಯಾವಾಟಿಕೆಯನ್ನು ಉತ್ತೇಜಿಸುವ ಕೆಲಸ ಮಾಡುವಂತಿಲ್ಲ.

ಮಾರ್ಫಿಡ್ ಫೋಟೋ ಹಂಚಿಕೆ ನಿಷಿದ್ಧ

ಮಾರ್ಫಿಡ್ ಮಾಡಿರುವ ಯಾವುದೇ ಪ್ರಮುಖ ವ್ಯಕ್ತಿಯ ಫೋಟೋವನ್ನು ವಾಟ್ಸ್ ಆಪ್ ನಲ್ಲಿ ಹಂಚುವಂತಿಲ್ಲ.

ಮಹಿಳಾ ದೌರ್ಜನ್ಯ

ಮಹಿಳಾ ದೌರ್ಜನ್ಯ

ವಾಟ್ಸ್ ಆಪ್ ನಲ್ಲಿ ಮಹಿಳಾ ದೌರ್ಜನ್ಯ ನಡೆಸುವಂತಿಲ್ಲ


ಫೇಕ್ ಅಕೌಂಟ್ ಸೃಷ್ಟಿಸುವಿಕೆ

ಬೇರೆ ಯಾವುದೋ ವ್ಯಕ್ತಿಯ ಹೆಸರಿನಲ್ಲಿ ವಾಟ್ಸ್ ಆಪ್ ಅಕೌಂಟ್ ನ್ನು ತೆರೆದು ನಡೆಸುವಂತಿಲ್ಲ.

ಧರ್ಮಕ್ಕೆ ಅವಮಾನ ನಿಷಿದ್ಧ

ಅವಮಾನ ಮಾಡುವ ಉದ್ದೇಶದಿಂದ ಯಾವುದೇ ಧರ್ಮ ಅಥವಾ ಪೂಜಾ ಸ್ಥಳಕ್ಕೆ ಸಂಬಂಧಿಸಿದ ದ್ವೇಷ ಪೂರಿತ ಸಂದೇಶಗಳನ್ನು ಕಳುಹಿಸುವಂತಿಲ್ಲ.

ಹಿಂಸಾಚಾರಕ್ಕೆ ಪ್ರೇರಣೆ ನೀಡುವಂತಿಲ್ಲ

ಹಿಂಸಾಚಾರಕ್ಕೆ ಪ್ರೇರಣೆ ನೀಡುವಂತಿಲ್ಲ

ಸುಳ್ಳು ಸುದ್ದಿಗಳನ್ನು ಹರಡುವುದು ಅಥವಾ ಹಿಂಸಾಚಾರ, ಗಲಭೆಗೆ ಕಾರಣವಾಗುವ ಸೂಕ್ಷ್ಮ ವಿಷಯಗಳ ಬಗ್ಗೆ ನಕಲಿ ಸುದ್ದಿಗಳನ್ನು ಅಥವಾ ವದಂತಿಗಳನ್ನು ಹರಡುವಂತಿಲ್ಲ.

ಬ್ಯಾನ್ ಆಗಿರುವ ವಸ್ತುಗಳನ್ನು ಶೇರ್ ಮಾಡಬಾರದು

ವಾಟ್ಸ್ ಆಪ್ ಮೂಲಕ ಬ್ಯಾನ್ ಆಗಿರುವ ಯಾವುದೇ ವಸ್ತು ಅಥವಾ ಔಷಧವನ್ನು ಪ್ರಮೋಟ್ ಮಾಡುವುದು ಅಥವಾ ಮಾರಾಟ ಮಾಡುವಂತಿಲ್ಲ.

ಅಕ್ರಮ ಚಿತ್ರಕ್ಕೆ ನೋ ಎಂಟ್ರಿ

ಅಕ್ರಮವಾಗಿ ಚಿತ್ರಿಸಿದ ಯಾವುದೇ ಜನರ ವೀಡಿಯೋವನ್ನು ಹಂಚುವಂತಿಲ್ಲ.

ಅಶ್ಲೀಲತೆಗೆ ಅವಕಾಶವಿಲ್ಲ

ಅಶ್ಲೀಲ ಚಿತ್ರ ಅಥವಾ ಅಶ್ಲೀಲ ವಸ್ತುವನ್ನು ವಾಟ್ಸ್ ಆಪ್ ನಲ್ಲಿ ಹಂಚಿಕೆ ಮಾಡುವಂತಿಲ್ಲ.

Best Mobiles in India

English summary
You may land in jail if you do these things on WhatsApp
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+