ಇನ್ಮುಂದೆ ಜಿಮೇಲ್‌ ಆಪ್‌ನಲ್ಲಿಯೂ ಶೆಡ್ಯೂಲ್‌ ಮಾಡಬಹುದು..!

By Gizbot Kannada
|

ವಿಶ್ವದಲ್ಲಿ ಅತೀ ಹೆಚ್ಚು ಮಂದಿ ಬಳಕೆ ಮಾಡಿಕೊಳ್ಳುತ್ತಿರುವ ಮೇಲ್ ಆಗಿರುವ ಗೂಗಲ್ ಒಡೆತನಕ್ಕೆ ಸೇರಿರುವ ಜಿಮೇಲ್ ದಿನದಿಂದ ದಿನಕ್ಕೆ ಬದಲಾವಣೆಯನ್ನು ಹೊಂದುತ್ತಿದೆ. ಈಗಾಗಲೇ ಹೊಸದಾಗಿ ಹಲವು ಆಪ್ಡೇಟ್ ಗಳನ್ನು ಪಡೆದುಕೊಳ್ಳುವ ಮೂಲಕ ಬಳಕೆದಾರರಿಗೆ ಸಾಕಷ್ಟು ಸುಲಭವಾಗಿ ಮೇಲ್ ಆಕ್ಸಿಸ್ ಪಡೆಯುವಂತೆ ಮಾಡಿದೆ. ಇದೇ ಮಾದರಿಯಲ್ಲಿ ಗೂಗಲ್ ತನ್ನ ಆಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿ ಜಿ-ಮೇಲ್ ಬಳಸುವವರಿಗೆ ಹೊಸದೊಂದು ಆಯ್ಕೆಯನ್ನು ನೀಡಲು ಮುಂದಾಗಿದೆ.

ಇನ್ಮುಂದೆ ಜಿಮೇಲ್‌ ಆಪ್‌ನಲ್ಲಿಯೂ  ಶೆಡ್ಯೂಲ್‌ ಮಾಡಬಹುದು..!

ಜಿಮೇಲ್ ಆಪ್ ನಲ್ಲಿ ಶೀಘ್ರವೇ ಮೇಲ್ ಅನ್ನು ಶೆಡ್ಯೂಲ್ಡ್ ಮಾಡುವ ಅವಕಾಶವನ್ನು ಮಾಡಿಕೊಡಲಿದೆ ಎನ್ನಲಾಗಿದ್ದು, ಈ ಕುರಿತು ಆಂಡ್ರಾಯ್ಡ್ ಪೊಲೀಸ್ ಮಾಹಿತಿಯನ್ನು ನೀಡಿದೆ. ಈಗಾಗಲೇ ಗೂಗಲ್ ಮೇಲ್ ಶೆಡ್ಯೂಲ್ಡ್ ಆಯ್ಕೆಯನ್ನು ನೀಡುವ ಕುರಿತು ಯೋಜನೆಯನ್ನು ರೂಪಿಸಿದೆ. ಶೀಘ್ರವೇ ಬೀಟಾ ಬಳಕೆದಾರರಿಗೆ ಈ ಆಯ್ಕೆಯೂ ದೊರೆಯಲಿದೆ. ಇದಾದ ನಂತರದಲ್ಲಿ ಸಾಮಾನ್ಯ ಬಳಕೆದಾರರಿಗೂ ಹೊಸ ಆಯ್ಕೆ ಲಭ್ಯವಾಗಲಿದೆ.

ಈ ಹೊಸ ಆಯ್ಕೆಯೂ ಕಾಣಿಸಿಕೊಂಡ ನಂತರದಲ್ಲಿ ಆಂಡ್ರಾಯ್ಡ್ ಬಳಕೆದಾರರು ತಮ್ಮ ಜಿಮೇಲ್ ಆಪ್ ನಲ್ಲಿ ಮೇಲ್ ಗಳನ್ನು ಶೆಡ್ಯೂಲ್ಡ್ ಮಾಡಬಹುದಾಗಿದೆ. ಇದರಿಂದಾಗಿ ಜಿಮೇಲ್ ನಲ್ಲಿ ಮೇಲ್ ಮಾಡುವ ಪದ್ದತಿಯೇ ಬದಲಾಗಲಿದೆ ಎನ್ನಲಾಗಿದೆ. ನಿಮಗೆ ಬೇಕಾದ ಸಮಯದಲ್ಲಿ ನೀವು ಮೇಲ್ ಶೆಡ್ಯೂಲ್ಡ್ ಮಾಡುವ ಅವಕಾಶವನ್ನು ಪಡೆದುಕೊಳ್ಳಬಹುದಾಗಿದೆ.

ಇದಲ್ಲದೇ ಒಂದೇ ಇಮೇಲ್ ಅನ್ನು ಅನೇಕ ಬಾರಿ ಸೆಂಡ್ ಮಾಡುವ ಅವಕಾಶವನ್ನು ಮಾಡಿಕೊಡಲಿದೆ. ಇದರಿಂದಾಗಿ ಒಬ್ಬರೆ ಬಳಕೆದಾರರಿಗೆ ಹಲವು ಬಾರಿ ರಿಮೆಂಡ್ ಮಾಡುವ ಸಲುವಾಗಿ ನೂರು ಬಾರಿ ಮೇಲ್ ಮಾಡುವ ಬದಲು ಒಮ್ಮೆಗೆ ಹಲವು ಬಾರಿ ಮೇಲ್ ಹೋಗುವಂತೆ ಮಾಡಬಹುದಾಗಿದೆ. ಇದರಿಂದಾಗಿ ಜಿಮೇಲ್ ಬಳಕೆಯೂ ಸಾಕಷ್ಟು ಸುಲಭವಾಗಲಿದೆ.

ಇನ್ಮುಂದೆ ಜಿಮೇಲ್‌ ಆಪ್‌ನಲ್ಲಿಯೂ  ಶೆಡ್ಯೂಲ್‌ ಮಾಡಬಹುದು..!

ಈಗಾಗಲೇ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ನೂತನ ಆವೃತ್ತಿಯಾದ ಆಂಡ್ರಾಯ್ಡ್ ಪಿ ಫೈನಲ್ ಬೀಟಾ ಆವೃತ್ತಿಯೂ ಲಾಂಚ್ ಆಗಿದೆ. ನೀವು ಗೂಗಲ್ ಸ್ಮಾರ್ಟ್ ಪೋನ್ ಗಳನ್ನು ಬಳಕೆ ಮಾಡಿಕೊಳ್ಳುತಿದ್ದರೇ ನೀವು ಈಗಲೇ ಈ ಬೀಟಾ ಆವೃತ್ತಿಯನ್ನು ನಿಮ್ಮ ಸ್ಮಾರ್ಟ್ಫೋನ್ ಗಳಲ್ಲಿ ಬಳಕೆ ಮಾಡಿಕೊಳ್ಳು ಅವಕಾಶವನ್ನು ಗೂಗಲ್ ಮಾಡಿಕೊಟ್ಟಿದೆ.

ಗೂಗಲ್ ಪಿಕ್ಸಲ್, ಗೂಗಲ್ ಪಿಕ್ಸಲ್ XL, ಗೂಗಲ್ ಪಿಕ್ಸಲ್ 2 ಮತ್ತು ಗೂಗಲ್ ಪಿಕ್ಸಲ್ XL 2 ಸ್ಮಾರ್ಟ್ ಫೋನ್ ಗಳಿಗೆ ಈ ಬಿಟಾ ಆವೃತ್ತಿಯೂ ಮೊದಲಿಗೆ ಲಭ್ಯವಿರಲಿದೆ. ಇದಾದ ನಂತರದಲ್ಲಿ ಬೇರೆ ಸ್ಮಾರ್ಟ್ ಫೋನ್ ಬಳಕೆದಾರರು ಸಹ ಆಂಡ್ರಾಯ್ಡ್ ಪಿ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
You may soon be able to schedule mails in Gmail app. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X