ಜಿಮೇಲ್‌ನಲ್ಲಿ ಇನ್ಮುಂದೆ ಈ ಎರಡು ಫೀಚರ್‌ಗಳು ಕಾಣಲ್ಲ..!
ಗೂಗಲ್ ಜಿಮೇಲ್ ಗೆ ಹೊಸ ಅಪ್ ಡೇಟ್ ನ್ನು ಬಿಡುಗಡೆಗೊಳಿಸಿದೆ. ಈ ಹೊಸ ಅಪ್ ಡೇಟ್ ನಲ್ಲಿ ಹೊಸದಾಗಿ ವೈಶಿಷ್ಟ್ಯತೆಗಳನ್ನು ಸೇರಿಸುವ ಬದಲಾಗಿ ಕೆಲವು ವೈಶಿಷ್ಟ್ಯತೆಗಳನ್ನು ತೆಗೆದುಹಾಕುವ ಕೆಲಸವನ್ನು ಮಾಡಿದೆ. ಹೌದು, ಯಾವ ವೈಶಿಷ್ಟ್ಯತೆಗಳನ್ನು ಬಳಕೆದಾರರು ಹೆಚ್ಚು ಬಳಸುತ್ತಿಲ್ಲ ಎಂಬುದನ್ನು ಗಮನಿಸಿದ ಜಿಮೇಲ್ ಆ ವೈಶಿಷ್ಟ್ಯತೆಗಳನ್ನು ನಿರ್ಧಿಷ್ಟ ಅಕೌಂಟ್ ಟೈಪ್ ನಿಂದ ತೆಗೆದುಹಾಕುತ್ತಿದೆ. ಅಷ್ಟೇ ಅಲ್ಲ ಕ್ವಿಕ್ ರೆಸ್ಪಾನ್ಸ್ ವೈಶಿಷ್ಟ್ಯತೆಯನ್ನು ಕೂಡ ಜಿಮೇಲ್ ತೆಗೆದುಹಾಕುವ ನಿರ್ಧಾರವನ್ನು ಕೈಗೊಂಡಿದೆ.
ಈ ವರ್ಷದ ಆರಂಭದಲ್ಲಿ ಜಿಮೇಲ್ ಈ Nudges ವೈಶಿಷ್ಟ್ಯತೆಯನ್ನು ಪರಿಚಯಿಸಿತ್ತು. ಆ ಮೂಲಕ ಮೆಸೇಜ್ ಗಳಿಗೆ ಪ್ರತ್ಯುತ್ತರ ಮೆಸೇಜ್ ಗಳನ್ನು ಕಳುಹಿಸಲು ಗ್ರಾಹಕರಿಗೆ ನೆನಪಿಸುವ ಕೆಲಸವನ್ನು ಕೆಲವು ಪ್ರಮುಖ ರೆಸ್ಪಾನ್ಸ್ ಮೆಸೇಜ್ ಗಳ ವಿಚಾರದಲ್ಲಿ ಮಾಡಲಾಗುತ್ತಿತ್ತು. ಇದನ್ನು ಹೊರತು ಪಡಿಸಿ ಕ್ವಿಕ್ ರೆಸ್ಪಾನ್ಸ್ ವೈಶಿಷ್ಟ್ಯತೆಯನ್ನ ಕೂಡ ಜಿಮೇಲ್ ತೆಗೆದುಹಾಕುತ್ತಿದೆ. ಕಾರಣ ಅತೀ ಕಡಿಮೆ ಬಳಕೆದಾರರು ಈ ಕ್ವಿಕ್ ರೆಸ್ಪಾನ್ಸ್ ವೈಶಿಷ್ಟ್ಯತೆಯನ್ನು ಬಳಕೆ ಮಾಡುತ್ತಿದ್ದಾರಂತೆ.

ಅಷ್ಟೇ ಅಲ್ಲ, ಜಿಮೇಲ್ ಆಪ್ ನ ಮೈ ಅಕೌಂಟ್ ನ್ನು ರಿನೇಮ್ ಮಾಡಿರುವ ಗೂಗಲ್ ಅದನ್ನು ಮ್ಯಾನೇಜ್ ಯುವರ್ ಗೂಗಲ್ ಅಕೌಂಟ್ ಎಂದು ಮರುನಾಮಕರಣ ಮಾಡಿದೆ. ಇನ್ ಬಾಕ್ಸ್ ನಲ್ಲಿ 'Someday’ ಆಯ್ಕೆ ಕೂಡ ಸೇರಿಕೊಂಡಿದ್ದು ಇಮೇಲ್ ಗಳನ್ನು ಸ್ನೋಝ್ ಮಾಡಲು ಇದು ಅನುಕೂಲಕರವಾಗಿರದೆ.
ಈ ಸಂಬಡಿ ವೈಶಿಷ್ಟ್ಯತೆಯು ಇಮೇಲ್ ಗಳನ್ನು ಹೈಡ್ ಮಾಡುವುದಕ್ಕೆ ಸಹಕಾರಿಯಾಗಿದ್ದು ಯಾವುದೇ ನಿರ್ಧಿಷ್ಟ ಡೇಟ್ ಇಲ್ಲದೆ ಒಂದು ಸ್ನೋಝ್ಡ್ ಫೋಲ್ಡರ್ ನಲ್ಲಿ ಅದನ್ನು ಸೇವ್ ಮಾಡಿ ಇಡಲು ಅನುಕೂಲವಾಗುತ್ತದೆ.ಬೇರೆಬೇರೆ ಹಂತಗಳಲ್ಲಿ ಈ ಅಪ್ ಡೇಟ್ ನ್ನು ಕಂಪೆನಿಯು ಬಿಡುಗಡೆಗೊಳಿಸಲಿದ್ದು ಎಲ್ಲಾ ಬಳಕೆದಾರರು ಕೆಲವೇ ದಿನಗಳಲ್ಲಿ ಇದನ್ನು ಪಡೆಯಲಿದ್ದಾರೆ.
ಇತ್ತೀಚೆಗಷ್ಟೇ, ಆಂಡ್ರಾಯ್ಡ್ ನಲ್ಲಿ ಬಹಳ ಅಗತ್ಯವಾಗಿ ಬೇಕಾಗಿದ್ದ ಅಪ್ ಡೇಟ್ ನ್ನು ಜಿಮೇಲ್ ಮಾಡಿತ್ತು. ಅಂಡೂ ಸೆಂಡ್ ವೈಶಿಷ್ಟ್ಯತೆಯನ್ನು ಗೂಗಲ್ ಆಂಡ್ರಾಯ್ಡ್ ನಲ್ಲಿ ಪರಿಚಯಿಸಿತ್ತು. ಇಲ್ಲಿವರೆಗೂ ಕೇವಲ ವೆಬ್ ವರ್ಷನ್ ನಲ್ಲಿ ಮಾತ್ರ ಈ ಅಂಡೂ ಸೆಂಡ್ ವೈಶಿಷ್ಟ್ಯತೆ ಲಭ್ಯವಾಗುತ್ತಿತ್ತು, ವರದಿಯ ಪ್ರಕಾರ ಯಾವ ಬಳಕೆದಾರರು ಜಿಮೇಲ್ ವರ್ಷನ್ 8.7 ಮತ್ತು ಅದಕ್ಕಿಂತ ಮೇಲಿನ ವರ್ಷನ್ ನಲ್ಲಿ ಇದ್ದಾರೋ ಅವರು ಈ ವೈಶಿಷ್ಟ್ಯತೆಯ ಅನುಭವ ಪಡೆಯಲು ಸಾಧ್ಯವಿದೆ.
ಈ ವೈಶಿಷ್ಟ್ಯತೆಯ ಸಹಾಯದಿಂದಾಗಿ ಬಳಕೆದಾರರು ಕಳುಹಿಸಿದ ಇಮೇಲ್ ತಪ್ಪಾಗಿದ್ದಲ್ಲಿ ಕೂಡಲೇ ಅದನ್ನು ರೀಕಾಲ್ ಮಾಡಿಕೊಳ್ಳಬಹುದು ಮತ್ತು ಅದನ್ನು ರಿಸೀವ್ ಮಾಡುವವರ ಇನ್ ಬಾಕ್ಸ್ ನಲ್ಲೂ ಕೂಡ ಆ ಇಮೇಲ್ ನ್ನು ತೆಗೆಯಲಾಗುತ್ತದೆ. ಇದನ್ನು ಅನುಸರಿಸಲು ಬಳಕೆದಾರರು ಕೆಲವು ಸರಳ ಹಂತಗಳನ್ನು ಅನುಸರಿಸಬೇಕಾಗುತ್ತದೆ.

ಮೊದಲನೆಯದಾಗಿ, ಬಳಕೆದಾರರು ಜಿಮೇಲ್ ಆಪ್ ನ್ನು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ತೆರೆಯಿರಿ. ನೀವೀಗ ಮೈನ್ ಸ್ಕ್ರೀನ್ ನ್ನು ಗಮನಿಸಬಹುದು. ಅಲ್ಲಿ ಸೆಂಡ್ ಬಟನ್ ಸ್ಕ್ರೀನಿನ ಕೆಳಭಾಗದಲ್ಲಿ ಇರುತ್ತದೆ. ಒಮ್ಮೆ ನೀವು ಮೆಸೇಜ್ ಸೆಂಡ್ ಮಾಡಿದ ನಂತರ ನೀವು ಕಪ್ಪು ಬಾರ್ ನ್ನು ಗಮನಿಸಬಹುದು.ಇದರ ಎಡಭಾಗದಲ್ಲಿ ಸೆಂಡಿಂಗ್ ಎಂಬುದನ್ನು ಬಿಳಿಯ ಬಣ್ಣದಲ್ಲಿ ಬರೆದಿರಲಾಗಿರುತ್ತದೆ. ಮತ್ತು ಬಲಭಾಗದಲ್ಲಿ ಕ್ಯಾನ್ಸಲ್ ಆಯ್ಕೆಯನ್ನು ಹಳದಿ ಬಣ್ಣದಲ್ಲಿ ಬರೆಯಲಾಗಿರುತ್ತದೆ.
ಒಮ್ಮೆ ಇಮೇಲ್ ಸೆಂಡ್ ಮಾಡಿದ ನಂತರ ಅದು ತಪ್ಪಾಗಿ ಸೆಂಡ್ ಮಾಡಿದ್ದರೆ ಕೂಡಲೇ ಕ್ಯಾನ್ಸಲ್ ಬಟನ್ ನ್ನು ಒತ್ತಿದ್ದರೆ ಈ ಆಯ್ಕೆಯು ಕಳುಹಿಸಿದ ಮೆಸೇಜ್ ಅಂಡೂ ಆಗುತ್ತದೆ.ಅಂಡೂ ಆಯ್ಕೆಯಿಂದಾಗಿ ರಿಸೀವರ್ ಇನ್ ಬಾಕ್ಸ್ ನಿಂದಾಗಿ ಕಳುಹಿಸಿದ ಇಮೇಲ್ ನ್ನು ಮರುಪಡೆಯುತ್ತದೆ ಸಾಧ್ಯವಾಗುತ್ತದೆ.


Click it and Unblock the Notifications








