ಮೊಬೈಲ್ ಸ್ಕ್ರೀನ್ ನಲ್ಲಿ ಜಿರಲೆ ಓಡಾಡಬೇಕಾ?

By Gizbot Bureau
|

ತಮಾಷೆಗೆ, ಕ್ರೇಝಿನೆಸ್ ಗೆ ಒಂದು ಚೌಕಟ್ಟಿದಿಯಾ ಹೇಳಿ. ಖಂಡಿತ ಇಲ್ಲ ಅಲ್ವಾ? ಒಬ್ಬಬ್ಬೊಬ್ಬರಿಗೆ ಒಂದೊಂದು ರೀತಿಯ ಹುಚ್ಚುತನಗಳಿರುತ್ತದೆ. ಅದನ್ನು ಕೆಲವರು ಮೊಬೈಲಿಗೆ ಅಳವಡಿಸಿಕೊಳ್ಳುವುದಕ್ಕೂ ಕೂಡ ಇಚ್ಛಿಸುತ್ತಾರೆ. ಉದಾಹರಣೆಗೆ ರಿಂಗ್ ಟೋನೇ ತೆಗೆದುಕೊಳ್ಳಿ. ನಿಶ್ಯಬ್ಧವಾಗಿದ್ದ ಬ್ಯಾಂಕ್ ಮೊಂದರಲ್ಲಿ ಗ್ರಾಹಕರೊಬ್ಬರ ಮೊಬೈಲ್ ನಲ್ಲಿ“ತಂಗಾಳಿಯಲ್ಲಿ ನಾನು ತೇಲಿಬಂದೆ” ಸಾಂಗ್ ರಿಂಗಣಿಸಿದ್ದನ್ನು ನೋಡಿ ಒಮ್ಮೆಲೆ ಬ್ಯಾಂಕ್ ನಲ್ಲಿದ್ದವರೆಲ್ಲ ಬೆಚ್ಚಿ ಬಿದ್ದ ಘಟನೆಯನ್ನು ನೆನಪಿಸಿಕೊಂಡು ಬ್ಯಾಂಕ್ ಸಿಬ್ಬಂದಿಯೊಬ್ಬರು ನಗೆಚಟಾಕಿ ಹಾರಿಸಿದ್ದರು.

ಮೊಬೈಲ್ ಸ್ಕ್ರೀನ್ ನಲ್ಲಿ ಜಿರಲೆ

ಇಂತಹದ್ದೇ ಹುಚ್ಚು ಕ್ರೇಜ್ ಗೆ ಅವಕಾಶ ನೀಡುವ ಆಪ್ ವೊಂದರ ಬಗ್ಗೆ ನಾವು ನಿಮಗೆ ಇವತ್ತು ಇಲ್ಲಿ ಹೇಳುತ್ತಿದ್ದೇವೆ.ಮೊಬೈಲ್ ಸ್ಕ್ರೀನ್ ಚೆನ್ನಾಗಿ ಕಾಣ್ಬೇಕು ಎಂದು ಹೊಸ ಹೊಸ ವಾಲ್ ಪೋಸ್ಟ್ ಹಾಕಿಕೊಳ್ಳೋದು ಮಾಮೂಲು. ಆದರೆ ಇದು ನಿಮ್ಮ ಮೊಬೈಲ್ ಸ್ಕ್ರೀನ್ ನಲ್ಲಿ ಜಿರಲೆ ಓಡಾಡೋ ಹಾಗೆ ಮಾಡುವುದು!

ಹೌದು ನಾವು ಹೇಳುತ್ತಿರೋದು ನಿಜ. ನಿಮ್ಮ ಮೊಬೈಲ್ ಸ್ಕ್ರೀನ್ ನಲ್ಲಿ ಜಿರಲೆಗಳು ಅತ್ತಿಂದಿತ್ತ ಇತ್ತಿಂದತ್ತ ಓಡಾಡುವ ಹಾಗೆ ಮಾಡಬಹುದು.

ಬೆಕ್ಕುಗಳು ಇಷ್ಟ ಪಡುತ್ತವೆ!

ಬೆಕ್ಕುಗಳು ಇಷ್ಟ ಪಡುತ್ತವೆ!

ನೀವು ಪ್ರಾಣಿ ಪ್ರಿಯರಾಗಿದ್ದು ಮನೆಯಲ್ಲಿ ಬೆಕ್ಕುಗಳನ್ನು ಸಾಕಿದ್ದೀರಾ? ಹಾಗಿದ್ದರೆ ನಿಮ್ಮ ಮುದ್ದು ಬೆಕ್ಕು ಮೊಬೈಲ್ ನೋಡಿ ಆಗಾಗ ಏನಾದರೂ ಕಿತಾಪತಿ ಕೆಲಸ ಮಾಡುತ್ತಿರುತ್ತದೆಯಾ? ಒಮ್ಮೆ ಮೊಬೈಲ್ ಸ್ಕ್ರೀನ್ ನಲ್ಲಿ ಜಿರಲೆಗಳು ಓಡಾಡುವ ಹಾಗೆ ಮಾಡಿ ನಿಮ್ಮ ಮುದ್ದು ಬೆಕ್ಕಿಗೆ ಕೊಟ್ಟು ನೋಡಿ. ತಮಾಷೆಯ ಸನ್ನಿವೇಶ ಖಂಡಿತ ಸೃಷ್ಟಿಯಾಗುತ್ತದೆ. ನಿಮ್ಮ ಮುದ್ದು ಬೆಕ್ಕು ಸ್ಕ್ರೀನಿನಲ್ಲಿ ಓಡಾಡುವ ಜಿರಲೆ ಹಿಡಿಯುವುದಕ್ಕೆ ಪ್ರಯತ್ನಿಸುತ್ತದೆ.

ನಿಮ್ಮ ಮುದ್ದು ಕೂಸು ಮೊಬೈಲ್ ಮುಟ್ಟಬಾರದಾ?

ನಿಮ್ಮ ಮುದ್ದು ಕೂಸು ಮೊಬೈಲ್ ಮುಟ್ಟಬಾರದಾ?

ನಿಮ್ಮ ಮಕ್ಕಳು ಯಾವಾಗಲೂ ಮೊಬೈಲ್ ಮುಟ್ಟುತ್ತಿರುತ್ತಾರಾ? ಅವರಿಗೆ ಜಿರಲೆ ಅಂದರೆ ಭಯ ಇದ್ಯಾ? ಹಾಗಿದ್ರೆ ನೀವು ಈ ಆಪ್ ನ್ನು ಇನ್ಸ್ಟಾಲ್ ಮಾಡಿಕೊಂಡು ಜಿರಲೆಗಳು ಮೊಬೈಲ್ ಸ್ಕ್ರೀನ್ ನಲ್ಲಿ ಓಡಾಡುವಂತೆ ಮಾಡಿ. ನಿಮ್ಮ ಮಕ್ಕಳು ಮೊಬೈಲ್ ಮುಟ್ಟಿ ಎಲ್ಲಿ ಹಾಳು ಮಾಡಿಬಿಡುತ್ತಾರೇನೋ ಎಂಬ ಭಯದಿಂದ ಮುಕ್ತರಾಗಬಹುದು. ಯಾಕೆಂದರೆ ಸ್ಕ್ರೀನಿನಲ್ಲಿ ಓಡಾಡುವ ಜಿರಲೆಗಳನ್ನು ನೋಡಿ ಅವರು ನಿಮ್ಮ ಮೊಬೈಲ್ ನ್ನು ಮುಟ್ಟುವುದೇ ಇಲ್ಲ.

ಇನ್ಸ್ಟಾಲ್ ಮಾಡುವುದು ಬಹಳ ಸುಲಭ:

ಇನ್ಸ್ಟಾಲ್ ಮಾಡುವುದು ಬಹಳ ಸುಲಭ:

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಜಸ್ಟ್ ಫಾರ್ ಫನ್ ನವರು ಡೆವಲಪ್ ಮಾಡಿರುವ ಬಗ್ ಇನ್ ಎ ಫೋನ್ ಫನ್ನಿ ಜೋಕ್ ಆಪ್ ನ್ನು ಇನ್ಸ್ಟಾಲ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳಿ. ನಂತರ ಅದರಲ್ಲಿ ಕೇಳಲಾಗುವ ಅನುಮತಿಗಳನ್ನು ನೀಡಿ, ಜಿರಲೆ ಗಾತ್ರ ಎಷ್ಟು ದೊಡ್ಡದಿರಬೇಕು ಎಂಬುದನ್ನು ಸೆಟ್ ಮಾಡಿ. ನಂತರ ಎಷ್ಟು ಸೆಕೆಂಡ್ ಗೆ ಜಿರಲೆಗಳು ಓಡಾಡಬೇಕು ಎಂಬುದನ್ನು ಸೆಟ್ ಮಾಡುವುದಕ್ಕೂ ಕೂಡ ಅವಕಾಶವಿರುತ್ತದೆ. ನಂತರ ನಿಮ್ಮ ಮೊಬೈಲ್ ಸ್ಕ್ರೀನಿನಲ್ಲಿ ಜಿರಲೆಗಳು ಓಡಾಡುವುದಕ್ಕೆ ಪ್ರಾರಂಭಿಸುತ್ತವೆ.

ಬ್ಯಾಟರಿ ಬಳಕೆ ಹೆಚ್ಚು:

ಬ್ಯಾಟರಿ ಬಳಕೆ ಹೆಚ್ಚು:

ಇದೊಂದು ಜಸ್ಟ್ ಫನ್ನಿ ಆಪ್ ಅಷ್ಟೇ. ಜಿರಲೆಗಳು ಓಡಾಡುವಾಗ ಸೌಂಡ್ ಬರುತ್ತಿರುತ್ತದೆ. ಹಾಗಾಗಿ ಸ್ವಲ್ಪ ಬ್ಯಾಟರಿ ಬಳಕೆಯಾಗುವ ಸಾಧ್ಯತೆ ಇದೆ. ಆದರೆ ಕೆಲವು ಸಮಯದ ತಮಾಷೆಗೆ ಖಂಡಿತ ಓಕೆ ಅಷ್ಟೇ!

Best Mobiles in India

Read more about:
English summary
Your Cat Might Love This Cockroach App

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X