ನೀವು ಬಳಸುತ್ತಿರುವ ಆಪ್‌ಗಳು ನಿಮ್ಮನ್ನು ಸುಲಿಗೆ ಮಾಡುತ್ತಿವೆ!! ಹೇಗೆ ಗೊತ್ತಾ?
ದೊಡ್ಡ ದೊಡ್ಡ ಮಾರ್ಕೆಟಿಂಗ್ ಸಂಸ್ಥೆಗಳಿಗೆ ನಿಮ್ಮ ಮಾಹಿತಿಗಳನ್ನು ನೀಡಿ ಲಾಭ ಮಾಡಿಕೊಳ್ಳುತ್ತಿವೆ ಎಂದಿರುವ ವರದಿಯೊಂದು ಪ್ರಕಟವಾಗಿದೆ.!
ನೀವು ಬಳಕೆ ಮಾಡುತ್ತಿರುವ ಆಪ್‌ಗಳು ಉಪಯೋಗವಾಗಿರಬಹುದು ಆದರೆ ಆಪ್‌ಗಳ ಬಳಕೆಯಿಂದ ನಿಮ್ಮ ಸ್ವಂತಿಕೆ ಹಾಳಾಗುತ್ತಿದೆ ಎಂಬುದು ನಿಮಗೆ ಗೊತ್ತೆ? ಹೌದು, ನೀವು ಬಳಸುತ್ತಿರುವ 70% ಆಪ್‌ಗಳು ನಿಮಗೆ ಮೋಸ ಮಾಡುತ್ತಿವೆ ಎಂದರೆ ನೀವು ನಂಬಲೇಬೇಕು.!
ನೀವು ಬಳಕೆ ಮಾಡುತ್ತಿರವ ಆಪ್‌ಗಳು ನಿಮ್ಮೆಲ್ಲಾ ಖಾಸಾಗಿ ಮಾಹಿತಿಗಳನ್ನು ತಮ್ಮ ಲಾಭಕ್ಕಾಗಿ ಮಾರಿಕೊಳ್ಳುತ್ತಿವೆ.! ದೊಡ್ಡ ದೊಡ್ಡ ಮಾರ್ಕೆಟಿಂಗ್ ಸಂಸ್ಥೆಗಳಿಗೆ ನಿಮ್ಮ ಮಾಹಿತಿಗಳನ್ನು ನೀಡಿ ಲಾಭ ಮಾಡಿಕೊಳ್ಳುತ್ತಿವೆ ಎಂದಿರುವ ವರದಿಯೊಂದು ಪ್ರಕಟವಾಗಿದೆ.!! ಹಾಗಾದರೆ, ವರದಿ ಏನು ಹೇಳಿದೆ? ನಾವು ಮಾಡಬೇಕಾದುದು ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಸಮೀಕ್ಷೆ ನಡೆದಿದೆ.!!
ಸ್ಪೇನ್ ದೇಶದ IMDA ನೆಟ್‌ವರ್ಕ್ಸ್ ಎಂಬ ಸಂಸ್ಥೆ ಈ ಸಮೀಕ್ಷೆ ನಡೆಸಿದ್ದು, ಜನರು ಬಳಸುತ್ತಿರುವ ಶೇ.70 ಪರ್ಸೆಂಟ್‌ಗೂ ಹೆಚ್ಚು ಆಪ್‌ಗಳು ಬಳಕೆದಾರರ ಖಾಸಾಗಿ ಮಾಹಿತಿಗಳನ್ನು ಮಾರಿಕೊಳ್ಳುತ್ತುವೆ ಎಂದು IMDA ನೆಟ್‌ವರ್ಕ್ಸ್ ಸಂಸ್ಥೆ ಹೇಳಿದೆ.!!

ನಿಮಗೆ ಎಂದಿಗೂ ತಿಳಿಯುವುದಿಲ್ಲ.!!
ನೀವು ಆಪ್‌ಗಳನ್ನು ಇನ್‌ಸ್ಟಾಲ್ ಮಾಡುವಾಗಲೇ ಅವು ನಿಮ್ಮ ಮಾಹಿತಿ ಪ್ರವೇಶಕ್ಕೆ ಅನುಮತಿ ಪಡೆದುಕೊಂಡಿರುತ್ತವೆ. ಅವುಗಳನ್ನು ಕೆಲವು ಮಾರ್ಕೆಟಿಂಗ್ ಸಂಸ್ಥೆಗಳಿಗೆ ಮಾರಾಟ ಮಾಡುತ್ತವೆ. ಹಾಗಾಗಿ, ಅವುಗಳು ನಿಮ್ಮ ಮಾಹಿತಿಗಳನ್ನು ಯಾರೊಂದಿಗೆ ಹಂಚಿಕೊಳ್ಳುತ್ತವೆ ಎಂಬುದು ನಿಮಗೆ ಎಂದಿಗೂ ತಿಳಿಯುವುದಿಲ್ಲ.!!

ಮಾರ್ಕೆಟಿಂಗ್ ಸಂಸ್ಥೆಗಳಿಗೆ ಏನು ಲಾಭ?
ನೀವು ಎಲ್ಲಿದ್ದೀರಾ? ನಿಮ್ಮ ಅಭಿರುಚಿ ಏನು? ನಿಮಗೆ ಏನು ಇಷ್ಟ ಎಂಬುದರ ಮೇಲೆ ಮಾರ್ಕೆಟಿಂಗ್ ಕಂಪೆನಿಗಳು ನಿಮ್ಮನ್ನು ಟೆಂಪ್ಟ್ ಮಾಡುತ್ತವೆ. ನಿಮ್ಮ ಲೊಕೇಶನ್ ಆಧರಿಸಿ ನಿಮಗೆ ಬೇಕಾದ ರೀತಿಯಲ್ಲಿ ಸಹಾಯ ನೀಡುವ ನೆಪದಲ್ಲಿ ನಿಮ್ಮನ್ನು ಸುಲಿಗೆ ಮಾಡುತ್ತವೆ.!!

ನಾವೇನು ಮಾಡಬೇಕು?
ಯಾವುದೇ ಆಪ್‌ಗಳಿಗೆ ನಿಮ್ಮ ಲೊಕೇಶನ್ ಮಾಹಿತಿ ಅಥವಾ ನಿಮ್ಮ ಖಾಸಾಗಿ ಮಾಹಿತಿಯನ್ನು ನೀಡಲು ಮುಂದಾಗಬೇಡಿ.!! ಹಾಗೂ, ಯಾವುದೇ ಆಪ್‌ಗಳು ನಿಮ್ ಖಾಸಾಗಿ ಮಾಹಿತಿ ಇಲ್ಲದೆ ತೆರೆಯದಿದ್ದರೆ ಅವುಗಳನ್ನು ಬಳಕೆ ಮಾಡದಿರುವುದೇ ಒಳ್ಳೆಯದು.!! ಏನಂತಿರಾ?


Click it and Unblock the Notifications








