ನಿಮ್ಮ ಖಾಸಗಿ ಮಾಹಿತಿ ಫೇಸ್‌ಬುಕ್‌ಗೆ ರವಾನೆಯಾಗುತ್ತಿರುವುದು ಬಹಿರಂಗ!
ದೇಹದ ತೂಕ, ಶಾಪಿಂಗ್‌ನಂತಹ ಹಲವು ಆಪ್‌ಗಳು ಬಳಕೆದಾರರಿಗೆ ತಿಳಿಯದಂತೆಯೇ ಫೇಸ್‌ಬುಕ್‌ಗೆ ಬಳಕೆದಾರರ ಖಾಸಗಿ ಮಾಹಿತಿಗಳನ್ನು ರವಾನಿಸುತ್ತಿವೆ ಎಂಬುದು ಬಹಿರಂಗವಾಗಿದೆ. ಕೆಲವು ಆಪ್‌ಗಳು ಬಳಕೆದಾರರಿಗೆ ನೋಟಿಫಿಕೇಷನ್ ನೀಡದೆಯೇ ಫೇಸ್‌ಬುಕ್‌ಗೆ ಅವರ ವೈಯಕ್ತಿಕ ಮಾಹಿತಿಗಳನ್ನು ರವಾನೆಸುತ್ತಿವೆ ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಹೌದು, ಜಾಹೀರಾತು ಕಂಪನಿಗೆ ನೆರವಾಗುವ ಉದ್ದೇಶದಿಂದ ಖಾಸಗಿ ಮಾಹಿತಿಗಳನ್ನು ಕೆಲವು ಜನಪ್ರಿಯ ಆಪ್‌ಗಳು ಫೇಸ್‌ಬುಕ್ ಜೊತೆಗೆ ಹಂಚಿಕೊಳ್ಳುತ್ತಿದ್ದು, ಆ ಆಪ್‌ಗಳನ್ನು ಬಳಸುವ ಬಳಕೆದಾರರು ಫೇಸ್‌ಬುಕ್ ಬಳಕೆದಾರರಾಗಿಲ್ಲದೇ ಇದ್ದರೂ ಈ ಕಾರ್ಯ ನಡೆಯುತ್ತುದೆ. ಜಾಹೀರಾತು ಕಂಪನಿಗೆ ನೆರವಾಗುವ ಉದ್ದೇಶದಿಂದ ಖಾಸಗಿ ಮಾಹಿತಿಗಳು ಫೇಸ್‌ಬುಕ್‌ನಲ್ಲಿ ವಿನಿಮಯವಾಗುವಂತೆ ತಂತ್ರಜ್ಞಾನವನ್ನು ವಿನ್ಯಾಸ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಸಿರುವ ಫೇಸ್‌ಬುಕ್, ಫೇಸ್‌ಬುಕ್‌ನಲ್ಲಿ ಆಪ್ ಹಂಚಿಕೊಂಡಿರುವ ಮಾಹಿತಿಯ ಬಗ್ಗೆ ಅಪ್ಲಿಕೇಶನ್ ಡೆವಲಪರ್‌ಗಳ ಬಳಿ ಸ್ಪಷ್ಟನೆ ಪಡೆಯಲಾಗುವುದು. ಖಾಸಗಿ ಮಾಹಿತಿಗಳನ್ನು ಕಳುಹಿಸುವ ಆಪ್‌ಗಳನ್ನು ನಿಷೇಧಿಸಲಾಗುವುದು. ಈ ರೀತಿಯ ಮಾಹಿತಿಗಳನ್ನು ಪತ್ತೆ ಮಾಡಿ ಅದನ್ನು ಅಳಿಸಿ ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದು ಫೇಸ್‌ಬುಕ್ ವಕ್ತಾರ ನಿಸ್ಸಾ ಅಂಕ್ಲೆಸರಿಯಾ ತಿಳಿಸಿದ್ದಾರೆ.
ಲಕ್ಷಾಂತರ ಮಂದಿ ಡೌನ್‌ಲೋಡ್ ಮಾಡಿಕೊಂಡಿರುವ ಹನ್ನೊಂದು ಜನಪ್ರಿಯ ಆಪ್‌ಗಳು ಬಳಕೆದಾರರ ಖಾಸಗಿ ಮಾಹಿತಿಗಳನ್ನು ಫೇಸ್‌ಬುಕ್‌ಗೆ ರವಾನಿಸಿರುವುದು ತಿಳಿದು ಬಂದಿದ್ದು, ಅದರಲ್ಲಿ ಋತುಚಕ್ರ, ದೇಹದ ತೂಕ, ಗರ್ಭಧಾರಣೆ, ಅಂಡೋತ್ಪತ್ತಿ ಮತ್ತು ಮನೆಯ ಶಾಪಿಂಗ್ ಮುಂತಾದ ಆಪ್‌ಗಳು ವೈಯಕ್ತಿಕ ಮಾಹಿತಿಗಳನ್ನು ಬಳಕೆದಾರರಿಗೆ ನೋಟಿಫಿಕೇಷನ್ ನೀಡದೆಯೇ ಫೇಸ್‌ಬುಕ್‌ಗೆ ರವಾನೆ ಮಾಡುತ್ತಿದ್ದವು ಎಂದು ತಿಳಿದುಬಂದಿದೆ.

ಆಪ್ ತಯಾರಕರು ಆರೋಗ್ಯ, ಹಣಕಾಸು ಮತ್ತು ಇತರೆ ಸೂಕ್ಷ್ಮ ವಿಷಯಗಳ ಮಾಹಿತಿಗಳನ್ನು ಫೇಸ್‌ಬುಕ್‌ಗೆ ರವಾನಿಸದಂತೆ ಸೂಚಿಸಿದ್ದೆವು ಎಂದು ಕ್ಯಾಲಿಫೋರ್ನಿಯಾ ಮೂಲದ ಫೇಸ್ ಬುಕ್ ತಿಳಿಸಿರುವುದಾಗಿ ವಾಲ್‌ಸ್ಟ್ರೀಟ್ ಜರ್ನಲ್ ವರದಿ ತಿಳಿಸಿದೆ. ಆದರೆ, ಈ ವ್ಯವಹಾರ ನಿಯಮ ಉಲ್ಲಂಘಿಸಿ ಆಪ್‌ವೊಂದು ಫೇಸ್‌ಬುಕ್‌ಗೆ ಮಾಹಿತಿ ರವಾನಿಸಿತ್ತು ಎಂದು ವರದಿಯಲ್ಲಿ ಹೇಳಿರುವುದು ಆತಂಕಕಾರಿ ವಿಷಯವಾಗಿದೆ.


Click it and Unblock the Notifications








