ಆಂಡ್ರಾಯ್ಡ್ ನಲ್ಲಿ ಯುಟ್ಯೂಬ್ ನೋಡುವವರಿಗೆ ಬಿಡುಗಡೆಯಾಗಿದೆ ಡಾರ್ಕ್ ಮೋಡ್..!
ಯುಟ್ಯೂಬ್ ನ ಬಹಳ ನಿರೀಕ್ಷೆಯ ಡಾರ್ಕ್ ಥೀಮ್ ಈಗ ಅಂತಿಮವಾಗಿ ಆಂಡ್ರಾಯ್ಡ್ ಬಳಕೆದಾರರಿಗೆ ಬಿಡುಗಡೆಗೊಳ್ಳಲು ಸಿದ್ಧವಾಗಿದೆ. ಈ ಥೀಮ್ ಮೊದಲ ಬಾರಿಗೆ ಮಾರ್ಚ್ ನಲ್ಲಿ ಐಓಎಸ್ ಬಳಕೆದಾರರಿಗೆ ಬಿಡುಗಡೆಗೊಂಡಿತ್ತು. ನಂತರದ ದಿನಗಳಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಬಿಡುಗಡೆಯಾಗಿತ್ತಾದರೂ ಎಲ್ಲಾ ಬಳಕೆದಾರರಿಗೂ ಲಭ್ಯವಾಗದೇ ಕೆಲವೇ ಕೆಲವು ಬಳಕೆದಾರರು ಮಾತ್ರ ಬಳಸುವಂತಿತ್ತು. ಇದೀಗ ಅಂತಿಮವಾಗಿ ಎಲ್ಲಾ ಆಂಡ್ರಾಯ್ಡ್ ಬಳಕೆದಾರರೂ ಕೂಡ ಈ ವೈಶಿಷ್ಟ್ಯತೆಯನ್ನು ಬಳಕೆ ಮಾಡಬಹುದು.

ಕಣ್ಣುಗಳಿಗೆ ಹಿತ ನೀಡುವ ಫೀಚರ್:
ಗೂಗಲ್ ಯುಟ್ಯೂಬ್ ಗಾಗಿ ಡಾರ್ಕ್ ಮೋಡ್ ನ್ನು ಬಿಡುಗಡೆಗೊಳಿಸಿದೆ. ಈ ಯುಟ್ಯೂಬ್ ಡಾರ್ಕ್ ಥೀಮ್ ನಿಮಗೆ ನಿಮ್ಮ ಸ್ಕ್ರೀನಿನ ಗ್ಲೇರ್ ನ್ನು ಕಡಿಮೆಗೊಳಿಸಿ ಟೋನ್ ಮಾಡಿಕೊಂಡು ಡಾರ್ಕ್ ಬ್ಯಾಕ್ ಗ್ರೌಂಡ್ ನ ಅನುಭವವನ್ನು ನೀಡುತ್ತದೆ. ಈ ಮೋಡ್ ನಿಂದಾಗಿ ಯುಟ್ಯೂಬ್ ವೀಡಿಯೋಗಳನ್ನು ಆರಾಮದಾಯಕವಾಗಿ ನೋಡಲು ಸಾಧ್ಯವಾಗುತ್ತದೆ. ಕಣ್ಣುಗಳಿಗೆ ಆಯಾಸವಾಗುವುದನ್ನು ಡಾರ್ಕ್ ಮೋಡ್ ನಿಂದಾಗಿ ತಪ್ಪುತ್ತದೆ. ಕಪ್ಪು ಬಣ್ಣದ ಬ್ಯಾಕ್ ಗ್ರೌಂಡ್ ನಿಂದಾಗಿ ಹೆಚ್ಚು ಕಾನ್ಸನ್ಟ್ರೇಷನ್ ಇರುವಂತೆ ಇದು ಮಾಡುತ್ತದೆ ಮತ್ತು ಯುಟ್ಯೂಬ್ ವೀಡಿಯೋ ನೋಡುವ ಅನುಭವವು ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ.
ಹೇಗೆ ಆಕ್ಟಿವೇಟ್ ಮಾಡಿಕೊಳ್ಳುವುದು?
ಹೆಚ್ಚಿನ ಸಂದರ್ಬಗಳಲ್ಲಿ ಆಪ್ ತನ್ನಷ್ಟಕ್ಕೆ ಡಾರ್ಕ್ ಥೀಮ್ ನ್ನು ರನ್ ಆಗುವಂತೆ ಮಾಡುತ್ತದೆ. ನೀವು ಮ್ಯಾನುವಲಿ ಕೂಡ ಆಕ್ಟಿವೇಟ್ ಮಾಡಿಕೊಳ್ಳಲು ಅವಕಾಶವಿರುತ್ತದೆ. ಸೆಟ್ಟಿಂಗ್ಸ್ > ಜನರಲ್ > ಡಾರ್ಕ್ ಥೀಮ್ ನ್ನು ಆಯ್ಕೆ ಮಾಡಿಕೊಳ್ಳಬಹುದು. ಒಂದು ವೇಳೆ ನೀವು ಡಾರ್ಕ್ ಥೀಮ್ ಆಯ್ಕೆಯನ್ನು ಗಮನಿಸದೇ ಇದ್ದಲ್ಲಿ ನಿಮ್ಮ ಡಿವೈಸ್ ನಲ್ಲಿ ರನ್ನಿಂಗ್ ಆಪ್ ಲಿಸ್ಟ್ ನಿಂದ ಒಮ್ಮೆ ಆಪ್ ನ್ನು ಕ್ಲೋಸ್ ಮಾಡಿ ಮತ್ತು ರೀಸ್ಟಾರ್ಟ್ ಮಾಡಿ. ಈ ಮೋಡ್ ನ್ನು ಐಓಎಸ್ ಮತ್ತು ಆಂಡ್ರಾಯ್ಡ್ ಎರಡೂ ಡಿವೈಸ್ ಗಳಲ್ಲಿ ಟಾಗಲ್ ಮಾಡಲು ಸಾಧ್ಯವಿದೆ. ಇಂತಹ ಹೆಜ್ಜೆಯನ್ನು ಇಟ್ಟಿರುವುದು ಕೇವಲ ಯುಟ್ಯೂಬ್ ಸಂಸ್ಥೆ ಮಾತ್ರವಲ್ಲ. ಟ್ವೀಟರ್, ರೆಡ್ಡಿಟ್, ಕೂಡ ಡಾರ್ಕ್ ಮೋಡ್ ನ್ನು ತನ್ನ ಆಪ್ ಗಳಲ್ಲಿ ಆಕ್ಟಿವೇಟ್ ಮಾಡಿದ್ದು ಬಳಕೆದಾರರಿಗೆ ಆಪ್ ಬಳಸಲು ಅನುಕೂಲ ಮಾಡಿಕೊಟ್ಟಿದೆ.
ಯುಟ್ಯೂಬ್ ನ ಇತರೆ ಅಪ್ ಡೇಟ್ ಗಳು:
ಡಾರ್ಕ್ ಥೀಮ್ ನ ಜೊತೆಗೆ ಯುಟ್ಯೂಬ್ ಇತ್ತೀಚೆಗೆ ಹಲವು ಬದಲಾವಣೆಗಳನ್ನು ಮಾಡಿದೆ. ಈ ಹಿಂದೆ ಕಂಪೆನಿಯು ಕಪ್ಪು ಬಾರ್ ಗಳನ್ನು ವೀಡಿಯೋಗಳನ್ನು ನೋಡಲು 16:9 ಅನುಪಾತದಲ್ಲಿ ಕಪ್ಪು ಬಾರ್ ಗಳನ್ನು ತೋರಿಸಿತ್ತು ಮತ್ತು ಆಗ ವೀಡಿಯೋಗಳು ಸಣ್ಣದಾಗಿ ಕಾಣಿಸುತ್ತಿದ್ದವು .ಇದನ್ನು ನೂತನ ಅಪ್ ಡೇಟ್ ನಲ್ಲಿ ಯುಟ್ಯೂಬ್ ತೆಗೆದುಹಾಕಿತ್ತು, ಈ ಬದಲಾವಣೆಯು ಆಂಡ್ರಾಯ್ಡ್, ಡೆಸ್ಕ್ ಟಾಪ್ ಮತ್ತು ಐಓಎಸ್ ಮೂರರಲ್ಲೂ ಸಾಧ್ಯವಿದೆ.
ಯುಟ್ಯೂಬ್ ಇತ್ತೀಚೆಗೆ ಬ್ರೇಕ್ ವೈಶಿಷ್ಟ್ಯತೆಯನ್ನು ಗೂಗಲ್ ನ ಡಿಜಿಟಲ್ ವೆಲ್ ಬೀಯಿಂಗ್ ನ ಇನಿಷಿಯೇಟಿವ್ ನ ಭಾಗವಾಗಿ ಮಾಡಿತ್ತು. ಹೆಸರೇ ಸೂಚಿಸುವಂತೆ, ಈ ವೈಶಿಷ್ಟ್ಯತೆಯು ಬಳಕೆದಾರರಲ್ಲಿ ಸ್ಮಾರ್ಟ್ ಫೋನ್ ಎಡಿಕ್ಷನ್ ನ್ನು ಕಡಿಮೆ ಮಾಡಿಸಿ, ಅವರು ಸೆಟ್ ಮಾಡುವ ಪ್ರೀ ಸೆಟ್ ಇಂಟರ್ವಲ್ ಗಳಲ್ಲಿ ಬ್ರೇಕ್ ತೆಗೆದುಕೊಳ್ಳುವಂತೆ ಮಾಡುವ ಉದ್ದೇಶವನ್ನು ಹೊಂದಲಾಗಿತ್ತು. ಅಂದರೆ ಅವರು ನಿರಂತರವಾಗಿ ವೀಡಿಯೋ ನೋಡುವಾಗ ಅವರನ್ನು ರಿಮೈಂಡ್ ಮಾಡುವ ವೈಶಿಷ್ಟ್ಯತೆ ಇದಾಗಿತ್ತು. ಇದು ಆಂಡ್ರಾಯ್ಡ್ ಮತ್ತು ಐಓಎಸ್ ಎರಡೂ ಫ್ಲಾಟ್ ಫಾರ್ಮ್ ಗಳಲ್ಲೂ ಲಭ್ಯವಿತ್ತು. ಬಳಕೆದಾರರಿಗೆ ರಿಮೈಂಡರ್ ಸೆಟ್ ಮಾಡಿಕೊಳ್ಳಲು ಇಲ್ಲಿ ಅವಕಾಶ ನೀಡಲಾಗಿತ್ತು ಮತ್ತು ಅವರು ವೀಡಿಯೋ ನೋಡುತ್ತಿದ್ದಾಗ ಅವರಿಗೆ ಅದು ಸೂಚನೆಯನ್ನು ನೀಡುತ್ತಿತ್ತು. ಆಗ ವೀಡಿಯೋ ಪಾಸ್ ಆಗುತ್ತಿತ್ತು. ನೀವು ಬ್ರೇಕ್ ಮುಗಿಸಿದ ನಂತರ ಮತ್ತೆ ಪ್ಲೇ ಮಾಡಿಕೊಳ್ಳಬಹುದಾಗಿತ್ತು.


Click it and Unblock the Notifications








