ದೊಡ್ಡ ಸುದ್ದಿ! Zomato ಹೆಸರು ಬದಲಾವಣೆಗೆ ನಿರ್ಧಾರ: ಇದೇ ಹೊಸ ನೇಮ್.. ಅದರ ಅರ್ಥ ಏನು?
ದೊಡ್ಡ ಸುದ್ದಿ ಇದು! ಜೊಮ್ಯಾಟೊ ತನ್ನ ಹೆಸರು ಬದಲಾಯಿಸಲು ನಿರ್ಧರಿಸಿದೆ. ಆ ಹೊಸ ಪದ ಎಷ್ಟು ಚೆಂದ ಮತ್ತು ಅರ್ಥಪೂರ್ಣ ಗೊತ್ತೇ? ಹೌದು, ಜನಪ್ರಿಯರ ಆಹಾರ ವಿತರಣಾ ವೇದಿಕೆಯಾಗಿರುವ ಜೊಮ್ಯಾಟೊ (Zomato) ಒಂದು ದೊಡ್ಡ ನಿರ್ಧಾರ ಪ್ರಕಟಿಸಿದೆ. ಕಂಪನಿಯು ಬೋರ್ಡ್ ಮೀಟಿಂಗ್ನಲ್ಲಿ ತನ್ನ ಹೆಸರನ್ನು ಬದಲಾಯಿಸಲು ಅನುಮೋದಿಸಿದೆ. ಇನ್ಮುಂದೆ ಜೊಮ್ಯಾಟೊ (Zomato) ಹೆಸರನ್ನು 'ಎಟರ್ನಲ್' (Eternal) ಎಂದು ಬದಲಾಯಿಸಲಾಗುತ್ತದೆ. ಈ ಕುರಿತ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.
ಕಂಪನಿಯು ಇಂದು (ಫೆಬ್ರವರಿ 6 ರಂದು) ಬೋರ್ಡ್ ಮೀಟಿಂಗ್ ನಡೆಸಿತು. ಈ ಸಭೆಯಲ್ಲಿ ಹೆಸರು ಬದಲಾಯಿಸುವ (Zomato New Name) ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಿಎಸ್‌ಇಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ ಈ ಬಗ್ಗೆ ಕಂಪನಿಯು ತಿಳಿಸಿದೆ. ಇದರಲ್ಲಿ ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ ಅವರು ಕಂಪನಿಗೆ 'ಎಟರ್ನಲ್' ಎಂಬ ಹೆಸರನ್ನು ಬಹಳ ಸಮಯದಿಂದ ಬಳಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಜೊಮ್ಯಾಟೊ ಈಗ ಎಟರ್ನಲ್ ಎಂದು ಹೆಸರು ಬದಲಿಸಿದ್ದೇಕೆ? ಎಟರ್ನಲ್ ಅರ್ಥವೇನು? ತಿಳಿಯೋಣ ಬನ್ನಿ.

ದೀಪಿಂದರ್ ಗೋಯಲ್ ಹೇಳಿದ್ದೇನು?
ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ ಹೆಸರು ಬದಲಾವಣೆ ಕುರಿತು ಮಾಹಿತಿ ನೀಡಿದ್ದಾರೆ. ನಾವು ಬ್ಲಿಂಕಿಂಟ್ ಅನ್ನು ಸ್ವಾಧೀನಪಡಿಸಿಕೊಂಡಿದ್ದೇವೆ. ಆಗಿನಿಂದಲೂ ಕಂಪನಿ ಮತ್ತು ಆಪ್ (ಬ್ರ್ಯಾಂಡ್) ನಡುವೆ ವ್ಯತ್ಯಾಸವನ್ನು ಗುರುತಿಸಲು ಜೊಮ್ಯಾಟೊ ಬದಲಿಗೆ 'ಎಟರ್ನಲ್' ಅಂತ ಕರೆಯಲು ಪ್ರಾರಂಭಿಸಿದ್ದೇವೆ. ಜೊಮ್ಯಾಟೊ ಹೊರತುಪಡಿಸಿ, ನಮ್ಮ ಬೇರೆ ಯಾವುದೇ ಉತ್ಪನ್ನಗಳು ನಮ್ಮ ಭವಿಷ್ಯಕ್ಕೆ ಮುಖ್ಯವಾದರೆ ನಾವು ಕಂಪನಿಯ ಹೆಸರನ್ನು ಸಾರ್ವಜನಿಕವಾಗಿ 'ಎಟರ್ನಲ್' ಎಂದು ಬದಲಾಯಿಸುತ್ತೇವೆ ಎಂದು ನಾವು ಆಗ ಯೋಚಿಸಿದ್ದೆವು ಎಂದು ಹೇಳಿದ್ದಾರೆ.
ಇದು ಶಕ್ತಿಶಾಲಿ ಹೆಸರು
ಮುಂದುವರಿದು ಮಾತನಾಡಿರುವ ದೀಪಿಂದರ್ ಗೋಯಲ್ ಅವರು, ಇಂದು ಬ್ಲಿಂಕಿಂಟ್‌ನೊಂದಿಗೆ ನಾವು ಈ ಕಾರ್ಯಕ್ಕೆ ತಲುಪಿದ್ದೇವೆ. ನಾವು ಜೊಮ್ಯಾಟೊ ಲಿಮಿಟೆಡ್ ಕಂಪನಿಯ ಹೆಸರನ್ನು 'ಎಟರ್ನಲ್' ಎಂದು ಬದಲಾಯಿಸುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದು ಶಕ್ತಿಶಾಲಿ ಹೆಸರು ಎಂದು ಗೋಯಲ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಅಪ್ಲಿಕೇಶನ್ ಹೆಸರು ಬದಲಾಯಿಸುವುದಿಲ್ಲ!
ಪ್ರಸ್ತುತ ಜೊಮ್ಯಾಟೊ ಅಪ್ಲಿಕೇಶನ್‌ನ ಹೆಸರನ್ನು ಬದಲಾಯಿಸುವುದಿಲ್ಲ. ಆದರೆ, ಸ್ಟಾಕ್ ಟಿಕ್ಕರ್ ಅನ್ನು ಜೊಮ್ಯಾಟೊದಿಂದ 'ಎಟರ್ನಲ್'ಗೆ ಬದಲಾಯಿಸಲಾಗುತ್ತದೆ. 'ಎಟರ್ನಲ್' ನಾಲ್ಕು ಪ್ರಮುಖ ವ್ಯವಹಾರಗಳನ್ನು ಹೊಂದಿದೆ. ಜೊಮಾಟೊ, ಬ್ಲಿಂಕಿಟ್, ಡಿಸ್ಟ್ರಿಕ್ಟ್ ಮತ್ತು ಹೈಪರ್‌ಪ್ಯೂರ್ ಎಂದು ತಿಳಿಸಿದ್ದಾರೆ. ನಿಜ ಹೇಳಬೇಕೆಂದರೆ, ಇದನ್ನು ಸಾಧಿಸುವುದು ಕಷ್ಟಕರವಾದ ಕೆಲಸವಾಗಿದೆ. ಇದು ಕೇವಲ ಹೆಸರು ಬದಲಾವಣೆಯಲ್ಲ, ಬದಲಾಗಿ ಒಂದು ಧ್ಯೇಯವಾಗಿದೆ ಎಂದು ಗೋಯಲ್ ಹೇಳಿದ್ದಾರೆ.
ಎಟರ್ನಲ್ ಪದದ ಅರ್ಥ ಏನು?
ಎಟರ್ನಲ್ ಎಂಬ ಪದ ಲ್ಯಾಟಿನ್ ಮತ್ತು ಇಟಾಲಿಯನ್ ಭಾಷೆಯಿಂದ ಬಂದಿದೆ. ಕನ್ನಡದಲ್ಲಿ ಈ ಪದದ ಅರ್ಥ 'ಅಮರ' ಅಥವಾ 'ಶಾಶ್ವತ'. ಅಮರ ಎಂದರೆ ಎಂದಿಗೂ ಸಾವಿಲ್ಲ ಎಂದರ್ಥ.
ಜೊಮ್ಯಾಟೊ ಷೇರುಗಳು 1.22% ಕುಸಿತ
ವಿಶೇಷವೆಂದರೆ, ಇಂದು (ಫೆಬ್ರವರಿ 6 ರಂದು) ಜೊಮ್ಯಾಟೊ ಷೇರುಗಳು 229.05 ರೂ.ಗಳಲ್ಲಿ ಮುಕ್ತಾಯಗೊಂಡಿವೆ. ಅಂದರೆ, ಷೇರುಗಳು NSE ನಲ್ಲಿ ಶೇ.1.22 ರಷ್ಟು ಕುಸಿತ ಕಂಡಿವೆ. ಷೇರು ಬೆಲೆ ಹಿಂದಿನ ದಿನಕ್ಕಿಂತ ಶೇ. 0.95ರಷ್ಟು ಕುಸಿತ ಕಂಡಿತು. ವಹಿವಾಟಿನ ಸಮಯದಲ್ಲಿ ಜೊಮ್ಯಾಟೊ ಷೇರುಗಳು 234.60 ರೂ.ಗಳ ಮೇಲಿನ ಬೆಲೆಯಿಂದ 226.80 ರೂ.ಗಳ ಕೆಳಗಿನ ಬೆಲೆಯ ನಡುವೆ ವಹಿವಾಟು ನಡೆಸಿವೆ. ಜೊಮ್ಯಾಟೊ ಷೇರುಗಳ 52 ವಾರಗಳ ಕನಿಷ್ಠ ಮೌಲ್ಯ 139.10 ರೂ. ಆಗಿದೆ. ಷೇರುಗಳ 52 ವಾರಗಳ ಗರಿಷ್ಠ ಮೌಲ್ಯ 304.50 ರೂ. ಆಗಿದೆ.


Click it and Unblock the Notifications








