Home
Artificial intelligence

ಗೂಗಲ್ ನ್ಯಾನೋ ಬನಾನಾ AI: ಈಗ ಫೋಟೋಸ್, ಸರ್ಚ್ ಮತ್ತು NotebookLM ‌ನಲ್ಲೂ!

ಟೆಕ್ ದೈತ್ಯ ಗೂಗಲ್ ಯಾವಾಗಲೂ ತನ್ನ ಬಳಕೆದಾರರಿಗೆ ಹೊಸತನವನ್ನು ತರುತ್ತಲೇ ಇರುತ್ತದೆ. ಅದೇ ಮಾರ್ಗದಲ್ಲಿ ಗೂಗಲ್ ತನ್ನ ಉತ್ಪನ್ನಗಳ ಸಮೂಹದಲ್ಲಿ ಸೃಜನಾತ್ಮಕ ಶಕ್ತಿಯನ್ನು ಗಮನಾರ್ಹವಾಗಿ ಹೆಚ್ಚಿಸಲು ಮುಂದಾಗಿದ್ದು, ಜೆಮಿನಿ 2.5 ಫ್ಲ್ಯಾಷ್ ಮೂಲಕ ಸುಧಾರಿತ AI ಇಮೇಜ್ ಜನರೇಟರ್ ಮಾದರಿಯಾದ ನ್ಯಾನೋ ಬನಾನಾವನ್ನು ಪರಿಚಯಿಸಿದೆ. ಈ ಹೊಸ ವೈಶಿಷ್ಟ್ಯವು ಜೆಮಿನಿ ಅಪ್ಲಿಕೇಶನ್‌ಗೆ ಸೀಮಿತವಾಗದೆ, ಗೂಗಲ್ ಸರ್ಚ್, ನೋಟ್‌ಬುಕ್‌ಎಲ್‌ಎಂ ಮತ್ತು ಶೀಘ್ರದಲ್ಲೇ ಗೂಗಲ್ ಫೋಟೋಸ್‌ಗೂ ದೊರೆಯುತ್ತಿದೆ.! ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ನೋಡೋಣ ಬನ್ನಿ.

ಗೂಗಲ್ ಡಿಸ್ಕವರ್‌ನಲ್ಲಿ ಬದಲಾವಣೆ
ಇಷ್ಟೇ ಅಲ್ಲದೆ, ಈ ಹೊಸ ಅಪ್‌ಡೇಟ್‌ನಿಂದ ಗೂಗಲ್ ಸರ್ಚ್ ಕೂಡ ಬದಲಾವಣೆಯಾಗುತ್ತಿದೆ. ಗೂಗಲ್ ಡಿಸ್ಕವರ್ ಈಗ AI-ಚಾಲಿತ ಬದಲಾವಣೆಯನ್ನು ಕಾಣಲಿದೆ. ಗೂಗಲ್ ಡಿಸ್ಕವರ್ ನಲ್ಲಿ ಟ್ರೆಂಡಿಂಗ್ ವಿಷಯಗಳು ಕಾಣಿಸುವುದಕ್ಕಿಂತ ಮೊದಲು ಸಣ್ಣ ಪೂರ್ವವೀಕ್ಷಣೆ ಸಾರಾಂಶಗಳನ್ನು ಸಹ ಒದಗಿಸುತ್ತದೆ. ಇದನ್ನು ವಿಸ್ತರಿಸಿದಾಗ, ಆಳವಾದ ಸಂದರ್ಭ ಮತ್ತು ಸಂಪೂರ್ಣ ಲೇಖನಗಳ ಲಿಂಕ್‌ಗಳು ಲಭ್ಯವಾಗುತ್ತವೆ. ಇದರಿಂದ ನಿಮ್ಮ ಅಭಿರುಚಿಗೆ ತಕ್ಕಂತಹ ಸುದ್ದಿಯು ನಿಮಗೆ ಗೋಚರವಾದರೂ, ಆ ಸುದ್ದಿಯು ಹೊಂದಿರುವ ಸಾರಾಂಶವನ್ನು ನೀವು ಮೊದಲೇ ನೋಡಬಹುದು. ಇದು ನಿಮಗೆ ಮತ್ತಷ್ಟು ಸಹಕಾರಿಯಾಗಲಿದೆ.

ಜೊತೆಗೆ, ಕ್ರೀಡಾ ಅಭಿಮಾನಿಗಳಿಗಾಗಿ, ಮೊಬೈಲ್ ಸರ್ಚ್‌ನಲ್ಲಿ ಹೊಸ "ಏನು ಹೊಸತು" (What's New) ಬಟನ್ ಹೊರತರಲಾಗುತ್ತಿದೆ. ಇದು ಪ್ಲಾಟ್‌ಫಾರ್ಮ್ ಅನ್ನು ನೆಚ್ಚಿನ ಆಟಗಾರರು ಮತ್ತು ತಂಡಗಳ ಕುರಿತ ನೈಜ-ಸಮಯದ ಸುದ್ದಿ, ಅಂಕಿಅಂಶಗಳು ಮತ್ತು ಅಪ್‌ಡೇಟ್‌ಗಳನ್ನು ಒಂದೇ ಸ್ಥಳದಲ್ಲಿ ನಿಡುತ್ತದೆ. ಇದು ಒಂದು ಅತ್ಯದ್ಭುತ ವೈಶಿಷ್ಟ್ಯದಂತೆ ಕಂಡುಬರುತ್ತಿದೆ. ಆದರೆ, ಈ ಫಿಚರ್ ಕುರಿತು ನಾನು ಮತ್ತಷ್ಟು ಮಾಹಿತಿಯನ್ನು ಆನಂತರ ಒದಗಿಸುತ್ತೇನೆ. ಏಕೆದಂರೆ, ಮೊದಲು ಬಳಸಿ ನೋಡಿದ ನಂತರವೇ ನಿಮಗೆ ಪ್ರಸ್ತುತಪಡಿಸಲು ಇಚ್ಚಿಸುತ್ತೇನೆ.

NotebookLM ನಲ್ಲಿ ರೋಮಾಂಚಕ ಅಪ್‌ಡೇಟ್
ಗೂಗಲ್‌ನ ಡಾಕ್ಯುಮೆಂಟ್ ವಿಶ್ಲೇಷಣಾ ಸಾಧನ NotebookLM ನಲ್ಲಿ ಇದೀಗ ಹೊಸ ರೋಮಾಂಚಕವಾದ ಅಪ್‌ಡೇಟ್ ಅನ್ನು ಕಾಣಬಹುದು. ಈ ವೇದಿಕೆಯಲ್ಲಿ ನೀವು ಟಿಪ್ಪಣಿಗಳು ಮತ್ತು ಡಾಕ್ಯುಮೆಂಟ್‌ಗಳನ್ನು ನ್ಯಾನೋ ಬನಾನಾದಿಂದ ರಚಿಸಲಾದ ಆಕರ್ಷಕ ದೃಶ್ಯಗಳೊಂದಿಗೆ ಸಣ್ಣ ವೀಡಿಯೋಗಳಾಗಿ ರಚಿಸಬಹುದು. ಅಧ್ಯಯನ ಸಾಮಗ್ರಿ ಅಥವಾ ವ್ಯಾಪಾರ ಯೋಜನೆಗಳಿಗಾಗಿ ಆಳವಾಗಿ ವಿವರಿಸುವ Explainer ಮೋಡ್ ಅನ್ನು ಬಳಸಬಹುದು. ಅಥವಾ ಪಠ್ಯದ ಕಲ್ಪನೆಗಳನ್ನು ತ್ವರಿತವಾಗಿ ಸಾರಾಂಶ ಮಾಡಲು ಬ್ರೀಫ್ ಸ್ವರೂಪವನ್ನು ಬಳಸಬಹುದು. ಇವೆಲ್ಲವೂ ಕೆಲವೆ ಕ್ಷಣಗಳಲ್ಲಿ ಸಾಧ್ಯವಾಗಲಿದೆ.

ಗೂಗಲ್ ನ್ಯಾನೋ ಬನಾನಾ AI: ಈಗ ಫೋಟೋಸ್, ಸರ್ಚ್ ಮತ್ತು NotebookLM ‌ನಲ್ಲೂ!

ಉದಾಹರಣೆಗೆ, "ವೆಚ್ಚ ವಿಶ್ಲೇಷಣಾ ವಿಭಾಗವನ್ನು ಮಾತ್ರ ಒಳಗೊಂಡಿರಲಿ" ಎಂಬಂತಹ ನಿರ್ದಿಷ್ಟ ಸೂಚನೆಗಳನ್ನು (prompts) ನೀಡುವ ಮೂಲಕ, AI ರಚಿಸಿದ ವೀಡಿಯೋ ಸಂಪೂರ್ಣವಾಗಿ ನಿಮ್ಮ ಅಗತ್ಯಗಳಿಗೆ ತಕ್ಕಂತೆ ಇರುತ್ತದೆ. ಹೆಚ್ಚುವರಿಯಾಗಿ, ನ್ಯಾನೋ ಬನಾನಾವು ವಾಟರ್‌ಕಲರ್, ಅನಿಮೆ ಮತ್ತು ರೆಟ್ರೊ ಪ್ರಿಂಟ್ ಸೇರಿದಂತೆ ಆರು ವಿಭಿನ್ನ ಕಲಾ ಶೈಲಿಗಳನ್ನು ಸೇರಿಸಿದ್ದು, ಅದು ನಿಮ್ಮ ವಿಷಯದ ಧ್ವನಿಗೆ ಸ್ವಯಂಚಾಲಿತವಾಗಿ ಹೊಂದಿಕೊಳ್ಳುತ್ತದೆ. ಈ ವಿಸ್ತರಣೆಯು AI ವಿಷಯ ಸೃಷ್ಟಿಯನ್ನು ಹೆಚ್ಚು ಸಹಜವಾಗಿರುವಂತೆ ಮಾಡುತ್ತದೆ. ಇದರಿಂದ NotebookLM ಬಳಕೆಯು ಹಿಂದೆದಿಗಿಂತಲೂ ಸರಳವಾಗಿ ಕಾಣಲಿದೆ.

ಗೂಗಲ್‌ ಪೋಟೋಸ್‌ಗೆ Create Mode!
ಈ ಹೊಸ ಅಪ್‌ಡೇಟ್ ತಂದಿರುವ ಅತ್ಯಂತ ಗಮನಾರ್ಹ ಬದಲಾವಣೆ ಎಂದರೆ ಗೂಗಲ್ ಲೆನ್ಸ್‌ನಲ್ಲಿನ ಹೊಸ Create Mode. ಈ ವೈಶಿಷ್ಟ್ಯವು ಶೀಘ್ರದಲ್ಲೇ ಸರಳ ಪಠ್ಯ ಸೂಚನೆಗಳನ್ನು ಬಳಸಿಕೊಂಡು ಇರುವ ಫೋಟೋಗಳನ್ನು ಪರಿವರ್ತಿಸಲು ಅನುಮತಿಸುತ್ತದೆ. ನೀವು "ಈ ಉಡುಪನ್ನು ಬೇರೆ ಬಣ್ಣಗಳಲ್ಲಿ ತೋರಿಸು" ಎಂದು ಕೇಳಬಹುದು. ಇದು ಪೋಟೋಗಳಲ್ಲಿ ಸೃಜನಾತ್ಮಕ ಎಡಿಟ್ ಮತ್ತು ಮಾಹಿತಿ ಹುಡುಕಾಟವನ್ನು ವಿಲೀನಗೊಳಿಸುವ ಪ್ರಯತ್ನವಾಗಿದ್ದು, ಹಲವು ಹೊಸ ನರೇಟಿವ್ ಇಮೇಜ್ ಪರಿಕರಗಳನ್ನು ತರುವ ಭರವಸೆಯನ್ನು ಸಹ ನೀಡಿದೆ. ಇನ್ನು ಈ ವೈಶಿಷ್ಟ್ಯವನ್ನು ಮುಂದಿನ ವಾರಗಳಲ್ಲಿ, Google Photos ಗೆ ತರುತ್ತೇವೆ, ಆದ್ದರಿಂದ ಹೆಚ್ಚಿನ ವಿವರಗಳಿಗಾಗಿ ಶೀಘ್ರದಲ್ಲೇ ನಿಮ್ಮ ಕಣ್ಣುಗಳನ್ನು ತೆರೆದಿಡಿ! ಎಂದು ಗೂಗಲ್ ತಿಳಿಸಿದೆ.

ಅಂತಿಮವಾಗಿ, ಈ ಹೊಸ ನ್ಯಾನೋ ಬನಾನಾ ಅಪ್‌ಡೇಟ್ ಅತ್ಯಾಧುನಿಕ AI ಸೃಜನಶೀಲತೆಯನ್ನು ತಕ್ಷಣವೇ ಪ್ರವೇಶಿಸುವಂತೆ ಮಾಡಲಿದೆ. ಸರ್ಚ್, ಲೆನ್ಸ್ ಮತ್ತು NotebookLM ನಂತಹ ಪ್ರಮುಖ ಸೇವೆಗಳಲ್ಲಿ ಸಂಯೋಜಿಸುವ ಮೂಲಕ, ಗೂಗಲ್ AI ಅನ್ನು ಕೇವಲ ವಿಷಯವನ್ನು ರಚಿಸುವ ಸಾಧನವಾಗಿ ಇರಿಸದೆ, ಬದಲಿಗೆ ಸಂಶೋಧನೆ ಮತ್ತು ಪ್ರಸ್ತುತಿಯಿಂದ ಹಿಡಿದು ಫೋಟೋ ಸಂಪಾದನೆಯವರೆಗಿನ ದೈನಂದಿನ ಕಾರ್ಯಗಳನ್ನು ಹೆಚ್ಚು ಆಕರ್ಷಕ ಮತ್ತು ವೈಯಕ್ತಿಕವಾಗಿ ಮಾಡುವ ಹೊಸ ಸಹಾಯಕನಾಗಿ ರೂಪಿಸುತ್ತಿದೆ. ಇದರಿಂದ ನನ್ನ ಹಾಗೂ ನಿಮ್ಮ AI ಬಳಕೆಯು ಗಮನಾರ್ಹವಾಗಿ ಬದಲಾಗುವುದು ಖಂಡಿತ.

ಮೂಲ ಮಾಹಿತಿ: Google

Best Mobiles in India

English summary
Google has introduced its new lightweight AI model, Nano Banana, bringing faster, smarter, and more efficient performance to Search, NotebookLM, and Google Photos. check here for more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+