Subscribe to Gizbot

ಭಾರತದಲ್ಲಿ ರೂ 25000 ದೊಳಗೆ ಖರೀದಿಸಬಹುದಾದ ಉತ್ತಮ ಆಕ್ಷನ್ ಕ್ಯಾಮೆರಾಗಳಿವು!

Posted By: Tejaswini P G

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳು ಉತ್ತಮ ಕ್ಯಾಮರಾದೊಂದಿಗೆ ಬರುತ್ತಿದ್ದು , ಈ ಕಾರಣದಿಂದಾಗಿ ಭಾರತದಲ್ಲಿ DSLR ಕ್ಯಾಮೆರಾಗಳ ಬೇಡಿಕೆ ಈಗ ಇಳಿಮುಖವಾಗುತ್ತಿದೆ. ಆದರೆ ಸಾರ್ಟ್ಫೋನ್ ಕ್ಯಾಮೆರಾ ಆಥವಾ DSLR ಕ್ಯಾಮೆರಾಗಳೆರಡೂ ಎಲ್ಲಾ ಸಂದರ್ಭಗಳಲ್ಲಿ ನಾವು ಬಯಸಿದಂತೆ ಕಾರ್ಯನಿರ್ವಹಿಸುವುದಿಲ್ಲ. ಉದಾಹರಣೆಗೆ, ನೀವು ಸಾಹಸಕ್ರೀಡೆಗಳನ್ನು ಪ್ರಯತ್ನಿಸುತ್ತಿದ್ದು, ಅದನ್ನು ಸೆರೆಹಿಡಿಯ ಬಯಸಿದರೆ ಸ್ಮಾರ್ಟ್ಫೋನ್ ಅಥವಾ DSLR ಕ್ಯಾಮೆರಾಗಳು ಉತ್ತಮ ಆಯ್ಕೆಯಲ್ಲ.

ಭಾರತದಲ್ಲಿ ರೂ 25000 ದೊಳಗೆ ಖರೀದಿಸಬಹುದಾದ ಉತ್ತಮ ಆಕ್ಷನ್ ಕ್ಯಾಮೆರಾಗಳಿವು!

ಈ ಸಂದರ್ಭಗಳಿಗೆ ಆಕ್ಷನ್ ಕ್ಯಾಮೆರಾಗಳೇ ಸೂಕ್ತ. ಆಕ್ಷನ್ ಕ್ಯಾಮೆರಾಗಳನ್ನು ಇಂತಹ ಸಂದರ್ಭಗಳಿಗೆಂದೇ ವಿನ್ಯಾಸಗೊಳಿಸಲಾಗಿದೆ.ಆಕ್ಷನ್ ಕ್ಯಾಮೆರಾಗಳೆಂದ ಕೂಡಲೇ ನಮ್ಮ ನೆನಪಿಗೆ ಬರುವುದು ಗೋಪ್ರೋ ಕ್ಯಾಮೆರಾಗಳು.

HP Sprocket First Impressions (Kannada)
ಗೋಪ್ರೋ ಕ್ಯಾಮೆರಾಗಳು ಉತ್ತಮ ಫೀಚರ್ಗಳನ್ನು ಹೊಂದಿದ್ದು, ಇನ್ನೂ ಅನೇಕ ಉತ್ತಮ ಆಕ್ಷನ್ ಕ್ಯಾಮೆರಾಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಲೇಖನದಲ್ಲಿ ನೀವು ಭಾರತದಲ್ಲಿ ರೂ 25000 ದೊಳಗೆ ಖರೀದಿಸಬಹುದಾದ ಉತ್ತಮ ಆಕ್ಷನ್ ಕ್ಯಾಮೆರಾಗಳ ಪಟ್ಟಿಯನ್ನು ನಿಮಗಾಗಿ ಸಂಪಾದಿಸಿದ್ದೇವೆ.
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೋಪ್ರೋ ಹೀರೋ5 ಬ್ಲ್ಯಾಕ್ ಆಕ್ಷನ್ ಕ್ಯಾಮೆರಾ, ಬ್ಲ್ಯಾಕ್

ಗೋಪ್ರೋ ಹೀರೋ5 ಬ್ಲ್ಯಾಕ್ ಆಕ್ಷನ್ ಕ್ಯಾಮೆರಾ, ಬ್ಲ್ಯಾಕ್

ಬೆಲೆ : ರೂ 24,295 (Amazon.in ನಲ್ಲಿ)

ಪ್ರಮುಖ ಫೀಚರ್ಗಳು:

• ಅದ್ಭುತ 4K ವೀಡಿಯೋ ಮತ್ತು 4K ಫೋಟೋಗಳನ್ನು ಸಿಂಗಲ್, ಬರ್ಸ್ಟ್ ಮತ್ತು ಟೈಮ್ ಲ್ಯಾಪ್ಸ್ ಮೋಡ್ ಗಲ್ಲಿ ಸೆರೆಹಿಡಿಯಿರಿ.

• ದೀರ್ಘ ಬಾಳಿಕೆ ಬರುವ ವಿನ್ಯಾಸ ಹೊಂದಿರುವ ಹೀರೋ5 ವಾಟರ್ಪ್ರೂಫ್ ಕೂಡ ಆಗಿದೆ.

• ಸ್ಕ್ರೀನ್ ಒದ್ದೆ ಇರದಿರುವಾಗ ಟಚ್ ಮೂಲಕ ನಿಮ್ಮ ಶಾಟ್ ಗಳನ್ನು ನೋಡಬಹುದು, ಸೆಟ್ಟಿಂಗ್ಸ್ ಬದಲಿಸಬಹುದು, ಫೂಟೇಜ್ ಎಡಿಟ್ ಮಾಡಬಹುದು

• ವಾಯ್ಸ್ ಕಮಾಂಡ್ಗಳ ಮೂಲಕ ಗೋಪ್ರೋ ಅನ್ನು ಹ್ಯಾಂಡ್ಸ್-ಫ್ರೀ ಆಗಿ ನಿಯಂತ್ರಿಸಬಹುದು

• ಶಟರ್ ಬಟನ್ ಒತ್ತುವ ಮೂಲಕ ಕ್ಯಾಮೆರಾ ಆನ್ ಮಾಡಿ, ವೀಡಿಯೋ ರೆಕಾರ್ಡಿಂಗ್ ಮತ್ತು ಟೈಮ್ ಲ್ಯಾಪ್ಸ್ ಫೋಟೋಗಳನ್ನು ಸೆರೆಹಿಡಿಯಬಹುದು

• ಹೀರೋ5 ಬ್ಲ್ಯಾಕ್ ಅದ್ಭುತವಾದ ವೈಡ್-ಆಂಗಲ್ ವೀಡಿಯೋಗಳನ್ನು ಕೈಯಲ್ಲಿ ಹಿಡಿದು ಆಥವಾ ಗೇರ್ ಮೇಲೆ ಮೌಂಟ್ ಮಾಡಿ ಸೆರೆಹಿಡಿಯಬಲ್ಲದು

• ಗೊಪ್ರೋ ಪ್ಲಸ್ ಮೆಂಬರ್ಶಿಪ್ ಹೊಂದಿದ್ದರೆ, ಹೀರೋ5 ಬ್ಲ್ಯಾಕ್ ಸ್ವಯಂಚಾಲಿತವಾಗಿ ಫೋಟೋ ಮತ್ತು ವೀಡಿಯೋಗಳನ್ನು ನೇರವಾಗಿ ಕ್ಲೌಡ್ ಗೆ ಅಪ್ಲೋಡ್ ಮಾಡಬಲ್ಲದು, ಅಲ್ಲದೆ ನಿಮ್ಮ ಫೋನ್ ಮೂಲಕ ನೀವು ಅದನ್ನು ಎಲ್ಲಿಂದ ಬೇಕಾದರೂ ಆಕ್ಸೆಸ್, ಶೇರ್ ಮತ್ತು ಎಡಿಟ್ ಮಾಡಬಹುದು.

ಸೋನಿ HDR-AS50 ಡಿಜಿಟಲ್ ಆಕ್ಷನ್ ಕ್ಯಾಮೆರಾ(ಬ್ಲ್ಯಾಕ್)

ಸೋನಿ HDR-AS50 ಡಿಜಿಟಲ್ ಆಕ್ಷನ್ ಕ್ಯಾಮೆರಾ(ಬ್ಲ್ಯಾಕ್)

ಬೆಲೆ : ರೂ 19,462 (Amazon.in ನಲ್ಲಿ)

ಪ್ರಮುಖ ಫೀಚರ್ಗಳು:

• EXMOR R CMOS ನೀಡುತ್ತದೆ ಉತ್ತಮ ಗುಣಮಟ್ಟದ ಮತ್ತು ಕ್ರಿಸ್ಪ್ ಫೋಟೋಗಳು

• ಸ್ಟೆಡಿ ಶಾಟ್ ಫೀಚರ್ ಮಾಡುತ್ತದೆ ಬ್ಲರ್ ಅಥವಾ ಅಸ್ಪಷ್ಟತೆಯನ್ನು ಮೂರು ಪಟ್ಟು ಕಡಿಮೆ

• ಝೆಯ್ಸ್ ಟೆಸ್ಸಾರ್ ಲೆನ್ಸ್

• XAVC-S ನೊಂದಿಗೆ ಹೈ-ಬಿಟ್ ರೇಟ್ ರೆಕಾರ್ಡಿಂಗ್

• 120p/100p ಹೈಸ್ಪೀಡ್ ರೆಕಾರ್ಡಿಂಗ್

• 4K ಟೈಮ್ ಲ್ಯಾಪ್ಸ್

• ಅಡ್ಜಸ್ಟೇಬಲ್ FOV ಮತ್ತು ಝೂಮಿಂಗ್ ಮೂಲಕ ಬಯಸಿದ ಆಂಗಲ್ ನಲ್ಲಿ ಫೋಟೋ ಮತ್ತು ವೀಡಿಯೋ ಸೆರೆಹಿಡಿಯಿರಿ

ರಿಕೋಹ್ WG-M1 14MP ವಾಟರ್ಪ್ರೂಫ್ ಆಕ್ಷನ್ ವೀಡಿಯೋ ಕ್ಯಾಮೆರಾ (ಆರೇಂಜ್)

ರಿಕೋಹ್ WG-M1 14MP ವಾಟರ್ಪ್ರೂಫ್ ಆಕ್ಷನ್ ವೀಡಿಯೋ ಕ್ಯಾಮೆರಾ (ಆರೇಂಜ್)

ಬೆಲೆ : ರೂ 19,990 (Amazon.in ನಲ್ಲಿ)

ಪ್ರಮುಖ ಫೀಚರ್ಗಳು:

• 14 ಮೆಗಾಪಿಕ್ಸೆಲ್ 1/2.3 ಇಂಚ್ CMOS ಇಮೇಜ್ ಸೆನ್ಸರ್ ನೊಂದಿಗೆ

• ಆಟೋಮ್ಯಾಟಿಕ್(ISO 100-800) ಸೆನ್ಸಿಟಿವಿಟಿ, ಶೂಟಿಂಗ್ ಮೋಡ್ ಗಳು : ಸ್ಟಿಲ್, ಮೂವಿ, ಟೈಮ್ ಲ್ಯಾಪ್ಸ್, ಲೂಪ್ ರೆಕಾರ್ಡಿಂಗ್

• ಮೋಶನ್ ಡಿಟೆಕ್ಶನ್, ಪ್ಲೇಬ್ಯಾಕ್ ಮೋಡ್ ಗಳು: ಸಿಂಗಲ್ ಫ್ರೇಮ್, ಮೂವಿ , ಡ್ರೈವ್ ಮೋಡ್ ಗಳು: ಸಿಂಗಲ್, ಬರ್ಸ್ಟ್ ಶಾಟ್

• ದೊಡ್ಡದಾದ ಮತ್ತು ಬಳಸಲು ಸರಳವಾದ ಕಂಟ್ರೋಲ್ ಬಟನ್ಗಳು, ಉತ್ತಮ ಕ್ಷಣಗಳನ್ನು ಸೆರೆಹಿಡಿಯಲು ಸ್ಮಾರ್ಟ್ಫೋನ್ ಸಪೋರ್ಟ್ ಫಂಕ್ಷನ್ಗಳು, ಅಂಡರ್ ವಾಟರ್ ಲೆನ್ಸ್ ಪ್ರೊಟೆಕ್ಟರ್ ಮತ್ತು WG ಫ್ಲ್ಯಾಟ್ ಎಡ್ಹೆಸಿವ್ ಮೌಂಟ್ ಕೂಡ ಇದೆ.

SJCAM SJ360+ 2018 ಕೋರ್ಬೈಕರ್Z SJ360+ 2018 ಕೋರ್ಬೈಕರ್Z ಸ್ಪೋರ್ಟ್ಸ್ & ಆಕ್ಷನ್ ಕ್ಯಾಮೆರಾ

SJCAM SJ360+ 2018 ಕೋರ್ಬೈಕರ್Z SJ360+ 2018 ಕೋರ್ಬೈಕರ್Z ಸ್ಪೋರ್ಟ್ಸ್ & ಆಕ್ಷನ್ ಕ್ಯಾಮೆರಾ

ಬೆಲೆ : ರೂ 23,249 (Flipkart.in ನಲ್ಲಿ)

ಪ್ರಮುಖ ಫೀಚರ್ಗಳು:

• ಎಫೆಕ್ಟಿವ್ ಪಿಕ್ಸೆಲ್ಗಳು:12.95

• ಆಪ್ಟಿಕಲ್ ಝೂಮ್: ಫಿಕ್ಸ್ಡ್

• ಸೆನ್ಸರ್ ಟೈಪ್: CMOS | LCD ಗಾತ್ರ: 0.96

• ಮ್ಯಾಕ್ಸ್ ಶಟರ್ ಸ್ಪೀಡ್ : 1/2000

ಫರ್ಪರ್ ಶಿಯೋಮಿ ಮಿ 4K 30fps ಆಕ್ಷನ್ ಕ್ಯಾಮೆರಾ

ಫರ್ಪರ್ ಶಿಯೋಮಿ ಮಿ 4K 30fps ಆಕ್ಷನ್ ಕ್ಯಾಮೆರಾ

ಬೆಲೆ : ರೂ 14,199 (Amazon.in ನಲ್ಲಿ)

ಪ್ರಮುಖ ಫೀಚರ್ಗಳು:

• ದೊಡ್ಡ ಗಾತ್ರದ ಸ್ಕ್ರೀನ್,2.4ಇಂಚ್ ಹೈಲಿ ಸೆನ್ಸಿಟಿವ್ ಟಚ್ ಸ್ಕ್ರೀನ್

• 6 ಆಕ್ಸಿಸ್ EIS ಆಂಟಿ-ಶೇಕ್ ಫೀಚರ್ ನಿಂದ ಫಝಿ ಇಮೇಜ್ ದೂರ

• ಟೈಮ್ ಲ್ಯಾಪ್ಸ್ ವೀಡಿಯೋ, ಸ್ಲೋ ಮೋಶನ್, ಟೈಮ್ಡ್ ಫೋಟೋ, ಬರ್ಸ್ಟ್ ಮೊದಲಾದ ಶೂಟಿಂಗ್ ಮೋಡ್ಗಳು

• ಅಂಬರೆಲ್ಲಾ A12S75 ಪ್ರೊಫೆಶನಲ್ ಗ್ರೇಡ್ ಚಿಪ್ಸೆಟ್, RAW ಅನ್ಡ್ಯಾಮೇಜ್ಡ್ ಫಾರ್ಮ್ಯಾಟ್ ಮೂಲಕ ಸವಿಸ್ತಾರವಾಗಿ ಇಮೇಜ್ ಸೇವ್ ಮಾಡಬಹುದು

• ಅಲ್ಟ್ರಾ HD 4K(3840X2160) 30fps ವೀಡಿಯೋ ಶೂಟಿಂಗ್, 1080p ವಿಡಿಯೋ ಗಿಂತ ನಾಲ್ಕು ಪಟ್ಟು ಹೆಚ್ಚು ಸ್ಪಷ್ಟ

YI 4K ಆಕ್ಷನ್ ಕ್ಯಾಮೆರಾ ಸೆಲ್ಫೀ ಸ್ಟಿಕ್ ಮತ್ತು ಬ್ಲೂಟೂತ್ ರಿಮೋಟ್ ಜೊತೆಗೆ ( ನೈಟ್ ಬ್ಲ್ಯಾಕ್)

YI 4K ಆಕ್ಷನ್ ಕ್ಯಾಮೆರಾ ಸೆಲ್ಫೀ ಸ್ಟಿಕ್ ಮತ್ತು ಬ್ಲೂಟೂತ್ ರಿಮೋಟ್ ಜೊತೆಗೆ ( ನೈಟ್ ಬ್ಲ್ಯಾಕ್)

ಬೆಲೆ : ರೂ 21,895 (Amazon.in ನಲ್ಲಿ)

ಪ್ರಮುಖ ಫೀಚರ್ಗಳು:

• 155 ಡಿಗ್ರೀ ವೈಡ್-ಆಂಗಲ್ ಲೆನ್ಸ್ ಮತ್ತು F28 ಅಪರ್ಚರ್ ಮೂಲಕ 4K/30fps(60 mbps), 1080p/120fps, 720p/240fps ವೀಡಿಯೋ ಮತ್ತು 12MP ಫೋಟೋ ಸೆರೆಹಿಡಿಯಬಲ್ಲದು.

• ರೀಚಾರ್ಜೇಬಲ್ 1400mAh ಹೈ-ಕೆಪ್ಯಾಸಿಟಿ 44V ಲೀಥಿಯಂ-ಐಯಾನ್ ಬ್ಯಾಟರಿ ಒಂದು ಬಾರಿ ಚಾರ್ಜ್ ಮಾಡಿದರೆ 120 ನಿಮಿಷಗಳ 4K/30fps ವೀಡಿಯೋ ರೆಕಾರ್ಡ್ ಮಾಡಬಲ್ಲದು

• ಬಿಲ್ಟ್-ಇನ್ 2.19 ಇಂಚ್ LCD ಸ್ಕ್ರೀನ್ 640X 360 HD ರೆಸೊಲ್ಯೂಶನ್ ಜೊತೆಗೆ

• ಮೈಕ್ರೋಸಾಫ್ಟ್ ರೀಸರ್ಚ್ ಅಭಿವೃದ್ಧಿಪಡಿಸಿದ್ದು YI 4K ಆಕ್ಷನ್ ಕ್ಯಾಮೆರಾಗಾಗಿ ಆಪ್ಟಿಮೈಸ್ ಮಾಡಲಾಗಿದೆ, ಪಿಸಿ ಮತ್ತು ಮ್ಯಾಕ್ ಜೊತೆಗೆ ಕೆಲಸಮಾಡುತ್ತದೆ.

• ಅರ್ಧ ಪೌಂಡ್ ಗಿಂತಲೂ ಕಡಿಮೆ ತೂಕದ ಕಾಂಪ್ಯಾಕ್ಟ್ ಮತ್ತು ಹಗುರವಾದ YI ಸೆಲ್ಫೀ ಸ್ಟಿಕ್

• ಬಿಲ್ಟ್-ಇನ್ ಬ್ಲೂಟೂತ್ ಮತ್ತು ಹೈ-ಸ್ಪೀಡ್ 5GHz/2.4GHz ವೈಫೈ ಸಪೋರ್ಟ್ ವೈಫೈ ರಿಮೋಟ್ ಕಂಟ್ರೋಲ್ಗಾಗಿ. YI ಆಕ್ಷನ್ ಆಪ್ ಇನ್ಸ್ಟೆಂಟ್ ಫೋಟೋ ಮತ್ತು ವೀಡಿಯೋ ಎಡಿಟಿಂಗ್ ಗಾಗಿ, ಮತ್ತು 33 ಅಡಿ ದೂರದಿಂದ YI ಆಕ್ಷನ್ ಕ್ಯಾಮೆರಾವನ್ನು ನಿಯಂತ್ರಿಸಬಹುದು

• ಗೀರುಗಳನ್ನು ತಡಗಟ್ಟಲು ಗೊರಿಲ್ಲಾ ಗ್ಲಾಸ್ ರೆಟಿನಾ ವಿನ್ಯಾಸ

• ಉತ್ತಮ ತಂತ್ರಜ್ಞಾನ : ಅಮರೆಲ್ಲೆ A9SE75 ಚಿಪ್, ಸೋನಿ IMX377 ಇಮೇಜ್ ಸೆನ್ಸರ್, 7 ಪದರಗಳ ಗ್ಲಾಸ್ ಲೆನ್ಸ್ ಮತ್ತು EIS ತಂತ್ರಜ್ಞಾನ ಮಂದ ಬೆಳಕಿನಲ್ಲೂ ಕೂಡ ಉತ್ತಮ ಗುಣಮಟ್ಟದ ಸ್ಪಷ್ಟ ವೀಡಿಯೋ ಮತ್ತು ಫೋಟೋಗಳಿಗಾಗಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Those who love adventure sports, having an action camera is a must. While action cameras are usually pretty costly, we have list of best action cameras that you can buy in India under Rs. 25,000.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot