ಭಾರತದಲ್ಲಿ ಲಭ್ಯವಿರುವ 30,000 ರುಪಾಯಿ ಒಳಗಿನ ಬೆಸ್ಟ್ ಡಿಎಸ್ಎಲ್ಆರ್ ಕ್ಯಾಮರಾಗಳು

By Gizbot Bureau
|

ಹಲವು ಬಳಕೆದಾರರಿಗೆ ಇತ್ತೀಚೆಗೆ ಸ್ಮಾರ್ಟ್ ಫೋನ್ ಗಳು ಫೋಟೋಗ್ರಫಿಯ ಅಗತ್ಯತೆಯನ್ನು ಪೂರ್ತಿಗೊಳಿಸುತ್ತಿವೆಯಾದರೂ ಕೂಡ ಹವ್ಯಾಸಿ ಛಾಯಾಗ್ರಾಹಕರು ಆಪ್ಟಿಕ್ಸ್ ಗಳ ವಿಚಾರದಲ್ಲಿ ಬಹಳ ಆಯ್ಕೆದಾರರಾಗಿರುತ್ತಾರೆ. ಹಾಗಾಗಿಯೇ ಅವರು ಡಿಎಸ್ಎಲ್ಆರ್ ಗಳನ್ನು ಆಯ್ದುಕೊಳ್ಳುತ್ತಾರೆ. ಬೇರೆಬೇರೆ ಬೆಲೆಯಲ್ಲಿ ಭಾರತದಲ್ಲಿ ಹಲವು ಡಿಎಸ್ಎಲ್ಆರ್ ಗಳು ಬಿಡುಗಡೆಗೊಂಡಿವೆ. ಒಂದು ವೇಳೆ ನೀವು 30,000 ರುಪಾಯಿ ಒಳಗಿನ ಡಿಎಸ್ಎಲ್ಆರ್ ಗಳನ್ನು ಹುಡುಕಾಡುತ್ತಿದ್ದಲ್ಲಿ ಅವುಗಳ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ. ಈ ಕ್ಯಾಮರಾಗಳು ಫೋಟೋಗ್ರಫಿಯ ಹುಚ್ಚನ್ನು ಬೆಳೆಸಿಕೊಳ್ಳುತ್ತಿರುವ ಆರಂಭಿಕರಿಗೆ ಹೇಳಿ ಮಾಡಿಸಿದ ಡಿವೈಸ್ ಗಳಾಗಿವೆ. ಸುಲಭವಾಗಿ ಬಳಸಬಹುದಾದ ಕ್ಯಾಮರಾಗಳಾಗಿದ್ದು ಬಳಕೆದಾರ ಸ್ನೇಹಿಯಾಗಿವೆ.

ಲಿಸ್ಟ್ ನಲ್ಲಿರುವ ಡಿಎಸ್ಎಲ್ಆರ್

ಲಿಸ್ಟ್ ನಲ್ಲಿರುವ ಡಿಎಸ್ಎಲ್ಆರ್ ಗಳಲ್ಲಿ ನಿಕಾನ್ ಡಿ3500 ಕೂಡ ಇದ್ದು 24.2 ಮೆಗಾಪಿಕ್ಸಲ್ಸ್ ಮತ್ತು EXPEED 4 ಇಮೇಜ್ ಪ್ರೊಸೆಸಿಂಗ್ ಇಂಜಿನ್ ನ್ನು ಇದು ಹೊಂದಿದ್ದು ಆಕರ್ಷಕ ವೀಡಿಯೋ ಮತ್ತು ಇಮೇಜ್ ಗಳನ್ನು ಇದು ಒದಗಿಸುತ್ತದೆ. ಕ್ಯಾಮರಾದಲ್ಲಿರುವ ಸ್ನ್ಯಾಪ್ ಬ್ರಿಡ್ಜ್ ಫಂಕ್ಷನ್ ನಿಂದಾಗಿ ನೀವು ಕ್ಯಾಮರಾವನ್ನು ಇತರೆ ಡಿವೈಸ್ ಗಳ ಜೊತೆಗೆ ಕನೆಕ್ಟ್ ಮಾಡಬಹುದಾಗಿದ್ದು ಬ್ಲೂಟೂತ್ ನಿಮಗೆ ಇದಕ್ಕಾಗಿ ಸಹಕರಿಸುತ್ತದೆ.

ನೀವು ಕೆನಾನ್ EOS 1300D ಅನ್ನು ಕೂಡ ಖರೀದಿಸಬಹುದು. ಇದರಲ್ಲಿ ಆಟೋ ಶೂಟಿಂಗ್ ಫೀಚರ್ ಇದೆ ಮತ್ತು 70 EF/EF-S ಲೆನ್ಸ್ ಗಳಿಗೆ ಕಂಪ್ಯಾಟಿಬಲ್ ಆಗಿದೆ. ಹಾಗಾಗಿ ಅತ್ಯುತ್ತಮ ಇಮೇಜ್ ನ್ನು ಕ್ಯಾಪ್ಚರ್ ಮಾಡಬಹುದು. ವೈಫೈ ಮತ್ತು NFC ಗೆ ಈ ಕ್ಯಾಮರಾ ಬೆಂಬಲವನ್ನು ಕೂಡ ನೀಡುತ್ತದೆ. ಇದರ ISOವನ್ನು 12,800 ರ ವರೆಗೆ ಹಿಗ್ಗಿಸಿಕೊಳ್ಳಬಹುದಾಗಿದ್ದು ಅತ್ಯುತ್ತಮ ಗುಣಮಟ್ಟದ ಫೋಟೋವನ್ನು ಯಾವುದೇ ತೊಂದರೆ ಇಲ್ಲದೆ ಕ್ಲಿಕ್ಕಿಸಬಹುದು. ನಿಕಾನ್ ಮತ್ತು ಕೆನಾನ್ ಬ್ರ್ಯಾಂಡ್ ಇನ್ನೂ ಹಲವು ಡಿಎಸ್ಎಲ್ಆರ್ ಗಳು ಲಭ್ಯವಿದೆ.

ಕೆನಾನ್ EOS 3000D (Body) ಡಿಜಿಟಲ್

ಕೆನಾನ್ EOS 3000D (Body) ಡಿಜಿಟಲ್

MRP: Rs. 21,999

ಪ್ರಮುಖ ವೈಶಿಷ್ಟ್ಯತೆಗಳು

• 18-ಮೆಗಾಪಿಕ್ಸಲ್ APS-C-ಸೈಜ್ CMOS ಸೆನ್ಸರ್ ಮತ್ತು DIGIC 4+ ಇಮೇಜ್ ಪ್ರೊಸೆಸಿಂಗ್

• 9-ಪಾಯಿಂಟ್ AF ಜೊತೆಗೆ 1 ಸೆಂಟ್ರೀ ಕ್ರಾಸ್-ಟೈಪ್ AF ಪಾಯಿಂಟ್

• ಸ್ಟ್ಯಾಂಡರ್ಡ್ ISO 100 - 6400 (12800 ಗೆ ಹಿಗ್ಗಿಸಿಕೊಳ್ಳಬಹುದು)

• ವೈಫೈ ಗೆ ಬೆಂಬಲ

• 18.0 ಮೆಗಾಪಿಕ್ಸಲ್ ಗಳು

• ಕೆನಾನ್ EF ಲೆನ್ಸ್ ಗಳು (EF-S ಲೆನ್ಸ್ ಗಳು ಕೂಡ ಸೇರಿವೆlenses) ಕಂಪ್ಯಾಟಿಬಲ್

• CMOS ಸೆನ್ಸರ್

ನಿಕಾನ್ ಡಿ3500

ನಿಕಾನ್ ಡಿ3500

MRP: Rs. 28,790

ಪ್ರಮುಖ ವೈಶಿಷ್ಟ್ಯತೆಗಳು

• ಸೆನ್ಸರ್: APS-C CMOS ಸೆನ್ಸರ್ ಜೊತೆಗೆ 24.2 MP ( ದೊಡ್ಡ ಪ್ರಿಂಟ್ ಮತ್ತು ಇಮೇಜ್ ಕ್ರಾಪಿಂಗ್ ಗೆ ಗರಿಷ್ಟ ರೆಸಲ್ಯೂಷನ್)

• ISO: 100-25600 ಸೆನ್ಸಿಟಿವಿಟಿ ರೇಂಜ್ (ಕಡಿಮೆ ಬೆಳಕಿನ ಸಂದರ್ಬದಲ್ಲಿ ಪ್ರಮುಖವಾಗಿ ಗ್ರೈನ್ ಫ್ರೀ ಇಮೇಜ್ ತೆಗೆದುಕೊಳ್ಳುವುದರಲ್ಲಿ ಇದು ನಿರ್ಣಾಯಕ)

• ಇಮೇಜ್ ಪ್ರೊಸೆಸಿಂಗ್: 4 ಜೊತೆಗೆ 11 ಆಟೋಫೋಕಸ್ ಪಾಯಿಂಟ್ ವೇಗ (ಆಟೋಫೋಕಸ್ ಮತ್ತು ಬರ್ಸ್ಟ್ ಫೋಟೋಗ್ರಫಿಯ ವೇಗ ಮತ್ತು ನಿಖರತೆಗಾಗಿ ಇದು ಬಹಳ ಮುಖ್ಯ)

• ವೀಡಿಯೋ ರೆಸಲ್ಯೂಷನ್: ಫುಲ್ HD ವೀಡಿಯೋ ಜೊತೆಗೆ ಸಂಪೂರ್ಣ ಮ್ಯಾನುವಲ್ ಕಂಟ್ರೋಲ್ ಮತ್ತು ಆಯ್ದ ಫ್ರೇಮ್ ರೇಟ್ ಗಳು (ಗರಿಷ್ಟ ಗುಣಮಟ್ಟದ ಮತ್ತು ನಿಖರವಾಗಿರುವ ವೀಡಿಯೋ ಕೆಲಸಕ್ಕಾಗಿ ಇದು ಅಧ್ಬುತವಾಗಿದೆ.)

• ಕನೆಕ್ಟಿವಿಟಿ: ವೈಫೈ, NFC ಮತ್ತು ಬ್ಲೂಟೂತ್ ಬಿಲ್ಟ್ ಇನ್ (ನೀವು ಶೂಟ್ ಮಾಡಿದ ಇಮೇಜ್ ಗಳನ್ನು ರಿಮೋಟ್ ಮೂಲಕ ಕಂಟ್ರೋಲ್ ಮಾಡುವುದಕ್ಕೆ ಮತ್ತು ವಯರ್ ಲೆಸ್ ಆಗಿ ವರ್ಗಾಯಿಸುವುದಕ್ಕೆ ಸಹಕಾರಿ)

• ಲೆನ್ಸ್ ಮೌಂಟ್: ನಿಕಾನ್ ಎಫ್ ಮೌಂಟ್

ಕೆನಾನ್ EOS 1500ಡಿ

ಕೆನಾನ್ EOS 1500ಡಿ

MRP: Rs. 25,990

ಪ್ರಮುಖ ವೈಶಿಷ್ಟ್ಯತೆಗಳು

• ಸೆನ್ಸರ್: APS-C CMOS ಸೆನ್ಸರ್ ಜೊತೆಗೆ 24.1 MP (ದೊಡ್ಡ ಪ್ರಿಂಟ್ ಮತ್ತು ಇಮೇಜ್ ಕ್ರಾಪಿಂಗ್ ಗೆ ಗರಿಷ್ಟ ರೆಸಲ್ಯೂಷನ್)

• ISO: 100-6400 ಸೆನ್ಸಿಟಿವಿಟಿ ರೇಂಜ್ (ಕಡಿಮೆ ಬೆಳಕಿನಲ್ಲಿ ಗ್ರೈನ್-ಫ್ರೀ ಪಿಕ್ಚರ್ ಗಳನ್ನು ತೆಗೆಯುವುದರಲ್ಲಿ ಇದು ನಿರ್ಣಾಯಕವಾಗಿರುತ್ತದೆ.)

• ಇಮೇಜ್ ಪ್ರೊಸೆಸಿಂಗ್: DIGIC 4+ ಜೊತೆಗೆ 9 ಆಟೋಫೋಕಸ್ ಪಾಯಿಂಟ್ (ಆಟೋಫೋಕಸ್ ಮತ್ತು ಬರ್ಸ್ಟ್ ಫೋಟೋಗ್ರಫಿಯ ವೇಗ ಮತ್ತು ನಿಖರತೆಗಾಗಿ ಇದು ಬಹಳ ಮುಖ್ಯ)

• ವೀಡಿಯೋ ರೆಸಲ್ಯೂಷನ್: ಫುಲ್ HD ವೀಡಿಯೊ ಜೊತೆಗೆ ಸಂಪೂರ್ಣ ಮ್ಯಾನುವಲ್ ಕಂಟ್ರೋಲ್ ಮತ್ತು ಆಯ್ದ ಫ್ರೇಮ್ ರೇಟ್ (ಗರಿಷ್ಟ ಗುಣಮಟ್ಟದ ಮತ್ತು ನಿಖರವಾಗಿರುವ ವೀಡಿಯೋ ಕೆಲಸಕ್ಕಾಗಿ ಇದು ಅಧ್ಬುತವಾಗಿದೆ)

• ಕನೆಕ್ಟಿವಿಟಿ:ವೈಫೈ,ಎನ್ಎಫ್ ಸಿ ಮತ್ತು ಬ್ಲೂಟೂತ್ ಬಿಲ್ಟ್ ಇನ್(ನೀವು ಶೂಟ್ ಮಾಡಿದ ಇಮೇಜ್ ಗಳನ್ನು ರಿಮೋಟ್ ಮೂಲಕ ಕಂಟ್ರೋಲ್ ಮಾಡುವುದಕ್ಕೆ ಮತ್ತು ವಯರ್ ಲೆಸ್ ಆಗಿ ವರ್ಗಾಯಿಸುವುದಕ್ಕೆ ಸಹಕಾರಿ)

• ಲೆನ್ಸ್ ಮೌಂಟ್: EF-S ಮೌಂಟ್ ಎಲ್ಲಾ ಇಎಫ್ ಮತ್ತು ಇಎಫ್-ಎಸ್ ಲೆನ್ಸ್ ಗಳಲ್ಲೂ ಕೂಡ ಕಂಪ್ಯಾಟಿಬಲ್ ಆಗಿರುತ್ತದೆ. (ಕ್ರಾಪ್-ಸೆನ್ಸರ್ ಮೌಂಟ್ ವರ್ಸಲೈಟ್ ಮತ್ತು ಕಾಂಪ್ಯಾಕ್ಟ್ ಆಗಿರುತ್ತದೆ. ಅದರಲ್ಲೂ ಪ್ರಮುಖವಾಗಿ ಇಎಫ್-ಎಸ್ ಲೆನ್ಸ್ ಗಳನ್ನು ಬಳಸಿದಾಗ)

ಕೆನಾನ್ EOS 550ಡಿ

ಕೆನಾನ್ EOS 550ಡಿ

MRP: Rs. 25,000

ಪ್ರಮುಖ ವೈಶಿಷ್ಟ್ಯತೆಗಳು

• 18.0 ಮೆಗಾಪಿಕ್ಸಲ್ ಅಡ್ವಾನ್ಸ್ಡ್ ಫೋಟೋ ಸಿಸ್ಟಮ್ (APS-C) ಸೈಜ್ CMOS ಸೆನ್ಸರ್

• ಫುಲ್ ಹೈ-ಡೆಫಿನೇಷನ್ ರೆಕಾರ್ಡಿಂಗ್ 24, 25 ಮತ್ತು 30 fps

• ISO 100-6400, 12800ಕ್ಕೆ ಹಿಗ್ಗಿಸಿಕೊಳ್ಳಬಹುದು

• 3.7 ಪ್ರತಿ ಸೆಕೆಂಡಿನ ಫ್ರೇಮ್ ಗಳು

• ಸ್ಟ್ಯಾಂಡರ್ಡ್, ಪೋರ್ಟ್ರೈಟ್, ಲ್ಯಾಂಡ್ ಸ್ಕೇಪ್, ನ್ಯೂಟ್ರಲ್, ಮೋನೋಕ್ರೋಮ್, ಬಳಕೆದಾರ ಡೆಫಿನೇಷನ್ 1-3,ಆಟೋಫೋಕಸ್, ಒನ್-ಶೂಟ್ AF, AI ಸೆರ್ವೋ AF, AI ಫೋಕಸ್ AF, ಮ್ಯಾನುವಲ್ ಫೋಕಸಿಂಗ್, ಎಲೆಕ್ಟ್ರಾನಿಕಲಿ-ಕಂಟ್ರೋಲ್ ಮಾಡಬಹುದು, ಫೋಕಲ್-ಪ್ಲೇನ್ ಶಟ್ಟರ್, TFT ಕಲರ್ ಲಿಕ್ವಿಡ್ -ಕ್ರಿಸ್ಟಲ್ ಮಾನಿಟರ್

ನಿಕಾನ್ ಡಿ3400

ನಿಕಾನ್ ಡಿ3400

MRP: Rs. 26,999

ಪ್ರಮುಖ ವೈಶಿಷ್ಟ್ಯತೆಗಳು

• ಸೆನ್ಸರ್: APS-C CMOS ಸೆನ್ಸರ್ ಜೊತೆಗೆ 24.2 MP (ದೊಡ್ಡ ಪ್ರಿಂಟ್ ಮತ್ತು ಇಮೇಜ್ ಕ್ರಾಪಿಂಗ್ ಗೆ ಗರಿಷ್ಟ ರೆಸಲ್ಯೂಷನ್)

• ISO: 100-25600 ಸೆನ್ಸಿಟಿವಿಟಿ ರೇಂಜ್(ಕಡಿಮೆ ಬೆಳಕಿನಲ್ಲಿ ಗ್ರೈನ್-ಫ್ರೀ ಪಿಕ್ಚರ್ ಗಳನ್ನು ತೆಗೆಯುವುದರಲ್ಲಿ ಇದು ನಿರ್ಣಾಯಕವಾಗಿರುತ್ತದೆ.)

• ಇಮೇಜ್ ಪ್ರೊಸೆಸಿಂಗ್: 4 ಜೊತೆಗೆ 11 ಆಟೋಫೋಕಸ್ ಪಾಯಿಂಟ್ ವೇಗ (ಆಟೋಫೋಕಸ್ ಮತ್ತು ಬರ್ಸ್ಟ್ ಫೋಟೋಗ್ರಫಿಯ ವೇಗ ಮತ್ತು ನಿಖರತೆಗಾಗಿ ಇದು ಬಹಳ ಮುಖ್ಯ)

• ವೀಡಿಯೋ ರೆಸಲ್ಯೂಷನ್: ಫುಲ್ HD ವೀಡಿಯೋ ಜೊತೆಗೆ ಸಂಪೂರ್ಣ ಮ್ಯಾನುವಲ್ ಕಂಟ್ರೋಲ್ ಮತ್ತು ಆಯ್ದ ಫ್ರೇಮ್ ರೇಟ್ ಗಳು (ಗರಿಷ್ಟ ಗುಣಮಟ್ಟದ ಮತ್ತು ನಿಖರವಾಗಿರುವ ವೀಡಿಯೋ ಕೆಲಸಕ್ಕಾಗಿ ಇದು ಅಧ್ಬುತವಾಗಿದೆ)

• ಕನೆಕ್ಟಿವಿಟಿ:ವೈಫೈ,ಎನ್ಎಫ್ ಸಿ ಮತ್ತು ಬ್ಲೂಟೂತ್ ಬಿಲ್ಟ್ ಇನ್(ನೀವು ಶೂಟ್ ಮಾಡಿದ ಇಮೇಜ್ ಗಳನ್ನು ರಿಮೋಟ್ ಮೂಲಕ ಕಂಟ್ರೋಲ್ ಮಾಡುವುದಕ್ಕೆ ಮತ್ತು ವಯರ್ ಲೆಸ್ ಆಗಿ ವರ್ಗಾಯಿಸುವುದಕ್ಕೆ ಸಹಕಾರಿ)

• ಲೆನ್ಸ್ ಮೌಂಟ್: ನಿಕಾನ್ ಎಫ್ ಮೌಂಟ್

ಕೆನಾನ್ EOS 1300ಡಿ

ಕೆನಾನ್ EOS 1300ಡಿ

MRP: Rs. 27,380

ಪ್ರಮುಖ ವೈಶಿಷ್ಟ್ಯತೆಗಳು

• ಸೆನ್ಸರ್: APS-C CMOS ಸೆನ್ಸರ್ ಜೊತೆಗೆ 18 MP (ದೊಡ್ಡ ಪ್ರಿಂಟ್ ಮತ್ತು ಇಮೇಜ್ ಕ್ರಾಪಿಂಗ್ ಗೆ ಅಗತ್ಯವಿರುವಷ್ಟು ರೆಸಲ್ಯೂಷನ್)

• ISO: 100-6400 ಸೆನ್ಸಿಟಿವಿಟಿ ರೇಂಜ್(ಕಡಿಮೆ ಬೆಳಕಿನಲ್ಲಿ ಗ್ರೈನ್-ಫ್ರೀ ಪಿಕ್ಚರ್ ಗಳನ್ನು ತೆಗೆಯುವುದರಲ್ಲಿ ಇದು ನಿರ್ಣಾಯಕವಾಗಿರುತ್ತದೆ.)

• ಇಮೇಜ್ ಪ್ರೊಸೆಸಿಂಗ್: DIGIC 4+ ಜೊತೆಗೆ 9 ಆಟೋಫೋಕಸ್ ಪಾಯಿಂಟ್ (ಆಟೋಫೋಕಸ್ ಮತ್ತು ಬರ್ಸ್ಟ್ ಫೋಟೋಗ್ರಫಿಯ ವೇಗ ಮತ್ತು ನಿಖರತೆಗಾಗಿ ಇದು ಬಹಳ ಮುಖ್ಯ)

• ವೀಡಿಯೋ ರೆಸಲ್ಯೂಷನ್: ಫುಲ್ HD ವೀಡಿಯೋ ಜೊತೆಗೆ ಸಂಪೂರ್ಣ ಮ್ಯಾನುವಲ್ ಕಂಟ್ರೋಲ್ ಮತ್ತು ಆಯ್ದ ಫ್ರೇಮ್ ರೇಟ್ ಗಳು (ಗರಿಷ್ಟ ಗುಣಮಟ್ಟದ ಮತ್ತು ನಿಖರವಾಗಿರುವ ವೀಡಿಯೋ ಕೆಲಸಕ್ಕಾಗಿ ಇದು ಅಧ್ಬುತವಾಗಿದೆ)

• ಕನೆಕ್ಟಿವಿಟಿ:ವೈಫೈ,ಎನ್ಎಫ್ ಸಿ ಮತ್ತು ಬ್ಲೂಟೂತ್ ಬಿಲ್ಟ್ ಇನ್(ನೀವು ಶೂಟ್ ಮಾಡಿದ ಇಮೇಜ್ ಗಳನ್ನು ರಿಮೋಟ್ ಮೂಲಕ ಕಂಟ್ರೋಲ್ ಮಾಡುವುದಕ್ಕೆ ಮತ್ತು ವಯರ್ ಲೆಸ್ ಆಗಿ ವರ್ಗಾಯಿಸುವುದಕ್ಕೆ ಸಹಕಾರಿ)

• ಲೆನ್ಸ್ ಮೌಂಟ್: EF-S ಮೌಂಟ್ ಎಲ್ಲಾ EF ಮತ್ತು EF-S ಲೆನ್ಸ್ ಗಳ ಜೊತೆಗೆ ಕಂಪ್ಯಾಟಿಬಲ್ ಆಗಿದೆ. (ಕ್ರಾಪ್-ಸೆನ್ಸರ್ ಮೌಂಟ್ ವರ್ಸಲೈಟ್ ಮತ್ತು ಕಾಂಪ್ಯಾಕ್ಟ್ ಆಗಿರುತ್ತದೆ. ಅದರಲ್ಲೂ ಪ್ರಮುಖವಾಗಿ ಇಎಫ್-ಎಸ್ ಲೆನ್ಸ್ ಗಳನ್ನು ಬಳಸಿದಾಗ)

Best Mobiles in India

Read more about:
English summary
The list that we have shared comes with some DSLRs which under Rs. 30,000 can offer you the best-in-class photography experience.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X