Home
ಕ್ಯಾಮೆರಾ

ಅದ್ಭುತ DSLR ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ಗಳಿವು! ಬೆಲೆ, ವಿಶೇಷತೆಗಳೇನು?

ಮೊಬೈಲ್ ಎಂದಾಕ್ಷಣ ಎಲ್ಲರೂ ಕ್ಯಾಮೆರಾ ಗುಣಮಟ್ಟದ ಬಗ್ಗೆ ಮಾತನಾಡುತ್ತಾರೆ. ಅದರಂತೆ, ಪ್ರತಿವರ್ಷ ಅತ್ಯಾಕರ್ಷಕ ಫೀಚರ್ಸ್‌ ಮತ್ತು ಸುಧಾರಿತ ತಂತ್ರಜ್ಞಾನದೊಂದಿಗೆ ಹಲವು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಈ ಪೈಕಿ ಹಲವು ಪ್ರಸಿದ್ಧ ಕಂಪನಿಗಳ ಮೊಬೈಲ್‌ಗಳು ಗ್ರಾಹಕರನ್ನು ಆಕರ್ಷಿಸುವಲ್ಲಿ ಸೈ ಎನಿಸಿಕೊಂಡಿವೆ. ಈ ಫೋನ್‌ಗಳಲ್ಲಿನ ಕ್ಯಾಮೆರಾ ಗುಣಮಟ್ಟ ಅದ್ಭುತವಾಗಿದೆ. ಈ ಲೇಖನದಲ್ಲಿ ಡಿಎಸ್‌ಎಲ್‌ಆರ್ (DSLR camera) ಕ್ಯಾಮೆರಾಗಳೊಂದಿಗೆ ಬಂದಿರುವ ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿಸಿದ್ದೇವೆ.

ಪ್ರಸ್ತುತ ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್ ಇದೆ. ಆದರೂ, ಕೆಲವರು ಡಿಎಸ್‌ಎಲ್‌ಆರ್ ಕ್ಯಾಮೆರಾ ಇರುವ ಮೊಬೈಲ್ ಬೇಕೆಂದೇ ಕೇಳುತ್ತಾರೆ. ತಮ್ಮ ಸುಂದರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಬೇಕು. ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಬೇಕು, ಸ್ನೇಹಿತರಿಗೆ ಅಥವಾ ಬಂಧುಮಿತ್ರರಿಗೆ ಕಳುಹಿಸಬೇಕು ಎನ್ನುವುದು ಎಲ್ಲರ ಒತ್ತಾಸೆಯಾಗಿದೆ. ಅವರಿಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಫೋನ್‌ಗಳನ್ನು ಇಲ್ಲಿ ತಿಳಿಸಿದ್ದೇವೆ. ಇಲ್ಲಿದೆ ಅತ್ಯುತ್ತಮ DSLR ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳ ಪಟ್ಟಿ.

ಅದ್ಭುತ DSLR ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ಗಳಿವು! ಬೆಲೆ, ವಿಶೇಷತೆಗಳೇನು?

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ (Samsung Galaxy S24 Ultra) ಮೊಬೈಲ್ 6.9 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 200 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 50 ಮೆಗಾಪಿಕ್ಸೆಲ್ 5x ಟೆಲಿಫೋಟೋ, 50 ಮೆಗಾಪಿಕ್ಸೆಲ್ 3x ಟೆಲಿಫೋಟೋ ಮತ್ತು 0.5x ಅಲ್ಟ್ರಾ ವೈಡ್ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿಗಾಗಿ, 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ನೀವು ಇದರಲ್ಲಿ 4K 120 FPS ವಿಡಿಯೋವನ್ನು ಚಿತ್ರೀಕರಿಸಬಹುದು. ಈ ಫೋನಿನ ಬೆಲೆ 1,21,999 ರೂ. ಆಗಿದೆ.

ಒನ್‌ಪ್ಲಸ್‌ 12

ನೀವು ಕಡಿಮೆ ಬಜೆಟ್‌ನಲ್ಲಿ ಉತ್ತಮ ಕ್ಯಾಮೆರಾ ಫೋನ್‌ ಹುಡುಕುತ್ತಿದ್ದರೆ, ಒನ್‌ಪ್ಲಸ್‌ 12 (OnePlus 12) ಉತ್ತಮ ಆಯ್ಕೆಯಾಗಿದೆ. ಈ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು OIS ಜೊತೆಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 48 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಮತ್ತು 64 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ. ನೀವು ಈ ಫೋನನ್ನು 64,999 ರೂ.ಗಳ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು.

ಐಫೋನ್ 16 ಪ್ರೊ

ಫೋಟೋಗ್ರಫಿಗೆ ಈ ವರ್ಷ ಬಿಡುಗಡೆಯಾದ ಐಫೋನ್ 16 ಪ್ರೊ (iPhone 16 Pro) ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್‌ (iPhone 16 Pro Max) ಸಹ ಉತ್ತಮ ಆಯ್ಕೆಯಾಗಿದೆ. ಇದು 48 ಮೆಗಾಪಿಕ್ಸೆಲ್ ಫ್ಯೂಷನ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ. ಇದು ಆಟೋಫೋಕಸ್ ಜೊತೆಗೆ 48 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಒಳಗೊಂಡಿದೆ. ಐಫೋನ್ 16 ಪ್ರೊ ಕ್ಯಾಮೆರಾ ನಿಯಂತ್ರಣ ವೈಶಿಷ್ಟ್ಯದೊಂದಿಗೆ 12 ಮೆಗಾಪಿಕ್ಸೆಲ್ 5x ಟೆಲಿಫೋಟೋ ಲೆನ್ಸ್ ಸಹ ಹೊಂದಿದೆ. ಇದರ ಸಹಾಯದಿಂದ 4K ರೆಸಲ್ಯೂಶನ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಬಹುದು. ನೀವು, ಫೋನನ್ನು 1,19,900 ರೂ.ಗಳ ಆರಂಭಿಕ ಬೆಲೆ ಖರೀದಿಸಬಹುದು.

ಗೂಗಲ್ ಪಿಕ್ಸೆಲ್ 9 ಪ್ರೊ

ಗೂಗಲ್ ಪಿಕ್ಸೆಲ್ 9 ಪ್ರೊ (Google Pixel 9 Pro) ಫೋಟೋಗ್ರಫಿ ಪ್ರಿಯರಿಗೆ ಉತ್ತಮ ಆಯ್ಕೆಯಾಗಿದೆ. ಈ ಫೋನಿನಲ್ಲಿರುವ 48 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ದೂರದಿಂದಲೂ ಸ್ಪಷ್ಟ ಫೋಟೋಗಳನ್ನು ಸೆರೆಹಿಡಿಯುತ್ತದೆ. ಇದು 48 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಫ್ರೇಮ್ ಸಹ ಹೊಂದಿದೆ. ಫೋನಿನ ವಿಡಿಯೋ ಬೂಸ್ಟ್ ವೈಶಿಷ್ಟ್ಯವು ಕಡಿಮೆ ಬೆಳಕಿನಲ್ಲಿ ರೆಕಾರ್ಡ್ ಮಾಡಿದ ವಿಡಿಯೋಗಳ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ. ಮತ್ತು ಶಬ್ದವನ್ನು ಕಡಿಮೆ ಮಾಡುತ್ತದೆ. ಈ ಮೊಬೈಲ್ 109,999 ರೂ.ಗಳ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

Best Mobiles in India

English summary
Best smartphones with DSLR camera quality: see list and price here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+