EOS M100 ಮಿರರ್ ಲೈಸ್ ಕ್ಯಾಮೆರಾ ಲಾಂಚ್ ಮಾಡಿದ ಕ್ಯಾನನ್

By Lekhaka
|

ಕ್ಯಾಮೆರಾ ಮಾರುಕಟ್ಟೆಯಲ್ಲಿ ಬಹುದೊಡ್ಡ ಬದಲಾವಣೆಯು ಗೋಚರವಾಗುತ್ತಿದ್ದು, DSLR ಕ್ಯಾಮೆರಾ ತಯಾರಿಕೆಯಲ್ಲಿ ಉನ್ನತಿಯನ್ನು ಸಾಧಿಸಿದ್ದ ಕ್ಯಾನನ್ ಕಂಪನಿ ಮಿರರ್ ಲೈಸ್ ಕ್ಯಾಮೆರಾ ಉತ್ಪಾದನೆಯ ಕಡೆಗೆ ಮುಖಮಾಡಿದ್ದು, ಹೊಸದಾಗಿ EOS M100 ಮಿರರ್ ಲೈಸ್ ಕ್ಯಾಮೆರಾವನ್ನು ಭಾರತೀಯ ಮಾರುಕಟ್ಟೆಗೆ ಪರಿಚಯ ಮಾಡಿದೆ.

EOS M100 ಮಿರರ್ ಲೈಸ್ ಕ್ಯಾಮೆರಾ ಲಾಂಚ್ ಮಾಡಿದ ಕ್ಯಾನನ್

ಕ್ಯಾನನ್ ಬಿಡುಗಡೆ ಮಾಡಿರುವ ಈ ಮಿರರ್ ಲೈಸ್ ಕ್ಯಾಮೆರಾ ಇನಟರ್ ಚೆಂಜಬಲ್ ಲೈನ್ಸ್ ಅನ್ನು ಒಳಗೊಂಡಿದ್ದು, ರೂ. 39,995ಕ್ಕೆ ಮಾರಾಟವಾಗುತ್ತಿದೆ ಎನ್ನಲಾಗಿದೆ. ಇದು DSLR ಕ್ಯಾಮೆರಾ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದೆ. ಅದೇ ವೇಗದಲ್ಲಿ ಪೋಟೋ ಸೆರೆಹಿಡಿಯಲ್ಲಿದ್ದು, ಸುಲಭವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಈ ಕ್ಯಾಮೆರಾ ಹೊಸದಾಗಿ ಪರಿಚಯಿಸಿರುವ ಲೈನ್ಸ್ ಗಳಿಗೆ ಸಪೋರ್ಟ್ ಮಾಡಲಿದ್ದು, TS-E50mm f/2.8L ಮ್ಯಾಕ್ರೋ, TS-E90mm f/2.8L ಮ್ಯಾಕ್ರೋ, TS-E135mm f/4L ಮ್ಯಾಕ್ರೋ ಮತ್ತು EF85mm f/1.4L ಲೈನ್ಸ್ ಗಳಿಗೆ ಸಪೋರ್ಟ್ ಮಾಡಲಿದೆ ಎನ್ನಲಾಗಿದೆ.

ಮೆಮೊರಿ ಕಾರ್ಡ್‌ ಕರೆಪ್ಟ್ ಆದರೆ ಡೇಟಾ ವಾಪಸ್ ಪಡೆಯವುದು ಹೇಗೆ?ಮೆಮೊರಿ ಕಾರ್ಡ್‌ ಕರೆಪ್ಟ್ ಆದರೆ ಡೇಟಾ ವಾಪಸ್ ಪಡೆಯವುದು ಹೇಗೆ?

ಈ ಕ್ಯಾಮೆರಾ ಬ್ಲಾಕ್ ಬಣ್ಣದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಹಿಂಭಾಗದಲ್ಲಿ 3.0 ಇಂಚಿನ ಟೆಚ್ ಸ್ಕ್ರಿನ್ LED ಡಿಸ್ ಪ್ಲೇಯನ್ನು ಅಳವಡಿಸಲಾಗಿದ್ದು, ಅದು 180 ಡಿಗ್ರಿ ತಿರುಗಲಿದ್ದು, ಇದರಿಂದಾಗಿ ಉತ್ತಮ ಸೆಲ್ಪೀಗಳನ್ನು ತೆಗೆದುಕೊಳ್ಳಬಹುದಾಗಿದೆ. ಹೊಸ ಜಮಾನದ ಪೋಟೋಗ್ರಾಫರ್ ಗಳಿಗೆ ಈ ಕ್ಯಾಮೆರಾ ಹೇಳಿ ಮಾಡಿಸಿದ ಹಾಗಿದೆ.

EOS M100 ಮಿರರ್ ಲೈಸ್ ಕ್ಯಾಮೆರಾ 24.4 MP CMOS ಸೆನ್ಸರ್ ಅನ್ನು ಹೊಂದಿದ್ದು, ಉತ್ತಮವಾದ ಚಿತ್ರಗಳನ್ನು ಸೆರೆಹಿಡಿಯಲು ಶಕ್ತವಾಗಿದೆ ಎನ್ನಲಾಗಿದೆ ಮಾರುಕಟ್ಟೆಯಲ್ಲಿರುವ ಸೋನಿ ಮಿರರ್ ಲೈಸ್ ಕ್ಯಾಮೆರಾಗಳಿಗೆ ಈ EOS M100 ಮಿರರ್ ಲೈಸ್ ಕ್ಯಾಮೆರಾ ಸ್ಪರ್ಧೆಯನ್ನು ನೀಡಲಿದೆ.

Best Mobiles in India

Read more about:
English summary
Canon has now launched the EOS M100 camera in the Indian market.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X